Navratri 2023: ನವರಾತ್ರಿ ಹಬ್ಬದ ಆರನೇ ದಿನ: ಕಾತ್ಯಾಯಿನಿ ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 20, 2023 | 6:15 AM

ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಹಾಗೂ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುವುದು. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರಿಂದ ದೇವಿ ಕೃಪೆಗೆ ಪಾತ್ರರಾಗಬಹುದು. ನಿಮಗೂ ದೇವಿಯ ಆರಾಧನೆ ಮಾಡುವಾಗ ಹೇಳಬೇಕಾದ ಮಂತ್ರ ಹಾಗೂ ಪ್ರಾರ್ಥನೆಯ ಕುರಿತು ತಿಳಿದುಕೊಳ್ಳಬೇಕಾ? ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Navratri 2023: ನವರಾತ್ರಿ ಹಬ್ಬದ ಆರನೇ ದಿನ: ಕಾತ್ಯಾಯಿನಿ ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?
ಸಾಂದರ್ಭಿಕ ಚಿತ್ರ (ಟಿವಿ9 ಕನ್ನಡ )
Follow us on

ನವರಾತ್ರಿ ಹಬ್ಬದ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಕಾತ್ಯಾಯಿನಿ ರೂಪ ಪಡೆದು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ. ಭಾಗವತ ಪುರಾಣ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಈ ಕಥೆಯ ಬಗ್ಗೆ ಉಲ್ಲೇಖಿಸಲಾಗಿದ್ದು ತಾಯಿ ಕಾತ್ಯಾಯಿನಿಯು ನವ ದುರ್ಗೆಯರಲ್ಲಿ ಆರನೇ ಅವತಾರವಾಗಿ ಪೂಜಿಸಲಾಗುತ್ತದೆ. ಕಾತ್ಯಾಯಿನಿ ದೇವಿಗೆ ಸಮರ್ಪಿತವಾದ ಆ ದಿನದ ನವರಾತ್ರಿ ಪೂಜೆಯು ಬಹಳ ಶ್ರೇಷ್ಠವಾದದ್ದು. ಈ ದಿನವನ್ನು ಮಹಾಶಶ್ತಿ ಎಂದು ಕೂಡ ಕರೆಯಲಾಗುತ್ತದೆ. ಇನ್ನು ಕಾತ್ಯಾಯನಿ ಪೂಜೆಯಿಂದ ವ್ಯಕ್ತಿಯು ಉನ್ನತ ಸಾಮಾಜಿಕ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾನೆ. ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ ಸಮೃದ್ಧಿ ಮತ್ತು ಸಂಪತ್ತನ್ನು ದೇವಿ ನೀಡುತ್ತಾಳೆ ಎಂಬ ನಂಬಿಕೆ ಇದೆ.

ಈ ದಿನದ ಹಿನ್ನೆಲೆಯೇನು?

ದೇವಿ ದುರ್ಗೆಯ ಪರಮ ಭಕ್ತನಾದ ಕಾತ್ಯಾಯನ್‌ ಅಥವಾ ಕಾತ್ಯಾಯನ ಮಹರ್ಷಿ, ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ. ಅಂತೆಯೇ ಹುಟ್ಟಿದ ಮಗುವಿಗೆ ಕಾತ್ಯಾಯಿನಿ ಎಂದು ಹೆಸರಿಡುತ್ತಾರೆ. ಇನ್ನು ಧಾರ್ಮಿಕ ಪುರಾಣಗಳ ಪ್ರಕಾರ ಕಾತ್ಯಾಯಿನಿಯು, ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಅಂದರೆ ಮಹಿಷಾಸುರನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಎನ್ನಲಾಗುತ್ತದೆ. ಮಹಿಷಾಸುರನನ್ನು ಸಂಹಾರ ಮಾಡಲು ಅವತಾರವೆತ್ತ ತಾಯಿ ಕಾತ್ಯಾಯನಿ ದೇವಿಯು ಯುದ್ಧ ಮಾಡಿ ಅವನನ್ನು ಸಂಹಾರ ಮಾಡಿದಳು. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು ಎಂದು ಪುರಾಣದ ಕಥೆಗಳು ಹೇಳುತ್ತವೆ. ತಾಯಿ ಕಾತ್ಯಾಯಿನಿಯು ಚಿನ್ನದ ಮೈ ಬಣ್ಣವನ್ನು ಹೊಂದಿದ್ದು ನಾಲ್ಕು ಕೈಗಳಿರುವ ದೇವಿಯು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಕಮಲದ ಹೂವು ಮತ್ತೆರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆಯನ್ನು ತೋರುತ್ತಿರುತ್ತಾಳೆ. ಇದು ತಾಯಿಯ ಶಕ್ತಿ ಮತ್ತು ಪ್ರೀತಿಯನ್ನು ಪ್ರತೀಕಿಸುವ ಸಂಕೇತವಾಗಿದೆ.

ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಹಾಗೂ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುವುದು. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರಿಂದ ದೇವಿ ಕೃಪೆಗೆ ಪಾತ್ರರಾಗಬಹುದು. ನಿಮಗೂ ದೇವಿಯ ಆರಾಧನೆ ಮಾಡುವಾಗ ಹೇಳಬೇಕಾದ ಮಂತ್ರ ಹಾಗೂ ಪ್ರಾರ್ಥನೆಯ ಕುರಿತು ತಿಳಿದುಕೊಳ್ಳಬೇಕಾ? ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ:

ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುವವಳಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.

ಇದನ್ನೂ ಓದಿ: ನವರಾತ್ರಿಯ ಉಪವಾಸದ ವೇಳೆ ಏನು ಮಾಡಬೇಕು? ಏನು ಮಾಡಬಾರದು?

ಪೂಜೆಯ ಮಹತ್ವ:

ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ, ಒಬ್ಬ ವ್ಯಕ್ತಿಯು ಧನಾತ್ಮಕ ಶಕ್ತಿಯನ್ನು ಪಡೆಯುತ್ತಾನೆ. ಹಾಗೂ ದುಷ್ಟ ಭಯ ನಿವಾರಣೆಯಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಮದುವೆಯಾಗದಿರುವವರು ಕಾತ್ಯಾಯಿನಿ ಮಂತ್ರವನ್ನು ಪಠಿಸುವುದರಿಂದ ಜಾತಕದಲ್ಲಿನ ದೋಷ ಪರಿಹಾರವಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಕಾತ್ಯಾಯಿನಿ ದೇವಿಯ ಅನುಗ್ರಹ ಪಡೆಯಲು ಯಾವ ಮಂತ್ರ ಪಠಿಸಬೇಕು?

– ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ

– ಯಾ ದೇವಿ ಸರ್ವಭೂತೇಷು ಮಾಂ ಕಾತ್ಯಾಯಿನೀ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

– ಓಂ ದೇವಿ ಕಾತ್ಯಾಯಿನ್ಯೈ ನಮಃ

– ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ
ನಂದಗೋಪಸುತಂ ದೇವಿಪತಿಂ ಮೇ ಕುರು ತೇ ನಮಃ

– ಓಂ ಹ್ರೀಂ ಕಾತ್ಯಾಯನ್ಯೈ ಸ್ವಾಹಾ , ಹ್ರೀಂ ಶ್ರೀಂ ಕಾತ್ಯಾಯನ್ಯೈ ಸ್ವಾಹಾ

– ಓಂ ದೇವಿ ಕಾತ್ಯಾಯಿನಿ ನಮಃ

-ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ

– ಕಾತ್ಯಾಯನಮುಖ ಪತು ಕಾಮ್ ಸ್ವಾಹಸ್ವರೂಪಿಣಿ
ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ
ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ

-ಕಾತ್ಯಾಯಿನಿ ದೇವಿಯ ಧ್ಯಾನ;

ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ
ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್
ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ
ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್
ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ