Navaratri 2023: ನವರಾತ್ರಿಯ ಆರನೇ ದಿನ ದೇವಿಗೆ ಜೇನುತುಪ್ಪದಲ್ಲಿ ತಯಾರಿಸಿದ ಬಾದಾಮಿ ಹಲ್ವಾವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 20, 2023 | 11:21 AM

ನವರಾತ್ರಿಯ ಆರನೇ ದಿನ ಜಗನ್ಮಾತೆಯ ಕಾತ್ಯಾಯನಿ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನ ದೇವಿಗೆ ನೀವು ಜೇನುತುಪ್ಪದಿಂದ ತಯಾರಿಸಿದಂತಹ ಪ್ರಸಾದವನ್ನು ನೈವೇದ್ಯ ರೂಪದಲ್ಲಿ ಅರ್ಪಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ.   ಕಾತ್ಯಾಯನಿ ದೇವಿಗೆ ಪ್ರಿಯವಾದ ಜೇನುತುಪ್ಪದಿಂದ ಬಾದಾಮಿ ಹಲ್ವಾವನ್ನು ತಯಾರಿಸಿ ನೈವೇದ್ಯ ಪ್ರಸಾದವನ್ನು ದೇವರಿಗೆ ಅರ್ಪಿಸಿ.

Navaratri 2023: ನವರಾತ್ರಿಯ ಆರನೇ ದಿನ ದೇವಿಗೆ ಜೇನುತುಪ್ಪದಲ್ಲಿ ತಯಾರಿಸಿದ ಬಾದಾಮಿ ಹಲ್ವಾವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ
ಸಾಂದರ್ಭಿಕ ಚಿತ್ರ
Follow us on

ನವರಾತ್ರಿ ಹಬ್ಬದ  ಆರನೇ ದಿನ ಜಗನ್ಮಾತೆಯ ಕಾತ್ಯಾಯನಿ ರೂಪವನ್ನು ಪೂಜಿಸಲಾಗುತ್ತದೆ. ದುಷ್ಟ ರಾಕ್ಷಸ ಮಹಿಷಾಸುರನನ್ನು ನಾಶ ಮಾಡಲು  ದೇವಿಯು ಕ್ಯಾತ್ಯಾಯನಿ ರೂಪವನ್ನು ತಾಳಿದರು  ಎಂದು ಹೇಳಲಾಗುತ್ತದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗವನ್ನು ಕೈಯಲ್ಲಿ ಹಿಡಿದಿರುವ  ಮಹಿಷಾಸುರಮರ್ದಿನಿ ಕಾತ್ಯಾಯನಿ ದೇವಿಯನ್ನು ನವರಾತ್ರಿಯ ಆರನೇ ದಿನದಂದು ಪೂಜಿಸಲಾಗುತ್ತದೆ. ಈ ದಿನ ಕಾತ್ಯಾಯನಿ ದೇವಿಗೆ ಪ್ರಿಯವಾದ  ಜೇನುತುಪ್ಪದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಿದರೆ ಶ್ರೇಷ್ಠ ಎಂದು ಹೇಳಾಗುತ್ತದೆ.  ಈ ದಿನ ನೀವು ಜೀನುತುಪ್ಪದಿಂದ ಬಾದಾಮಿ ಹಲ್ವಾವನ್ನು ತಯಾರಿಸಿ ನೈವೇದ್ಯ ಪ್ರಸಾದವನ್ನು ಅರ್ಪಿಸಬಹುದು. ಹಾಗಾದರೆ ಬಾದಮಿ ಹಲ್ವಾವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಬಾದಾಮಿ ಹಲ್ವಾ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಬಾದಮಿ ಹಲ್ವಾ ಮಾಡಲು ಹೆಚ್ಚು ವಸ್ತುಗಳ ಅಗತ್ಯವಿಲ್ಲ. ಇದನ್ನು ಕೆಲವೇ ಪದಾರ್ಥಗಳಿಂದ  ತಯಾರಿಸಬಹುದು.

• ಬಾದಾಮಿ

• ಸಕ್ಕರೆ

• ಜೇನುತುಪ್ಪ

• ತುಪ್ಪ

• ಕೇಸರಿ ದಳ

ಇದನ್ನೂ ಓದಿ: ಬಾಳೆಹಣ್ಣಿನ ಪಂಚಾಮೃತ ತಯಾರಿಸುವ ವಿಧಾನ ಇಲ್ಲಿದೆ

ಬಾದಾಮಿ ಹಲ್ವಾವನ್ನು ತಯಾರಿಸುವ ವಿಧಾನ:

ಸ್ವಲ್ಪ ಪ್ರಮಾಣದ ಬಾದಮಿಯನ್ನು ಸುಮಾರು 2 ರಿಂದ 3 ಗಂಟೆಗಳ ಕಾಲ ನೆನೆಸಿಡಿ. ನಂತರ ಬಾದಮಿಯ ಸಿಪ್ಪೆ ಸುಳಿದು, ಅದನ್ನು ಮಿಕ್ಸಿಜಾರ್ ಗೆ ಹಾಕಿಕೊಳ್ಳಿ, ಅದಕ್ಕೆ ಸ್ವಲ್ಪ ನೀರು,  ಕೇಸರಿ ದಳ, ಸಕ್ಕರೆ ಮತ್ತು  ಜೇನುತುಪ್ಪವನ್ನು ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಒಲೆ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ, ತುಪ್ಪ ಕಾದ ಬಳಿಕ ರುಬ್ಬಿಟ್ಟ ಬಾದಮಿ ಪೇಸ್ಟ್ ನ್ನು ಅದಕ್ಕೆ ಸೇರಿಸಿಕೊಳ್ಳಿ. ಮತ್ತು ಕಡಿಮೆ ಉರಿಯಲ್ಲಿ  ಈ ಮಿಶ್ರಣವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಹಲ್ವಾ ತಳ ಬಿಡಲು ಪ್ರಾಂಭಿಸುತ್ತದೆ. ಆಗ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಸೇರಿಸಿ, ಸಕ್ಕರೆ ಕರಗಿ ಹಲ್ವಾ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿಕೊಂಡರೆ, ನೈವೇದ್ಯ ಪ್ರಸಾದ ಸಿದ್ಧ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:20 am, Fri, 20 October 23