ದೀಪಾವಳಿ(Deepavali 2022) ಹೊತ್ತಲ್ಲೇ, ಅಕ್ಟೋಬರ್ 25ರಂದು ಅಂದ್ರೆ ಇಂದು ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ(Solar Eclipse 2022) ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.
ಸೂರ್ಯ ಗ್ರಹಣ ಸಮಯ
ದೀಪಾವಳಿ ಅಮಾವಾಸ್ಯೆಯಾದ ಇಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನ ಪಡೆದುಕೊಳ್ಳುತ್ತೆ. ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತೆ.
ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತೆ?
ಸೂರ್ಯಗ್ರಹಣ ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಾಣಸಿ ಮತ್ತು ಮಥುರಾದಲ್ಲಿ ಗೋಚರವಾಗಲಿದೆ. ಬೆಂಗಳೂರಲ್ಲಿ ಸಂಜೆ 5.12 ರಿಂದ 5.55 ರವರೆಗೆ ಗ್ರಹಣ ಗೋಚರವಾಗಲಿದೆ. ಇನ್ನು, ಯುರೋಪ್, ಆಫ್ರಿಕಾ, ಏಷ್ಯಾ ಖಂಡದಲ್ಲಿ ಗ್ರಹಣ ಗೋಚರವಾಗುತ್ತೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರದ ವಿವರ
ದೇಶದ ಇತರೆ ಭಾಗದಲ್ಲಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೇತುಗ್ರಸ್ತ ಸೂರ್ಯ ಗ್ರಹಣವು, ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣದ ವೇಳೆ ಕೇತುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನ ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಕರೆಯಲಾಗುತ್ತೆ.
ಇನ್ನು, ವೈಜ್ಞಾನಿಕ ಲೋಕದ ಪ್ರಕಾರ, ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಬಾನಲ್ಲಿ ನಡೆಯುವ ಒಂದು ಪ್ರಕ್ರಿಯೆ ಅಷ್ಟೆ. ಆದ್ರೆ ಇದು ಬಹಳಷ್ಟು ವಿಚಿತ್ರವಾದ, ಅಪಾಯಕಾರಿಯಾದ, ಪ್ರಮಾಧವನ್ನ ಸೃಷ್ಟಿಸುವಂತಹ ಸೂರ್ಯಗ್ರಹಣವೆಂಬ ಮಾತು ಇಡೀ ಜಗತ್ತಿನ ನಾನಾ ಧರ್ಮಗಳ ಜ್ಯೋತಿಷ್ಯ ವಲಯದ್ದಾಗಿದೆ.
ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳೇನು?
Published On - 6:30 am, Tue, 25 October 22