ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಪ್ರತಿ ಹಿಂದೂ ಮಾಸ ಅಥವಾ ತಿಂಗಳ ಕೊನೆಯ ದಿನವನ್ನು ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಸ್ನಾನ, ಪೂಜೆ, ಉಪವಾಸ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ, ಈ ಬಾರಿಯ ಅಮಾವಾಸ್ಯೆ ತಿಥಿಯು ಎ. 8 ಸೋಮವಾರ ದಂದು ಆಚರಣೆ ಮಾಡಲಾಗುತ್ತದೆ. ಈ ಅಮಾವಾಸ್ಯೆಯು ಸೋಮವಾರ ಬಂದಿರುವುದರಿಂದ ಈ ದಿನವನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಎಲ್ಲಾ ಅಮಾವಾಸ್ಯೆಗಳಲ್ಲಿ ಸೋಮವತಿ ಅಮಾವಾಸ್ಯೆಯನ್ನು ಪ್ರಮುಖ ಎಂದು ಪರಿಗಣಿಸಲಾಗಿದೆ. ಈ ದಿನ ದಾನ ಮಾಡುವುದರ ಜೊತೆಗೆ, ಪಿತೃ ಪೂಜೆಯನ್ನು ಸಹ ಮಾಡಲಾಗುತ್ತದೆ, ಆದ್ದರಿಂದ ಈ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ, ಪಿತೃ ದೋಷದಿಂದ ಪರಿಹಾರ ಪಡೆದುಕೊಳ್ಳಬಹುದು ಜೊತೆಗೆ ಪೂರ್ವಜರ ಆಶೀರ್ವಾದವನ್ನು ಸಹ ಪಡೆಯಬಹುದು. ಸೋಮವತಿ ಅಮಾವಾಸ್ಯೆಯ ದಿನದಂದು ಪಿತೃ ದೋಷದಿಂದ ಮುಕ್ತಿ ಪಡೆಯಲು ಕೆಲವು ಪರಿಣಾಮಕಾರಿ ಕ್ರಮಗಳು ಇಲ್ಲಿವೆ.
ಪಿತೃ ದೋಷವನ್ನು ನಿವಾರಿಸುವ ವಿಧಾನಗಳು;
- ಸೋಮವತಿ ಅಮಾವಾಸ್ಯೆಯ ದಿನದಂದು ಕಪ್ಪು ಎಳ್ಳನ್ನು ದಾನ ಮಾಡುವುದು ಬಹಳ ಮುಖ್ಯ. ಇದರಿಂದ, ಪಿತೃ ದೋಷ ನಿವಾರಣೆಯಾಗುತ್ತವೆ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಜೊತೆಗೆ ಅವರ ಆಶೀರ್ವಾದವು ಸಿಗುತ್ತದೆ ಎಂದು ನಂಬಲಾಗಿದೆ. ಪೂರ್ವಜರು ಸಂತುಷ್ಟರಾದಲ್ಲಿ, ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ, ಪ್ರತಿಯೊಂದು ಕಾರ್ಯದಲ್ಲೂ ಪ್ರಗತಿ ಕಾಣುತ್ತದೆ ಎಂದು ನಂಬಲಾಗಿದೆ.
- ಧಾರ್ಮಿಕ ನಂಬಿಕೆಯ ಪ್ರಕಾರ, ಸೋಮಾವತಿ ಅಮಾವಾಸ್ಯೆಯ ದಿನದಂದು, ಅರಳಿ ಮರದ ಕೆಳಗೆ 11 ತುಪ್ಪದ ದೀಪ ಹಚ್ಚಿ ನಿಮ್ಮ ಪೂರ್ವಜರನ್ನು ಭಕ್ತಿಯಿಂದ ಪೂಜಿಸಿ. ಈ ರೀತಿ ಮಾಡುವುದರಿಂದ ಪೂರ್ವಜರು ಸಂತೋಷ ಪಡುತ್ತಾರೆ. ಪಾಪ ಪರಿಹಾರವಾಗುತ್ತದೆ.
- ಸೋಮವತಿ ಅಮಾವಾಸ್ಯೆಯಂದು ಹಾಲು ಮತ್ತು ಅಕ್ಕಿಯನ್ನು ದಾನ ಮಾಡುವುದು ಬಹಳ ಮುಖ್ಯ ಎನ್ನಲಾಗುತ್ತದೆ, ಆದ್ದರಿಂದ ಕಪ್ಪು ಎಳ್ಳಿನ ಜೊತೆಗೆ ಹಾಲು ಮತ್ತು ಅಕ್ಕಿಯನ್ನು ಸಹ ದಾನ ಮಾಡಬಹುದು. ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.
- ಈ ದಿನ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವ ಸಂಪ್ರದಾಯವಿದೆ, ಆದ್ದರಿಂದ ಸೋಮವತಿ ಅಮಾವಾಸ್ಯೆಯಂದು ಮಹಾದೇವನೊಂದಿಗೆ ತಾಯಿ ಪಾರ್ವತಿಯನ್ನು ಕೂಡ ಪೂಜಿಸಬೇಕು. ಆ ಸಮಯದಲ್ಲಿ ದೇವರಿಗೆ ಶ್ರೀಗಂಧ, ಕುಂಕುಮ, ತೆಂಗಿನಕಾಯಿ ಮತ್ತು ಕೇತಕಿ ಹೂವುಗಳನ್ನು ಶಿವ ಮತ್ತು ಪಾರ್ವತಿಗೆ ಅರ್ಪಿಸಬೇಕು.
- ಪಿಂಡ ದಾನ ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬೇರೆ ಬೇರೆ ಕಾರಣದಿಂದ ಪಿಂಡ ದಾನ ಮಾಡಲು ಸಾಧ್ಯವಾಗದಿದ್ದಲ್ಲಿ, ಸೋಮವತಿ ಅಮಾವಾಸ್ಯೆಯಂದು ಪಿಂಡ ದಾನ ಮಾಡಿ. ಇದನ್ನು ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.
- ಅಮಾವಾಸ್ಯೆಯ ದಿನ ಯಾವುದೇ ಜೀವಿಗೆ ವಿಶೇಷವಾಗಿ ಕಾಗೆ, ನಾಯಿ, ಹಸು, ಎಮ್ಮೆ ಇತ್ಯಾದಿಗಳಿಗೆ ಹಾನಿ ಮಾಡಬಾರದು. ಈ ದಿನ ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ನೀಡಬೇಕು. ಧಾನ್ಯ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಇದನ್ನು ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ ಜೊತೆಗೆ ಅವರ ಆಶೀರ್ವಾದವು ಸಿಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ