Astrology Remedies: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ? ಇಲ್ಲಿದೆ ವಿವರ
ಜೀವನದಲ್ಲಿರುವ ಬಹುಪಾಲು ಸಮಸ್ಯೆಗಳಿಗೆ ಜ್ಯೋತಿಷ್ಯದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ತಿಳಿಸಿರುವ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸಮಸ್ಯೆಗಳನ್ನು ಕೆಡಿಮೆ ಮಾಡಿಕೊಂಡು ಸಂತೋಷ ಪಡೆಯಬಹುದು. ಈ ಪ್ರಕ್ರಿಯೆ ನಮ್ಮ ದಿನಚರಿಯಿಂದ ಪ್ರಾರಂಭವಾಗಬೇಕು. ಅಂದರೆ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯಲು ನಾವು ದಿನನಿತ್ಯ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದು ಕೂಡ ಮುಖ್ಯವಾಗುತ್ತದೆ. ಇದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ನಮ್ಮ ಜೀವನದಲ್ಲಿ ಜ್ಯೋತಿಷ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದರ ಸಹಾಯದಿಂದ ನಾವು ನಮ್ಮ ಜೀವನದಲ್ಲಿರುವ ಬಹುಪಾಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ತಿಳಿಸಿರುವ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸಮಸ್ಯೆಗಳನ್ನು ಕೆಡಿಮೆ ಮಾಡಿಕೊಂಡು ಸಂತೋಷ ಪಡೆಯಬಹುದು. ಈ ಪ್ರಕ್ರಿಯೆ ನಮ್ಮ ದಿನಚರಿಯಿಂದ ಪ್ರಾರಂಭವಾಗಬೇಕು. ಅಂದರೆ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯಲು ನಾವು ದಿನನಿತ್ಯ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದು ಕೂಡ ಮುಖ್ಯವಾಗುತ್ತದೆ. ಇದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಯಾವ ದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು?
ಸೋಮವಾರ:
ಈ ವಾರ ಶಿವ ಮತ್ತು ಚಂದ್ರ ದೇವನ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಬಿಳಿ ಮತ್ತು ಬೆಳ್ಳಿ (ಸಿಲ್ವರ್) ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಜೀವನದಲ್ಲಿ ಶಾಂತಿ ಸಿಗುತ್ತದೆ.
ಮಂಗಳವಾರ:
ಮಂಗಳವಾರ ಧೈರ್ಯಶಾಲಿಯಾದ ಹನುಮಂತನ ದಿನ. ಆದ್ದರಿಂದ, ಭಜರಂಗಬಲಿಯ ಆಶೀರ್ವಾದ ಪಡೆಯಲು, ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ದೇವಾಲಯದಿಂದ ಹೊರಬರುವಾಗ ಗಂಟೆ ಬಾರಿಸಬಾರದು ಏಕೆ ಗೊತ್ತಾ?
ಬುಧವಾರ:
ಬುಧವಾರ ಗಣಪನಿಗೆ ಸಮರ್ಪಿತವಾದ ದಿನವಾಗಿದೆ. ಹಸಿರು ಗಣೇಶನಿಗೆ ತುಂಬಾ ಇಷ್ಟವಾದ್ದರಿಂದ ಈ ದಿನ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಗುರುವಾರ:
ಗುರುವಾರದಂದು ವಿಷ್ಣು ಮತ್ತು ಗುರು ರಾಯರನ್ನು ನೆನೆಯಲಾಗುತ್ತದೆ. ಹಾಗಾಗಿ ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.
ಶುಕ್ರವಾರ:
ಶುಕ್ರವಾರವನ್ನು ಲಕ್ಷ್ಮೀ ಮತ್ತು ಶುಕ್ರ ದೇವನನ್ನು ನೆನೆಯಲಾಗುತ್ತದೆ. ಈ ದಿನದ ಪೂಜೆಯಲ್ಲಿ ಲಕ್ಷ್ಮೀ ದೇವಿಗೆ ಕೆಂಪು ಕುಂಕುಮ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು ಎನ್ನಲಾಗುತ್ತದೆ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಶನಿವಾರ:
ಈ ವಾರ ಶನಿ ದೇವರಿಗೆ ಸಮರ್ಪಿತವಾಗಿದೆ. ಆತನ ಆಶೀರ್ವಾದ ಪಡೆಯುವುದರಿಂದ ಜೀವನದಲ್ಲಿ ಬರುವ ಎಲ್ಲಾ ರೀತಿಯ ತೊಂದರೆಗಳು ನಿವಾರಣೆ ಯಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನಿಗೆ ಕಪ್ಪು ಬಣ್ಣ ಬಲು ಪ್ರೀತಿಯಾಗಿರುವುದರಿಂದ ಅದೇ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಭಾನುವಾರ:
ಭಾನುವಾರವನ್ನು ಸೂರ್ಯ ದೇವನ ಆರಾಧನೆಯ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವರ ಮಹಿಮೆಯಂತೆ, ಈ ದಿನದಂದು ಚಿನ್ನ, ಗುಲಾಬಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ