Cow and Kali yuga: ಕಲಿಗಾಲ ಮುಗಿಯುತ್ತಾ ಬಂದಿದೆ ಅಂದ್ಕೋಬೇಡಿ, ಇದು ಆರಂಭವಷ್ಟೇ! ಕಲಿಯುಗದ ಅಂತ್ಯಕ್ಕೆ ಧರ್ಮವೇ ಇರುವುದಿಲ್ಲ! ಇದನ್ನು ಓದಿ

ಯಾವಾಗ ಭೂಮಿಯ ಮೇಲಿಂದ ಕಟ್ಟಕಡೆಯ ಗೋವು ಇಲ್ಲವಾಗುತ್ತೋ ಅಲ್ಲಿಗೆ ಕಲಿಯುಗಾಂತ್ಯಕ್ಕೆ ಪ್ರಳಯ ನಿಶ್ಚಯವಾಗುವುದು.. ಕಲಿಯುಗದ ಅಂತ್ಯಕಾಲಕ್ಕೆ ಮಾನವರ ಎತ್ತರ ಕೇವಲ ಎರಡೂವರೆ ಅಡಿಗಳಷ್ಟಿರುತ್ತದೆ. ಎಲ್ಲಾ ಪ್ರಾಣಿಗಳು ಕುಳ್ಳವಾಗುತ್ತವೆ.

Cow and Kali yuga: ಕಲಿಗಾಲ ಮುಗಿಯುತ್ತಾ ಬಂದಿದೆ ಅಂದ್ಕೋಬೇಡಿ, ಇದು ಆರಂಭವಷ್ಟೇ! ಕಲಿಯುಗದ ಅಂತ್ಯಕ್ಕೆ ಧರ್ಮವೇ ಇರುವುದಿಲ್ಲ! ಇದನ್ನು ಓದಿ
ಯಾವಾಗ ಭೂಮಿಯ ಮೇಲಿಂದ ಕಟ್ಟಕಡೆಯ ಗೋವು ಇಲ್ಲವಾಗುತ್ತದೋ... ಅಲ್ಲಿಗೆ ಕಲಿಯುಗಾಂತ್ಯ ನಿಶ್ಚಯವಾಗುತ್ತದೆ.
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 08, 2022 | 6:06 AM

ಶ್ರೀ ಮಹಾಭಾರತದ ಅರಣ್ಯಪರ್ವದಲ್ಲಿ ಪಾಂಡವರು ಅರಣ್ಯವಾಸ ಮಾಡುವಾಗ ಒಂದು ದಿನ ಶ್ರೀ ಮಾರ್ಕಂಡೇಯ ಮಹರ್ಷಿಗಳು ಪಾಂಡವರನ್ನು ಭೇಟಿಯಾಗುತ್ತಾರೆ. ಆ ಸಮಯದಲ್ಲಿ ಶ್ರೀಕೃಷ್ಣನು ಸತ್ಯಭಾಮಾ ಸಮೇತನಾಗಿ ಪಾಂಡವರನ್ನು ನೋಡಲಿಕ್ಕೆಂದು ಅಲ್ಲಿಗೆ ಬಂದಿರುತ್ತಾನೆ. ಸಕಲೋಪಚಾರದ ನಂತರ ಧರ್ಮರಾಯನು ಮಾರ್ಕಂಡೇಯ ಮಹರ್ಷಿಗಳನ್ನು ಬರಲಿರುವ ಕಲಿಕಾಲದ ಬಗ್ಗೆ ಕೇಳಿದಾಗ ಮಹರ್ಷಿಗಳು ಕಲಿಗಾಲದ ಸ್ವರೂಪವನ್ನು (Kali yuga) ಹೇಳಿರುತ್ತಾರೆ. ಮಾರ್ಕಂಡೇಯ ಮಹರ್ಷಿಗಳು ಚಿರಂಜೀವಿಯಲ್ಲವೇ! ಅರಣ್ಯವಾಸದಲ್ಲಿರುವ ಪಾಂಡವರ ಹತ್ತಿರ ಬರುವ ಸಮಯಕ್ಕೆ ಶ್ರೀ ಮಾರ್ಕಂಡೇಯರಿಗೆ ಸಾವಿರಾರು ವರ್ಷಗಳ ವಯಸ್ಸಾಗಿರುತ್ತದೆ. ಅತ್ಯಂತ ವಯೋವೃದ್ಧರವರು (Spiritual). ಯುಗದಿಂದ ಯುಗಕ್ಕೆ ಧರ್ಮಗಳಲ್ಲಿ, ಆಲೋಚನೆಗಳಲ್ಲಿ, ಆಚಾರಗಳಲ್ಲಿ, ವಿಚಾರಗಳಲ್ಲಿ ಅಂತರವಿರುತ್ತದೆ. ಚತುರ್ಯುಗಗಳಲ್ಲಿ ಕೊನೆಯದಾಗಿರುವ ಕಲಿಯುಗದ ದಾರಿಯೇ ವಿಶಿಷ್ಟವಾಗಿದೆ. ಕಲಿಯುಗದ ವರ್ಷಗಳು – ಕಲಿಯುಗದಲ್ಲಿ ಒಟ್ಟು ನಾಲ್ಕು ಲಕ್ಷ ಮುವ್ವತೆರಡು ಸಾವಿರ ವರ್ಷಗಳು (4,32,000). ಈಗ ಐದು ಸಾವಿರ ವರ್ಷಗಳ ಮೇಲ್ಪಟ್ಟು (5122 ವರ್ಷಗಳು) ಕಲಿಯುಗದಲ್ಲಿ ಮುಗಿದುಹೋಗಿವೆ. ಒಂದು ಯುಗದ ಧರ್ಮವು ಇನ್ನೊಂದು ಯುಗಕ್ಕೆ ಅಧರ್ಮವಾಗಿ ಕಾಣುತ್ತದೆ.

ಹದಿನಾರು ವರ್ಷಗಳು ಪರಮಾಯುವಾಗುವುದು ಕಲಿಯುಗದ ಅಂತ್ಯದಿ ಮಾನವರಿಗೆ ಏಳೆಂಟು ವರ್ಷಗಳ ಪ್ರಾಯದೊಳು ಮಹಿಳೆಯರು ತಾಯಿಯರಾಗುವರು ಕಾಲಮಹಿಮೆ ದಾನಧರ್ಮಗಳೆಲ್ಲ ಸರ್ವಶೂನ್ಯತೆಯಿಂದ ಯಾಚಕರು ಕಳ್ಳತನದಲ್ಲಿ ತೊಡಗುವರು – ರಕ್ತಬಾಂಧವರೆಲ್ಲ ರಾಕ್ಷಸತ್ವವ ಹೊಂದಿ ಪಾಪ ಕಾರ್ಯಗಳಲ್ಲಿ ಮನಸು ಮಾಡುವರು, ಅನ್ನವಿಕ್ರಯ ಮಾಡುವ ಜನರು ವೇದವಿಕ್ರಯರಾಗುವರು.

ಕಲಿಯುಗದಲ್ಲಿ ಧರ್ಮದೇವತೆ ಒಂದು ಕಾಲಿನ ಮೇಲೆ ನಡೆಯುತ್ತಾಳೆ. ಕಲಿಯುಗಾಂತ್ಯಕ್ಕೆ ಧರ್ಮವೇ ಇರುವುದಿಲ್ಲ. ಅಧರ್ಮವೇ ಅಧಿಕಾರಕ್ಕೆ ಬರುತ್ತದೆ.

ಕಳ್ಳರು, ಕೊಲೆಗಡುಕರು, ಚಾಂಡಾಲರು ಅಧಿಕಾರಕ್ಕೆ ಬರುತ್ತಾರೆ. ಪ್ರಭುಗಳೇ ಮಾನಹೀನರಾಗಿ ಭ್ರಷ್ಟರಾಗುತ್ತಾರೆ. ಪ್ರಜೆಗಳೂ ಮತಿಭ್ರಷ್ಟರಾಗಿ ತಮ್ಮನ್ನು ತಾವು ಮಾರಕೊಳ್ಳುವ ಮತಿಗೇಡಿಗಳಾಗುತ್ತಾರೆ. ಯಾರಿಗೂ ದೂರದೃಷ್ಟಿ ಇರುವುದಿಲ್ಲ. ಪಾಪ ಕರ್ಮಗಳ ಭಯವಿರುವುದಿಲ್ಲ. ಮನುಷ್ಯರೆಲ್ಲರೂ ಕ್ಷಣಿಕ ಸುಖಗಳಿಗೆ ದಾಸರಾಗುತ್ತಾರೆ.

ಆಚಾರವಿಚಾರಗಳು, ಸತ್ಸಂಪ್ರದಾಯಗಳು ಸಮಾಧಿಯಾಗುತ್ತವೆ. ದೇವರನ್ನು ದೈವತ್ವವನ್ನು ನಂಬುವುದಿಲ್ಲ. ನಂಬಿದರೂ ಎಲ್ಲೆಲ್ಲೂ ಅರ್ಥವಿಲ್ಲದ ಆಚರಣೆಗಳು, ಮೂಢನಂಬಿಕೆಗಳದೇ ಮೇಲುಗೈ. ತಮ್ಮ ಆಸೆಗಳು, ಕಾಮನೆಗಳನ್ನು ಪೂರೈಸಿಕೊಳ್ಳಲು ಮಾತ್ರ ಜನರಿಗೆ ದೇವರು, ದೈವ ಬೇಕು. ಅದು ಅಧರ್ಮದ, ಪಾಪಕಾರ್ಯಗಳಂತಹ ದುರ್ಮಾರ್ಗಳಿಂದಲಾದರೂ ಸರಿ.

ವೇದ ವಿದ್ಯೆಗಳು ಅಪಹಾಸ್ಯಗೊಳ್ಳುತ್ತವೆ. ಧಾರ್ಮಿಕ ವ್ಯಕ್ತಿಗಳನ್ನು ಗೇಲಿ ಮಾಡುತ್ತಾರೆ. ಪುರಾಣಗಳನ್ನು ಧಾರ್ಮಿಕ ಗ್ರಂಥಗಳನ್ನು ಸುಟ್ಟು ಬೂದಿ ಮಾಡುತ್ತಾರೆ.

ಕಾಮಸುಖಗಳಿಗೆ ಗುಲಾಮರಾಗುತ್ತಾರೆ. ಸೋದರ, ಸೋದರಿಯರ ಪಾವಿತ್ರ್ಯತೆ ಕಾಣುವುದಿಲ್ಲ. ಯಾರೂ ವಯೋಧರ್ಮವನ್ನು ಪಾಲಿಸುವುದಿಲ್ಲ. ವಯಸ್ಕ ಹೆಂಗಸರು ಸಣ್ಣವಯಸ್ಸಿನ ಹುಡುಗರನ್ನು ಮದುವೆಯಾಗುತ್ತಾರೆ. ಪತಿತೆಯರಿಗೂ, ಪತಿವ್ರತೆಯರಿಗೂ ವ್ಯತ್ಯಾಸವೇ ಕಾಣುವುದಿಲ್ಲ. ಸ್ತ್ರೀಯರೆಲ್ಲರೂ ತುಂಡುಡುಗೆ ತೊಟ್ಟು ಅರೆಬೆತ್ತಲೆಯಾಗಿ ತಿರುಗುತ್ತಾರೆ. ಒಂದು ಹೆಣ್ಣಿಗೆ ನಾಲ್ಕಾರು ಗಂಡಂದಿರಿರುತ್ತಾರೆ. ಒಬ್ಬ ಪುರುಷರಿಗೆ ಹತ್ತಾರು ಹೆಂಗಸರು ಕಾಮಸುಖಗಳನ್ನು ನೀಡುತ್ತಿರುತ್ತಾರೆ. ಗಂಡು ಗಂಡುಗಳ ನಡುವೆ, ಹೆಣ್ಣು ಹೆಣ್ಣುಗಳ ನಡುವೆ ಸಲಿಂಗಕಾಮ ನಡೆಯುತ್ತದೆ. ಮೂಕಪ್ರಾಣಿಗಳ ಜೊತೆ ಕಾಮದಾಟವಾಡುತ್ತಾರೆ. ಗೊಂಬೆಗಳನ್ನು, ಯಂತ್ರ ಪರಿಕರಗಳನ್ನು ಸಂಭೋಗ ಕ್ರಿಯೆಗೆ ಉಪಯೋಗಿಸುತ್ತಾರೆ.

ಗಂಡ-ಹೆಂಡತಿಯರ ಬಂಧನಕ್ಕೆ ಬೆಲೆ ಇರುವುದಿಲ್ಲ. ಮದುವೆಗಳಿಗೆ ಮಂತ್ರಗಳ ಅವಶ್ಯಕತೆ ಇರುವುದಿಲ್ಲ. ತಂದೆತಾಯಿಯರ ಅನುಮತಿ ಮೇರೆಗೆ ಮದುವೆಗಳು ನಡೆಯುವುದಿಲ್ಲ. ಮಾತನಾಡುವ ದ್ವಿಪಾದ ಪಶುಗಳಂತೆ ಮಾನವರು ಜೀವಿಸುತ್ತಾರೆ. ಅತಿಕಾಮುಕತೆಯಿಂದ, ಕೃತ್ರಿಮ ಜೀವನದಿಂದ ಮಾನವರೆಲ್ಲರ ಜೀವನ ಕಾಲವು ಕ್ಷೀಣಿಸುತ್ತದೆ. ಮುಂದೆ ಹದಿನಾರು ವರ್ಷಗಳಿಗೆ ಮರಣ ಬರುತ್ತದೆ. ಆರು ಏಳು ವರ್ಷಗಳ ಸಮಯಕ್ಕೆ ಮಕ್ಕಳನ್ನು ಹಡೆಯುತ್ತಾರೆ.

ಹಣ ಗಳಿಕೆಯೊಂದೇ ಎಲ್ಲರ ಜೀವನದ ಗುರಿಯಾಗಿರುತ್ತದೆ. ಎಂಟಾಣೆ ದುಗ್ಗಾಣಿಗಾಗಿ ಕೊಲೆಗಳು ನಡೆಯುತ್ತವೆ. ಝಣ ಝಣ ಕುರುಡು ಕಾಂಚಾಣದ ದೆಸೆಯಿಂದಾಗಿ ತಂದೆತಾಯಿಗಳ ಮಕ್ಕಳ ನಡುವೆ, ಸೋದರ ಸೋದರಿಯರ ನಡುವೆ, ಬಂಧುಭಗಿನಿಯರ ನಡುವೆ ಬಾಂಧವ್ಯವೇ ನಶಿಸಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತವೆ.

ಕಲಿಯುಗದ ಅಂತ್ಯಕಾಲಕ್ಕೆ ಮಾನವರ ಎತ್ತರ ಕೇವಲ ಎರಡೂವರೆ ಅಡಿಗಳಷ್ಟಿರುತ್ತದೆ. ಎಲ್ಲಾ ಪ್ರಾಣಿಗಳು ಕುಳ್ಳವಾಗುತ್ತವೆ. ಸಹಜ ವಾತಾವರಣ, ಸಹಜ ಆಹಾರ, ಸಹಜ ಗಾಳಿ, ಸಹಜ ನೀರು ಇರುವುದಿಲ್ಲ. ಪ್ರಕೃತಿ ಅಪಾರವಾಗಿ ಕಲುಷಿತಗೊಳ್ಳುತ್ತದೆ. ಇದರ ಪರಿಣಾಮವನ್ನು ಸಕಲ ಜೀವಿಗಳು ಎದುರಿಸಬೇಕಾಗುತ್ತದೆ.

ಅವಿಭಕ್ತ ಕುಟುಂಬಗಳು ನಶಿಸುತ್ತವೆ. ಮಕ್ಕಳ ಮದುವೆಯಾದ ಮೇಲೆ ಕೂಡುಕುಟುಂಬಗಳ ವ್ಯವಸ್ಥೆ ಶಿಥಿಲವಾಗುತ್ತದೆ. ಹಣ, ಆಸ್ತಿ, ಒಡವೆಗಳಿಗಾಗಿ ಸೋದರ-ಸೋದರಿ ಬಾಂಧವ್ಯಗಳೇ ಹೊರಟುಹೋಗಿ ಶತ್ರುತ್ವ ಹುಟ್ಟಿಕೊಳ್ಳುತ್ತದೆ. ಗಂಡ-ಹೆಂಡತಿಯರಿಗೇ ಒಂದು ಮನೆ, ತಂದೆತಾಯಿಗಳಿಗೇ ಒಂದು ಮನೆ ಎನ್ನುವಂತಾಗುತ್ತದೆ. ಹಿರಿಯರೇ ಇಲ್ಲದ ಮನೆಗಳಾಗುತ್ತವೆ. ಪ್ರತಿ ಮನೆಯೂ ಒಂದೊಂದು ರಣರಂಗವಾಗಿರುತ್ತದೆ. ಪ್ರೀತಿ, ವಿಶ್ವಾಸಗಳು, ಆತ್ಮೀಯತೆ, ಅನುಬಂಧಗಳು ಹುಡುಕಿದರೂ ಸಿಗುವುದಿಲ್ಲ. ಮನೆಯ ಸದಸ್ಯರೆಲ್ಲರದೂ ಮುಖವಾಡದ ಬದುಕಾಗಿರುತ್ತದೆ. ಹರೆಯದ ಗಂಡು ಮಕ್ಕಳು ತಂದೆತಾಯಿಗಳಿಗೆ, ಮನೆ ಹಿರಿಯರಿಗೆ ಗೊತ್ತಾಗದಂತೆ ಜೂಜು, ಕುಡಿತ, ಮೋಜು, ಮಸ್ತಿ, ವೇಶ್ಯೆಯರ ಸಹವಾಸ.. ಇತ್ಯಾದಿ ಕೆಟ್ಟ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಮಕ್ಕಳ ಮಾನಹೀನ ಕಾರ್ಯಗಳಿಗೆ ಕೆಲವು ಹಿರಿಯರು ತಾವೇ ಸಹಕರಿಸುತ್ತಾರೆ.

ನೀತಿಸೂತ್ರಗಳು, ಸಮಾಜಧರ್ಮಗಳು ಬದಲಾವಣೆಯಾಗುತ್ತವೆ. ಉಡುಗೆ ತೊಡುಗೆಗಳಲ್ಲಿ, ಕೆಲಸ ಕಾರ್ಯಗಳಲ್ಲಿ, ಆಲೋಚನೆಗಳಲ್ಲಿ… ಇನ್ನಿತರ ಅನೇಕ ವಿಷಯಗಳಲ್ಲಿ ಸ್ತ್ರೀ ಪುರುಷ ಭೇದಭಾವವಿರುವುದಿಲ್ಲ. ಹಗಲು ರಾತ್ರಿಗಳ ಅಂತರವಿರುವುದಿಲ್ಲ. ಹಗಲು ರಾತ್ರಿಯಂತಿರುತ್ತದೆ, ರಾತ್ರಿ ಹಗಲಿನಂತೆ ಚಟುವಟಿಕೆಗಳಿರುತ್ತವೆ.

ಮದ್ಯಪಾನವೂ, ರತಿಸುಖವೂ ಸಾಮಾನ್ಯ ಕ್ರಿಯೆಗಳಾಗಿರುತ್ತವೆ. ಮಕ್ಕಳು ತಂದೆತಾಯಂದಿರನ್ನು, ಗುರು ಹಿರಿಯರನ್ನು ಗೌರವಿಸುವುದಿಲ್ಲ. ಹೆಂಡತಿ ಗಂಡನನ್ನು ಸಮ್ಮಾನಿಸುವುದಿಲ್ಲ.

ಮನುಷ್ಯರ ಶಾರೀರಿಕ ಶಕ್ತಿ ಕಡಿಮೆಯಾಗುತ್ತದೆ. ಯಾಂತ್ರಿಕ ಶಕ್ತಿಯ ಮೇಲೆ ಎಲ್ಲರ ಜೀವನವು ನಡೆಯುತ್ತದೆ. ಚಟುವಟಿಕೆಯೇ ಇಲ್ಲದ ಶರೀರಗಳು ರೋಗಗಳ ಗೂಡಾಗಿ ಚಿತ್ರವಿಚಿತ್ರರೋಗಗಳಿಗೆ ಗುರಿಯಾಗುತ್ತವೆ. ಔಷಧಗಳಿಗೆ ಬಾಗದ ರೋಗಗಳಿಂದ ಮನುಷ್ಯರು ತಳಮಳಗೊಳ್ಳುತ್ತಾರೆ.

ಭೂಮಿ ಸರಿಯಾಗಿ ಫಸಲು ಕೊಡುವುದಿಲ್ಲ. ಮಳೆ ಕಡಿಮೆಯಾಗುತ್ತದೆ. ಭೂಮಿಯ ಉಷ್ಣಾಂಶ ಹೆಚ್ಚಾಗಿ ಬಿಸಿಗಾಳಿ ಬೀಸುತ್ತದೆ. ಅತಿವೃಷ್ಟಿ ಅನಾವೃಷ್ಟಿಗಳಿಂದ ಮನುಕುಲವು ತತ್ತರಿಸುತ್ತದೆ. ಬಿಸಿ ತಾಪಮಾನದಿಂದಾಗಿ ಹಿಮಗಡ್ಡೆಗಳು ಕರಗಿ ನೀರಾಗಿ ಸಾಗರಗಳು, ಸಮುದ್ರಗಳು ಉಕ್ಕಿಬಂದು ಭೂಮಿಯನ್ನು ಆಕ್ರಮಿಸುತ್ತವೆ. ನದಿಗಳು ಪ್ರವಾಹವಾಗಿ ಉಕ್ಕಿಹರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ.

ಪ್ರಕೃತಿಯ ಎಷ್ಟೋ ಗಿಡ-ಮರ-ಬಳ್ಳಿಗಳ ಸಂಕುಲಗಳು, ಆಹಾರ ಧಾನ್ಯಗಳ ತಳಿಗಳು, ಗಿಡಮೂಲಿಕೆಗಳು, ಜಲಚರ, ಭೂಚರ, ಉಭಯಚರ ಪ್ರಾಣಿಪಕ್ಷಿ ಸಂಕುಲಗಳು ನಾಶವಾಗಿ ಕಣ್ಮರೆಯಾಗುತ್ತವೆ. ಅಳಿದುಳಿದಿರುವ ಈಗಿನ ಪಶು-ಪಕ್ಷಿ-ಪ್ರಾಣಿಗಳು, ಸಸ್ಯ ಸಂಕುಲಗಳು ಮುಂದೆಯೂ ನಿರ್ನಾಮವಾಗಿಬಿಡುತ್ತವೆ. ಇಡೀ ಭೂಮಿಯೇ ಬರಡಾಗಿಬಿಡುತ್ತದೆ. ಯಾವಾಗ ಭೂಮಿಯ ಮೇಲಿಂದ ಕಟ್ಟಕಡೆಯ ಗೋವು ಇಲ್ಲವಾಗುತ್ತೋ ಅಲ್ಲಿಗೆ ಕಲಿಯುಗಾಂತ್ಯಕ್ಕೆ ಪ್ರಳಯ ನಿಶ್ಚಯವಾಗುವುದು.

ಆಹಾರ ಪದಾರ್ಥಗಳು, ಖಾದ್ಯ ತೈಲಗಳು ಇತ್ಯಾದಿ ಕಲಬೆರಕೆಯಿಂದ ಕೂಡಿರುತ್ತವೆ. ಎಲ್ಲೂ ನೈಸರ್ಗಿಕ, ಪರಿಶುದ್ಧ ಆಹಾರ ದೊರಕುವುದಿಲ್ಲ. ಸಹಜ ಉತ್ಪನ್ನಗಳು ಹೋಗಿಬಿಡುತ್ತವೆ. ಎಲ್ಲವೂ ಕೃತ್ರಿಮವಾಗಿ ಉತ್ಪನ್ನವಾಗುತ್ತವೆ. ಕೃತ್ರಿಮ ಆಹಾರಗಳಿಂದ ಮಾನವ ಶರೀರಶಕ್ತಿ ಕುಗ್ಗಿಹೋಗುತ್ತದೆ.

ಬ್ರಹ್ಮದೇವನ ಸೃಷ್ಟಿಗೆ ಬೆಲೆ ಇರುವುದಿಲ್ಲ. ಬ್ರಹ್ಮಸೃಷ್ಟಿ ಅಪಹಾಸ್ಯಕ್ಕೀಡಾಗುತ್ತದೆ. ಮಾನವರ ಮೇಧಾಶಕ್ತಿಗೆ ದೇವಾನುದೇವತೆಯರು ನಿಬ್ಬೆರಗಾಗಿಬಿಡುತ್ತಾರೆ. ಪುರುಷ ಸಂಪರ್ಕರಹಿತವಾಗಿಯೇ ಸ್ತ್ರೀಯರು ಗರ್ಭವತಿಯರಾಗುತ್ತಾರೆ. ದೇವರ ಇಚ್ಛೆಯಂತೆ ಎಲ್ಲರಿಗೂ ಮಕ್ಕಳಾಗುವುದಿಲ್ಲ. ಸಮಯಾನುಸಾರ ಮಾನವರ ಇಚ್ಛೆಯಂತೆ ಮಕ್ಕಳು ಹುಟ್ಟುತ್ತಾರೆ. ಇನ್ನೂ ಮುಂದೆ ಮೂರು ವರ್ಷಗಳ ಪ್ರಾಯದಲ್ಲಿ ಬಾಲಕಿಯರು ಋತುಮತಿಯರಾಗುತ್ತಾರೆ. ಆರು ವರ್ಷಗಳ ವಯಸ್ಸಿನಲ್ಲಿ ತಾಯಂದಿರಾಗುತ್ತಾರೆ.

ವೇದೋಪನಿಷತ್ತುಗಳನ್ನು, ಸ್ಮೃತಿಗಳನ್ನು, ಶ್ರುತಿಗಳನ್ನು, ಧರ್ಮಗ್ರಂಥಗಳನ್ನೇ ಅಸಡ್ಡೆ ತಿರಸ್ಕಾರಗಳಿಂದ ಕಂಡು ಪ್ರಶ್ನಿಸುತ್ತಾರೆ. ಸತ್ಯ, ಧರ್ಮಗಳೇ ಕಲಿಯುಗದ ಮಾನವರಿಗೆ ಅಸತ್ಯ, ಅಧರ್ಮಗಳಾಗಿ ಕಾಣುತ್ತವೆ. ಭಾರತೀಯ ಭಾಷೆಗಳು, ಭಾರತೀಯ ನಡೆನುಡಿಗಳು ಮಣ್ಣುಪಾಲಾಗುತ್ತವೆ. ಭಾರತೀಯ ಭಾಷೆಗಳೆಲ್ಲವೂ ಭೂಗತವಾಗಿಬಿಡುತ್ತವೆ. ಸನಾತನ ಭಾರತೀಯ ಸಂಸ್ಕೃತಿ ಸಮಾಧಿಯಾಗಿಬಿಡುತ್ತದೆ. ವೇದಮಂತ್ರಗಳನ್ನು ಶೃಂಗಾರಗೀತೆಗಳಲ್ಲಿ ಸೇರಿಸಿ ಹಾಡುತ್ತಾರೆ.

ಹಡೆದ ಮಕ್ಕಳು ತಂದೆತಾಯಿಗಳಿಗೆ ಅನ್ನ ನೀಡುವುದಿಲ್ಲ. ಪ್ರೀತಿಯ ಬಾಂಧವ್ಯ ತೋರುವುದಿಲ್ಲ. ತಂದೆತಾಯಿಯರು ಕಾಮಕ್ಕಾಗಿಯೇ ತಮ್ಮನ್ನು ಹಡೆದಿದ್ದಾರೆಂದು ಮಕ್ಕಳು ಹೇಳುತ್ತಿರುತ್ತಾರೆ.

‘ದೇವರು’ ಅನ್ನುವವನು ಇಲ್ಲವೇ ಇಲ್ಲ ಎಂದೇ ಭಾವಿಸುತ್ತಾರೆ. ಯಾರ ಹೆಂಡತಿ ಅವರಿಗೇ ಸ್ವಂತವೆಂಬ ಭಾವನೆಗಳಿರುವುದಿಲ್ಲ. ಹಣಕ್ಕಾಗಿ ದೇಹಸುಖಗಳನ್ನು ಮಾರುತ್ತಾರೆ. ಹಣದಿಂದ ದೇಹಸುಖ ಪಡೆಯುತ್ತಾರೆ. ಇದೇ ಕಲಿಯುಗದ ಸ್ವರೂಪ! ಆದರೆ…

ಬ್ರಹ್ಮದೇವನ ಸೃಷ್ಟಿಯನ್ನು ನಾಚಿಸುವಂಥಾ ಮಾನವಸೃಷ್ಟಿ ನಡೆಯುತ್ತದೆ. ಮಾನವರ ಮೇಧೋಶಕ್ತಿಗೆ ದೇವತೆಗಳು ವಿಸ್ಮಯರಾಗುತ್ತಾರೆ, ಯಂತ್ರಮಾನವರನ್ನು ಮನುಷ್ಯರೇ ತಯಾರಿಸುತ್ತಾರೆ. ಬ್ರಹ್ಮಸೃಷ್ಟಿಗೆ ವಿಶ್ವಾಮಿತ ಮಹರ್ಷಿ ಪ್ರತಿಸೃಷ್ಟಿ ಮಾಡಿದ ಹಾಗೆ, ವಿಶ್ವಾಮಿತ್ರನ ಸೃಷ್ಟಿಗೆ ಮಾನವರು ಪ್ರತಿಸೃಷ್ಟಿ ಮಾಡುತ್ತಾರೆ, ನೀರಿನಿಂದ ಬೆಂಕಿ ಹುಟ್ಟಿಸುತ್ತಾರೆ. ಚಾಲಕರಿಲ್ಲದೇ ವಾಹನಗಳನ್ನು ನಡೆಸುತ್ತಾರೆ. ಹೂಗಳಿಲ್ಲದೆ ಕಾಯಿಗಳಾಗುವಂತೆ ಮಾಡುತ್ತಾರೆ. ಗಂಡಸರಿಲ್ಲದೇ ಮಕ್ಕಳಾಗುವಂತೆ ಮಾಡುತ್ತಾರೆ. ಚಿತ್ರವಿಚಿತ್ರ ಕಾರ್ಯಕಲಾಪಗಳು ನಡೆಯುತ್ತವೆ. ಇದು ಕಲಿಗಾಲವಯ್ಯ ಕಲಿಗಾಲ, ಇಲ್ಲಿ ಸತ್ಯ-ಧರ್ಮಗಳಿಗೆ ಉಳಿಗಾಲವಿಲ್ಲ. (ಬರಹ -ಸದ್ವಿಚಾರ ತರಂಗಿಣಿ)

ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ