ಗಂಡ ಈ 4 ಅಂಶಗಳನ್ನು ಹೆಂಡತಿಯ ಜೊತೆ ಹಂಚಿಕೊಳ್ಳಬಾರದಂತೆ – ಇದು ಚಾಣಕ್ಯ ನೀತಿ

Chanakya Niti: ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿ ಪುಸ್ತಕದಲ್ಲಿ ಇಂತಹ 4 ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಯಾವಾಗಲೂ ಪತಿಯಾದವನು ಗಮನದಲ್ಲಿಟ್ಟುಕೊಳ್ಳಬೇಕು. ಹೆಂಡತಿಗೆ ಇಂತಹ ಕೆಲ ವಿಷಯಗಳನ್ನು ಹೇಳುವುದರಿಂದ ಮುಂದೆ ದಾಂಪತ್ಯ ಕಲಹ ಉಂಟಾಗಬಹುದು, ಎಚ್ಚರಾ.

ಗಂಡ ಈ 4 ಅಂಶಗಳನ್ನು ಹೆಂಡತಿಯ ಜೊತೆ ಹಂಚಿಕೊಳ್ಳಬಾರದಂತೆ - ಇದು ಚಾಣಕ್ಯ ನೀತಿ
ಗಂಡ ಈ 4 ಅಂಶಗಳನ್ನು ಹೆಂಡತಿಯ ಜೊತೆ ಹಂಚಿಕೊಳ್ಳಬಾರದಂತೆ - ಇದು ಚಾಣಕ್ಯ ನೀತಿ
TV9kannada Web Team

| Edited By: sadhu srinath

Jun 25, 2022 | 6:06 AM

ನಿಮಗೆ ಎಲ್ಲಿಯಾದರೂ ಅವಮಾನವಾದರೆ.. ಅದನ್ನೇ ಪಾಠವಾಗಿ ತೆಗೆದುಕೊಳ್ಳಿ. ಯಾರಿಗೂ ಹೇಳಬೇಡಿ. ನಿಮ್ಮ ಹೆಂಡತಿಯ ಬಳಿಯೂ ಇದನ್ನು ಹೇಳಬಾರದು.. ಕೆಲ ಸಂದರ್ಭಗಳಲ್ಲಿ ಆಕೆ ಆ ಅವಮಾನವನ್ನು ಉಲ್ಲೇಖಿಸಿ, ನಿಮ್ಮ ಬಗ್ಗೆ ಕೀಳಾಗಿ ಮಾತನಾಡುತ್ತಾಳೆ.

ದಾನ ಧರ್ಮ ಕಾರ್ಯಗಳನ್ನು ರಹಸ್ಯವಾಗಿ ಮಾಡಿದಾಗ ಮಾತ್ರ ಅದರ ಪಾತ್ರ ಮುಖ್ಯವಾಗುತ್ತದೆ. ನೀವು ಮಾಡುವ ದಾನದ ಬಗ್ಗೆ ನಿಮ್ಮ ಹೆಂಡತಿಗೂ ಹೇಳಬೇಡಿ. ಇದರಿಂದ ನಿಮ್ಮ ದಾನಕ್ಕೆ ದಕ್ಕುವ ಪ್ರಾಮುಖ್ಯತೆ ಕ್ಷೀಣುಸುತ್ತದೆ.

ಪತಿ ತನ್ನ ಸಂಪಾದನೆಯ ಬಗ್ಗೆ ಹೆಂಡತಿಗೆ ಹೇಳಬಾರದು ಎನ್ನುತ್ತಾರೆ ಚಾಣಕ್ಯ. ನಿಮ್ಮ ಗಳಿಕೆಯ ಬಗ್ಗೆ ಆಕೆಗೆ ತಿಳಿದಿದ್ದರೆ.. ಅದರ ಮೇಲೆ ಹಕ್ಕುಗಳನ್ನು ಸಾಧಿಸುವ ಮೂಲಕ ಅವಳು ನಿಮ್ಮ ಹಣವನ್ನು ಖರ್ಚು ಮಾಡಲು ಪ್ರಾರಂಭಿಸುತ್ತಾಳೆ. ಇನ್ನು ನೀವು ಮಾಡುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಾಳೆ. ಇದರಿಂದಾಗಿ .. ಕೆಲವೊಮ್ಮೆ ನೀವು ಕೈಗೊಳ್ಳಬೇಕಾದ ಮಹತ್ವದ ಕೆಲಸಗಳ ಕೆಟ್ಟ ಪರಿಣಾಮ ಬೀರುತ್ತದೆ.

ಗಂಡನಿಗೆ ಏನಾದರೂ ದೌರ್ಬಲ್ಯವಿದ್ದರೆ.. ಆ ದೌರ್ಬಲ್ಯವನ್ನು ಗಂಡ ತನ್ನಲ್ಲಿಯೇ ಅಡಗಿಸಿಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ನಿಮ್ಮ ದೌರ್ಬಲ್ಯವನ್ನು ನಿಮ್ಮ ಹೆಂಡತಿಗೂ ಹೇಳಬೇಡಿ. ನಿಮ್ಮ ದೌರ್ಬಲ್ಯದ ಬಗ್ಗೆ ನಿಮ್ಮ ಹೆಂಡತಿಗೆ ತಿಳಿದರೆ .. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ನಿಮ್ಮ ದೌರ್ಬಲ್ಯದ ಮೇಲೆ ದಾಳಿ ಮಾಡುತ್ತಾರೆ. ಹಾಗಾಗಿ ನಿಮ್ಮ ದೌರ್ಬಲ್ಯದ ಬಗ್ಗೆ ಹೆಂಡತಿಗೆ ಹೇಳಬೇಡಿ – ಇದು ಚಾಣಕ್ಯನ ಜೀವನ ಪಾಠ.

ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿ ಪುಸ್ತಕದಲ್ಲಿ ಇಂತಹ 4 ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಯಾವಾಗಲೂ ಪತಿಯಾದವನು ಗಮನದಲ್ಲಿಟ್ಟುಕೊಳ್ಳಬೇಕು. ಹೆಂಡತಿಗೆ ಇಂತಹ ಕೆಲ ವಿಷಯಗಳನ್ನು ಹೇಳುವುದರಿಂದ ಮುಂದೆ ದಾಂಪತ್ಯ ಕಲಹ ಉಂಟಾಗಬಹುದು, ಎಚ್ಚರಾ.

To read in Telugu click here

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada