ದೇವರಿಗೆ ದೀಪ ಹಚ್ಚುವ ಮೊದಲು ಈ ವಿಷಯ ತಿಳಿದುಕೊಳ್ಳಿ
ಬೆಳಗ್ಗೆ ಹಾಗೂ ಸಂಧ್ಯಾಕಾಲದಲ್ಲಿ ಮನೆಯಲ್ಲಿ ದೀಪ ಹಚ್ಚುವುದು ತುಂಬಾ ಒಳ್ಳೆಯದು. ಅವರವರ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ,ಹಿತ್ತಾಳೆ ಹಾಗೂ ಮಣ್ಣಿನ ದೀಪ ಬಳಸಲಾಗುತ್ತದೆ. ದೀಪ ಹಚ್ಚುವಾದ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಲಾಗುತ್ತದೆ. ಆದರೆ ದೇವರಿಗೆ ಯಾವ ದೀಪ ಶ್ರೇಷ್ಠ? ಇದರ ಮಹತ್ವವೇನು? ಎಂಬುದರ ಕುರಿತು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.

ದೀಪಜ್ಯೋತಿಃ ಪರಬ್ರಹ್ಮ ದೀಪ ಜ್ಯೋತಿ ಜನಾರ್ಧನಃ | ದೀಪೋ ಹರತು ಮೇ ಪಾಪಂ ಸಂಧ್ಯಾದೀಪಾ ನಮೋಸ್ತುತೇ || ಬೆಳಗ್ಗೆ ಹಾಗೂ ಸಂಧ್ಯಾಕಾಲದಲ್ಲಿ ಮನೆಯಲ್ಲಿ ದೀಪ ಹಚ್ಚುವುದು ಹಿಂದೂ ಸಂಸ್ಕೃತಿಯ ಒಂದು ಭಾಗ. ಮನೆಯ ದೇವರ ಕೋಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ ಅಥವಾ ವಿವಿಧ ರೀತಿಯ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ಆದರೆ ಮಣ್ಣಿನ ದೀಪ ಹಚ್ಚುವುದು ತುಂಬಾ ಶ್ರೇಷ್ಠ ಎಂದು ನಂಬಲಾಗಿದೆ. ಅದರಂತೆ ದೀಪ ಹಚ್ಚುವಾದ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಲಾಗುತ್ತದೆ. ಆದರೆ ದೇವರಿಗೆ ಯಾವ ದೀಪ ಶ್ರೇಷ್ಠ? ಇದರ ಮಹತ್ವವೇನು? ಎಂಬುದರ ಕುರಿತು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ಎಣ್ಣೆಯ ದೀಪ ಹಚ್ಚುವುದು:
ಬೆಳಗ್ಗೆ ಹಾಗೂ ಸಂಧ್ಯಾಕಾಲದಲ್ಲಿ ಮನೆಯಲ್ಲಿ ದೀಪ ಹಚ್ಚುವುದು ತುಂಬಾ ಒಳ್ಳೆಯದು. ಅವರವರ ಅನುಕೂಲಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ,ಹಿತ್ತಾಳೆ ಹಾಗೂ ಮಣ್ಣಿನ ದೀಪ ಬಳಸಲಾಗುತ್ತದೆ. ನೀವು ಪ್ರತಿದಿನ ತುಪ್ಪದ ದೀಪವೇ ಹಚ್ಚಬೇಕಿಲ್ಲ. ಎಣ್ಣೆಯ ದೀಪದಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಎಣ್ಣೆ ದೀಪಗಳು ದೀರ್ಘಕಾಲ ಉರಿಯುತ್ತವೆ ಮತ್ತು ಅವುಗಳ ಆಕರ್ಷಣ ಶಕ್ತಿಯು ಮನೆಯ ಸುತ್ತಮುತ್ತಲೂ ಹರಡುತ್ತದೆ. ಇದರಿಂದ ಮನೆಯಲ್ಲಿ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ಬಸವರಾಜ ಗುರೂಜಿ ಹೇಳುತ್ತಾರೆ.
ಇದನ್ನೂ ಓದಿ: ಶಾಸ್ತ್ರದ ಪ್ರಕಾರ, ಯಾವ ದಿನ ಕೂದಲು ಕತ್ತರಿಸುವುದು ಶುಭ?
ತುಪ್ಪದ ದೀಪ ಹಚ್ಚುವುದು:
ವಾರಕ್ಕೆ ಒಮ್ಮೆಯಾದರೂ ತುಪ್ಪದ ದೀಪ ಹಚ್ಚುವುದು ತುಂಬಾ ಒಳ್ಳೆಯದು. ಎಣ್ಣೆ ಮತ್ತು ತುಪ್ಪದ ದೀಪಕ್ಕೆ ಹೋಲಿಸಿದರೆ ಸ್ವಲ್ಪ ಸರ್ವ ಶ್ರೇಷ್ಠತೆ ಇರುವುದು ತುಪ್ಪದ ದೀಪದಲ್ಲಿ ಎಂದು ಗುರೂಜಿ ಹೇಳುತ್ತಾರೆ. ತುಪ್ಪದ ದೀಪಗಳು ಕಡಿಮೆ ಕಾಲ ಉರಿಯುತ್ತವೆ ಆದರೆ ಅವುಗಳ ಆಧ್ಯಾತ್ಮಿಕ ಪರಿಣಾಮಗಳು ಹೆಚ್ಚು. ತುಪ್ಪದ ದೀಪವು ಋಣಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ ಮತ್ತು ಮನಸ್ಸಿನ ಶುದ್ಧತೆಯನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಸೂತಕ ಮತ್ತು ಗ್ರಹಣದ ಸಮಯದಲ್ಲಿ ತುಪ್ಪದ ದೀಪವನ್ನು ಹಚ್ಚುವುದು ವಿಶೇಷ ಮಹತ್ವವನ್ನು ಹೊಂದಿದೆ. ತುಪ್ಪದ ದೀಪ ಕಡಿಮೆ ಅವಧಿಯಲ್ಲಿ ಸಕಲ ವಿಧವಾದ ಸಾತ್ವಿಕ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಪ್ರತಿದಿನ ತುಪ್ಪದ ದೀಪ ಹಚ್ಚಲು ಸಾಧ್ಯವಾಗದಿದ್ದರೆ ವಾರಕ್ಕೆ ಒಮ್ಮೆಯಾದರೂ ಮನೆಯಲ್ಲಿ ತುಪ್ಪದ ದೀಪ ಹಚ್ಚಿ ಎಂದು ಸಲಹೆ ನೀಡಿದ್ದಾರೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Fri, 7 March 25








