Miracles of Meditation: ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡದಿರಿ, ಏಕಾಗ್ರತೆಯಿಂದ ಯಶಸ್ಸು ಕಟ್ಟಿಟ್ಟಬುತ್ತಿ!

Meditation: ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.

Miracles of Meditation: ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡದಿರಿ, ಏಕಾಗ್ರತೆಯಿಂದ ಯಶಸ್ಸು ಕಟ್ಟಿಟ್ಟಬುತ್ತಿ!
ಏಕಾಗ್ರತೆಯಿಂದ ಯಾವುದೇ ಕಾರ್ಯ ಮಾಡುವವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ!

Updated on: Sep 23, 2024 | 7:54 AM

ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ ಧ್ಯಾನ. ದೃಢ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದುಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ. ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ. ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ? ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಅಂತಹುದರಲ್ಲಿ ಆತನಿಗೆ ಭಕ್ತರು ಹಚ್ಚುವ ಜ್ಯೋತಿಗಳಿಂದ ಏನು ಉಪಯೋಗ ಆಗಬೇಕು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನಬಹುದು. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಟಿಯನ್ನು ಮಂದವಾಗಿಸುತ್ತದೆ. ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಅದನ್ನು ಶ್ರೇಷ್ಠ ಎನ್ನುತ್ತಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ...

Published On - 3:03 am, Sun, 22 September 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ