AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lalita Sahasranama: ಲಲಿತಾ ಸಹಸ್ರನಾಮ ಪಠಿಸುವ ಸರಿಯಾದ ವಿಧಾನ ಮತ್ತು ಮಹತ್ವ ಇಲ್ಲಿ ತಿಳಿದುಕೊಳ್ಳಿ

ಲಲಿತಾ ಸಹಸ್ರನಾಮವು ಅತ್ಯಂತ ಪವಿತ್ರ ಮತ್ತು ಶೀಘ್ರ ಫಲಕಾರಿಯಾದ ಮಂತ್ರವಾಗಿದೆ. ಇದನ್ನು ನಿತ್ಯ ಪಠಿಸುವುದರಿಂದ ಅಥವಾ ಆಲಿಸುವುದರಿಂದ ಋಣಾತ್ಮಕ ಶಕ್ತಿಗಳು ದೂರವಾಗಿ ಸಕಲ ದೋಷಗಳು ನಿವಾರಣೆಯಾಗುತ್ತವೆ. ಬ್ರಾಹ್ಮಿ, ಅಭಿಜಿನ್, ಅಥವಾ ಗೋಧೂಳಿ ಮುಹೂರ್ತಗಳಲ್ಲಿ, ವಿಶೇಷವಾಗಿ ಶುಕ್ರವಾರದಂದು ಪಠಿಸಿದರೆ ಸರಸ್ವತಿ, ಲಕ್ಷ್ಮಿ, ಮತ್ತು ಮಹಾದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ.

Lalita Sahasranama: ಲಲಿತಾ ಸಹಸ್ರನಾಮ ಪಠಿಸುವ ಸರಿಯಾದ ವಿಧಾನ ಮತ್ತು ಮಹತ್ವ ಇಲ್ಲಿ ತಿಳಿದುಕೊಳ್ಳಿ
ಲಲಿತಾ ಸಹಸ್ರನಾಮ
ಅಕ್ಷತಾ ವರ್ಕಾಡಿ
|

Updated on: Nov 22, 2025 | 10:31 AM

Share

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಲಲಿತಾ ಸಹಸ್ರನಾಮದ ಮಹತ್ವ ಮತ್ತು ಫಲಗಳ ಕುರಿತು ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಮಂತ್ರ, ತಂತ್ರ ಮತ್ತು ಯಂತ್ರಗಳ ಮೂಲಕ ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವ ನಂಬಿಕೆ ಸನಾತನ ಧರ್ಮದಲ್ಲಿ ಆಳವಾಗಿದೆ. ನವವಿಧ ಭಕ್ತಿಗಳ ಜೊತೆಗೆ ಮಂತ್ರ, ಯಂತ್ರ, ತಂತ್ರಗಳ ಬಳಕೆ ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಅನೇಕ ಮಂತ್ರಗಳು, ನಾಮಗಳು ಮತ್ತು ಅಷ್ಟೋತ್ತರಗಳಲ್ಲಿ, ಲಲಿತಾ ಸಹಸ್ರನಾಮವು ಅತಿ ಪವಿತ್ರ, ವಿಶೇಷ ಮತ್ತು ಶೀಘ್ರ ಫಲ ನೀಡುವ ಸ್ತೋತ್ರ. ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ, ಲಕ್ಷ್ಮಿ ಅಷ್ಟೋತ್ತರ ಅಥವಾ ಲಕ್ಷ್ಮಿ ಸಹಸ್ರನಾಮಗಳಂತೆಯೇ, ಲಲಿತಾ ಸಹಸ್ರನಾಮವು ತ್ರಿಶಕ್ತಿಗಳ (ಸರಸ್ವತಿ, ಲಕ್ಷ್ಮಿ, ಪಾರ್ವತಿ) ಬಲವನ್ನು ಹೊಂದಿರುವ ವಿಶೇಷ ಸ್ತೋತ್ರವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ.

ಲಲಿತಾ ಸಹಸ್ರನಾಮವನ್ನು ಯಾವಾಗ ಪಠಿಸಬೇಕು, ಇದರಿಂದ ಸಿಗುವ ಫಲಗಳೇನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯಕ. ಮನೆಯಲ್ಲಿ ಪ್ರತಿದಿನ ಒಂದು ಬಾರಿಯಾದರೂ ಇದನ್ನು ಪಠಿಸುವುದು ಅಥವಾ ಮೊಬೈಲ್‌ನಲ್ಲಿ ಆಲಿಸುವುದು ಶುಭಕರ. ಈ ನಾಮದ ಲಹರಿಗಳು ಮನೆಯಲ್ಲಿ ಪ್ರಸಾರವಾದರೆ, ಎಲ್ಲಾ ಋಣಾತ್ಮಕ ಶಕ್ತಿಗಳು ದೂರವಾಗಿ ಸಕಲ ದೋಷಗಳು ನಿವಾರಣೆಯಾಗುತ್ತವೆ. ಪೂಜಾ ಸಮಯದಲ್ಲಿ, ವಿಶೇಷವಾಗಿ ಬ್ರಾಹ್ಮಿ ಮುಹೂರ್ತ, ಅಭಿಜಿನ್ ಮುಹೂರ್ತ ಅಥವಾ ಗೋದೋಳಿ ಮುಹೂರ್ತಗಳಲ್ಲಿ ಇದನ್ನು ಪಠಿಸುವುದರಿಂದ ಅಥವಾ ಆಲಿಸುವುದರಿಂದ ಅತಿ ಹೆಚ್ಚು ಫಲ ದೊರೆಯುತ್ತದೆ. ವಾರವಿಡೀ ಸಾಧ್ಯವಾಗದಿದ್ದರೂ, ಕನಿಷ್ಠಪಕ್ಷ ಶುಕ್ರವಾರದಂದು ಸಂಧ್ಯಾಕಾಲ, ಗೋದೋಳಿ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತದಲ್ಲಿ ಲಲಿತಾ ಸಹಸ್ರನಾಮವನ್ನು ಪಠಿಸುವ ಅಥವಾ ಆಲಿಸುವ ಮನೆಗೆ ಅದೃಷ್ಟ, ಸರಸ್ವತಿ, ಲಕ್ಷ್ಮಿ ಮತ್ತು ಮಹಾದೇವಿಯ ಅನುಗ್ರಹ ಒಲಿಯುತ್ತದೆ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ಪರ್ವ ಸಮಯಗಳಾದ ಗ್ರಹಣ ಕಾಲ, ಏಕಾದಶಿ ದಿನ ಅಥವಾ ಪಂಚಮಿ ತಿಥಿಗಳಲ್ಲಿ ಇದನ್ನು ಪಠಿಸುವುದು ವಿಶೇಷ ಫಲಕಾರಿಯಾಗಿದೆ. ಹುಣ್ಣಿಮೆಯ ದಿನ ಚಂದ್ರ ದರ್ಶನ ಮಾಡಿ ಲಲಿತಾ ಸಹಸ್ರನಾಮವನ್ನು ಪಠಿಸಿದರೆ ಸೌಭಾಗ್ಯ ಪ್ರಾಪ್ತವಾಗುತ್ತದೆ. ಕರ್ಮ ಫಲಗಳನ್ನು ಧನಾತ್ಮಕವಾಗಿ ಪರಿವರ್ತಿಸುವ ವಿಶೇಷ ಶಕ್ತಿ ಈ ನಾಮಕ್ಕಿದೆ. ಲಲಿತಾ ದೇವಿಯ ಸಹಸ್ರನಾಮ ಪಠಣದ ಸಂದರ್ಭದಲ್ಲಿ ದೇವಿಗೆ ಇಷ್ಟವಾದ ಬಿಲ್ವಪತ್ರೆ, ತುಳಸಿ ಅಥವಾ ಮಲ್ಲಿಗೆಯನ್ನು ಅರ್ಪಿಸುವುದು ಉತ್ತಮ. ನೈವೇದ್ಯಕ್ಕೆ ತುಪ್ಪದಿಂದ ಮಾಡಿದ ಪಾಯಸ, ಚಿತ್ರಾನ್ನ, ಪುಳಿಯೋಗರೆ, ದಾಳಿಂಬೆ ಅಥವಾ ಬೂದು ಕುಂಬಳಕಾಯಿಯಿಂದ ಮಾಡಿದ ಸಿಹಿಯನ್ನು ಅರ್ಪಿಸುವುದರಿಂದ ಸಕಲ ಫಲಗಳು ಲಭಿಸುತ್ತವೆ. ಪೂಜಾ ಸಮಯದಲ್ಲಿ ಬಲಮುರಿ ಶಂಖವನ್ನು ಇಟ್ಟುಕೊಂಡು ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ