ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಜನ ತುಂಬಾ ಆಲಸಿಗಳು. ಅವರಿಗೆ ಎಷ್ಟೇ ತಿಳಿಯ ಹೇಳಿದರೂ ಆ ಹಿತವಚನಗಳು ಅವರ ಮೇಲೆ ಯಾವುದೆ ಪ್ರಭಾವ ಬೀರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಕೆಲವರು ಇರುತ್ತಾರೆ, ಅವರು ತುಂಬಾ ಕ್ರಿಯಾಶೀಲರು. ಚಟುವಟಿಕೆಯಿಂದ ಪುಟಿಯುತ್ತಿರುತ್ತಾರೆ. ಅವರು ಸುಮ್ಮನೆ ಒಂದು ಕಡೆ ಸ್ಥಿರವಾಗಿ ಕುಳಿತುಕೊಳ್ಳುವುದಿಲ್ಲ. ಅವರು ತುಂಬಾ ವರ್ಕೋಹಾಲಿಕ್ ಆಗಿರುತ್ತಾರೆ. ಅವರಿಗೆ ಹೀಗಿದ್ದರೇನೇ ಸಮಾಧಾನ!
ಇನ್ನು ಕೆಲವರು ಕೆಲಸ ತಪ್ಪಿಸಿಕೊಳ್ಳುವುದಕ್ಕೇ ಹೊಂಚುಹಾಕುತ್ತಿರುತ್ತಾರೆ. ಹಿಡಿದ ಕೆಲಸ ಪೂರ್ಣಗೊಳಿಸುವ ಉಮೇದು ಅವರಲ್ಲಿ ಇರುವುದೆ ಇಲ್ಲ. ಏನೋ ಒಂದು ಪಿಳ್ಳೆ ನೆಪ ಹೇಳಿ, ಅರ್ಧಂಬರ್ಧ ಕೆಲಸ ಮಾಡಿ ಕೈತೊಳೆದುಕೊಂಡುಬಿಡುತ್ತಾರೆ. ಜಾತಕದಿಂದಲೇ ಅಂದ್ರೆ ಜ್ಯೋತಿಷ್ಯದ ಪ್ರಕಾರವೇ ಈ ಮೂರು ರಾಶಿಯ ಜನ ಅವಿಶ್ವಾಸದೊಂದಿಗೆ ಆಲಸಿಗಳಾಗಿ ಬಿಡುತ್ತಾರೆ. ಅವರಲ್ಲಿ ಅಂತಃಶಕ್ತಿ, ಉತ್ಸಾಹ ಎಬುದು ಬತ್ತಿಹೋಗಿರುತ್ತದೆ. ಬನ್ನೀ ಆ ಮೂರು ರಾಶಿಗಳ ಜನರ ಪರಿಚಯ ಮಾಡಿಕೊಳ್ಳೋಣ.
ಈ 3 ರಾಶಿಯ ಜನರಿಗೆ ವಿಲಾಸೀ ಜೀವನ ಹೆಚ್ಚು ಇಷ್ಟ, ಕೆಲಸ ಮಾಡುವುದು ಅಂದ್ರೆ ಕಷ್ಟ ಕಷ್ಟ!
ವೃಷಭ ರಾಶಿ: ವೃಷಭ ರಾಶಿ ಜನ ಕೆಲಸ ಕಾರ್ಯಗಳನ್ನು ಸಲೀಸಾಗಿ ತೆಗೆದುಕೊಂಡುಬಿಡುತ್ತಾರೆ. ಅವರು ಸುಲಲಿತ, ಸರಳ ಮತ್ತು ಸುಲಭ ಜೀವನ ನಡೆಸಲು ಹಾತೊರೆಯುತ್ತಾರೆ. ಕಠಿಣ ಪರಿಶ್ರಮ ಹಾಕುವ ಶ್ರಮಜೀವಿಗಳು ಇವರಲ್ಲ. ವಿಲಾಸೀ ಜೀವನ ಇವರಿಗೆ ಹೆಚ್ಚು ಇಷ್ಟ. ಕೆಲಸ ಮಾಡುವುದು ಅಂದ್ರೆ ಕಷ್ಟ ಕಷ್ಟ!
ಮಿಥುನ ರಾಶಿ: ಯಾವುದೇ ವೃತ್ತಿಪರ ಕೆಲಸ ಅಥವಾ ಪ್ರೊಡೆಕ್ಟೀವ್ ಆಗಿ ಕೆಲಸ ಮಾಡುವುದೆಂದರೆ ಮಿಥುನ ರಾಶಿಯ ಜನ ಮಾರು ದೂರ ಉಳಿದುಬಿಡುತ್ತಾರೆ. ಹಿಡಿದ ಕೆಲಸ ಮಾಡಿ ಸಾಧಿಸುವುದು ದೂರದ ಮಾತೇ ಆದರೂ ಅದಕ್ಕೂ ಮುನ್ನವೇ ಸೆಲೆಬ್ರೇಶನ್ನಲ್ಲಿ ತೊಡಗಿಬಿಡುತ್ತಾರೆ. ಇದನ್ನು ಸಹಿಸದೆ ಯಾರಾದರೂ ಇವರ ಬಗ್ಗೆ ಬೆರಳು ತೋರಿ ಬೈದರೆ ಅದಕ್ಕೂ ಇವರು ಜಗ್ಗುವುದಿಲ್ಲ. ಏನೂ ಆಗಿಲ್ಲ, ಆ ಬೈಗುಳ ನನಗಲ್ಲ ಅಂದುಕೊಂಡು ಕೊಡವಿಕೊಂಡು ಹೊರಟುಬಿಡುತ್ತಾರೆ.
ಮೀನ ರಾಶಿ: ಮೀನ ರಾಶಿಯವರು ತಮ್ಮದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅವರು ತುಸು ಹೆಚ್ಚೇ ಶ್ರಮ ಹಾಕಿ ಕೆಲಸ ಮಾಡಲು ಸುತರಾಂ ಇಚ್ಛಿಸುವುದಿಲ್ಲ. ನೀರಸವಾದ ಯಾವುದೇ ಕೆಲಸ ಮಾಡು ಅಂದರೂ ಅವರಲ್ಲಿ ಉತ್ಸಾಹದ ಬುಗ್ಗೆ ಚಿಮ್ಮಿ ಅದರಲ್ಲೇ ಅವರು ಕಾಲಕಳೆದುಬಿಡುತ್ತಾರೆ. ಇವರೇ ನಿಜವಾದ ಆಲಸಿಗಳು, ಇಚ್ಛೆಯೆಂಬುದೇ ಇಲ್ಲದ ಜೀವನ ಸವೆಸುವ ಜನ.
(these 3 zodiac sign people do not want to be workaholic they want to enjoy life without hard work)