AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac signs: ಈ 4 ರಾಶಿಯ ಜನ ಅದೃಷ್ಟವಂತರು; ಇವರ ಜಾತಕದಲ್ಲಿ ಯಶಸ್ಸು- ಸಂಪತ್ತು ಬರೆದಿಟ್ಟಿರುತ್ತದೆ!

ಇನ್ನು ಕುಂಭ ರಾಶಿಯವರು ಸಹ ವೃತ್ತಿ ಜೀವನದಲ್ಲಿ ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಇವರ ಬುದ್ಧಿ ತುಂಬಾ ತೀಕ್ಷ್ಣವಾಗಿರುತ್ತದೆ. ಇವರು ಯಾವುದೇ ಕೆಲಸ ಹಚ್ಚಿಕೊಂಡರೂ ಪೂರ್ಣ ನಿಷ್ಠೆಯೊಂದಿಗೆ ಮತ್ತು ಸಮರ್ಪಣಾಭಾವದೊಂದಿಗೆ ಕೆಲಸ ಮಾಡಿಮುಗಿಸುತ್ತಾರೆ. ಇದರಿಂದ ಜೀವನದಲ್ಲಿ ಅವರು ಅಗಾಧ ಸಾಧನೆಯನ್ನು ಮಾಡುತ್ತಾರೆ.

Zodiac signs: ಈ 4 ರಾಶಿಯ ಜನ ಅದೃಷ್ಟವಂತರು; ಇವರ ಜಾತಕದಲ್ಲಿ ಯಶಸ್ಸು- ಸಂಪತ್ತು ಬರೆದಿಟ್ಟಿರುತ್ತದೆ!
ಈ 4 ರಾಶಿಯ ಜನ ಅದೃಷ್ಟವಂತರು; ಇವರ ಜಾತಕದಲ್ಲಿ ಯಶಸ್ಸು- ಸಂಪತ್ತು ಬರೆದಿಟ್ಟಿರುತ್ತದೆ!
TV9 Web
| Edited By: |

Updated on: Oct 27, 2021 | 7:30 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಜನ ಅದೃಷ್ಟವಂತರು; ಇವರ ಜಾತಕದಲ್ಲಿ ಯಶಸ್ಸು ಮತ್ತು ಸಂಪತ್ತು ಗಳಿಕೆ ಕ್ಷಿಪ್ರವಾಗಿ ಲಭಿಸುತ್ತದೆ. ಆ ನಾಲ್ಕು ರಾಶಿಯ ಜನರನ್ನು ತಿಳಿಯೋಣ ಬನ್ನೀ. ಈ ನಾಲ್ಕು ರಾಶಿಯ ಜನ ಭಾಗ್ಯಶಾಲಿಗಳು. ಇವರು ಎಲ್ಲ ವಿಷಯಗಳಲ್ಲಿಯೂ ತುಂಬಾ ಚತುರರು. ಜಗತ್ತಿನಲ್ಲಿ ಜನರೆಲ್ಲ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಪಡುತ್ತಾರೆ. ಎಲ್ಲರಿಗೂ ಸುಲಭವಾಗಿಯೇನೂ ಜಯ ಸಿಗುವುದಿಲ್ಲ. ಕೇವಲ ಪರಿಶ್ರಮ ಇದ್ದರೆ ಸಾಲದು, ಅದರ ಜೊತೆಗೆ ಅದೃಷ್ಟವೂ ಇರಬೇಕಾದೀತು. ಇವೆರಡರ ಜೊತೆಗೆ ಮುನ್ನುಗ್ಗುವ ಜನರು ಬೇಗಬೇಗನೇ ಯಶಸ್ಸಿನತ್ತ ದಾಪುಗಾಲು ಹಾಕುತ್ತಾರೆ. ಅದೇ ಯಾರಿಗೆ ಅದೃಷ್ಟ ಇರುವುದಿಲ್ಲವೂ ಅವರು ಮತ್ತಷ್ಟು ಪರಿಶ್ರಮ ಹಾಕಿ, ತಮ್ಮ ಭಾಗ್ಯವನ್ನು ಸಾಧಿಸಿಕೊಳ್ಳಬೇಕು.

ಮೇಷ ರಾಶಿ: ಮೇಷ ರಾಶಿಯವರು ನಾಯಕತ್ವದ ಗುಣಗಳು ಹೆಚ್ಚಾಗಿರುತ್ತವೆ. ಇವರು ಚತುರಮತಿಗಳು ಆಗಿರುತ್ತಾರೆ. ಇವರು ನಿಜಕ್ಕೂ ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಸರಿಯಾಗಿ ಶ್ರಮ ಹಾಕಿದರೆ ಇವರು ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಇವರು ಜೀವನದಲ್ಲಿ ತುಂಬಾ ಪ್ರಗತಿ ಕಾಣುತ್ತಾರೆ ಮತ್ತು ಅದರಿಂದ ಹೆಚ್ಚು ಹಣ ಸಂಪಾದಿಸುತ್ತಾರೆ. ಇಂತಹವರಿಗೆ ಸಮಾಜದಲ್ಲಿ ತಕ್ಕ ಮಾನ ಸನ್ಮಾನ ಪ್ರತಿಷ್ಠೆಗಳು ಲಭಿಸುತ್ತವೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರ ಕಾರ್ಯಕ್ಷಮತೆ ಅದ್ಭುತವಾಗಿರುತ್ತದೆ. ಇವರು ಯಾವುದೇ ಕೆಲಸದಲ್ಲಿ ಮಗ್ನರಾದರೆ ಅದು ಪೂರ್ಣಗೊಳ್ಳುವವರೆಗೂ ಬಿಡುವುದಿಲ್ಲ. ಪಟ್ಟು ಹಿಡಿದು ಕುಳಿತು ಸಾಧನೆ ಮಾಡುತ್ತಾರೆ. ಇದನ್ನು ನೋಡಿ ಇವರ ಜೊತೆಗಾರರು ಮೂಗಿನ ಮೇಲೆ ಬೆರಳನ್ನಿಟ್ಟುಕೊಳ್ಳುವ ಪ್ರಮೇಯ ಒದಗಿಬರುತ್ತದೆ. ವೃಶ್ಚಿಕ ರಾಶಿಯವರು ತಮ್ಮ ಇಚ್ಛೆಗೆ ತಕ್ಕಂತೆ ಜೀವನದಲ್ಲಿ ಗುರಿ ಹಾಕಿಕೊಳ್ಳುತ್ತಾರೆ. ವೃತ್ತಿ ಜೀವನ ಆರಿಸಿಕೊಳ್ಳುತ್ತಾರೆ. ಇವರು ಮಾತಿನಲ್ಲೂ ನೈಪುಣ್ಯತೆ ಸಾಧಿಸಿರುತ್ತಾರೆ. ಭಾಗ್ಯ ಬಂದಂಗೆ ಬರಲೀ ಅಂತಲೋ ಅಥವಾ ಅಯ್ಯೋ ನಮ್ಮ ಅದೃಷ್ಟ ಅಂತಾಲೋ ಕೈಕಟ್ಟಿಕೊಂಡು ಕೂರುವುದಿಲ್ಲ. ತಮ್ಮ ಪರಿಶ್ರಮದ ಮೇಲೆ ನಂಬಿಕೆಯನ್ನಿಟ್ಟು ಮುಂದಿನ ಹೆಜ್ಜೆ ಇಡುತ್ತಾರೆ.

ಮಕರ ರಾಶಿ: ಮಕರ ರಾಶಿಯ ಜನ ರಾಶಿ ರಾಶಿ ಬುದ್ಧಿವಂತರಾಗಿರುತ್ತಾರೆ. ಇವರ ಮೇಲೆ ಶನಿ ಮಹಾತ್ಮನ ಕೃಪೆ ಅಧಿಕವಾಗಿರುತ್ತದೆ. ಶನಿ ಮಹಾತ್ಮನ ಆಶೀರ್ವಾದವೊಂದಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಅದೃಷ್ಟ ಮಕರ ರಾಶಿಯವರನ್ನು ಎಂದಿಗೂ ಬಿಡುವುದಿಲ್ಲ. ಪರಿಶ್ರಮವೇ ಇವರ ಹುಟ್ಟುಗುಣ ಆಗಿರುತ್ತದೆ. ಸದಾ ಚಟುವಟಿಕೆಯಿಂದ ಪುಟಿಯುತ್ತಿರುತ್ತಾರೆ. ಹಿಡಿದ ಕೆಲಸ ದಕ್ಕಿಸಿಕೊಳ್ಳಲು ಹಗಲು ರಾತ್ರಿ ಶ್ರಮಪಡಲು ಹಿಂದೇಟು ಹಾಕುವುದಿಲ್ಲ.

ಕುಂಭ ರಾಶಿ: ಇನ್ನು ಕುಂಭ ರಾಶಿಯವರು ಸಹ ವೃತ್ತಿ ಜೀವನದಲ್ಲಿ ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಇವರ ಬುದ್ಧಿ ತುಂಬಾ ತೀಕ್ಷ್ಣವಾಗಿರುತ್ತದೆ. ಇವರು ಯಾವುದೇ ಕೆಲಸ ಹಚ್ಚಿಕೊಂಡರೂ ಪೂರ್ಣ ನಿಷ್ಠೆಯೊಂದಿಗೆ ಮತ್ತು ಸಮರ್ಪಣಾಭಾವದೊಂದಿಗೆ ಕೆಲಸ ಮಾಡಿಮುಗಿಸುತ್ತಾರೆ. ಇದರಿಂದ ಜೀವನದಲ್ಲಿ ಅವರು ಅಗಾಧ ಸಾಧನೆಯನ್ನು ಮಾಡುತ್ತಾರೆ.

(these 4 zodiac sign people lucky in terms of money getting success fast know these zodiacs)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು