AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವು ಸಮೀಪಿಸಿದಾಗ ಗೋಚರವಾಗುವ ಕೆಲವು ಸಂಕೇತಗಳು ಹೀಗಿವೆ

ವ್ಯಕ್ತಿಯು ಸಾಂದರ್ಭಿಕವಾಗಿ ನಗುವ ಅಥವಾ ವರ್ತಮಾನಕ್ಕೆ ಸಂಬಂಧವಿಲ್ಲದ ಏನನ್ನಾದರೂ ಹೇಳುವ ಸಮಯ ಇದು. ಅವರು ಆಧಾರರಹಿತವಾದದ್ದನ್ನು, ಓತಪ್ರೋತವಾಗಿ, ನಿಯಂತ್ರಣವಿಲ್ಲದೆ ಮಾತನಾಡಬಹುದು ಅಥವಾ ಹಿಂದಿನದನ್ನು ನೆನಪಿಸಿಕೊಳ್ಳಬಹುದು ಮತ್ತು ಅರಿವಿಲ್ಲದೆ ಮಾತನಾಡಬಹುದು. ಮೆದುಳಿಗೆ ಕಡಿಮೆ ರಕ್ತ ಪರಿಚಲನೆಯಾಗುವ ಆತಂಕದ ಸಮಯ ಇದು.

ಸಾವು ಸಮೀಪಿಸಿದಾಗ ಗೋಚರವಾಗುವ ಕೆಲವು ಸಂಕೇತಗಳು ಹೀಗಿವೆ
ಸಾವು ಸಮೀಪಿಸಿದಾಗ ಗೋಚರವಾಗುವ ಕೆಲವು ಸಂಕೇತಗಳು ಹೀಗಿವೆ
ಸಾಧು ಶ್ರೀನಾಥ್​
|

Updated on:Feb 28, 2024 | 9:27 AM

Share

ಸಾವು ಸಮೀಪಿಸಿದಾಗ ಗೋಚರವಾಗುವ ಕೆಲವು ಸಂಕೇತಗಳು ಹೀಗಿವೆ. ಸಾವು (Death) ಸಮೀಪಿಸಿದಾಗ.. ಹಸಿವಾಗದಿರುವುದು. ಎಂತಹುದೇ ಭಕ್ಷ್ಯ ಭೋಜನಗಳು ಇದ್ದರೂ ಯಾವುದೂ ಅವರನ್ನು ಪ್ರಚೋದಿಸುವುದಿಲ್ಲ, ಅವರ ನೆಚ್ಚಿನ ಆಹಾರದ ಪರಿಮಳವೂ ಅವರನ್ನು ಸೆಳೆಯುವುದಿಲ್ಲ. ಸಾಮಾನ್ಯವಾಗಿ ಜನರು ಹೇಳುತ್ತಾರೆ… ಮಾಮೂಲಿಯಾಗಿ ಅನಾರೋಗ್ಯ ಕಾಡಿದಾಗ ಇಂತಹ ರೋಗಲಕ್ಷಣವು ಸಾಮಾನ್ಯವಂತೆ. ಆದರೆ, ಬಲವಂತವಾಗಿ ಆಹಾರ ತಿನ್ನಿಸುವುದೂ ಸಹ ಒಳಗಿನಿಂದ (Death signs) ಅವರ ಇಚ್ಛೆ ಸಹಕರಿಸುವುದಿಲ್ಲ (Spiritual).

ಸಾವು ಸಮೀಪಿಸಿದಾಗ.. ತೀವ್ರ ದೈಹಿಕ ದೌರ್ಬಲ್ಯ ವ್ಯಕ್ತಿಯು ಆಹಾರ ಅಥವಾ ದ್ರವಗಳ ಸೇವನೆಯನ್ನು ಸ್ಪಷ್ಟವಾಗಿ ನಿರಾಕರಿಸುತ್ತಾನೆ. ಅಂತಿಮವಾಗಿ ಶಕ್ತಿಯ ಕೊರತೆಗೆ ಎದುರಾಗುತ್ತದೆ. ಇದರಿಂದ ತಲೆ, ಕೈಕಾಲುಗಳನ್ನು ಅತ್ತಿತ್ತ ತಿರುಗಿಸುವ ಕೆಲಸಕ್ಕೆ ಅಡ್ಡಿಯಾಗಬಹುದು. ಕೊನೆಗೆ ಅವರು ತಮ್ಮ ಗಂಟಲಿನೊಳಕ್ಕೆ ದ್ರವ ತೆಗೆದುಕೊಳ್ಳಲೂ ಶಕ್ತಿ ಹೊಂದಿಲ್ಲದಿರಬಹುದು.

ಸಾವು ಸಮೀಪಿಸಿದಾಗ.. ಅರಿವಿನ ನಷ್ಟ ಒಬ್ಬರ ದೇಹವು ನಿಯಮಿತವಾಗಿ ಕಾರ್ಯನಿರ್ವಹಿಸದಿದ್ದಾಗ ನಿದ್ರಾಹೀನತೆ ಅಥವಾ ಗೊಂದಲಮಯ ನಿದ್ರಾ ಮಾದರಿಗಳು ಸಾಮಾನ್ಯವಾಗುತ್ತವೆ. ಆದರೆ, ವಾಸ್ತವಕ್ಕೆ ಸ್ಪಂದಿಸದಿರುವುದು ಆ ಭಯಾನಕ ಕರೆ ಎದುರಿಗೇ ಬಂದಾಗ ಸಾಮಾನ್ಯವಾಗುತ್ತದೆ. ಸಾವು ಸಮೀಪಿಸುತ್ತಿದ್ದಂತೆ, ಒಬ್ಬ ವ್ಯಕ್ತಿಯು ಮಾನವ ಉಪಸ್ಥಿತಿ ಅಥವಾ ಯಾವುದೇ ರೀತಿಯ ಜೀವನಕ್ಕೆ ಸಂವೇದನೆ ತೋರುವುದಿಲ್ಲ. ಅವರು ಏನೂ ಅಸ್ತಿತ್ವದಲ್ಲಿಲ್ಲ ಎಂಬಂತೆ ಶೂನ್ಯದತ್ತ ದಿಟ್ಟಿಸಿ ನೋಡಬಹುದು.

ಸಾವು ಸಮೀಪಿಸಿದಾಗ.. ಯೋಚಿಸದೆ ಮಾತನಾಡುವುದು ವ್ಯಕ್ತಿಯು ಸಾಂದರ್ಭಿಕವಾಗಿ ನಗುವ ಅಥವಾ ವರ್ತಮಾನಕ್ಕೆ ಸಂಬಂಧವಿಲ್ಲದ ಏನನ್ನಾದರೂ ಹೇಳುವ ಸಮಯ ಇದು. ಅವರು ಸಂಪೂರ್ಣವಾಗಿ ಆಧಾರರಹಿತವಾದದ್ದನ್ನು, ಓತಪ್ರೋತವಾಗಿ, ನಿಯಂತ್ರಣವಿಲ್ಲದೆ ಮಾತನಾಡಬಹುದು ಅಥವಾ ಹಿಂದಿನದನ್ನು ನೆನಪಿಸಿಕೊಳ್ಳಬಹುದು ಮತ್ತು ಅರಿವಿಲ್ಲದೆ ಮಾತನಾಡಬಹುದು. ಮೆದುಳಿಗೆ ಕಡಿಮೆ ರಕ್ತ ಪರಿಚಲನೆಯಾಗುವ ಆತಂಕದ ಸಮಯ ಇದು.

ಇದನ್ನು ಓದಿ: ಈ ಬಾರಿ ಮಹಾ ಶಿವರಾತ್ರಿ ಮಾರ್ಚ್ 8 ಅಥವಾ 9? ಶಿವ ಪೂಜೆಯ ಮಂಗಳಕರ ಸಮಯ ತಿಳಿಯಿರಿ

ಸಾವು ಸಮೀಪಿಸಿದಾಗ.. ಹಗುರವಾದ ಭಾವನೆ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಹಗುರವಾಗುವ ಭಾವವನ್ನು ಅನುಭವಿಸಬಹುದು ಮತ್ತು ಒಂದು ಹೂವಿನಷ್ಟು ಹಗುರವಾಗಬಹುದು. ಅವರ ಸುತ್ತಲಿನ ಯಾವುದೂ ಅವರನ್ನು ವಾಸ್ತವಕ್ಕೆ ವಾಪಸ್​ ಎಳೆಯುವುದಿಲ್ಲ ಮತ್ತು ಅವರು ಅದಾಗಲೇ ಪರ್ಯಾಯ ಜಗತ್ತಿನಲ್ಲಿ ನಂಬಿಕೆಯಿಡಲು ಪ್ರಾರಂಭಿಸುತ್ತಾರೆ.

ಸಾವು ಸಮೀಪಿಸಿದಾಗ.. ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸಿ ದೀರ್ಘಾವಧಿ ಚಿಕಿತ್ಸೆ/ಆರೈಕೆಯಲ್ಲಿರುವ ವ್ಯಕ್ತಿಯು ತನ್ನನ್ನು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸುವುದು ಸಾಮಾನ್ಯ. ಆದರೆ ಅಪರೂಪಕ್ಕೆ ಅಂತಹವರು ಮತ್ತೆ ಪ್ರಾಪಂಚಿಕ ಅರಿವಿಗೆ ಬರುತ್ತಾರೆ. ಆದರೆ, ಅತ್ಯಂತ ಪ್ರೀತಿಪಾತ್ರರ ಜೊತೆಗೂ ಸಂಪರ್ಕ ಹೊಂದಲು ನಿರಾಕರಿಸುವ ವ್ಯಕ್ತಿಯು ತನ್ನ ಜೀವನದ ಕೊನೆಗಾಲದಲ್ಲಿರುವುದರ ಸಂಕೇತವಾಗಿರಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:26 am, Wed, 28 February 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ