Leap Day: ಅಧಿಕ ವರ್ಷ ಬರುವುದಕ್ಕೆ ಕಾರಣ ಏನು ಗೊತ್ತಾ? ಖಗೋ​ಳ ವಿದ್ಯ​ಮಾ​ನಗಳ ಲೆಕ್ಕಾಚಾರ ತಿಳಿಯಿರಿ!

ಗ್ರೆಗೊರಿಯನ್‌ ಅಥವಾ ಇಂಗ್ಲಿಷ್‌ ಕ್ಯಾಲೆಂಡರ್‌ನಲ್ಲಿ ದಿನ ಮತ್ತು ವರ್ಷಗಳ ಲೆಕ್ಕಾಚಾರವನ್ನು ಸರಿದೂಗಿಸಲು ಈ ಅಧಿಕ ವರ್ಷವನ್ನು ಗುರುತಿಸಲಾಗುತ್ತದೆ. ಹಾಗಾದರೆ ಅಧಿಕ ವರ್ಷ ಎಂದರೇನು? ಈ ದಿನಗಳನ್ನು ಹೇಗೆ ಲೆಕ್ಕಾ​ಚಾರ ಮಾಡಲಾ​ಗು​ತ್ತದೆ? ಹೆಚ್ಚುವರಿ ದಿನ ಏಕೆ ಸೇರಿಸಬೇಕು? ಈ ಕುರಿತಾದ ಮಾಹಿತಿ ಇಲ್ಲಿವೆ.

Leap Day: ಅಧಿಕ ವರ್ಷ ಬರುವುದಕ್ಕೆ ಕಾರಣ ಏನು ಗೊತ್ತಾ? ಖಗೋ​ಳ ವಿದ್ಯ​ಮಾ​ನಗಳ ಲೆಕ್ಕಾಚಾರ ತಿಳಿಯಿರಿ!
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 29, 2024 | 12:31 PM

ಪ್ರತಿ 4 ವರ್ಷ​ಕ್ಕೊಮ್ಮೆ ಬರುವ ಅಧಿಕ ವರ್ಷಕ್ಕೆ 2024 ಸಾಕ್ಷಿಯಾಗಿದೆ. ಲೀಪ್ ಇಯರ್ ಲೆಕ್ಕಾಚಾರ ಕೆಲವರಿಗೆ ಅಚ್ಚರಿ ಮೂಡಿಸಬಹುದು. ಏಕೆಂದರೆ ಖಗೋ​ಳ ವಿದ್ಯ​ಮಾ​ನಗಳು ಬಹು ಬೇಗ ಅರ್ಥವಾಗುವುದಿಲ್ಲ. ಗ್ರೆಗೊರಿಯನ್‌ ಅಥವಾ ಇಂಗ್ಲಿಷ್‌ ಕ್ಯಾಲೆಂಡರ್‌ನಲ್ಲಿ ದಿನ ಮತ್ತು ವರ್ಷಗಳ ಲೆಕ್ಕಾಚಾರ ಸರಿದೂಗಿಸಲು ಈ ಅಧಿಕ ವರ್ಷವನ್ನು ಗುರುತಿಸಲಾಗುತ್ತದೆ. ಹಾಗಾದರೆ ಅಧಿಕ ವರ್ಷ ಎಂದರೇನು? ಈ ದಿನಗಳನ್ನು ಹೇಗೆ ಲೆಕ್ಕಾ​ಚಾರ ಮಾಡಲಾ​ಗು​ತ್ತದೆ? ಹೆಚ್ಚುವರಿ ದಿನ ಏಕೆ ಸೇರಿಸಬೇಕು? ಈ ಕುರಿತಾದ ಮಾಹಿತಿ ಇಲ್ಲಿವೆ.

ಅಧಿಕ ವರ್ಷ ಅಥವಾ ಲೀಪ್ ಇಯರ್ ಎಂದರೇನು?

ಲೀಪ್ ಇಯರ್ ಸಾಮಾನ್ಯವಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕಂಡು ಬರುತ್ತದೆ. ಏಕೆಂದರೆ 93,98,86,400 ಕಿ.ಮೀ ನಷ್ಟುದೂರ​ ಇರುವ ಸೂರ‍್ಯ​ನ​ನ್ನು ಭೂಮಿ​ ಒಂದು ಸುತ್ತು ಸುತ್ತಲು ಅಂದಾಜು 365 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಾಸ್ತವವಾಗಿ, ನಾಸಾ ಪ್ರಕಾರ, ಭೂಮಿಯು ಸೂರ್ಯನ ಸುತ್ತ ಕಕ್ಷೆಯನ್ನು ಪೂರ್ಣಗೊಳಿಸಲು 365 ದಿನಗಳು, 5 ಗಂಟೆ, 48 ನಿಮಿಷ ಮತ್ತು 46 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. 365 ರ ನಂತರದ ಆ ಹೆಚ್ಚುವರಿ ಗಂಟೆ, ನಿಮಿಷ ಮತ್ತು ಸೆಕೆಂಡುಗಳು ಲೀಪ್ ವರ್ಷಕ್ಕೆ ಸೇರಿಸಲಾದ ಹೆಚ್ಚುವರಿ ಸಮಯವಾಗಿದೆ. ಅಂದರೆ ಉಳಿದ 0.242 ದಿನ​ವನ್ನು ಸೇರಿ​ಸುತ್ತಾ ಹೋಗಿ 4 ವರ್ಷ​ಕ್ಕೊಮ್ಮೆ ಒಂದು ಪೂರ್ಣ ದಿನ​ವೆಂದು ಪರಿ​ಗ​ಣಿಸಲಾಗುತ್ತದೆ. ಹಾಗಾಗಿ ಆ ವರ್ಷ​ವನ್ನು ಅಧಿಕ ವರ್ಷ ಎಂದು ಹೇಳಲಾಗುತ್ತದೆ.

ಲೀಪ್ ವರ್ಷಗಳ ಹಿಂದಿನ ಇತಿಹಾಸವೇನು?

ಕ್ರಿ.ಪೂ. 45 ರಲ್ಲಿ ರೋಮ್‌ ಸಾಮ್ರಾಜ್ಯದ ಚಕ್ರವರ್ತಿ ಜ್ಯೂಲಿಯಸ್‌ ಸೀಸರ್‌ ಇದನ್ನು ಜಾರಿಗೆ ತಂದ. ಆದರೆ ಆತನ ಲೆಕ್ಕಾಚಾರಗಳಲ್ಲಿ ಅಥವಾ ಕ್ಯಾಲೆಂಡರ್‌ನಲ್ಲಿ 4ರಿಂದ ಭಾಗಿಸಬಹುದಾದ ಒಂದು ನಿಯಮಾವಳಿಯನ್ನು ಪಾಲನೆ ಮಾಡಲಾಗುತ್ತಿತ್ತು. ಇದರಿಂದ ನಿರ್ದಿಷ್ಟವಾದ ಲೆಕ್ಕ ದೊರೆಯದೆ ಅಧಿಕ ವರ್ಷವನ್ನು ಗುರುತಿಸುವಿಕೆ ಕಷ್ಟವಾಗುತ್ತಿತ್ತು. ಆ ಸಂದರ್ಭದಲ್ಲಿ ಅಂದರೆ 1500ರ ಸುಮಾರಿಗೆ ಗ್ರೆಗೊರಿಯನ್‌ ಕ್ಯಾಲೆಂಡರ್‌ನ್ನು ಸಿದ್ಧಪಡಿಸುವ ಮೂಲಕ ಈ ಲೆಕ್ಕಾಚಾರವನ್ನು ಸರಿಪಡಿಸಲಾಯಿತು. ಯೇಸು ಹುಟ್ಟಿದ ವರ್ಷದಿಂದ ಗ್ರೆಗೋರಿಯನ್‌ ಕ್ಯಾಲೆಂಡರ್‌ ಜಾರಿಗೆ ಬಂದಿದೆ ಎಂಬ ಉಲ್ಲೇಖವೂ ಇತಿಹಾಸದಲ್ಲಿ ಇದೆ.

ನಂಬಿಕೆಯ ಪ್ರಕಾರ ಪೋಪ್ ಗ್ರೆಗೊರಿ XIII ಹೊಸ ಕ್ಯಾಲೆಂಡರ್ ವ್ಯವಸ್ಥೆಯನ್ನು ಬಳಸಿದರು ಜೊತೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ವರ್ಷ ಎಂಬುದನ್ನು ಕೂಡ ಬಳಸಿಕೊಂಡರು ಆದರೆ ಒಂದು ವಿನಾಯಿತಿಯನ್ನು ಹೊರತುಪಡಿಸಿ ಅದೇನೆಂದರೆ ಪ್ರತಿ ವರ್ಷದಲ್ಲಿ 365.242 ದಿನಗಳಿರುತ್ತವೆ. ಆದರೆ ಇದನ್ನು ಪೂರ್ಣ ಪ್ರಮಾಣವಾಗಿ ಮಾಡಿ 365.25 ಎಂದು ಪರಿಗಣಿಸಿ ಅಧಿಕ ವರ್ಷ ಎಂದು ನಿರ್ಧಾರ ಮಾಡಲಾಗುತ್ತದೆ. ಆದರೆ ವಾಸ್ತವ ಮಾಪನದ ಪ್ರಕಾರ ಈ ಬದಲಾವಣೆಯಿಂದ ಭೂಮಿಯ ಪಯಣದ 11 ನಿಮಿಷ ವ್ಯತ್ಯಾಸವನ್ನು ನಾವು ಕೈಬಿಟ್ಟದಂತಾಗುತ್ತದೆ. ಅದೇ ಕಾರಣಕ್ಕೆ ಪ್ರತಿ 400 ವರ್ಷಗಳಲ್ಲಿ ಮೂರು ಸಲ ಅಧಿಕ ವರ್ಷವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಹೀಗಾಗಿ 100ರಿಂದ ಭಾಗವಾಗುವ ವರ್ಷಗಳು 400 ರಿಂದಲೂ ಭಾಗವಾದರೆ ಅದೂ ಅಧಿಕವರ್ಷ. ಉಳಿದಂತೆ 100ರಿಂದ ಭಾಗವಾಗುವವು, ಅಧಿಕ ವರ್ಷ ಅಲ್ಲ ಎಂದರು. ಉದಾಹರಣೆಗೆ 1700, 1800, ಮತ್ತು 1900 ವರ್ಷಗಳನ್ನು 400 ರಿಂದ ವಿಭಜಿಸಲು ಸಾಧ್ಯವಾಗದ ಕಾರಣ, ಅವುಗಳನ್ನು ಲೀಪ್ ವರ್ಷಗಳು ಎಂದು ಪರಿಗಣಿಸಲಾಗಿಲ್ಲ. ಆದರೆ 2024, 2028, 2032, 2036 ಮತ್ತು ಮುಂತಾದ ವರ್ಷಗಳು ಫೆಬ್ರವರಿಯಲ್ಲಿ 29 ದಿನಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ: 300 ವರ್ಷಗಳ ನಂತರ ಮಹಾಶಿವರಾತ್ರಿಯಂದು ಕೂಡಿ ಬರಲಿದೆ ತ್ರಿಗ್ರಾಹಿ ಯೋಗ

ಫೆ. 29 ರಂದು ಜನಿಸಿದವರು ಯಾವಾಗ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಬೇಕು?

ಲೀಪ್ ದಿನಗಳಲ್ಲಿ ಜನಿಸಿದವರು ಪ್ರತಿ ವರ್ಷ ಜನ್ಮದಿನವನ್ನು ಆಚರಿಸಲು ಸಾಧ್ಯವಿಲ್ಲ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ಆ ದಿನ ಬರುತ್ತದೆ ಹಾಗಾಗಿ ಲೀಪ್ ದಿನದಂದು ಜನಿಸಿದವರು ಫೆ. 28 ಅಥವಾ ಮಾರ್ಚ್ 1 ರಂದು ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಾರೆ. ಲಕ್ಷಾಂತರ ಜನರು ಫೆಬ್ರವರಿ 29 ರಂದು ಹುಟ್ಟಿರುತ್ತಾರೆ. ಅಂದರೆ ಪ್ರತಿ 1,461 ಮಕ್ಕ​ಳಲ್ಲಿ ಒಬ್ಬರು ಅಧಿಕ ವರ್ಷ​ದಲ್ಲಿ ಜನಿ​ಸುವ ಸಾಧ್ಯತೆ ಇರು​ತ್ತ​ದೆ ಎಂದು ಹೇಳಲಾಗುತ್ತದೆ. ಇನ್ನು ಹೊರ ದೇಶಗಳಲ್ಲಿ ಒಂದೊಂದು ರೀತಿಯಾಗಿ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುತ್ತಾರೆ. ಯುಕೆಯಲ್ಲಿ ವಾಸಿಸುವವರು ಮಾರ್ಚ್ 1 ರಂದು ಲೀಪ್ ಇಯರ್ ಜನ್ಮದಿನವನ್ನು ಆಚರಿಸಿದರೆ, ಯುಎಸ್ನಲ್ಲಿ ವಾಸಿಸುವವರು ಫೆ. 28 ರಂದು ಆಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:17 pm, Tue, 27 February 24

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ