ಹಿಂದೂ ಧರ್ಮದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಯಾವುದೇ ಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಗ್ರಹಣವು ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಇಂದು ಸೂರ್ಯಗ್ರಹಣ…ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಇಷ್ಟೇ ಅಲ್ಲ ಇಂದು ಸರ್ವ ಪಿತೃ ಅಮವಾಸ್ಯೆ.. ಶನಿವಾರವಾದ್ದರಿಂದ ಶನಿ ಅಮಾವಾಸ್ಯೆಯನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಈ ದಿನದಂದು (Shani Amavasya, Solar Eclipse 2023) ಮಾಡುವ ದಾನಗಳಿಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಇಂದು ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಹಸಿದವರಿಗೆ ಆಹಾರ ಕೊಡಿ. ಇದಲ್ಲದೆ, ಶನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಈ ದಿನ, ಶನಿ ದೇವರನ್ನು ಮೆಚ್ಚಿಸಲು, ನೀವು ಶನಿ ದೇವರಿಗೆ ಪ್ರೀತಿಪಾತ್ರ ವಸ್ತುಗಳನ್ನು ಸಹ ದಾನ ಮಾಡಬಹುದು. ಆದರೆ ಕೆಲವು ಕೆಲಸಗಳನ್ನು ಮಾಡಬಾರದು ಎಚ್ಚರವಿರಲಿ ( Spiritual).
ಇಂದು ಯಾವ ಕೆಲಸ ಮಾಡಬೇಕು- ಯಾವ ಕೆಲಸ ಮಾಡಬಾರದು?
ಈ ದಿನ ತುಳಸಿ ಗಿಡಕ್ಕೆ ಪೂಜೆ ಮಾಡಿ. ಆದರೆ ಅದಕ್ಕಾಗಿ ತುಳಸಿ ಎಲೆಗಳನ್ನು ಕೀಳಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುವ ಸಾಧ್ಯತೆ ಇದೆ.
ಸೂರ್ಯಗ್ರಹಣದ ಸಮಯದಲ್ಲಿ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಗಾಜಿನಿಂದ ಮುಚ್ಚಿಡಿ. ಹಾಗೆಯೇ ಬೇಯಿಸಿದ ಆಹಾರ ಪದಾರ್ಥಗಳು ಸಂಗ್ರಹವಾಗದಂತೆ ನೋಡಿಕೊಳ್ಳಿ.
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು ಅಥವಾ ಚೂಪಾದ ವಸ್ತುಗಳನ್ನು ಬಳಸಬಾರದು.
ಇದನ್ನೂ ಓದಿ: Shani Mantra: ಶನಿಯ ಈ ಮಂತ್ರಗಳನ್ನು ಪಠಿಸಿದರೆ ಎಲ್ಲಾ ಶನಿ ದೋಷಗಳು ದೂರವಾಗುತ್ತವೆ
ಅಮವಾಸ್ಯೆಯ ದಿನದಂದು ನಕಾರಾತ್ಮಕ ಶಕ್ತಿಗಳು ಬಲವಾಗಿರುತ್ತವೆ. ಆದ್ದರಿಂದ ನಿರ್ಜನ ಪ್ರದೇಶಗಳಿಗೆ ಹೋಗುವುದನ್ನು ತಡೆಯಲು ಹಿರಿಯರು ಸಲಹೆ ನೀಡುತ್ತಾರೆ.
ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದು ಸೂಕ್ತವಲ್ಲ. ಪಾನೀಯವನ್ನು ತೆಗೆದುಕೊಳ್ಳುವ ಮೊದಲು, ತುಳಸಿ ಎಲೆಗಳನ್ನು ಬೆರೆಸಿದ ನೀರನ್ನು ಮಾತ್ರ ಸೇವಿಸಿ.
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಜನರ ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಮೇಲೆ ತಿಳಿಸಿದ ಅಂಶಗಳನ್ನು ನೀಡಲಾಗಿದೆ)