ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಿಷ ದಸರಾ ಆಚರಣೆ: ಸಾಮಾಜಿಕ ಹೋರಾಟಗಾರ ಬಿಆರ್​​ ಭಾಸ್ಕರ್ ಪ್ರಸಾದ್

Mahisha Dasara: ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಿಷ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ತೊಳಿತೀವಿ, ಹೊಸಕಿಹಾಕುತ್ತೇವೆ ಎಂದವರು ಅಡ್ರೆಸ್​ಗೆ ಇಲ್ಲದಂಗೆ ಆಗಿದ್ದಾರೆ. ಕೋಮುವಾದಿಗಳ ವಿರುದ್ದ ಇಂದು ಸಾಂಸ್ಕೃತಿಕ ಪ್ರತಿರೋಧವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಬಿಆರ್​​ ಭಾಸ್ಕರ್ ಪ್ರಸಾದ್​​ ಹೇಳಿದ್ದಾರೆ.

ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಿಷ ದಸರಾ ಆಚರಣೆ: ಸಾಮಾಜಿಕ ಹೋರಾಟಗಾರ ಬಿಆರ್​​ ಭಾಸ್ಕರ್ ಪ್ರಸಾದ್
ಮಹಿಷ, ಭಾಸ್ಕರ್ ಪ್ರಸಾದ್
Follow us
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2023 | 3:08 PM

ಮೈಸೂರು, ಅಕ್ಟೋಬರ್​​​ 13: ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಿಷ ದಸರಾ (Mahisha Dasara) ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ತೊಳಿತೀವಿ, ಹೊಸಕಿಹಾಕುತ್ತೇವೆ ಎಂದವರು ಅಡ್ರೆಸ್​ಗೆ ಇಲ್ಲದಂಗೆ ಆಗಿದ್ದಾರೆ. ಕೋಮುವಾದಿಗಳ ವಿರುದ್ದ ಇಂದು ಸಾಂಸ್ಕೃತಿಕ ಪ್ರತಿರೋಧವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಬಿಆರ್​​ ಭಾಸ್ಕರ್ ಪ್ರಸಾದ್​​ ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿರುವ ಮಹಿಷ ಉತ್ಸವದಲ್ಲಿ ಮಾತನಾಡಿದ ಅವರು, ಅದು ಕೆಲವರಿಗೆ ವಿಲಕ್ಷಣ, ವಿಚಿತ್ರವಾಗಿ ಕಾಣುತ್ತೆ. ಇಂದು ಕ್ರಾಂತಿ ಮೈಸೂರಿನಿಂದ ಆರಂಭವಾಗಿದ್ದು, ಇಡೀ ರಾಜ್ಯ ಹಬ್ಬಲಿದೆ. ನೈಜ ಇತಿಹಾಸವನ್ನ ವಿಸ್ತರಿಸಲಿದೆ ಎಂದು ಹೇಳಿದ್ದಾರೆ.

ಸತ್ಯ ರಬ್ಬರಿದ್ದಂತೆ, ಎಷ್ಟೇ ಎಳೆದರು ಚಿಮ್ಮುತ್ತೆ. ಮಹಿಷ ಉತ್ಸವದ ಜನಸಾಗರಕ್ಕೆ ಕಾರಣವಾದ ವ್ಯಕ್ತಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರ ಮೆದುಳಿನಲ್ಲಿರುವ ಅಸತ್ಯ ತೊಲಗಲಿ ಎಂದು ಆಶಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೆಸರಳದೇ ಟಾಂಗ್​​ ನೀಡಿದ್ದಾರೆ.

ಬ್ರಾಹ್ಮಣರ ಸಂಪ್ರದಾಯಕ್ಕೆ ಅರ್ಥ ಇಲ್ಲ: ಪ್ರೊ.ಕೆಎಸ್​ ಭಗವಾನ್

ಪ್ರೊ.ಕೆಎಸ್​ ಭಗವಾನ್ ಮಾತನಾಡಿ, ಅಗ್ನಿ ಪೂಜೆಯ ಯಾಕೆ ಮಾಡುತ್ತಾರೆ. ಅದರಲ್ಲಿ ಏನು ಪ್ರಯೋಜನ ಇಲ್ಲ ಎಂದು ಬುದ್ಧ ತಿಳಿಸಿದ್ದರು. ಹೀಗಾಗಿ ರಾಜ ಮಹಾರಾಜರು ಅಗ್ನಿ ಪೂಜೆಯನ್ನು‌ ನಿಲ್ಲಿಸಿದರು. ಇದಕ್ಕಾಗಿ‌ ಬುದ್ಧರನ್ನು ಕಂಡರೆ ಬ್ರಾಹ್ಮಣರಿಗೆ ಕೋಪ. ಈಗಲೂ ಬ್ರಾಹ್ಮಣರು ಬುದ್ಧರ ಮೇಲೆ ಕೋಪವಿದೆ. ಅವರು ಹೋಮ ಮಾಡುವಾಗ ಬೆಂಕಿಗೆ ಅರಳಿ ಮರದ ಚಕ್ಕೆ ಹಾಕುತ್ತಾರೆ. ಬುದ್ಧರಿಗೆ ಜ್ಞಾನೋದಯವಾಗಿದ್ದು ಅರಳಿ ಮರದ ಕೆಳಗೆ. ಬುದ್ಧರ ಮೇಲಿನ ಕೋಪಕ್ಕೆ ಅರಳಿ ಮರದ ಚಕ್ಕೆಯನ್ನು ಬೆಂಕಿಗೆ ಹಾಕುತ್ತಾರೆ. ಬ್ರಾಹ್ಮಣರ ಸಂಪ್ರದಾಯಗಳು ಗೊಡ್ಡು ಸಂಪ್ರದಾಯಗಳು. ಅವರ ಸಂಪ್ರದಾಯಕ್ಕೆ ಅರ್ಥ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mysore Dasara 2023: ಮೈಸೂರು ದಸರಾ ಆರಂಭದಲ್ಲೇ ವಿಘ್ನ, ತಪ್ಪಿದ ಭಾರೀ ಅನಾಹುತ!

ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರುವವರು ಒಂದು. ಕೈಗೆ, ಕಾಲಿಗೆ ಜಾತಿ ಇಟ್ಟಿರುವುದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ‌ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು ಎಂದರು.

ಇದನ್ನೂ ಓದಿ: ಮೈಸೂರು ದಸರಾ: ಬಸ್ ಫ್ರೀ ಇರುವುದರಿಂದ ದಸರಾ ಕಣ್ತುಂಬಿಕೊಳ್ಳಲು ಹೆಚ್ಚು ಜನ ಬರುವ ನಿರೀಕ್ಷೆ, ಹೆಚ್ಚುವರಿ ಬಸ್ ಬಿಟ್ಟ ಕೆಎಸ್​ಆರ್​ಟಿಸಿ

2 ಸಾವಿರ ವರ್ಷದಿಂದ ಇವರು ಬೇರೆ ಅವರಿಗೆ ಸಂಸ್ಕೃತ ಕಲಿಸಲಿಲ್ಲ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಠಿ ಮಾಡಿರುವುದೆ ಬ್ರಾಹ್ಮಣರ ಸೇವೆ ಮಾಡಲು ಎಂದು‌ ತಿಳಿಸಿದಿದ್ದಾರೆ. ಇಂತಹ ಧರ್ಮ ನಮಗೇಕೆ ಬೇಕಿಲ್ಲ. ಇಂತಹ ಧರ್ಮ ನಮಗೆ ಬೇಡ. ಒಕ್ಕಲಿಗರು ಸಂಸ್ಕೃತಿ ಹೀನರು‌. ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು. ನಾನು ಹೇಳಿದ್ರೆ ನನ್ನ ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರು ಬಿಡಲ್ಲ. ಆದರೇ ನಿಜ ಹೇಳಿಯೇ ಸಾಯಬೇಕು ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ವಿರುದ್ಧ ಪ್ರೊ.ಜಿ.ಪಾಟೀಲ್​​ ವಾಗ್ದಾಳಿ

ಪ್ರಗತಿಪರ ಚಿಂತಕ ಪ್ರೊ.ಜಿ.ಪಾಟೀಲ್​ ಪ್ರತಿಕ್ರಿಯೆ ನೀಡಿದ್ದು, ಬಲ ಪಂಥಿಯರಲ್ಲಿ ವಿದ್ವಾಂಸರು, ಚಿಂತಕರು ಇಲ್ಲ. ಅಲ್ಲಿ‌ ಇರುವುದು ದಂಗೆಕೋರರು, ವಿಷಯ ತಿರುಚುವವರು ಮಾತ್ರ. ಬಲ ಪಂಥಿಯರಿಗೆ ಇತಿಹಾಸ ಗೊತ್ತಿಲ್ಲ. ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಅದಕ್ಕಾಗಿ‌ ಮಹಿಷನನ್ನು ಅವರು ಅಸಹ್ಯ ಅಂತಾರೆ ಎಂದು ಕಿಡಿಕಾರಿದ್ದಾರೆ.

ನಮ್ಮ ಸಂಸ್ಕೃತಿಯನ್ನು ಅಸಹ್ಯ ಎನ್ನುವವರು ಅವರ ಸಂಸ್ಕೃತಿ ನೋಡಿಕೊಳ್ಳಬೇಕು. ಅವರು ಎಂತಹ ಸಂಸ್ಕೃತಿಯಲ್ಲಿ ಇದ್ದಾರೆ ಎಂದು‌ ತಿಳಿದುಕೊಳ್ಳಬೇಕು. ಒಂದೊಂದು ಸಲಾ ನಾವು ಮಾಡದ ಕೆಲಸವನ್ನು ನಮ್ಮ ಸೈದ್ಧಾಂತಿಕ ವಿರೋಧಿಗಳು ಮಾಡುತ್ತಾರೆ. ನಮ್ಮ ಸೈದ್ಧಾಂತಿಕ ವಿರೋಧಿಗಳಿಂದ ಈ ಕಾರ್ಯಕ್ರಮ ಯಶಸ್ಸಿಯಾಗಿದೆ. ನಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಸೋಲಿಸಲು ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಪ್ರತಾಪ್ ಸಿಂಹ ಹೆಸರು ಹೇಳದೇ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ