TTD: ಹಿರಿಯ ನಾಗರಿಕರಿಗೆ ಟಿಟಿಡಿ ಗುಡ್ ನ್ಯೂಸ್! ಉಚಿತ ದರ್ಶನ ಟಿಕೆಟ್ ಆನ್‌ಲೈನ್ ನಲ್ಲಿ ಬಿಡುಗಡೆ ಬಗ್ಗೆ ಪ್ರಮುಖ ಘೋಷಣೆ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸಿಹಿಸುದ್ದಿ ನೀಡಿದೆ. ಅವರ ಕೋಟಾದಡಿ ನವೆಂಬರ್ ತಿಂಗಳಲ್ಲಿ ಆನ್‌ಲೈನ್ ದರ್ಶನ ಟಿಕೆಟ್‌ಗಳು ಲಭಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ -TTD) ಹಿರಿಯ ನಾಗರಿಕರು (Senior Citizens) ಮತ್ತು ವಿಶೇಷ ಚೇತನರಿಗೆ (Physically challenged quota) ಸಿಹಿಸುದ್ದಿ ನೀಡಿದೆ. ಅವರ ಕೋಟಾದ ಅಡಿಯಲ್ಲಿ, ನವೆಂಬರ್ ತಿಂಗಳ ಆನ್‌ಲೈನ್ ದರ್ಶನ ಟಿಕೆಟ್‌ಗಳನ್ನು ಅಕ್ಟೋಬರ್ 26 ರಂದು ಮಧ್ಯಾಹ್ನ 3 ಗಂಟೆಗೆ (26th October 3pm) ಬಿಡುಗಡೆ ಮಾಡಲಾಗುತ್ತದೆ. ಶ್ರೀ ವೇಂಕಟೇಶ್ವರನ ಭಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಟಿಟಿಡಿ ತಿಳಿಸಿದೆ. ಮತ್ತೊಂದೆಡೆ ಆಡಳಿತಾತ್ಮಕ ಕಾರಣಗಳಿಂದ ವಿಶೇಷ ದರ್ಶನ ಟಿಕೆಟ್ (ರೂ. 300), ತಿರುಮಲ ವಸತಿ ಡಿಸೆಂಬರ್ ಕೋಟಾವನ್ನು ಈ ತಿಂಗಳ 26 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಮೂಲತಃ ಈ ಟಿಕೆಟ್‌ಗಳನ್ನು ಅಕ್ಟೋಬರ್ 27 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಒಂದು ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ.
ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಿಮ್ಮಪ್ಪನ ದರ್ಶನಕ್ಕೆ ಬುಕ್ ಮಾಡುವುದು ಹೇಗೆ..?
* ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು.
* ವಯೋಮಿತಿ 65 ವರ್ಷಕ್ಕಿಂತ ಹೆಚ್ಚಿಗೆ ಇರಬೇಕು.
* ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್ ಕಾಪಿ ಒದಗಿಸಬೇಕು.
* ಉಚಿತ ದರ್ಶನ ಟಿಕೆಟ್
* ಹಿರಿಯ ನಾಗರಿಕರ ಜೊತೆಗಿರಲು ಒಬ್ಬ ವ್ಯಕ್ತಿಗೆ ಅನುಮತಿಯಿದೆ.
* ಜೊತೆಗಾರರಾಗಿ ಸಂಗಾತಿಗೆ ಮಾತ್ರವೇ ಅನುಮತಿ ಇದೆ
* 80 ವರ್ಷ ಮೇಲ್ಪಟ್ಟವರ ಸಹಾಯಕರಿಗೂ (ಜೊತೆಗಾರ) ಅನುಮತಿ ನೀಡಲಾಗುತ್ತದೆ
Announcement:
Senior Citizens / Physically challenged quota for the month of November 2022 will be available for booking w.e.f. 26-10-2022 03:00 PM.
— Tirumala Tirupati Devasthanams (@TTDevasthanams) October 24, 2022