Ideal Habits: ಉತ್ತಮ ಸಂಸ್ಕಾರಕ್ಕಾಗಿ ಮಕ್ಕಳಿಗೆ ಈ ಹಿರಿಯ ಸಂಪ್ರದಾಯಗಳನ್ನು ಕಲಿಸಿ, ನೀವೂ ಆಚರಿಸಿ!

Ideal Habits: ಉತ್ತಮ ಸಂಸ್ಕಾರಕ್ಕಾಗಿ ಮಕ್ಕಳಿಗೆ ಈ ಹಿರಿಯ ಸಂಪ್ರದಾಯಗಳನ್ನು ಕಲಿಸಿ, ನೀವೂ ಆಚರಿಸಿ!
ಉತ್ತಮ ಸಂಸ್ಕಾರಕ್ಕಾಗಿ ಮಕ್ಕಳಿಗೆ ಈ ಹಿರಿಯ ಸಂಪ್ರದಾಯಗಳನ್ನು ಕಲಿಸಿ, ನೀವೂ ಆಚರಿಸಿ!

Good Habits: ಉದಾಹರಣೆಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿ ಇರಲಿ. ಇದೇ ರೀತಿ ಬಾಳೆಹಣ್ಣು, ವೀಳ್ಯದೆಲೆಯ ತುದಿಭಾಗವೂ ಕೂಡ. ಮಕ್ಕಳಿಗೆ ಕುಟುಂಬದ ಸರ್ವ ಸದಸ್ಯರ ಪರಿಚಯ ಮಾಡಿ ಕೊಡಿ. ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ. ಭಿನ್ನಾಭಿಪ್ರಾಯ ಏನೇ ಇರಬಹುದು.. ಕುಟುಂಬದ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಪ್ರಯತ್ನ ಮಾಡಿ.

TV9kannada Web Team

| Edited By: sadhu srinath

Mar 04, 2022 | 6:06 AM

ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾತ್ವಿಕತೆಗಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅತ್ಯಗತ್ಯ (Good Habits). ಈ ಹಿರಿಯ ಸಂಪ್ರದಾಯಗಳನ್ನು ಆಚರಿಸುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬಹುದು. ಉದಾಹರಣೆಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿ ಇರಲಿ. ಇದೇ ರೀತಿ ಬಾಳೆಹಣ್ಣು ಮತ್ತು ವೀಳ್ಯದೆಲೆಯ ತುದಿಭಾಗವೂ ಕೂಡ. ಮಕ್ಕಳಿಗೆ ಕುಟುಂಬದ (Family) ಸರ್ವ ಸದಸ್ಯರ ಪರಿಚಯ ಮಾಡಿ ಕೊಡಿ. ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ. ಭಿನ್ನಾಭಿಪ್ರಾಯಗಳು ಏನೇ ಇರಬಹುದು.. ಕುಟುಂಬದ ಶುಭ ಕಾರ್ಯಗಳಲ್ಲಿ ಸಾಧ್ಯವಾದಷ್ಟೂ ಭಾಗವಹಿಸಲು ಪ್ರಯತ್ನ ಮಾಡಿ (Ideal Habits).

ಇನ್ನೊಂದಿಷ್ಟು ಸಂಪ್ರದಾಯಗಳ ಆಚರಣೆಗೆ ಇಲ್ಲಿದೆ ಹೆಚ್ಚಿನ ಮಾಹಿತಿ: 

 1.  ಪಠ್ಯ ಪುಸ್ತಕ ಓದುತ್ತಿರುವಾಗ ಯಾರಾದರೂ ಕರೆದರೆ ಪುಸ್ತಕವನ್ನು ಹಾಗೆಯೇ ಅಸ್ತವ್ಯಸ್ಥವಾಗಿ ಬಿಟ್ಟು ಹೋಗಬೇಡಿ. ಪುಸ್ತಕಗಳನ್ನು ಮಡಚಿಟ್ಟು, ಸುಸ್ಥಿತಿಯಲ್ಲಿ ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು.
 2. ಸಂಧ್ಯಾಕಾಲದಲ್ಲಿ ಯಾರೊಂದಿಗೂ ವೈಮನಸ್ಸು, ಕೆಟ್ಟ ವಿಚಾರ, ಮಾತುಕತೆ ಬೇಡ. ವಾತಾವರಣದಲ್ಲಿ ಅಶ್ವಿನಿ ದೇವತೆಗಳು ಹಾಗೆಯೇ ಆಗಲಿ ಎಂದು ಅಸ್ತು ಎಂದು ಅನುಗ್ರಹಿಸುವ ಅಪಾಯ ಇರುತ್ತದೆ.
 3. ಸಾಧ್ಯವಾದಷ್ಟೂ ದೇವರ ಮನೆಯಲ್ಲಿ ಶುಚಿತ್ವವಿರಲಿ. ಅಗತ್ಯಕ್ಕಿಂತ ಇತರೇ ಯಾವುದೇ ವಸ್ತುಗಳನ್ನು ಇಡಬೇಡಿ.
 4. ದೇವರ ಉತ್ಸವ ಮತ್ತು ಆರತಿ ಇದ್ದಲ್ಲಿ ಎದ್ದು ನಿಂತು ಗೌರವವನ್ನು ತೋರಿಸಿ. ಧಾರ್ಮಿಕ ಆಚರಣೆಗಳಲ್ಲಿ ಭಾವನೆಗೆ ಅತ್ಯಂತ ದೊಡ್ಡ ಮಹತ್ವವಿದೆ.
 5. ಯಾವುದೇ ಜಾತಿ ಪಂಗಡದವರಾಗಿದ್ದರೂ ಎಲ್ಲಾ ಧರ್ಮಗಳ ದೈವಿಕ ವಿಚಾರವನ್ನು ಗೌರವಿಸಿ.
 6. ಕಿರಿಯರು ಅಥವಾ ಮಕ್ಕಳು ಕೇಳುವ ಯಾವುದೇ ದೈವಿಕ ವಿಚಾರಗಳಿಗೆ ಹಾರಿಕೆಯ ಉತ್ತರ ನೀಡಬೇಡಿ. ಸಂಸ್ಕಾರಗಳನ್ನು ನಮ್ಮಿಂದ ನೋಡಿ ತಿಳಿದು ಕಲಿಯುತ್ತವೆ ಮಕ್ಕಳು.
 7. ಸುಮ್ಮಸುಮ್ಮನೆ ಯಾವುದೇ ಗಿಡ-ಮರ, ಕ್ರಿಮಿ-ಕೀಟ ಪಶು-ಪಕ್ಷಿಗಳಿಗೆ ಹಿಂಸಿಸಬೇಡಿ. ಮನುಷ್ಯನಿಗಿಂತಲೂ ಮುಂಚಿನಿಂದ ಅವು ಭೂಮಿಯ ಮೇಲಿವೆ.
 8. ದೀಪ ಆರಿ ಹೋಗಿದೆ, ಅಕ್ಕಿ ಖಾಲಿಯಾಗಿದೆ ಈ ರೀತಿ ಮಾತುಗಳನ್ನು ಮನೆಯಲ್ಲಿ ಹೇಳಬಾರದು. ದೀಪ ಸಣ್ಣದಾಗಿದೆ. ಅಕ್ಕಿ ತರಬೇಕು -ಈ ರೀತಿ ಮಾತುಗಳನ್ನು ಮಕ್ಕಳಲ್ಲಿ ಹೇಳುವಂತೆ ತಿಳಿಯಹೇಳಬೇಕು.
 9. ರಾತ್ರಿ ಊಟವಾದ ಮೇಲೆ ಊಟದ ಪಾತ್ರೆಗಳನ್ನು ಎಲ್ಲಾ ಖಾಲಿ ಮಾಡಿ ಸಾರಿಸಿ ಇಡುವುದು ಶುಭವಲ್ಲ. ಕೊನೆಯ ಪಕ್ಷ ಬೆಲ್ಲ-ಅವಲಕ್ಕಿಯನ್ನಾದರೂ ಪಾತ್ರೆಯಲ್ಲಿ ಇರಿಸಿ.
 10. ದೇವರ ಬಗ್ಗೆ ಅನಗತ್ಯವಾಗಿ ಭಯ ಭೀತಿಯನ್ನು ಮಕ್ಕಳಲ್ಲಿ ಉಂಟು ಮಾಡಬೇಡಿ. ದೇವರಷ್ಟು ಹತ್ತಿರದವರು ನಮಗೆ ಯಾರೂ ಇಲ್ಲ ಎಂದು ಅಭಯದ ಮಾತುಗಳನ್ನಾಡಿ.
 11. ಪ್ರತಿ ತಿಂಗಳು ಬರುವ ಹಬ್ಬ ಹರಿದಿನಗಳ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಮಕ್ಕಳಲ್ಲಿ ಬೆಳೆಸಿ.
 12. ಸಾಧ್ಯವಾದಷ್ಟೂ ಮುಂಜಾನೆ ಅಥವಾ ಊಟಕ್ಕೆ ಮೊದಲು ಕಾಗೆಗಳಿಗೆ-ಪಕ್ಷಿಗಳಿಗೆ ಆಹಾರ ನೀಡುವ ಕ್ರಮ ಬೆಳೆಸಿಕೊಳ್ಳಿ.
 13. ಮನೆಯಲ್ಲಿ ಕುಡಿಯುವ ನೀರನ್ನು ಪ್ರತಿನಿತ್ಯ ಬದಲಾವಣೆ ಮಾಡಿ (ಸ್ಟೀಲ್ ಪಾತ್ರೆಯಲ್ಲಿ ಇದ್ದರೆ). ಇಲ್ಲವಾದಲ್ಲಿ ಮಣ್ಣಿನ -ತಾಮ್ರದ ಪಾತ್ರೆಯಲ್ಲಿ ಇರಿಸಿ.
 14. ಬೆಳಗ್ಗೆ ಸ್ನಾನವಾದ ಮೇಲೆ ಮಕ್ಕಳಿಗೆ ದೇವರ ಕೋಣೆಯಲ್ಲಿ ನಿಂತು ಪ್ರಾರ್ಥನೆ ಮಾಡುವುದನ್ನು ಹೇಳಿಕೊಡಿ. ಮಕ್ಕಳ ಪ್ರಾರ್ಥನೆಗಳು ಬಹುಬೇಗ ಫಲ ಕೊಡುತ್ತವೆ.
 15. ಪೂಜೆ ಪುರಸ್ಕಾರಗಳಲ್ಲಿ ಮನೆಯ ಹಿರಿಯರನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಿಸಿ. ಹಿರಿಯರಿಂದ ಪ್ರಸಾದ ಸ್ವೀಕರಿಸಿ. ಇದು ನಮ್ಮ ಸನಾತನ ಧರ್ಮ.
 16. ಕುಟುಂಬದ ಶುಭ ಕಾರ್ಯಗಳಲ್ಲಿ ಸಾಧ್ಯವಾದಷ್ಟೂ ಭಾಗವಹಿಸಲು ಪ್ರಯತ್ನ ಮಾಡಿ. (ಭಿನ್ನಾಭಿಪ್ರಾಯಗಳು ಯಾವಾಗಲೂ ಇರಬಹುದು).
 17. ಮಕ್ಕಳಿಗೆ ಕುಟುಂಬದ ಸರ್ವ ಸದಸ್ಯರ ಪರಿಚಯ ಮಾಡಿ ಕೊಡಿ. ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ.
 18. ದೇವರಿಗೆ ಪ್ರಾರ್ಥನೆಗೆ ಮತ್ತು ಬೇರೆಯವರಿಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿ ಇರಲಿ. ಇದೇ ರೀತಿ ಬಾಳೆಹಣ್ಣು ಮತ್ತು ವೀಳ್ಯದೆಲೆಯ ತುದಿಭಾಗವೂ ಕೂಡ.
 19. ತೆಂಗಿನಕಾಯಿ ಒಡೆದ ಭಾಗದಲ್ಲಿ ಕಣ್ಣುಗಳಿರುವ ಭಾಗವನ್ನು ಬೇರೆಯವರಿಗೆ ಕೊಡಬೇಕು. (ಬ್ರಾಹ್ಮಣರಿಗೆ ಕೊಡುವಾಗ).
 20. ಪೂರ್ಣ ಕತ್ತಲೆ ಇರುವ ಕೋಣೆಯಲ್ಲಿ ಮಲಗಬಾರದು. ಸಣ್ಣ ಬೆಳಕಾದರೂ ಉರಿಯುತ್ತಿರಬೇಕು.
 21. ತಟ್ಟೆಯಲ್ಲಿ ಮೊದಲು ಅನ್ನವನ್ನು ಹಾಕಬಾರದು ಯಾವುದಾದರೂ ಪಲ್ಯ; ಉಪ್ಪು ಇತರೆ ಖಾದ್ಯವನ್ನಾದರೂ ಬಳಸಿಕೊಂಡು ನಂತರ ಅನ್ನವನ್ನು ಹಾಕಿಕೊಳ್ಳಬೇಕು.
 22. ದೇವರ ಕೋಣೆಯ ಎದುರು ಕಾಲು ಬಿಡಿಸಿ ಮಲಗುವುದು ಅಥವಾ ಕಾಲು ಬಿಡಿಸಿ ಕುಳಿತುಕೊಳ್ಳುವುದು ಅಥವಾ ದೇವರಿಗೆ ನೇರವಾಗಿ ಬೆನ್ನುಹಾಕಿ ಕುಳಿತುಕೊಳ್ಳುವುದು ಮಾಡಬೇಡಿ.
 23. ಮುತ್ತೈದೆಯರಿಗೆ ಶುಕ್ರವಾರ, ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನದ ದಿನ, (ನದೀ ಸ್ನಾನ, ಸಮುದ್ರಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನವನ್ನು ಮಾತ್ರ ಮಾಡಿ.
 24. ಊಟ ಮಾಡಲು ಕುಳಿತುಕೊಂಡ ಮೇಲೆ ಊಟದ ಮಧ್ಯೆ ಎದ್ದು ಹೋಗಬೇಡಿ. ಊಟವು ಒಂದು ಯಜ್ಞಕ್ಕೆ ಸಮಾನ.
 25. ಮನೆಯಿಂದ ಹೊರಗೆ ಹೊರಟಾಗ ಮನೆಯವರಿಗೆ ಹೋಗಿ ಬರುತ್ತೇನೆ ಎಂದು ಹೇಳಿ. ಹೋಗುತ್ತೇನೆ ಎಂದು ಹೇಳಬೇಡಿ. (ಬರಹ: ಸಿ ಆರ್  ಸತ್ಯಪ್ರಕಾಶ್)

Follow us on

Related Stories

Most Read Stories

Click on your DTH Provider to Add TV9 Kannada