Daily Devotional: ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಬೇಕು ಎನ್ನುವುದೇಕೆ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯ ಹೊಸ್ತಿಲು ಮಹಾಲಕ್ಷ್ಮಿಯ ಅನುಗ್ರಹದ ಸ್ಥಾನ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಮನೆಯಿಂದ ಹೊರಹೋಗುವಾಗ ಅಥವಾ ಒಳಗೆ ಪ್ರವೇಶಿಸುವಾಗ ಹೊಸ್ತಿಲಿಗೆ ನಮಸ್ಕರಿಸುವುದು ಶುಭ. ಇದು ನಂಬಿಕೆ, ಶಿಸ್ತು, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಸಕಾರಾತ್ಮಕತೆಯನ್ನು ತರುವ ಈ ಆಚರಣೆಯು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.

Daily Devotional: ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಬೇಕು ಎನ್ನುವುದೇಕೆ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಹೊಸ್ತಿಲು

Updated on: Mar 15, 2026 | 10:09 AM

ಮನೆಯ ಹೊಸ್ತಿಲಿನಲ್ಲಿ ಮಹಾಲಕ್ಷ್ಮಿಯ ಕೃಪೆ ಮತ್ತು ಅನುಗ್ರಹ ಸದಾ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ಇವತ್ತಿನ ದಿನ ಹೊಸ್ತಿಲಿನ ಮಹತ್ವ ಮತ್ತು ವಿಶೇಷತೆಗಳನ್ನು ತಿಳಿಯೋಣ. ಮನೆಯಿಂದ ಹೊರಗೆ ಹೋಗುವಾಗ ಅಥವಾ ಒಳಗೆ ಬರುವಾಗ ಹೊಸ್ತಿಲಿನ ದರ್ಶನ ಮತ್ತು ಸ್ಪರ್ಶವು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಮಹಾಲಕ್ಷ್ಮಿಯ ಅನುಗ್ರಹ ಈ ಹೊಸ್ತಿಲಿನಲ್ಲಿಯೇ ಇರುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮನೆಯಿಂದ ಹೊರಗೆ ಬರುವಾಗ ಬಲಗಾಲನ್ನು ಆಚೆ ಇಟ್ಟು, ಹೊಸ್ತಿಲನ್ನು, ಅಂದರೆ ಗೃಹಲಕ್ಷ್ಮಿಯನ್ನು ಮುಟ್ಟಿ, ಕೃತಜ್ಞತೆಯನ್ನು ಸಲ್ಲಿಸಬೇಕು. “ನಾನು ಆಚೆ ಹೋಗುತ್ತಿದ್ದೇನೆ, ನನ್ನ ಎಲ್ಲಾ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ” ಎಂದು ಸಂಕಲ್ಪ ಮಾಡಿಕೊಂಡು ಹೊಸ್ತಿಲಿಗೆ ನಮಸ್ಕರಿಸಿ ಮುಂದೆ ಪ್ರಯಾಣ ಮಾಡುವುದು ಶುಭ.

ಅದೇ ರೀತಿ, ಮನೆ ಹೊರಗಿನಿಂದ ಬರುವಾಗಲೂ ಸಹ ಈ ನಿಯಮವನ್ನು ಪಾಲಿಸಬೇಕು. ಇದು ನಮ್ಮ ಮನೆಗೆ ಮಾತ್ರವಲ್ಲ, ನಾವು ಬೇರೆಯವರ ಮನೆಗೆ ಹೋದಾಗಲೂ ಅನ್ವಯಿಸುತ್ತದೆ. ಸಾಮಾನ್ಯವಾಗಿ ಜ್ಞಾನಿಗಳು, ವಿದ್ಯಾವಂತರು, ಮತ್ತು ವಿದ್ವಾಂಸರು ದೇವಸ್ಥಾನಕ್ಕೆ ಹೋಗಲಿ, ಬೇರೆಯವರ ಮನೆಗೆ ಹೋಗಲಿ, ಕಚೇರಿಗೆ ಹೋಗಲಿ ಅಥವಾ ಯಾವುದೇ ಕಟ್ಟಡಕ್ಕೆ ಹೋದಾಗ ಅಲ್ಲಿ ಹೊಸ್ತಿಲಿದ್ದರೆ, ಮೊದಲು ಅದಕ್ಕೆ ನಮಸ್ಕರಿಸಿ ಮುಂದಕ್ಕೆ ಹೋಗುವುದನ್ನು ನಾವು ಹಿಂದಿನಿಂದಲೂ ಗಮನಿಸಿದ್ದೇವೆ. ಇದೆಲ್ಲವೂ ನಂಬಿಕೆಯ ಭಾಗವಾಗಿದೆ.

ನಾವು ಹೊರಗಡೆಯಿಂದ ಮನೆಗೆ ಬಂದಾಗ, ಹೊಸ್ತಿಲಿನ ಮೊದಲ ದರ್ಶನ ಮಾಡಿ, ಶಿರಾಬಾಗಿ ನಮಸ್ಕರಿಸಿ, ಬಲಗಾಲನ್ನು ಒಳಗಡೆ ಇಡುವುದರಿಂದ ಏನಾಗುತ್ತದೆ? ನಾವು ಹೊರಗಡೆಯಿಂದ ತಂದಿರಬಹುದಾದ ಋಣಾತ್ಮಕ ಶಕ್ತಿಗಳು, ದೃಷ್ಟಿ, ಬೇರೆಯವರ ಹಣ ಅಥವಾ ಪಾಪದ ಹೊರಗಳು, ಪಾಪಗಳು, ಕರ್ಮಗಳು – ಇವೆಲ್ಲವನ್ನೂ ಹೊತ್ತುಕೊಂಡು ಬಂದಿರುತ್ತೇವೆ. ಏಕೆಂದರೆ ಪಂಚಭೂತಗಳಲ್ಲಿ ಸಾಕಷ್ಟು ಧನಾತ್ಮಕ ಶಕ್ತಿಗಳಿರುತ್ತವೆ, ಋಣಾತ್ಮಕ ಶಕ್ತಿಗಳೂ ಇರುತ್ತವೆ. ಹಾಗಾಗಿ, ಆ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಿ, ನಮ್ಮನ್ನು ಕಾಪಾಡಲು ಆ ಹೊಸ್ತಿಲನ್ನು “ತಾಯಿ” ಎಂದು ನಮಸ್ಕರಿಸಿ ಹೋಗುತ್ತೇವೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ರಾಜಗೋಪುರದಲ್ಲಿಯೇ ನಮಸ್ಕರಿಸಿ ಮುಂದಕ್ಕೆ ಹೋಗುವುದನ್ನು ಗಮನಿಸಿದ್ದೇವೆ. ಇದರಿಂದ ಒತ್ತಡಗಳು ಕಡಿಮೆಯಾಗುತ್ತವೆ, ಕೋಪ ಕಡಿಮೆಯಾಗುತ್ತದೆ, ಅಹಂಕಾರ ಕಡಿಮೆಯಾಗುತ್ತದೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಭಕ್ತಿಭಾವದ ಜೊತೆಗೆ ಇಲ್ಲಿ ಶಿಸ್ತು ಅಡಗಿದೆ. ಶಿಸ್ತನ್ನು ಪಾಲಿಸುವ ಮನುಷ್ಯನಿಗೆ ಅಹಂ ಇರುವುದಿಲ್ಲ. ಶಿಸ್ತನ್ನು ಪಾಲಿಸುವವರಿಗೆ ಸರಳ ಮನೋಭಾವನೆಯೂ ಇರುತ್ತದೆ. ಇವೆಲ್ಲವೂ ನಮ್ಮ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಅಡಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us