Valentines Day: ನಿಜವಾದ ಪ್ರೀತಿಯಂದ್ರೆ ಜನ್ಮ ಜನ್ಮಾಂತರಗಳ ಪ್ರೀತಿ, ಶಿವನನ್ನು ಪಡೆಯಲು ಕಠಿಣಾತಿ ಕಠಿಣ ತಪಸ್ಸುಗಳನ್ನು ಮಾಡಿದ್ದಳು ಪಾರ್ವತಿ

ತನ್ನ ಶರೀರದ ಅರ್ಧ ಅಂಗವನ್ನೇ ಪಾರ್ವತಿಗೆ ನೀಡಿ ಅರ್ಧನಾರೇಶ್ವರನಾದ ಶಿವನ ಪ್ರೇಮ ಕಥೆ ಇದು. ಜಗತ್ತಿಗೆ ತಂದೆ-ತಾಯಿಯಂತಿರುವ ಶಿವ ಮತ್ತು ಶಕ್ತಿಯ ಪ್ರೇಮ ಕಥೆ ಸಾಧಾರಣವಾಗಿಲ್ಲ. ನೋವು, ತ್ಯಾಗ, ಕಣ್ಣೀರು ಇವರಿಗೂ ಬಂದು ಹೋಗಿದೆ.

Valentines Day: ನಿಜವಾದ ಪ್ರೀತಿಯಂದ್ರೆ ಜನ್ಮ ಜನ್ಮಾಂತರಗಳ ಪ್ರೀತಿ, ಶಿವನನ್ನು ಪಡೆಯಲು ಕಠಿಣಾತಿ ಕಠಿಣ ತಪಸ್ಸುಗಳನ್ನು ಮಾಡಿದ್ದಳು ಪಾರ್ವತಿ
ಶಿವ ಪಾರ್ವತಿ
Follow us
TV9 Web
| Updated By: ಆಯೇಷಾ ಬಾನು

Updated on: Feb 12, 2022 | 6:30 AM

ಪ್ರೀತಿಯ ಬಗ್ಗೆ ಹೇಳುತ್ತಾ ಹೋದರೆ ಪದ ಕಟ್ಟಲು ಪದಗಳೇ ಸಾಲುವುದಿಲ್ಲ. ಅಂತಹ ಮೋಹಕ ಈ ಪ್ರೀತಿ. ಈ ಪ್ರೇಮಕ್ಕೆ ಮರುಳಾಗದವರಿಲ್ಲ. ಶಾಪಗಳನ್ನೂ ಗೆದ್ದು ಒಂದಾಗುವ, ವೈರಾಗಿಯನ್ನೂ ಗೃಹಸ್ಥನಾಗಿ ಬದಲಾಯಿಸುವ, ಕಟುಕನಲ್ಲೂ ಪ್ರೇಮದ ಜಲಧಾರೆ ಹರಿಯುವಂತೆ ಮೋಡಿ ಮಾಡುವ ಶಕ್ತಿ ಪ್ರೇಮಕ್ಕಿದೆ. ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನಾಚರಣೆ(Valentines Day) ಬರಲಿದೆ. ಹೀಗಾಗಿ ಪೌರಾಣಿಕ ಪ್ರೇಮ ಕಥೆಗಳ(Mythological Love Story) ಮೂಲಕ ನಿಜವಾದ ಪ್ರೀತಿಯ ಅರ್ಥವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಹೀಗಾಗಿ ನಾವಿಂದು ಜಗತ್ತಿನ ಮೊದಲ ಪ್ರೇಮ ಕಥೆಯೆಂದು ಹೇಳಲಾಗುವ ಹಾಗೂ ಪುರುಷ-ಪ್ರಕೃತಿಯ ಪ್ರತೀಕ ಜಗತ್ ಪಿತಾಮಹ ಶಿವ(Lord Shiva) ಮತ್ತು ಜಗತ್ ಜನನಿ ಪಾರ್ವತಿಯ(Devi Parvati) ಪ್ರೇಮ ಕಥೆಯನ್ನು ಹೇಳಲು ಹೊರಟಿದ್ದೇವೆ.

ತನ್ನ ಶರೀರದ ಅರ್ಧ ಅಂಗವನ್ನೇ ಪಾರ್ವತಿಗೆ ನೀಡಿ ಅರ್ಧನಾರೇಶ್ವರನಾದ ಶಿವನ ಪ್ರೇಮ ಕಥೆ ಇದು. ಜಗತ್ತಿಗೆ ತಂದೆ-ತಾಯಿಯಂತಿರುವ ಶಿವ ಮತ್ತು ಶಕ್ತಿಯ ಪ್ರೇಮ ಕಥೆ ಸಾಧಾರಣವಾಗಿಲ್ಲ. ನೋವು, ತ್ಯಾಗ, ಕಣ್ಣೀರು ಇವರಿಗೂ ಬಂದು ಹೋಗಿದೆ. ತಪಸ್ಸು, ಆಚರಣೆ, ಬಲಿದಾನದ ಬಳಿಕವೇ ಪಾರ್ವತಿ ಪರಮೇಶ್ವರ ಒಂದಾದದ್ದು. ಇಡೀ ಜಗತ್ತಿಗೆ ಪ್ರೇಮ ಪಾಠವನ್ನು ಬೋಧಿಸಿದ ಮೊದಲ ಜೋಡಿಯೇ ಶಿವ-ಪಾರ್ವತಿಯದ್ದು. ಅದಕ್ಕಾಗಿಯೇ ಇವರನ್ನು ಜಗದಾದಿಮ ದಂಪತಿ ಎಂದು ಗೌರವಿಸುತ್ತಾರೆ.

ಸತಿಯಾಗಿ ಜನ್ಮ ತಾಳಿದ ಆದಿ ಶಕ್ತಿ ಪ್ರಜಾಪತಿ ದಕ್ಷನಿಗೆ ಅನೇಕ ಹೆಣ್ಣುಮಕ್ಕಳಿದ್ದರು. ಆತನ ಎಲ್ಲಾ ಹೆಣ್ಣುಮಕ್ಕಳು ಪ್ರತಿಭಾವಂತರಾಗಿದ್ದರು ಹಾಗೂ ಸುಂದರಿಯರಾಗಿದ್ದರು. ಆದರೂ ಪ್ರಜಾಪತಿ ದಕ್ಷನಿಗೆ ಸಮಾಧಾನವಿರಲಿಲ್ಲ. ತನಗೆ ಸರ್ವಶಕ್ತಳಾದ, ವಿಜಯಶಾಲಿಯಾದ ಹೆಣ್ಣುಮಗಳು ಬೇಕೆಂಬ ಆಸೆ ಅವನದ್ದಾಗಿತ್ತು. ಆದ್ದರಿಂದ ಪ್ರಜಾಪತಿ ದಕ್ಷ ಸರ್ವಶಕ್ತ ಪುತ್ರಿಗಾಗಿ ಕಠಿಣ ತಪಸ್ಸನ್ನು ಮಾಡುತ್ತಾನೆ. ಆಗ ದಕ್ಷನ ಭಕ್ತಿಗೆ ಮೆಚ್ಚಿ ಭಗವತಿ ಆದ್ಯ ದೇವಿ ಪ್ರತ್ಯಕ್ಷಳಾಗಿ ಆತನ ಬಯಕೆಯೇನೆಂಬೂದನ್ನು ತಿಳಿದುಕೊಳ್ಳುತ್ತಾಳೆ. ಆಗ ಆದ್ಯ ದೇವಿಯು ತಾನೇ ನಿನ್ನ ಮಗಳಾಗಿ ಜನಿಸುತ್ತೇನೆ. ಹಾಗೂ ತನನ್ನು ಸತಿಯೆಂದು ನಾಮಕರಣ ಮಾಡೆಂದು ಹೇಳುತ್ತಾಳೆ. ನಂತರ ಸತಿ ಜನನವಾಗುತ್ತೆ. ಸತಿ ತನ್ನ ಎಲ್ಲಾ ಅಕ್ಕಂದಿರಿಗಿಂತ ಅತ್ಯಂತ ಅಲೌಕಿಕ ಶಕ್ತಿಯನ್ನು ಹೊಂದಿರುತ್ತಾಳೆ. ತನ್ನ ಎಲ್ಲಾ ಪುತ್ರಿಯರಿಗಿಂತಲೂ ಸತಿಯೆಂದರೆ ದಕ್ಷನಿಗೆ ಹೆಚ್ಚು ಪ್ರೀತಿ. ಸತಿ ಇಲ್ಲದೆ ದಕ್ಷ ಯಾವುದೇ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ಸತಿಯು ವಿವಾಹದ ವಯಸ್ಸಿಗೆ ಬಂದಾಗ ಆಕೆಗೊಂದು ಮದುವೆ ಮಾಡಿಸಬೇಕೆಂದು ದಕ್ಷ ಹಂಬಲಿಸುತ್ತಾನೆ. ಆಗ ಪ್ರಜಾಪತಿ ದಕ್ಷನು ಬ್ರಹ್ಮನ ಬಳಿ ಉತ್ತಮ ವರನನ್ನು ಸೂಚಿಸುವಂತೆ ಕೇಳಿಕೊಳ್ಳುತ್ತಾನೆ. ಬಹ್ಮ ದೇವ ಸತಿ ಆದ್ಯಳ ಅವತಾರ. ಆದ್ಯ ಎಂದರೆ ಆದಿ ಶಕ್ತಿ ಹಾಗಾಗಿ ಆಕೆಯನ್ನು ಶಿವನಿಗೆ ಕೊಟ್ಟು ವಿವಾಹ ಮಾಡುವಂತೆ ಸೂಚಿಸುತ್ತಾನೆ. ಆದ್ರೆ ದಕ್ಷನಿಗೆ ಶಿವ ಎಂದರೆ ಆಗೋದಿಲ್ಲ. ತನ್ನ ತಂದೆ ಬ್ರಹ್ಮನ ಐದನೇ ತಲೆ ಕತ್ತರಿಸಿದಕ್ಕೆ ಶಿವನ ಮೇಲೆ ದಕ್ಷನಿಗೆ ದ್ವೇಷವಿರುತ್ತೆ. ಆಗ ಇತರೆ ಅನೇಕ ವರಗಳನ್ನು ದಕ್ಷ ನೋಡುತ್ತಾನೆ. ಆದ್ರೆ ಸತಿ ಹಾಗೂ ಶಿವನ ಪ್ರೇಮ ಅರಿತಿದ್ದ ರಾಜರೂ ಯಾರು ಸತಿಯನ್ನು ಮದುವೆಯಾಗಲು ಮುಂದೆ ಬರುವುದಿಲ್ಲ.

ತಂದೆಯ ವಿರೋಧವಾಗಿ ಸತಿ ಕೂಡ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿರಲಿಲ್ಲ. ಆಗ ಸತಿ ತನ್ನ ಪ್ರಿಯತಮ ಶಿವನನ್ನು ಪಡೆಯಲು ಅನೇಕ ತಪಸ್ಸುಗಳನ್ನು, ವ್ರತಗಳನ್ನು ಮಾಡುತ್ತಾಳೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಪಾತ್ರರಾಗಿದ್ದ ತಂದೆಯ ದ್ವೇಷಕ್ಕೆ ಪಾತ್ರಳಾಗುತ್ತಾಳೆ. ಶಿವನನ್ನು ಪಡೆಯಲು ಸತಿ ನಂದಾ ವ್ರತವನ್ನು ಮಾಡುತ್ತಾಳೆ. ಆಗ ದಕ್ಷ ಮತ್ತು ಆಕೆಯ ಪತ್ನಿ ಪ್ರಸುತಿ ಜಲ ಸಮಾಧಿ ಕೈಗೊಳ್ಳುವುದಾಗಿ ಹೆದರಿಸುತ್ತಾರೆ. ಹೀಗೆ ಅನೇಕ ತೊಡಕುಗಳ ನಡುವೆ ಒಮ್ಮೆ ದಕ್ಷ ರಾಜನ್ನು ತನ್ನ ಮಗಳಿಗೆ ವರನನ್ನು ಹುಡುಕಲು ಸ್ವಯಂವರವನ್ನು ಏರ್ಪಡಿಸುತ್ತಾನೆ. ಆದರೆ ಇದರಲ್ಲಿ ಶಿವನಿಗೆ ಆಹ್ವಾನವಿರುವುದಿಲ್ಲ. ಆದ್ರೆ ಈ ಸ್ವಯಂವರದಲ್ಲಿ ಶಿವನ ವಿಗ್ರಹವಿರುತ್ತೆ. ಸತಿ ಆ ವಿಗ್ರಹಕ್ಕೆ ಹಾರ ಹಾಕುತ್ತಾಳೆ. ಆಗ ಬೇರೆ ವಿಧಿ ಇಲ್ಲದೆ ದಕ್ಷ ಶಿವನಿಗೆ ಮದುವೆ ಮಾಡಿಕೊಡಬೇಕಾಗುತ್ತೆ.

ಮಗಳನ್ನೇ ಆಹ್ವಾನಿಸದೆ ಯಜ್ಞ ಮಾಡಿದ ದಕ್ಷ ಸತಿ ಶಿವನ ಮದುವೆಯ ಬಳಿಕವು ಇವರಿಬ್ಬರ ಮಿಲನಕ್ಕೆ ಅನೇಕ ತೊಡಕುಗಳಿರುತ್ತವೆ. ಒಮ್ಮೆ ಪರಶಿವ ಮತ್ತು ಸತಿ ದೇವಿ ಕೈಲಾಸದಲ್ಲಿ ಕುಳಿತು ಪರಸ್ಪರ ಸಂಭಾಷಣೆಯಲ್ಲಿ ತೊಡಗಿದ್ದಾಗ ಆಕಾಶದಲ್ಲಿ ಅನೇಕ ದೇವರ ವಾಹನಗಳು ಹಾರಾಡತೊಡಗುತ್ತವೆ. ದೇವತೆಗಳು ತಮ್ಮ ವಾಹನದಲ್ಲಿ ಪ್ರಜಾಪತಿ ದಕ್ಷನ ಅರಮನೆಯತ್ತ ಹೋಗುತ್ತಿದ್ದವು. ಇದನ್ನು ಕಂಡ ಸತಿ ದೇವಿ ಪರಶಿವನಲ್ಲಿ ಸ್ವಾಮಿ, ಈ ಎಲ್ಲಾ ದೇವಾನು ದೇವತೆಗಳು ಎಲ್ಲಿಗೆ ಹೊರಟಿದ್ದಾರೆ ಎಂದು ಪ್ರಶ್ನಿಸುತ್ತಾಳೆ. ಆಗ ಶಿವನು ನಿಮ್ಮ ತಂದೆ ದಕ್ಷರು ದೊಡ್ಡ ಯಜ್ಞವೊಂದನ್ನು ಹಮ್ಮಿಕೊಂಡಿದ್ದಾರೆ. ಆ ಯಜ್ಞಕ್ಕೆ ಸಂಪೂರ್ಣ ದೇವಗಣವೇ ಪಾಲ್ಗೊಳ್ಳಲು ಹೋಗುತ್ತಿದ್ದಾರೆ ಎಂದು ಉತ್ತರಿಸುತ್ತಾನೆ. ಆಗ ಸತಿ ಶಿವನು ಹೋಗದಿರುವುದನ್ನು ಕಂಡು ಶಿವನಲ್ಲಿ ನೀವು ಯಜ್ಞಕ್ಕೆ ಹೋಗುವುದಿಲ್ಲವೇ? ನನ್ನ ತಂದೆ ನಿಮ್ಮನ್ನು ಆಹ್ವಾನಿಸಲಿಲ್ಲವೇ? ಎಂದು ಕೇಳುತ್ತಾಳೆ. ಆಗ ಶಿವನು ನಿನ್ನ ತಂದೆ ನನ್ನನ್ನು ದ್ವೇಷಿಸುತ್ತಾರೆ ಹಾಗಾಗಿ ನನ್ನನ್ನು ಆಹ್ವಾನಿಸಲಿಲ್ಲ ಎನ್ನುತ್ತಾನೆ. ಸತಿ ದೇವಿಯ ಮನಸಿನಲ್ಲಿ ತಾನು ತವರಿಗೆ ಹೋಗಬೇಕು. ಯಜ್ಞಕ್ಕೆ ನನ್ನೆಲ್ಲಾ ಸಹೋದರಿಯರು ಬಂದಿರುತ್ತಾರೆ. ನಾನು ಅವರೊಂದಿಗೆ ಸಮಯ ಕಳೆಯಬೇಕು. ಅವರೊಂದಿಗೆ ಮಾತನಾಡಬೇಕೆನಿಸುತ್ತಿದೆ ನಾನು ಯಜ್ಞಕ್ಕೆ ಹೋಗಲೇ ಎಂದು ಶಿವನನ್ನು ಕೇಳುತ್ತಾಳೆ. ಆಗ ಶಿವನು ಕರೆಯದೇ ಬೇರೆಯವರ ಮನೆಗೆ ಹೋಗುವುದು ಸೂಕ್ತವಲ್ಲ. ಇದರಿಂದ ನಿನ್ನನ್ನು ಅವಮಾನಿಸಬಹುದು ಹಾಗಾಗಿ ಹೋಗದಿರುವುದೇ ಒಳ್ಳೆಯದು ಎಂದು ಹೇಳುತ್ತಾನೆ. ಆದ್ರೆ ಶಿವನ ಮಾತುಗಳನ್ನು ತಳ್ಳಿ ಹಾಕಿ ಸತಿ ದಕ್ಷನ ಯಜ್ಞಕ್ಕೆ ಹೋಗುತ್ತಾಳೆ.

ಪತಿಯ ಅವಮಾನ ತಾಳಲಾಗದೆ ಯಜ್ಞ ಕುಂಡಕ್ಕೆ ಹಾರಿ ಪ್ರಾಣವನ್ನೇ ತ್ಯಜಿಸಿದಳು ಸತಿ ಸತಿ ತವರು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಆಕೆಯ ಕುಟುಂಬದ ಸದಸ್ಯರು ಯಾರೂ ಕೂಡ ಆಕೆಯೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಸತಿಯನ್ನು ಆಕೆಯ ಸಹೋದರಿಯರು ಮಾತು ಕೂಡ ಆಡಿಸುವುದಿಲ್ಲ. ಪ್ರಜಾಪತಿ ದಕ್ಷ ಮಗಳನ್ನು ನೋಡುತ್ತಿದ್ದಂತೆ ಎಲ್ಲರ ಮುಂದೆ ನೀನು ನನ್ನನ್ನು ಅವಮಾನಿಸಲು ಇಲ್ಲಿಗೆ ಬಂದಿದ್ದೀಯಾ? ನಿನ್ನ ಪತಿ ಸ್ಮಶಾನವನ್ನು ಕಾಯುವವನು. ಅವನಿಗೆ ಹುಲಿಯ ಚರ್ಮ ಬಿಟ್ಟರೆ ಬೇರಾವ ಬಟ್ಟೆಯೂ ಇಲ್ಲವೆಂದು, ನಿನ್ನ ಪತಿ ಶಿವನನ್ನು ನಾನು ದೇವನೆಂದು ಪರಿಗಣಿಸುವುದಿಲ್ಲ. ಆತನು ಸ್ಮಶಾನವನ್ನು ಕಾಯುವ ಕಾವಲಿಗ ಎಂದು ಅವಮಾನಿಸುತ್ತಾನೆ. ತಂದೆಯು ತನ್ನ ಪತಿಯನ್ನು ದೇವಾನುದೇವತೆಗಳ ಮುಂದೆ ಅವಮಾನಿಸುತ್ತಿರುವುದನ್ನು ಕಂಡು ಸತಿಯು ಕೋಪಗೊಳ್ಳುತ್ತಾಳೆ. ತನ್ನ ಪತಿ ಸ್ವರ್ಗಾಧಿಪತಿ. ಯಾವುದೇ ಮಹಿಳೆ ತನ್ನ ಪತಿಗಾಗುತ್ತಿರುವ ಅವಮಾನವನ್ನು ಕಂಡು ಸುಮ್ಮನಿರುತ್ತಾಳೋ ಆಕೆ ನರಕವನ್ನು ಸೇರುತ್ತಾಳೆ. ಭೂಮಿಯೇ ಕೇಳಿ, ಸ್ವರ್ಗವೇ ಕೇಳಿ ದೇವಾನು ದೇವತೆಗಳೇ ಕೇಳಿ, ನನ್ನ ತಂದೆ ನನ್ನ ಪತಿಯನ್ನೇ ಅವಮಾನಿಸಿದ್ದಾರೆ. ಇದರಿಂದ ನನಗೆ ಒಂದ ಕ್ಷಣ ಕೂಡ ಬದುಕಲು ಇಷ್ಟವಿಲ್ಲವೆಂದು ಹೇಳುತ್ತಾ ತಂದೆ ಆಯೋಜಿಸಿದ ಯಜ್ಞ ಕುಂಡಕ್ಕೆ ಹಾರಿ ಪ್ರಾಣವನ್ನೇ ತ್ಯಜಿಸುತ್ತಾಳೆ. ಬಳಿಕ ಶಿವ ಕೋಪದಿಂದ ವೀರಭದ್ರನ ಸೃಷ್ಟಿ ಮಾಡಿ ದಕ್ಷನ ತಲೆ ಕತ್ತರಿಸುತ್ತಾನೆ.

ಪಾರ್ವತಿಯಾಗಿ ಮರು ಜನ್ಮ ಪಡೆದ ಸತಿ ಇಷ್ಟೆಲ್ಲಾ ಆದ ಮೇಲೆ ಶಿವ ತನ್ನ ಸತಿ ಇಲ್ಲದ ಕೈಲಾಸವೇಕೆ ಎಂದು ಸತಿಯ ದೇಹವಿಡಿದು ಲೋಕವನ್ನೇ ಮರೆತು ಸಂಚಾರಿಯಾಗುತ್ತಾನೆ. ಆಗ ವಿಷ್ಣು ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳಾಗಿ ಮಾಡಿ ಭೂಮಿಯ ಮೇಲೆ ಬೀಳುವಂತೆ ಮಾಡುತ್ತಾನೆ. ಆ ತುಂಡುಗಳೇ ಈಗ ಶಕ್ತಿ ಪೀಠವಾಗಿದೆ. ಇನ್ನು ಸತಿ ಪಾರ್ವತಿಯಾಗಿ ಮರು ಜನ್ಮ ಪಡೆಯುತ್ತಾಳೆ. ಪರ್ವತ ಮಹಾರಾಜ ಹಿಮಾವಂತ್ ಮತ್ತು ಮೇನಾವತಿ ದಂಪತಿಯ ಮುದ್ದಿನ ಮಗಳಾಗಿ ಜನಿಸುತ್ತಾಳೆ. ತನ್ನ ಚಿಕ್ಕ ವಯಸ್ಸಿನಿಂದಲೂ ಶಿವನೇ ಪತಿಯೆಂದು ಬೆಳೆದ ಪಾರ್ವತಿ ಶಿವನನ್ನು ಬಿಟ್ಟರೆ ಬೇರೆ ಯಾರನ್ನೂ ವಿವಾಹವಾಗುವುದಿಲ್ಲ ಎಂದು ತೀರ್ಮಾನಿಸಿರುತ್ತಾಳೆ. ಆದ್ರೆ ಸತಿಯನ್ನು ಕಳೆದುಕೊಂಡಿಲ್ಲ ಶಿವ ವೈರಾಗಿಯಾಗಿದ್ದ. ಅವರನ್ನು ಬದಲಾಯಿಸುವುದು ಕಷ್ಟದ ಸಂಗತಿಯಾಗಿತ್ತು. ಅಲ್ಲದೆ ಪಾರ್ವತಿಯ ವಿವಾಹ ಪ್ರಸ್ತಾಪವನ್ನು ಶಿವ ತಿರಸ್ಕರಿಸಿದ್ದ. ಹಠ ಬಿಡದ ಪಾರ್ವತಿ ಶಿವನನ್ನು ವಿವಾಹವಾಗಲು ಕಠಿಣ ತಪಸ್ಸು ಮಾಡುತ್ತಾಳೆ. ಅನ್ನ ನೀಡು ಬಿಟ್ಟು ತಪಸ್ಸು ಮಾಡಿ ಶಿವನನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಾಳೆ. ಕೊನೆಗೆ ಭಗವಾನ್ ಶಿವ ಪಾರ್ವತಿಯ ತಪಸ್ಸಿಗೆ ಮೆಚ್ಚಿ ಪಾರ್ವತಿಯ ಇಚ್ಛೆಯಂತೆ ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಶಿವ ಪಾರ್ವತಿ ಕಲ್ಯಾಣಕ್ಕೆ ಇಡೀ ದೇವತೆಗಳು ಸಹಾಯ ಮಾಡುತ್ತಿರುತ್ತಾರೆ. ಈ ರೀತಿ ಆದಿ ಶಕ್ತಿ ಸತಿಯ ರೂಪದಲ್ಲಿ ಮತ್ತು ಪಾರ್ವತಿಯ ರೂಪದಲ್ಲಿ ಅನೇಕ ಕಠಿಣ ತಪಸ್ಸುಗಳನ್ನು ಮಾಡಿ ಬಲಿದಾನ, ತ್ಯಾಗದ ನಂತರವೇ ಪಾರ್ವತಿ-ಪರವೇಶ್ವರ ಒಂದಾಗುತ್ತಾರೆ. ಶಿವನಿಗೆ ತನ್ನ ಪತ್ನಿಯ ಮೇಲಿನ ಪ್ರೀತಿ ಹಾಗೂ ಶಕ್ತಿಗೂ ಈ ಜಗತ್ತಿನಲ್ಲಿ ಸಮಾನವಾದ ಹಕ್ಕಿದೆ ಎಂದು ಸಾರುವುದಕ್ಕೆ ಶಿವ ತನ್ನ ಅರ್ಥ ಅಂಗದಲ್ಲಿ ಪಾರ್ವತಿಗೂ ಸ್ಥಾನ ಕೊಟ್ಟು ಅರ್ಧನಾರೇಶ್ವರನಾಗಿದ್ದೇ ಸಾಕ್ಷಿ.

ಇದನ್ನೂ ಓದಿ: Holy Ganga Bath: ಗಂಗಾ ಸ್ನಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತಾ? ಶಿವ-ಪಾರ್ವತಿ ನಡುವಿನ ಈ ಪ್ರಸಂಗ ನೀಡುತ್ತೆ ಇದಕ್ಕೆ ಉತ್ತರ

Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ