
ಮನೆ ಕಟ್ಟುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದರಲ್ಲಿಯೂ ವಾಸ್ತು ಪ್ರಕಾರ ಕಟ್ಟಿ ಅದನ್ನು ನಕಾರತ್ಮಕ ಶಕ್ತಿಗಳಿಂದ ರಕ್ಷಿಸಲು ನಾವು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಇದೆಲ್ಲದರ ಹೊರತಾಗಿ ನಾವು ಇಷ್ಟ ಪಟ್ಟು ತರುವ ಕೆಲವು ವಸ್ತುಗಳು ಅಥವಾ ಅರಿಯದೆಯೇ ಮಾಡುವ ಕೆಲಸಗಳು ನಮಗೆ ತೊಂದರೆ ತರುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ ನಾವು ವಿಶೇಷವಾಗಿ ಮನೆಗೆ ತರುವ ವಸ್ತುಗಳು ಅಥವಾ ಅದನ್ನು ಇಟ್ಟಿರುವಂತಹ ಜಾಗಗಳಿಂದ ಮನೆಯಲ್ಲಿ ವಾಸಿಸುವವರ ಆರೋಗ್ಯ ಹದಗೆಡಬಹುದು, ನಾನಾ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು ಕೆಲವೊಮ್ಮೆ ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಬಹುದು. ಇಂತಹ ವಿಷಯಗಳನ್ನು ಕೆಲವರು ನಂಬುವುದಿಲ್ಲ ಆದರೆ ಇದು ನಿರ್ಲಕ್ಷಿಸುವಂತಹ ವಿಷಯವಲ್ಲ. ಹಾಗಾದರೆ ಮನೆಯಲ್ಲಿ ಇರಬಾರದ ವಸ್ತುಗಳು ಯಾವವು? ಇದ್ದರೂ ಅವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಕೆಲಸ ಮಾಡದ ಅಂದರೆ ಸರಿಯಾಗಿ ಸಮಯ ತೋರಿಸದ ಗಡಿಯಾರಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಕುಟುಂಬ ಸದಸ್ಯರಲ್ಲಿ ಜಗಳಕ್ಕೂ ಕಾರಣವಾಗಬಹುದು.
ನಿಮ್ಮ ಮನೆಯ ಯಾವುದಾದರೂ ಕೋಣೆಯಲ್ಲಿ ಮಹಾಭಾರತ ಅಥವಾ ರಾಮಾಯಣದ ಯುದ್ಧದ ದೃಶ್ಯಗಳಿರುವಂತಹ ಫೋಟೋ ಇದ್ದರೆ, ಅದನ್ನು ಮೊದಲು ತೆಗೆಯಿರಿ ಇದರಿಂದ ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತವೆ. ಸಂಬಂಧಗಳು ಸಣ್ಣ ಸಣ್ಣ ವಿಷಯಕ್ಕೆ ಮುರಿದು ಬೀಳುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಅಕ್ವೇರಿಯಂ ಇರುವುದು ಒಳ್ಳೆಯದು. ಆದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ನಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಅಕ್ವೇರಿಯಂ ಅನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಇಡಬಾರದು. ಅದನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಇರಿಸುವುದರಿಂದ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು.
ದೊಡ್ಡ ದೊಡ್ಡ ದೇವತೆಗಳ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಇವು ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಶತ್ರುಗಳಿಂದ ಮುಕ್ತಿ ಪಡೆಯಲು ಸ್ಕಂದ ಷಷ್ಠಿಯಂದು ಕಾರ್ತಿಕೇಯನನ್ನು ಈ ರೀತಿ ಪೂಜಿಸಿ
ಮನಿ ಪ್ಲಾಂಟ್ ಮನೆಯ ಮುಂದೆ ಇದ್ದರೆ ಒಳ್ಳೆಯದು ಇದನ್ನು ಮನೆಯ ಬೇರೆ ಭಾಗದಲ್ಲಿ ಇಡಬಾರದು. ಇದನ್ನು ಬಳ್ಳಿಯ ರೂಪದಲ್ಲಿ ಮನೆಯ ಮುಂದೆ ಬೆಳೆಯಲು ಬಿಡುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ಇರುವುದಿಲ್ಲ ಎಂಬ ನಂಬಿಕೆ ಇದೆ. ಅದಲ್ಲದೆ ಇದು ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದು ನಂಬಲಾಗಿದೆ.
ಮನೆಯಲ್ಲಿ ಬೆಳಕು ಪ್ರಕಾಶಮಾನವಾಗಿರಬೇಕು. ಕತ್ತಲೆ ತುಂಬಾ ಹೆಚ್ಚಿದ್ದರೆ ಅದು ಅಶುಭ ಪರಿಣಾಮಗಳನ್ನು ಉಂಟುಮಾಡಬಹುದು.
ಸಾಮಾನ್ಯವಾಗಿ ಮನೆಯ ಮುಂದೆ ಆಸ್ಪತ್ರೆಗಳು, ಮಾಂಸಾಹಾರಿ ಅಂಗಡಿಗಳು ಮತ್ತು ಕಬ್ಬಿಣ ತಯಾರಿಸುವ ಅಂಗಡಿಗಳು ಇದ್ದರೆ, ಮನೆಯಲ್ಲಿ ಶಾಂತಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇದನ್ನು ನಂಬುವುದು ಬಿಡುವುದು ಅವರವರ ನಂಬಿಕೆ ಬಿಟ್ಟದ್ದು.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ