ಮನೆಗೆ ಧನಾತ್ಮಕ ಶಕ್ತಿ ಮತ್ತು ಹಣವನ್ನು ಆಕರ್ಷಿಸುವಲ್ಲಿ ವಾಸ್ತು ಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ. ನೀವು ನಿಮ್ಮ ಮನೆಯ ವಾಸ್ತು ದೋಷವನ್ನು ನಿವಾರಿಸುವ ಮೂಲಕ ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕಬಹುದು. ಜೊತೆಗೆ ನಿಮ್ಮ ಮನೆಯಲ್ಲಿ ಸಂಪತ್ತು ಸಮೃದ್ಧಿಯಾಗುತ್ತಾ ಹೋಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಹಣ ಗಳಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿಮ್ಮ ಮನೆಯಲ್ಲಿ ವರ್ಷವಿಡೀ ಧನಾತ್ಮಕ ಶಕ್ತಿ ಇರಬೇಕೆಂದರೆ, ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಟ್ಟು ದ್ವಾರದ ಮೇಲಿನ ಭಾಗದಲ್ಲಿ ಗಣೇಶನ ಚಿತ್ರ ಇಡಬೇಕು. ಇದನ್ನು ಇಡುವುದರಿಂದ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಮುಖ್ಯ ಬಾಗಿಲಿನ ಮೇಲೆ ಫೋಟೊ ಇಡುವುದರಿಂದ ಮನೆಯೊಳಗೆ ನಕಾರಾತ್ಮಕತೆ ಬರುವುದಿಲ್ಲ. ಮನೆಯಲ್ಲಿ ಎಲ್ಲವೂ ಧನಾತ್ಮಕವಾಗಿರುತ್ತದೆ. ಈ ಪರಿಹಾರವನ್ನು ಅನುಸರಿಸಿ ಮತ್ತು ವರ್ಷವಿಡೀ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿಯಿಂದಿರಿ.
ಮನೆಯ ಮೂಲೆಯಲ್ಲಿ ಸ್ವಲ್ಪ ಉಪ್ಪಿನ್ನು ಹಾಕಿ ಇಡಿ. ಇದು ಮನೆಯಿಂದ ನಕಾರಾತ್ಮಕ ಶಕ್ತಿ ಹೋಗಲಾಡಿಸುತ್ತದೆ. ಪ್ರತಿ ತಿಂಗಳು ಈ ಉಪ್ಪನ್ನು ಬದಲಾಯಿಸಿ. ವಾಸ್ತು ಪ್ರಕಾರ, ಉಪ್ಪನ್ನು ಬಳಸುವುದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ವಾಸ್ತು ಪ್ರಕಾರ , ನೀರು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ, ಆದ್ದರಿಂದ ನೀವು ನಿಮ್ಮ ಮನೆಯಲ್ಲಿ ಅಕ್ವೇರಿಯಂ ಅನ್ನು ಇಡಬೇಕು. ಈ ವಸ್ತುವನ್ನು ಮನೆಯಲ್ಲಿ ಇಡುವುದರಿಂದ ಅನೇಕ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ತುಳಸಿ ಗಿಡವನ್ನು ಪವಿತ್ರ ಮಾತ್ರವಲ್ಲದೆ ಮಂಗಳಕರವೆಂದು ಪರಿಗಣಿಸಲಾಗಿದೆ. ವರ್ಷದ ಆರಂಭದಲ್ಲಿ ಈ ಮನೆಗೆ ತರುವ ಮೂಲಕ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಮನೆಯಲ್ಲಿ ತುಳಸಿ ಗಿಡ ಇಟ್ಟರೆ ವರ್ಷವಿಡೀ ಒಳ್ಳೆಯ ಫಲ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯೂ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.
ಇದನ್ನೂ ಓದಿ: ನಿಮ್ಮ ಮಕ್ಕಳು ಓದುವುದರಲ್ಲಿ ಮುಂದಿರಬೇಕಾ? ವಸಂತ ಪಂಚಮಿಯಂದು ಈ ರೀತಿ ಮಾಡಿ
ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣ ವಾಸವಾಗಿರುವುದರಿಂದ ಅಡುಗೆ ಮನೆಯಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕು. ಅಲ್ಲದೆ, ಅಡುಗೆಮನೆಯ ಉತ್ತರ ಭಾಗದಲ್ಲಿ ಯಾವಾಗಲೂ ನೀರು ತುಂಬಿದ ಮಡಕೆಯನ್ನು ಇರಿಸಿ. ಈ ಪರಿಹಾರವು ಆರ್ಥಿಕ ಪ್ರಯೋಜನಗಳ ಮೇಲೆ ಮತ್ತು ಮನೆಯ ಸದಸ್ಯರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ