AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಎಷ್ಟು ಮೆಟ್ಟಿಲುಗಳು ಇರಬೇಕು? ವಾಸ್ತು ಪ್ರಕಾರ ಶುಭ ಸಂಖ್ಯೆಗಳ ವಿವರ ಇಲ್ಲಿದೆ

ಮನೆ ಮೆಟ್ಟಿಲುಗಳ ವಾಸ್ತು ಶಾಸ್ತ್ರದ ಪ್ರಕಾರ, ಶುಭ ಸಂಖ್ಯೆಗಳು ಸಕಾರಾತ್ಮಕ ಶಕ್ತಿ ತರುತ್ತವೆ. 5, 8, 11ರಂತಹ ಸಂಖ್ಯೆಗಳು ಶ್ರೇಷ್ಠ. ಮೆಟ್ಟಿಲುಗಳ ಎಣಿಕೆಯಲ್ಲಿ ಟ್ರೆಡ್, ರೈಸರ್, ಹಾಗೂ ಅಂತಿಮ ಹೆಜ್ಜೆ ಮುಖ್ಯ. ಶೂನ್ಯದಲ್ಲಿ ಕೊನೆಗೊಳ್ಳುವ ಸಂಖ್ಯೆಗಳನ್ನು ತಪ್ಪಿಸಿ. ಗಡಿಯಾರದ ದಿಕ್ಕಿನ ತಿರುವು ಮತ್ತು ಸರಿಯಾದ ದಿಕ್ಕು-ವಿನ್ಯಾಸಗಳು ಮನೆಗೆ ಸಮೃದ್ಧಿ ತರುತ್ತವೆ ಎಂದು ನಂಬಲಾಗಿದೆ.

ಮನೆಯಲ್ಲಿ ಎಷ್ಟು ಮೆಟ್ಟಿಲುಗಳು ಇರಬೇಕು? ವಾಸ್ತು ಪ್ರಕಾರ ಶುಭ ಸಂಖ್ಯೆಗಳ ವಿವರ ಇಲ್ಲಿದೆ
ಮೆಟ್ಟಿಲುಗಳುImage Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 02, 2026 | 4:39 PM

Share

ಮನೆ ಕಟ್ಟುವಾಗ ಕೊಠಡಿಗಳು, ಅಡುಗೆಮನೆ ಮತ್ತು ಮುಖ್ಯ ದ್ವಾರದಷ್ಟೇ ಮೆಟ್ಟಿಲುಗಳ ವಿನ್ಯಾಸಕ್ಕೂ ವಾಸ್ತು ಶಾಸ್ತ್ರದಲ್ಲಿ ವಿಶೇಷ ಗಮನ ನೀಡಲಾಗುತ್ತದೆ. ವಾಸ್ತು ನಂಬಿಕೆಗಳ ಪ್ರಕಾರ, ಮನೆಯಲ್ಲಿರುವ ಒಟ್ಟು ಮೆಟ್ಟಿಲುಗಳ ಸಂಖ್ಯೆಯನ್ನು 3 ರಿಂದ ಭಾಗಿಸಿದಾಗ 2 ಶೇಷ ಉಳಿಯಬೇಕು. ಉದಾಹರಣೆಗೆ: ಮೆಟ್ಟಿಲುಗಳ ಸಂಖ್ಯೆಯನ್ನು 3 ರಿಂದ ಭಾಗಿಸಿದಾಗ (N÷3), ಶೇಷವು 2 ಆಗಿರಬೇಕು. ಈ ಸೂತ್ರದ ಪ್ರಕಾರ 5, 8, 11, 14, 17, 20, 23, 26 ಮತ್ತು 29 ರಂತಹ ಸಂಖ್ಯೆಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. (ಉದಾಹರಣೆಗೆ: 8 ಅನ್ನು 3 ರಿಂದ ಭಾಗಿಸಿದಾಗ 2 ಶೇಷ ಉಳಿಯುತ್ತದೆ).

ಎಣಿಕೆ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಷಯ:

ಮೆಟ್ಟಿಲುಗಳ ಸಂಖ್ಯೆಯನ್ನು ಎಣಿಸುವಾಗ ಕೇವಲ ಕಣ್ಣಿಗೆ ಕಾಣುವ ಸಮತಲ ಮೆಟ್ಟಿಲುಗಳನ್ನು (Treads) ಮಾತ್ರವಲ್ಲದೆ, ಪ್ರತಿಯೊಂದು ಹೆಜ್ಜೆಯ ಎತ್ತರವನ್ನೂ (Riser) ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಮೇಲಿನ ಮಹಡಿಯ ತಲುಪುವ ಕೊನೆಯ ಮೆಟ್ಟಿಲು ಸಹ ಈ ವಾಸ್ತು ಲೆಕ್ಕಾಚಾರದಲ್ಲಿ ಸೇರಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ, 10 ಅಥವಾ 20 ರಂತಹ ಶೂನ್ಯದಲ್ಲಿ ಕೊನೆಗೊಳ್ಳುವ ಸಂಖ್ಯೆಗಳನ್ನು ವಾಸ್ತು ಪ್ರಕಾರ ಅಷ್ಟಾಗಿ ಶುಭವೆಂದು ಪರಿಗಣಿಸುವುದಿಲ್ಲ.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?

ದಿಕ್ಕು ಮತ್ತು ವಿನ್ಯಾಸದ ಪ್ರಾಮುಖ್ಯತೆ:

ವಾಸ್ತು ಶಾಸ್ತ್ರದ ಪ್ರಕಾರ ಕೇವಲ ಮೆಟ್ಟಿಲುಗಳ ಸಂಖ್ಯೆ ಮಾತ್ರವಲ್ಲದೆ, ಅವುಗಳನ್ನು ಮನೆಯ ಯಾವ ಭಾಗದಲ್ಲಿ ನಿರ್ಮಿಸಲಾಗಿದೆ ಎಂಬುದು ಸಹ ಮುಖ್ಯವಾಗುತ್ತದೆ. ಮೆಟ್ಟಿಲುಗಳು ಮೇಲಕ್ಕೆ ಹೋಗುವಾಗ ಯಾವ ದಿಕ್ಕಿನಲ್ಲಿ ತಿರುಗುತ್ತವೆ (ಸಾಮಾನ್ಯವಾಗಿ ಗಡಿಯಾರದ ಮುಳ್ಳಿನ ದಿಕ್ಕು ಅಥವಾ Clockwise), ಮತ್ತು ಅವುಗಳ ಎತ್ತರ ಹಾಗೂ ಅಗಲ ಸರಿಯಾದ ಪ್ರಮಾಣದಲ್ಲಿದೆಯೇ ಎಂಬುದು ಸಹ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರಲು ಪ್ರಮುಖವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More