ದೈನಂದಿನ ಜೀವನದಲ್ಲಿ ನಾವು ಬಹಳಷ್ಟು ಅಭ್ಯಾಸವನ್ನು ರೂಢಿಸಿಕೊಂಡಿರುತ್ತೇವೆ, ಅದರಲ್ಲಿ ಕೆಲವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಂತದ್ದಾಗಿರುತ್ತದೆ. ಹಾಗಾಗಿ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಬಗ್ಗೆ ಸ್ವಲ್ಪ ಅರಿತುಕೊಂಡು ಅದನ್ನು ಅನುಸರಿಸಿದಲ್ಲಿ ಜೀವನದಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು. ಸ್ವಚ್ಛತೆಯ ಜೊತೆಗೆ ಸಕಾರಾತ್ಮಕ ಶಕ್ತಿ ನೆಲೆಸಿರುವ ಮನೆಗಳಲ್ಲಿ ತಾಯಿ ಲಕ್ಷ್ಮೀ ದೇವಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ಹಾಗಾಗಿ ಕೆಲವು ನಿಯಮಗಳನ್ನು ರೂಢಿಸಿಕೊಂಡಲ್ಲಿ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂಪತ್ತು ಎಲ್ಲವೂ ತಾನಾಗಿಯೇ ಬರುತ್ತವೆ.
ಇದರಂತೆ ಮನುಷ್ಯನಿಗೆ ನಿದ್ದೆ ತುಂಬಾ ಮುಖ್ಯವಾದದ್ದು ಹಾಗಾಗಿ ವಾಸ್ತು ಶಾಸ್ತ್ರದಲ್ಲಿ, ಮಲಗುವ ಕೋಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ. ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಹಾಸಿಗೆಯ ಕೆಳಗೆ ಮತ್ತು ಪಕ್ಕದಲ್ಲಿ ಕೆಲವು ವಸ್ತುಗಳನ್ನು ಇಡಬಾರದು ಎನ್ನಲಾಗುತ್ತದೆ. ಏಕೆಂದರೆ ಇದು ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಜೊತೆಗೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮನೆಯಲ್ಲಿರುವವರ ಪ್ರಗತಿಗೂ ಅಡ್ಡಿಯಾಗುತ್ತದೆ. ಹಾಗಾದರೆ ಹಾಸಿಗೆಯ ಕೆಳಗೆ ಅಥವಾ ಪಕ್ಕದಲ್ಲಿ ಯಾವ ವಸ್ತುಗಳನ್ನು ಇಡಬಾರದು ಮತ್ತು ಏಕೆ? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಲಗುವ ಕೋಣೆಯಲ್ಲಿ ಹಾಸಿಗೆಯ ಕೆಳಗೆ ಅಥವಾ ಪಕ್ಕದಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ. ಇವು ವಾಸ್ತು ದೋಷವು ಹೌದು. ಅದಲ್ಲದೆ ಇದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ವ್ಯಕ್ತಿಯ ನಿದ್ರಾ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೊಬೈಲ್ ವಿಕಿರಣದ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಲು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಅಥವಾ ಏರ್ ಪ್ಲೇನ್ ಮೋಡ್ ನಲ್ಲಿ ಇರಿಸಿ. ಅದೂ ಸಾಧ್ಯವಾಗದಿದ್ದರೆ ಅದನ್ನು ನಿಮ್ಮ ಮಲಗುವ ಸ್ಥಳದಿಂದ 7 ಅಡಿಗಿಂತಲೂ ಹೆಚ್ಚು ದೂರದಲ್ಲಿ ಇಡಿ.
ಹೆಚ್ಚಿನ ಮನೆಗಳಲ್ಲಿ, ಜನರು ತಮ್ಮ ಹೆಚ್ಚುವರಿ ಸಾಮಾನುಗಳನ್ನು ಹಾಸಿಗೆಯ ಕೆಳಗೆ ಇಡುತ್ತಾರೆ. ಉದಾಹರಣೆಗೆ ಬಟ್ಟೆಗಳ ಕಟ್ಟು, ಬಳಸದ ಪಾತ್ರೆಗಳು, ಮನೆಯ ಬಳಕೆಗೆ ಬೇಕಾದನಂತಹ ಸಾಮಾನುಗಳನ್ನು ಇಡುವುದು ಹೀಗೆ ನಾನಾ ರೀತಿಯಲ್ಲಿ, ಮಂಚದ ಕೆಳಗಿನ ಜಾಗವನ್ನು ಬಳಸಿಕೊಳ್ಳುತ್ತಾರೆ. ಪೇಟೆ ಕಡೆಗಳಲ್ಲಿ ಜಾಗದ ಕೊರತೆ ಇರುವುದರಿಂದ, ಮಂಚದ ಕೆಳಗಿನ ಭಾಗವನ್ನು ಬಳಸಿಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರ ಇದನ್ನು ತಪ್ಪಿಸಬೇಕು ಏಕೆಂದರೆ ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮನೆಯ ಸಂತೋಷ ಮತ್ತು ಶಾಂತಿಯನ್ನು ಹಾಳು ಮಾಡುತ್ತದೆ. ಸುಖ ನಿದ್ರೆ ಮಾಡಲು ಮಂಚದ ಕೆಳಗೆ ಸರಾಗವಾಗಿ ಗಾಳಿಯಾಡಬೇಕು ಎನ್ನುತ್ತಾರೆ. ಈ ಕಾರಣದಿಂದಲೂ ಕೂಡ ಹಾಸಿಗೆಯ ಕೆಳಗೆ ಯಾವುದೇ ರೀತಿಯ ವಸ್ತುಗಳನ್ನು ಇಡಬಾರದು ಎನ್ನುತ್ತಾರೆ.
ಚಿನ್ನ- ಬೆಳ್ಳಿ ಅಥವಾ ಇತರ ಲೋಹದ ವಸ್ತುಗಳನ್ನು ಸಹ ಹಾಸಿಗೆಯ ಕೆಳಗೆ ಅಥವಾ ಪಕ್ಕದಲ್ಲಿ ಇಡಬಾರದು. ಕೆಲವರಿಗೆ ಮಲಗುವ ಮೊದಲು ತೊಟ್ಟುಕೊಂಡ ಎಲ್ಲಾ ಆಭರಣಗಳನ್ನು ತೆಗೆದಿಟ್ಟು ಮಲುಗುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಅಲ್ಲದೆ, ಯಾವುದೇ ರೀತಿಯ ಗಾಜಿನ ವಸ್ತು, ಎಣ್ಣೆ ಇತ್ಯಾದಿ ವಸ್ತುಗಳನ್ನು ಇಡುವುದನ್ನು ಸಹ ತಪ್ಪಿಸಬೇಕು. ವಾಸ್ತು ಪ್ರಕಾರ ಇದನ್ನು ವಿವಿಧ ರೀತಿಯಲ್ಲಿ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಈ ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ!
ದಿಂಬಿನ ಕೆಳಗೆ ನಿಮ್ಮ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು, ಪತ್ರಿಕೆಗಳು ಅಥವಾ ನಿಯತಕಾಲಿಕೆಗಳನ್ನು ಇಡಬಾರದು ಎಂದು ಹೇಳಲಾಗುತ್ತದೆ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಹಾಗಾಗಿ ಈ ಅಭ್ಯಾಸವಿದ್ದಲ್ಲಿ ಅದನ್ನು ಬದಲಾಯಿಸಿಕೊಳ್ಳಿ.
ಬೂಟು, ಚಪ್ಪಲಿಗಳನ್ನು ಮಲುಗುವ ಕೋಣೆಗೆ ತರಬೇಡಿ. ಇದನ್ನು ನಿಮ್ಮ ತಲೆಯ ಬಳಿ ಅಥವಾ ಹಾಸಿಗೆಯ ಕೆಳಗೆ ಎಂದಿಗೂ ಇಡಬಾರದು. ಇದು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಹೆಚ್ಚಿನ ಜನರು ತಮ್ಮ ಹಾಸಿಗೆಗಳ ಹಿಂದೆ ದೊಡ್ಡ ವರ್ಣಚಿತ್ರಗಳನ್ನು ನೇತುಹಾಕುತ್ತಾರೆ. ಅತ್ಯಂತ ಗಾಢ ಬಣ್ಣದ ಫೋಟೋಗಳು ನಿದ್ರೆಗೆ ತೊಂದರೆ ಕೊಡುತ್ತದೆ. ನಿಮ್ಮ ಮನಸ್ಥಿತಿ ಮತ್ತು ಉತ್ಸಾಹವನ್ನು ಕುಗ್ಗಿಸುತ್ತದೆ. ಹಾಗಾಗಿ ನಿಮ್ಮ ಹಾಸಿಗೆಯ ಹಿಂದೆ ಅಥವಾ ಮುಂದೆ ಯಾವುದೇ ರೀತಿಯ ಗಾಢ ಬಣ್ಣದ ವರ್ಣಚಿತ್ರವನ್ನು ನೇತುಹಾಕದಿರುವುದು ಉತ್ತಮ.
ಇದೆಲ್ಲದರ ಜೊತೆಗೆ ತೊಳೆಯದ ಬಟ್ಟೆ, ಪಾತ್ರೆಗಳನ್ನು ಕೂಡ ಮಲಗುವಾಗ ಅಕ್ಕ ಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಡಿ ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ