Vastu Tips: ಈ ವಾಸ್ತು ಸಲಹೆ ನಿಮಗೆ ಹಣದ ಕೊರತೆ ಬರದಂತೆ ತಡೆಯುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2024 | 12:35 PM

ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆಯಲ್ಲಿ ವಾಸ್ತುವಿಗೆ ಸಂಬಂಧಿಸಿದ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಆ ವಸ್ತುಗಳು ನಮ್ಮ ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಏಕೆಂದರೆ ವಾಸ್ತು ಪ್ರಕಾರ ವಸ್ತುಗಳನ್ನು ಇಡುವುದು ಮನೆಯಲ್ಲಿ ಶಾಂತಿ, ಸಂತೋಷ, ಸಂಪತ್ತು ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಮತ್ತು ಜೀವನದಲ್ಲಿ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.

Vastu Tips: ಈ ವಾಸ್ತು ಸಲಹೆ ನಿಮಗೆ ಹಣದ ಕೊರತೆ ಬರದಂತೆ ತಡೆಯುತ್ತೆ
ಸಾಂದರ್ಭಿಕ ಚಿತ್ರ
Follow us on

ವಾಸ್ತು ನಮ್ಮ ಜೀವನದ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ವಾಸ್ತು ಪ್ರಕಾರ, ಮನೆಯಲ್ಲಿ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡುವ ಮೂಲಕ, ಸಕಾರಾತ್ಮಕತೆಯನ್ನು ಹೆಚ್ಚಿಸಿ, ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇದೆಲ್ಲದರ ಜೊತೆಗೆ ಇದು ಮನೆಯ ವಾತಾವರಣವನ್ನು ಸಂತೋಷವಾಗಿಡಲು ಮತ್ತು ಸಂಪತ್ತು, ಸಮೃದ್ಧಿಯನ್ನು ತರಲು ಸಹಕಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಪ್ರಕಾರವೇ ಮನೆಯ ಅಲಂಕಾರ ಮಾಡುತ್ತಾರೆ, ಆದರೆ ಅದಕ್ಕೆ ಬಳಸಿದ ವಸ್ತುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇಟ್ಟರೆ, ಅದು ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಮಾನಸಿಕ ಶಾಂತಿ ದೊರಕಬಹುದು. ಹಾಗಾಗಿ ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಾಸ್ತು ದೋಷದಿಂದ ಸುಲಭ ಪರಿಹಾರ ಕಂಡುಕೊಳ್ಳಿ.

ವಾಸ್ತು ಶಾಸ್ತ್ರದ ಕೆಲವು ಸುಲಭ ಪರಿಹಾರಗಳು ತಿಳಿದಿದೆಯೇ?

-ಮನೆಯ ಮುಖ್ಯ ಬಾಗಿಲು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಕಸವನ್ನು ಎಂದಿಗೂ ಮನೆಯ ಮುಖ್ಯ ದ್ವಾರದ ಬಳಿ ಇಡಬೇಡಿ. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಇಂತಹ ಕೆಲಸಗಳು ನಿಮಗೆ ಲಾಭಕ್ಕಿಂತ ನಷ್ಟ ಉಂಟು ಮಾಡುತ್ತದೆ.

-ಮನೆಯ ಮೆಟ್ಟಿಲುಗಳ ಕೆಳ ಭಾಗದಲ್ಲಿ ಅಥವಾ ನೀವು ಮಲಗುವ ಕೋಣೆಯಲ್ಲಿ ದೇವರನ್ನು ಇಡಬಾರದು ಅಥವಾ ದೇವರ ಮನೆಯನ್ನು ನಿರ್ಮಿಸಬಾರದು.

-ಕೆಲಸದಲ್ಲಿ ಆರ್ಥಿಕ ಲಾಭ ಪಡೆಯಲು ಗಣೇಶನ ವಿಗ್ರಹ ಅಥವಾ ನವಿಲು ಗರಿಗಳನ್ನು ಮನೆಯ ಮುಖ್ಯ ಬಾಗಿಲು ಅಥವಾ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ.

-ಹಿತವಾದ ಸಂಗೀತವು ಮನೆಯಲ್ಲಿ ಶಾಂತಿ, ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ, ಆದ್ದರಿಂದ ಮನೆಯ ಮುಖ್ಯ ಬಾಗಿಲಿನಲ್ಲಿ ವಿಂಡ್ ಚೈನ್ ಅಥವಾ ಸಣ್ಣ ಸಣ್ಣ ಗಂಟೆಗಳನ್ನು ಕೂಡ ಇಡಬಹುದು.

-ಮನೆಯ ವಾತಾವರಣ ಶುದ್ಧವಾಗಿರಲು ಪ್ರತಿದಿನ ತಪ್ಪದೆಯೇ ದೀಪ ಅಥವಾ ಕರ್ಪೂರವನ್ನು ಬೆಳಗಿಸಿ. ಅಥವಾ ನೀವು ಧೂಪದ್ರವ್ಯದ ಕಡ್ಡಿಗಳನ್ನು ಕೂಡ ಬೆಳಗಿಸಬಹುದು, ಇವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸಂತೋಷ ಮತ್ತು ಶಾಂತಿಯ ವಾತಾವರಣ ಇರುವಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದರ ಹಿಂದಿರುವ ಕಾರಣವೇನು? ಅದರ ಪ್ರಯೋಜನಗಳೇನು?

-ಇನ್ನು ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸಲು ನೀವು ದಾಲ್ಚಿನ್ನಿ, ಬೇವಿನ ಎಲೆಗಳನ್ನು ಸುಡಬಹುದು. ಇದರ ಪರಿಮಳ ಮನೆ ವಾತಾವರಣವನ್ನು ಸರಿಯಾಗಿ ಇಡುವುದಲ್ಲದೆ, ಮನೆ ಮತ್ತು ನಮ್ಮ ಮನಸ್ಸುಗಳಲ್ಲಿ ನಕಾರಾತ್ಮಕ ಶಕ್ತಿ ಬರದಂತೆ ತಡೆಯುತ್ತದೆ.

-ನಿಮ್ಮ ಮನೆಯಲ್ಲಿ ದಿನನಿತ್ಯ ಶ್ಲೋಕ, ಮಂತ್ರ, ಭಜನೆಗಳನ್ನು ಹೇಳಿ ಬಳಿಕ ದೇವರಿಗೆ ಆರತಿ ಮಾಡಿ ಅಥವಾ ಭಜನೆಗಳ ಆಡಿಯೋವನ್ನು ಹಾಕಿಡಿ. ಪ್ರತಿನಿತ್ಯವೂ ನಿಮಗೆ ಇಷ್ಟವಾಗುವ ಭಕ್ತಿ ಗೀತೆಗಳನ್ನು ಕೇಳಿ ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ.

-ಮುರಿದ ಪಾತ್ರೆಗಳನ್ನು ಮನೆಯಲ್ಲಿ ಎಂದಿಗೂ ಇಡಬೇಡಿ ಅಥವಾ ಅವುಗಳನ್ನು ಬಳಸಬೇಡಿ. ಯಾಕೆಂದರೆ ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು.

-ಮನೆಯಲ್ಲಿ ಅನೇಕ ವಸ್ತುಗಳಿದ್ದು, ಅವುಗಳನ್ನು ನೀವು ಬಹಳ ಸಮಯದಿಂದ ಬಳಸುತ್ತಿಲ್ಲ ಎಂದಾದಲ್ಲಿ ಅಂತಹ ವಸ್ತುಗಳು ಮನೆಯ ಪರಿಸರವನ್ನು ಹಾಳು ಮಾಡುತ್ತವೆ, ಆದ್ದರಿಂದ ದೀರ್ಘ ಕಾಲದವರೆಗೆ ಬಳಸದ ಎಲ್ಲಾ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಅಂತಹ ವಸ್ತುಗಳನ್ನು ಎಸೆಯುವ ಬದಲು ಅಗತ್ಯ ಇರುವವರಿಗೆ ನೀಡಿ.

-ವಾಸ್ತು ಪ್ರಕಾರ, ಮನೆಯ ಮುಖ್ಯ ಬಾಗಿಲನ್ನು ಎಂದಿಗೂ ಕಪ್ಪು ಬಣ್ಣದಲ್ಲಿ ಚಿತ್ರಿಸಬಾರದು. ಕಪ್ಪು ಬಣ್ಣಕ್ಕೆ ಬದಲಾಗಿ, ನೀವು ಗಾಢ ಕಂದು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

-ವಾಸ್ತು ಪ್ರಕಾರ, ಹರಿಯುವ ಜಲಪಾತ ಅಥವಾ ನದಿಯ ಚಿತ್ರ ಅಥವಾ ವರ್ಣಚಿತ್ರವನ್ನು ಮನೆಯಲ್ಲಿ ಇರಿಸಿಕೊಳ್ಳಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಹಾಗೂ ಆರ್ಥಿಕ ಲಾಭ ತರಲು ಸಹಕಾರಿಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ