ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದರ ಹಿಂದಿರುವ ಕಾರಣವೇನು? ಅದರ ಪ್ರಯೋಜನಗಳೇನು?

ಹಿಂದೂ ಧರ್ಮದಲ್ಲಿ, ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದನ್ನು ನೀವು ನೋಡಿರಬಹುದು, ಆದರೆ ದಾರವನ್ನು ಏಕೆ ಕಟ್ಟುತ್ತಾರೆಂದು ನಿಮಗೆ ತಿಳಿದಿದೆಯೇ? ಆಲದ ಮರಕ್ಕೆ ದಾರವನ್ನು ಕಟ್ಟುವ ಪ್ರಾಮುಖ್ಯತೆ ಏನು ಮತ್ತು ಅದರ ಪ್ರಯೋಜನಗಳೇನು? ಈ ವಿಷಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದರ ಹಿಂದಿರುವ ಕಾರಣವೇನು? ಅದರ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2024 | 10:46 AM

ಹಿಂದೂ ಧರ್ಮದಲ್ಲಿ, ಅನೇಕ ಮರ ಮತ್ತು ಗಿಡಗಳನ್ನು ದೇವರಂತೆಯೇ ಪೂಜಿಸಲಾಗುತ್ತದೆ. ಇದರಲ್ಲಿ ಆಲದ ಮರವೂ ಸೇರಿದೆ. ಏಕೆಂದರೆ ಈ ಮರದ ಪೂಜೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ ಮತ್ತು ಸಸ್ಯಗಳನ್ನು ಪೂಜಿಸುವುದರಿಂದ ಮನೆಯ ವಾಸ್ತು ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಮನೆ ಮಾಡಲು ಕೂಡ ಇದು ಸಹಕಾರಿಯಾಗಿದೆ. ಇನ್ನು ಪೂಜೆಯ ಹೊರತಾಗಿ ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದನ್ನು ನೀವು ನೋಡಿರಬಹುದು. ಆದರೆ ದಾರವನ್ನು ಏಕೆ ಕಟ್ಟುತ್ತಾರೆಂದು ನಿಮಗೆ ತಿಳಿದಿದೆಯೇ? ಅದರ ಪ್ರಾಮುಖ್ಯತೆ ಏನು ಮತ್ತು ಅದರಿಂದ ಜನರು ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಂಡಿತ್ ರಾಜೇಂದ್ರ ತಿವಾರಿ ಹೇಳುವ ಪ್ರಕಾರ ಬ್ರಹ್ಮ, ಶ್ರೀ ಹರಿ ಮತ್ತು ಶಿವ ಆಲದ ಮರದಲ್ಲಿ ವಾಸಿಸುತ್ತಾರೆ. ಆಲದ ಮರವು ಇತರ ಎಲ್ಲಾ ಮರಗಳಿಗಿಂತ ಹೆಚ್ಚಿನ ಜೀವಿತಾವಧಿಯನ್ನು ಹೊಂದಿದೆ, ಆದ್ದರಿಂದ ಇದನ್ನು ‘ಅಕ್ಷಯವೃಕ್ಷ’ ಎಂದೂ ಕರೆಯಲಾಗುತ್ತದೆ. ಆಲದ ಮರವು ದೈವಿಕ ಶಕ್ತಿಯನ್ನು ಒಳಗೊಂಡಿರುವುದರಿಂದ ಅದರ ಪೂಜೆಗೆ ವಿಶೇಷ ಮಹತ್ವವಿದೆ. ಅದಲ್ಲದೆ ಹಿಂದೂ ಧರ್ಮದಲ್ಲಿ, ಆಲದ ಮರವನ್ನು ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಅನುಗ್ರಹ ಪಡೆಯಲು ಪೂಜೆ ಮಾಡಲಾಗುತ್ತದೆ. ಜೊತೆಗೆ ಮಹಿಳೆಯರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಆಲದ ಮರಕ್ಕೆ ದಾರವನ್ನು ಕಟ್ಟುತ್ತಾರೆ. ಇದರಿಂದ ದೇವತೆಗಳ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಆಲದ ಮರಕ್ಕೆ ದಾರವನ್ನು ಕಟ್ಟುವುದರ ಪ್ರಯೋಜನಗಳೇನು?

ಆಲದ ಮರವನ್ನು ಪೂಜಿಸಿದ ನಂತರ, ಅದಕ್ಕೆ ದಾರವನ್ನು ಕಟ್ಟುವುದರಿಂದ ಮಹಿಳೆಯರಿಗೆ ವಿವಾಹ ಭಾಗ್ಯ ಪ್ರಾಪ್ತವಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ರೀತಿ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಕಾಪಾಡಿಕೊಳ್ಳಬಹುದಾಗಿದೆ. ಅಲ್ಲದೆ, ಇದು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಬರದಂತೆ ಕಾಪಾಡುತ್ತದೆ. ಜೊತೆಗೆ, ಆಲದ ಮರಕ್ಕೆ ದಾರವನ್ನು ಕಟ್ಟುವ ಮೂಲಕ, ಅಕಾಲಿಕ ಮರಣವನ್ನು ಸಹ ತಪ್ಪಿಸಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ದಿನಗಳಿಗೆ ಅನುಗುಣವಾಗಿ ವಸ್ತು ದಾನ ಮಾಡಿ, ಶುಭ ಫಲಿತಾಂಶ ಖಂಡಿತ

ಆಲದ ಮರದ ಮಹತ್ವವೇನು ಗೊತ್ತಾ?

ಹಿಂದೂ ಪುರಾಣಗಳ ಪ್ರಕಾರ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಆಲದ ಮರದಲ್ಲಿ ವಾಸಿಸುತ್ತಾರೆ. ಮರದ ಬೇರುಗಳು ಬ್ರಹ್ಮನನ್ನು ಪ್ರತಿನಿಧಿಸುತ್ತವೆ, ಆಲದ ಮರದ ಕಾಂಡವು ವಿಷ್ಣುವನ್ನು ಪ್ರತಿನಿಧಿಸುತ್ತದೆ ಮತ್ತು ಶಿವನು ಆಲದ ಮರದ ಮೇಲಿನ ಭಾಗವನ್ನು ಪ್ರತಿನಿಧಿಸುತ್ತಾನೆ ಹಾಗೂ ಈ ಇಡೀ ಮರವನ್ನು ಸಾವಿತ್ರಿ ಎಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಮರವನ್ನು ಪೂಜಿಸುವ ಮೂಲಕ, ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ವ್ಯಕ್ತಿಗೆ ಜೀವನದ ತೊಂದರೆಗಳಿಂದ ಪರಿಹಾರ ಸಿಗುತ್ತದೆ ಹಾಗೂ ಶಾಂತಿ, ಸುಖ, ಸಂಪತ್ತು ಎಲ್ಲವೂ ಪ್ರಾಪ್ತವಾಗುತ್ತದೆ. ಹಾಗಾಗಿ ಕಷ್ಟ ಬಂದವರು ಆಲದ ಮರಕ್ಕೆ ಪೂಜೆ ನೀಡುವುದರಿಂದ ಅದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್