ದಿನಗಳಿಗೆ ಅನುಗುಣವಾಗಿ ವಸ್ತು ದಾನ ಮಾಡಿ, ಶುಭ ಫಲಿತಾಂಶ ಖಂಡಿತ
ದಾನ ಮಾಡುವ ಸಂಪ್ರದಾಯವು ಹಿಂದೂ ಧರ್ಮದಲ್ಲಿ ಬಹಳ ಹಳೆಯದು. ಧರ್ಮ ಗ್ರಂಥಗಳ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಗಳಿಕೆಯ ಸ್ವಲ್ಪ ಭಾಗವನ್ನು ದಾನ ಮಾಡಬೇಕು ಏಕೆಂದರೆ ಇದನ್ನು ಅತ್ಯಂತ ಸದ್ಗುಣದ ಕಾರ್ಯವೆಂದು ಹೇಳಲಾಗುತ್ತದೆ. ಹಾಗಾದರೆ ದಾನದ ಮಹತ್ವವೇನು? ಯಾವ ವಾರ ಎಂತಹ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ವಾರದ ಏಳು ದಿನಗಳನ್ನು ಒಂದೊಂದು ಗ್ರಹ ಅಥವಾ ದೇವತೆಗೆ ಅರ್ಪಿಸಲಾಗಿದೆ. ಹಾಗಾಗಿ ಪ್ರತಿ ದಿನವೂ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅಲ್ಲದೆ ಆ ದಿನಗಳಲ್ಲಿ ದಾನ ಮತ್ತು ಉಪವಾಸವು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ. ಇದೆಲ್ಲದರ ಹೊರತಾಗಿ ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಗೌರವ ನೀಡಲಾಗಿದೆ. ಏಕೆಂದರೆ ಇದು ಅನೇಕ ರೀತಿಯಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿ ವ್ಯಕ್ತಿಯು ಆದಷ್ಟು ದಾನ ಮಾಡಬೇಕು ಏಕೆಂದರೆ ಮರಣದ ಸಮಯದಲ್ಲಿ ಯಾವ ವಸ್ತುಗಳನ್ನು ಕೂಡ ತೆಗೆದುಕೊಂಡು ಹೋಗುವುದಿಲ್ಲ. ದುಡಿದ ಹಣವನ್ನೆಲ್ಲಾ ಇಲ್ಲಿಯೇ ಬಿಟ್ಟು ಹೋಗಬೇಕು. ಹಾಗಾಗಿ ಒಳ್ಳೆಯ ಕಾರ್ಯಗಳು ಮಾತ್ರ ವ್ಯಕ್ತಿಯ ಜೊತೆಯಲ್ಲಿ ಸಾಗುತ್ತವೆ. ಧರ್ಮ ಗ್ರಂಥಗಳ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಗಳಿಕೆಯ ಸ್ವಲ್ಪ ಭಾಗವನ್ನು ದಾನ ಮಾಡಬೇಕು ಏಕೆಂದರೆ ಇದನ್ನು ಅತ್ಯಂತ ಸದ್ಗುಣದ ಕಾರ್ಯವೆಂದು ಹೇಳಲಾಗುತ್ತದೆ. ಹಾಗಾದರೆ ದಾನದ ಮಹತ್ವವೇನು? ಯಾವ ವಾರ ಎಂತಹ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದಾನದ ಮಹತ್ವವನ್ನು ಧರ್ಮ ಗ್ರಂಥಗಳು ಮತ್ತು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ಆದರೆ ದಾನ ಮಾಡಲು ಕೆಲವು ನಿಯಮಗಳಿವೆ. ಆದ್ದರಿಂದ, ಯಾವುದೇ ನಿರ್ದಿಷ್ಟ ದಿನದಂದು ತಿಳಿದೋ ತಿಳಿಯದೆಯೋ ಏನನ್ನಾದರೂ ದಾನ ಮಾಡುವುದಕ್ಕಿಂತ, ಉತ್ತಮ ಫಲಿತಾಂಶಗಳ ಪಡೆಯಲು ಈ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡು ಬಳಿಕ ದಾನ ಮಾಡಬಹುದಾಗಿದೆ. ಧರ್ಮ ಗ್ರಂಥಗಳಲ್ಲಿ, ಉಪ್ಪು, ಸಕ್ಕರೆ, ಬಟ್ಟೆಗಳಿಂದ ಹಿಡಿದು ಆಭರಣಗಳವರೆಗೆ ವಿವಿಧ ವಸ್ತುಗಳನ್ನು ದಾನ ಮಾಡಲು ವಾರದ ದಿನಗಳನ್ನು ವಿಂಗಡಿಸಲಾಗಿದೆ. ಹಾಗಾಗಿ ನೀವು ಅದಕ್ಕೆ ಅನುಗುಣವಾಗಿ ದಾನ ಮಾಡಬೇಕು. ಯಾವ ದಿನದಂದು ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಭಾನುವಾರ ಏನು ದಾನ ಮಾಡಬೇಕು?
ಭಾನುವಾರ ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. ಅಲ್ಲದೆ ಸೂರ್ಯ ದೇವರನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಈ ದಿನ ನೀವು ಗೋಧಿ, ಕೆಂಪು ಹೂವುಗಳು, ಬೆಲ್ಲ ಮುಂತಾದ ವಸ್ತುಗಳನ್ನು ದಾನ ಮಾಡಬಹುದು. ಭಾನುವಾರ ಈ ವಸ್ತುಗಳನ್ನು ದಾನ ಮಾಡುವ ಮೂಲಕ ನೀವು ಖ್ಯಾತಿ, ಗೌರವ ಎಲ್ಲವನ್ನೂ ಪಡೆಯುತ್ತೀರಿ.
ಸೋಮವಾರ ಏನನ್ನು ದಾನ ಮಾಡಬೇಕು?
ಹಿಂದೂ ಧರ್ಮದ ಪ್ರಕಾರ, ಸೋಮವಾರವು ಶಿವ ಮತ್ತು ಚಂದ್ರ ದೇವನನ್ನು ಪೂಜಿಸಲಾಗುತ್ತದೆ. ಈ ದಿನ ನೀವು ಅಕ್ಕಿ, ಬಿಳಿ ಬಟ್ಟೆ, ಬಿಳಿ ಹೂವುಗಳು, ಸಕ್ಕರೆ ಮತ್ತು ತೆಂಗಿನಕಾಯಿ ಮುಂತಾದ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಇದನ್ನು ದಾನ ಮಾಡುವ ಮೂಲಕ ವ್ಯಕ್ತಿಯು ಶಿವನ ಆಶೀರ್ವಾದವನ್ನು ಪಡೆಯುತ್ತಾನೆ ಮತ್ತು ಜಾತಕದಲ್ಲಿ ಚಂದ್ರ ಬಲಶಾಲಿಯಾಗುತ್ತಾನೆ.
ಮಂಗಳವಾರ ಏನನ್ನು ದಾನ ಮಾಡಬೇಕು?
ಹನುಮಂತನ ಆರಾಧನೆಗೆ ಮಂಗಳವಾರ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಮಾಡಿದ ದಾನವು ಮಂಗಳಕರ ಎನ್ನಲಾಗುತ್ತದೆ. ಕೆಂಪು ಹೂವುಗಳು, ಶ್ರೀಗಂಧ, ಕೆಂಪು ಬಟ್ಟೆಗಳು, ಬಾದಾಮಿ ಮತ್ತು ತಾಮ್ರದ ಪಾತ್ರೆಗಳನ್ನು ಮಂಗಳವಾರ ದಾನ ಮಾಡಬೇಕು. ಈ ವಸ್ತುಗಳನ್ನು ದಾನ ಮಾಡುವ ಮೂಲಕ, ನೀವು ಹನುಮಂತನ ಆಶೀರ್ವಾದ ಪಡೆಯಬಹುದು. ಜೊತೆಗೆ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತವೆ.
ಬುಧವಾರ ಯಾವ ವಸ್ತುಗಳನ್ನು ದಾನ ಮಾಡಬೇಕು?
ಭಗವಾನ್ ಗಣೇಶನನ್ನು ಬುಧವಾರ ಪೂಜಿಸಲಾಗುತ್ತದೆ ಮತ್ತು ಈ ದಿನವು ಬುಧ ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ ಹಸಿರು ಬಣ್ಣದ ವಸ್ತುಗಳನ್ನು ಬುಧವಾರ ದಾನ ಮಾಡಬೇಕು. ಅಂದರೆ ಹೆಸರು ಬೇಳೆ, ಹಸಿರು ತರಕಾರಿಗಳು, ಹಸಿರು ಬಳೆಗಳು ಅಥವಾ ಹಸಿರು ಬಣ್ಣದ ಬಟ್ಟೆ ಇತ್ಯಾದಿಗಳನ್ನು ಬಡವರು ಮತ್ತು ಅಗತ್ಯವಿರುವವರಿಗೆ ದಾನ ಮಾಡಿ.
ಗುರುವಾರ ಏನನ್ನು ದಾನ ಮಾಡಬೇಕು?
ಗುರುವಾರ ವಿಷ್ಣು ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಸಂಪತ್ತು, ಸಮೃದ್ಧಿ ಮತ್ತು ಖ್ಯಾತಿಯನ್ನು ತರುತ್ತದೆ. ಬೇಳೆ ಕಾಳುಗಳು, ಹಳದಿ ಬಟ್ಟೆಗಳು, ಹಳದಿ ಹೂವುಗಳು, ಹಳದಿ ಬಣ್ಣದ ಹಣ್ಣುಗಳು, ಬೆಲ್ಲ ಮತ್ತು ಚಿನ್ನದ ವಸ್ತುಗಳನ್ನು ಗುರುವಾರ ದಾನ ಮಾಡಬೇಕು. ಈ ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಗುರು ಗ್ರಹ ಬಲಗೊಳ್ಳುತ್ತದೆ ಮತ್ತು ವಿಷ್ಣುವಿನ ಕೃಪೆ ಸದಾ ನಿಮ್ಮ ಜೊತೆಗಿರುತ್ತದೆ.
ಇದನ್ನೂ ಓದಿ: ಶ್ರವಣ ಕುಮಾರನ ಪೋಷಕ ಪ್ರೇಮವೇ ನಮ್ಮ ಬದುಕಿಗೆ ಸ್ಫೂರ್ತಿ
ಶುಕ್ರವಾರ ಏನು ದಾನ ಮಾಡಬೇಕು?
ಧರ್ಮ ಗ್ರಂಥಗಳಲ್ಲಿ, ಶುಕ್ರವಾರದಂದು ಲಕ್ಷ್ಮೀ ಮತ್ತು ಶುಕ್ರ ದೇವನನ್ನು ಆರಾಧಿಸಲಾಗುತ್ತದೆ. ಶುಕ್ರವಾರ ಬಿಳಿ ವಸ್ತುಗಳನ್ನು ದಾನ ಮಾಡುವುದು ಶುಭ ಎನ್ನಲಾಗುತ್ತದೆ. ಹಾಗಾಗಿ ಈ ದಿನ ಉಪ್ಪು, ಪಾಯಸ, ಬಿಳಿ ಬಣ್ಣದ ಬಟ್ಟೆ ಮತ್ತು ಕೇಸರಿ ಇತ್ಯಾದಿಗಳನ್ನು ದಾನ ಮಾಡುವ ಮೂಲಕ, ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬಹುದಾಗಿದೆ. ಅಲ್ಲದೆ ಸಂಪತ್ತನ್ನು ಗಳಿಸಲು ಶುಕ್ರವಾರ ದಾನ ಮಾಡುವುದು ಶುಭವಾಗಿದೆ.
ಶನಿವಾರ ಯಾವ ವಸ್ತುಗಳನ್ನು ದಾನ ಮಾಡಬೇಕು?
ಹಿಂದೂ ಧರ್ಮದಲ್ಲಿ, ಶನಿವಾರವನ್ನು ಶನಿ ದೇವನಿಗೆ ಅರ್ಪಿಸಲಾಗಿದೆ ಮತ್ತು ಅದಲ್ಲದೆ ಅವನಿಗೆ ಕಪ್ಪು ಬಣ್ಣ ಬಲು ಪ್ರೀತಿಯಾದ್ದರಿಂದ, ಶನಿವಾರ ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಕಪ್ಪು ಬಟ್ಟೆ, ಕಬ್ಬಿಣ, ಸಾಸಿವೆ ಎಣ್ಣೆ, ಕಪ್ಪು ಎಳ್ಳನ್ನು ದಾನ ಮಾಡಬಹುದಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ