Daily Devotional: ಮನೆಯಲ್ಲಿ ಕುದುರೆ ಲಾಳ ಇದ್ದರೆ ಏನಾಗುತ್ತೆ ಗೊತ್ತಾ

Daily Devotional: ಮನೆಯಲ್ಲಿ ಕುದುರೆ ಲಾಳ ಇದ್ದರೆ ಏನಾಗುತ್ತೆ ಗೊತ್ತಾ

ವಿವೇಕ ಬಿರಾದಾರ
|

Updated on: Feb 14, 2024 | 6:43 AM

ಕುದುರೆಯ ಲಾಳವೆಂದರೆ,ಕುದುರೆಯ ಕಾಲಿನ ಅಡಿಭಾಗಕ್ಕೆ 'ಯು' ಆಕಾರದ ಕಬ್ಬಿಣದಿಂದ ಮಾಡಿದ ವಸ್ತುವನ್ನು ಹಾಕಲಾಗುತ್ತದೆ. ಇದನ್ನೇ ಹಾರ್ಸ್‌ ಶೂ, ಅಥವಾ ಕುದುರೆಯ ಲಾಳ ಎಮದು ಕರೆಯಲಾಗುತ್ತದೆ. ಈ ಕುದುರೆಯ ಲಾಳವನ್ನು ಮನೆ ಮುಂದೆ ಹಾಕುವುದರಿಂದ ಆಗುವ ಪ್ರಯೋಜನವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ.‌ ಇನ್ನು ಕೆಲ ವಸ್ತುಗಳು ಮನೆ ಮುಂದೆ ಇದ್ದರೆ ಇನ್ನಷ್ಟು ಒಳಿತು. ಅಂತಹ ವಸ್ತುಗಳಲ್ಲಿ ಕುದುರೆ ಲಾಳ ಸಹ ಒಂದು. ಕುದುರೆಯ ಲಾಳವೆಂದರೆ, ಕುದುರೆಯ ಕಾಲಿನ ಅಡಿಭಾಗಕ್ಕೆ ‘ಯು’ ಆಕಾರದ ಕಬ್ಬಿಣದಿಂದ ಮಾಡಿದ ವಸ್ತುವನ್ನು ಹಾಕಲಾಗುತ್ತದೆ. ಇದನ್ನೇ ಹಾರ್ಸ್‌ ಶೂ, ಅಥವಾ ಕುದುರೆಯ ಲಾಳ ಎಂದು ಕರೆಯಲಾಗುತ್ತದೆ. ಕುದುರೆ ಲಾಳವು ಕುದುರೆಯ ಗೊರಸನ್ನು ಸವೆತದಿಂದ ರಕ್ಷಿಸಲು ವಿನ್ಯಾಸಗೊಳಿಸಲಾದ ಒಂದು ಉತ್ಪಾದಿಸಿದ ಉತ್ಪನ್ನ. ಸಾಮಾನ್ಯವಾಗಿ ಇದನ್ನು ಲೋಹದಿಂದ ತಯಾರಿಸಲಾಗುತ್ತದೆ,ಆದರೆ ಕೆಲವೊಮ್ಮೆ ಭಾಗಶಃ ಅಥವಾ ಪೂರ್ತಿಯಾಗಿ ಆಧುನಿಕ ಕೃತಕ ವಸ್ತುಗಳಿಂದ ತಯಾರಿಸಲಾಗುತ್ತದೆ.ಈ ಲಾಳವನ್ನು ಕುದುರೆಯ ಅಂಗಾಲಿನಲ್ಲಿ ಹಾಕಲಾಗುತ್ತದೆ. ಇದನ್ನು ಮನೆಯ ಬಾಗಿಲಿಗೆ ಹಾಕುವುದರಿಂದ ನಕಾರಾತ್ಮಕ ಶಕ್ತಿಯನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ಇದರ ಪ್ರಾಮುಖ್ಯತೆ ಕುರಿತು ವಿವರಿಸಲಾಗಿದೆ.