AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಕಾಗೆ ಕಂಡುಬಂದರೆ ಏನಾಗುತ್ತದೆ? ಕನಸಿನ ವಿಜ್ಞಾನ ಏನು ಹೇಳುತ್ತದೆ ಗೊತ್ತಾ?

Crow In Dream: ಕನಸಿನಲ್ಲಿ ಕಾಗೆ ಕಂಡರೆ ಆರ್ಥಿಕವಾಗಿ ಏನಾದರೂ ಲಾಭವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದೂ ಹೇಳುತ್ತಾರೆ ಜ್ಯೋತಿಷಿಗಳು. ಹಾಗೆಯೇ ಕಾಗೆಯು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವುದನ್ನು ಕಂಡರೆ ಅದರಿಂದ ಶೀಘ್ರದಲ್ಲಿಯೇ ಲಾಭ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.

ಕನಸಿನಲ್ಲಿ ಕಾಗೆ ಕಂಡುಬಂದರೆ ಏನಾಗುತ್ತದೆ? ಕನಸಿನ ವಿಜ್ಞಾನ ಏನು ಹೇಳುತ್ತದೆ ಗೊತ್ತಾ?
ಕನಸಿನಲ್ಲಿ ಕಾಗೆ ಕಂಡುಬಂದರೆ ಏನಾಗುತ್ತದೆ? ಕನಸಿನ ವಿಜ್ಞಾನ ಏನು ಹೇಳುತ್ತೆ
ಸಾಧು ಶ್ರೀನಾಥ್​
|

Updated on: May 25, 2024 | 6:06 AM

Share

ರಾತ್ರಿ ಮಲಗಿದಾಗ ಯಾರಿಗೇ ಆಗಲಿ ಕನಸು ಬೀಳುವುದು ಸರ್ವೇಸಾಮಾನ್ಯ. ಆದರೆ ಕನಸಿನಲ್ಲಿ ಕಂಡುಬರುವ ಕೆಲವು ದೃಶ್ಯಗಳು ಕೆಲವು ಸಂದರ್ಭಗಳಲ್ಲಿ ನಮ್ಮನ್ನು ಭಯಪಡಿಸುತ್ತವೆ ಮತ್ತು ಇತರ ಸಂದರ್ಭಗಳಲ್ಲಿ ನಮಗೆ ಸಂತೋಷವನ್ನು ನೀಡುತ್ತವೆ. ಹೇಗಾದರೂ, ಕನಸಿನ ವಿಜ್ಞಾನವು ಎಲ್ಲಾ ಭಯಾನಕ ದರ್ಶನಗಳು ಕೆಟ್ಟ ಚಿಹ್ನೆಗಳಲ್ಲ ಎಂದು ಹೇಳುತ್ತದೆ ಮತ್ತು ಎಲ್ಲಾ ಒಳ್ಳೆಯ ದೃಷ್ಟಿಗಳು ಒಳ್ಳೆಯ ಚಿಹ್ನೆಗಳಲ್ಲ ಎಂದೂ ಹೇಳುತ್ತದೆ. ಕನಸಿನಲ್ಲಿ ಕಾಗೆಯನ್ನು ಕಂಡರೆ ನಮ್ಮಲ್ಲಿ ಅನೇಕರಿಗೆ ಅಶಾಂತಿ ಉಂಟಾಗುತ್ತದೆ. ವಾಸ್ತವವಾಗಿ, ಕಾಗೆ ಎಂದು ಹೇಳಿದಾಕ್ಷಣ ಕೆಟ್ಟದಾಗಿ ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಕಾಗೆಯನ್ನು ಕಂಡರೆ ಆಗುವ ಪರಿಣಾಮಗಳೇನು? ನಿಮ್ಮ ಕನಸಿನಲ್ಲಿ ಕಾಗೆ ಕಂಡರೆ ಏನಾಗುತ್ತದೆ? ( good luck, bad luck) ಈಗ ಕನಸಿನ ವಿಜ್ಞಾನದಲ್ಲಿ ಇದರ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ಕಂಡುಕೊಳ್ಳೋಣ (What Does It Mean to See Crow in a Dream).

ಸಾಮಾನ್ಯವಾಗಿ, ಯಾರಾದರೂ ಸತ್ತಾಗ, ಕಾಗೆಗೆ ಪಿಂಡ ಇಡುವುದು ಒಂದು ಪದ್ದತಿಯಾಗಿದೆ. ಕಾಗೆ ಆ ಪಿಂಡವನ್ನು ಮುಟ್ಟಿದರೆ/ ತಿಂದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಮತ್ತು ಅಂತಹ ಕಾಗೆ ಕನಸಿನಲ್ಲಿ ಕಂಡುಬಂದರೆ, ನಮ್ಮ ಸತ್ತ ಪೂರ್ವಜರಿಗೆ ಆಚರಣೆಗಳನ್ನು ಮಾಡಬೇಕು ಎಂದರ್ಥ. ನಿಮ್ಮ ಕನಸಿನಲ್ಲಿ ಕಾಗೆಯನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಏನಾದರೂ ಬದಲಾಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಅವರು ಕರ್ಮದ ಫಲವಾಗಿ ಏನನ್ನಾದರೂ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕಾಗೆ ಕಂಡರೆ ಮುಂಜಾನೆ ಶನಿದೇವರ ದರ್ಶನ ಮಾಡಬೇಕು ಎನ್ನುತ್ತಾರೆ ಹಿರಿಯರು.

ಕನಸಿನಲ್ಲಿ ಕಾಗೆ ಕಂಡರೆ ಆರ್ಥಿಕವಾಗಿ ಏನಾದರೂ ಲಾಭವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದೂ ಹೇಳುತ್ತಾರೆ ಜ್ಯೋತಿಷಿಗಳು. ಹಾಗೆಯೇ ಕಾಗೆಯು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವುದನ್ನು ಕಂಡರೆ ಅದರಿಂದ ಶೀಘ್ರದಲ್ಲಿಯೇ ಲಾಭ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ನಿಮ್ಮ ಕನಸಿನಲ್ಲಿ ಕಾಗೆ ಮೊಸರು ತಿನ್ನುವುದನ್ನು ಕಂಡರೆ ಅನಾರೋಗ್ಯದಿಂದ ಬಳಲುತ್ತಿರುವವರು ಆ ಸಮಸ್ಯೆಯಿಂದ ಮುಕ್ತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ನಿಮ್ಮ ವ್ಯಾಪಾರ ಸ್ಥಳದಲ್ಲಿ ನೀವು ಕಾಗೆಯನ್ನು ಕಂಡರೆ, ನೀವು ಉತ್ತಮ ಲಾಭವನ್ನು ಗಳಿಸಲಿದ್ದೀರಿ ಎಂದು ಕನಸಿನ ಶಾಸ್ತ್ರದಲ್ಲಿ ಹೇಳಲಾಗಿದೆ.