ಮೃತ್ಯುಯೋಗ ಎಂದರೇನು? ಇದು ಹೇಗೆ ಸಂಭವಿಸುತ್ತದೆ? ಇದು ಶುಭವೋ ಅಶುಭವೋ?
ಪ್ರತೀ ಮನುಷ್ಯನು ತನ್ನ ಜೀವನ ಸುಖಮಯವಾಗಿರಬೇಕು ಎಂದು ಹಂಬಲಿಸುತ್ತಾನೆ. ಅದಕ್ಕಾಗಿ ಹಲವಾರು ಸಂದಿಗ್ಧ ಸಂದರ್ಭಗಳನ್ನು ಎದುರಿಸುತ್ತಾನೆ.
ಪ್ರತೀ ಮನುಷ್ಯನು ತನ್ನ ಜೀವನ ಸುಖಮಯವಾಗಿರಬೇಕು ಎಂದು ಹಂಬಲಿಸುತ್ತಾನೆ. ಅದಕ್ಕಾಗಿ ಹಲವಾರು ಸಂದಿಗ್ಧ ಸಂದರ್ಭಗಳನ್ನು ಎದುರಿಸುತ್ತಾನೆ. ನಮ್ಮ ಮುಂದಿನ ಹೆಜ್ಜೆ ಹೇಗಿದ್ದರೆ ಉತ್ತಮ? ಕ್ಷೇಮದ ವಾತಾವರಣಕ್ಕಾಗಿ ಏನು ಮಾಡಬೇಕು? ಯಾರಿಂದಲೂ ಕಿರಿ ಕಿರಿ ಆಗಬಾರದು. ಖುಷಿಯಾಗಿರಬೇಕು. ಕೊರಗುವಿಕೆ ಬೇಡವೇ ಬೇಡ ಎಂಬಿತ್ಯಾದಿ ಹಲವಾರು ಯೋಜನೆ ಯೋಚನೆಗಳು ಮನದಲ್ಲಿ ಹರಿದಾಡುತ್ತಾ ಅದರೊಂದಿಗೆ ಹೊಂದಾಣಿಕೆ ಮಾಡುತ್ತಾ ಅದೆಷ್ಟೋ ಜನ ಜೀವನ ಸಾಗಿಸುತ್ತಿರುತ್ತಾರೆ. ಹಾಗಾದರೆ ಇಂತಹ ಸತ್ಸಂಕಲ್ಪದ ಪ್ರಾಪ್ತಿ ಹೇಗೆ? ಎಂದು ಯೋಚಿಸಿರುತ್ತೀರಿ ಅಲ್ಲವೇ? ಅದೆಷ್ಟೋ ಜ್ಯೋತಿಷಿಗಳ ಬಳಿ ಮುಹೂರ್ತ ಕೇಳಿ ದಿನ ನೋಡಿ ಕಾರ್ಯ ಆರಂಭ, ವಿದ್ಯಾರಂಭ ಹೀಗೆ ಮನೋಭಿಲಾಷೆಗಳ ಆರಂಭವನ್ನು ಮಾಡಿರುತ್ತೀರಿ. ಆದರೂ ಕೆಲವೊಮ್ಮೆ ಸೋಲು ಬೆನ್ನಟ್ಟಿ ಬಂದಂತೆ ಅನುಭವವಾಗುತ್ತದೆ. ಜೀವನವೇ ಸಾಕೋ ಎಂಬ ಭಾವ ಹೃದಯದ ಆಳದಲ್ಲಿ ಮೂಡಿದಂತೆ ಭಾಸವಾಗುತ್ತದೆ. ಏನೂ ಬೇಡವೆಂಬಂತೆ ಕೂತು ಬಿಡುತ್ತೇವೆ ಅಲ್ಲವೇ?
ಹೀಗಿರುವ ವರ್ತುಲದಿಂದ ಪರಿಹಾರ ಹೇಗೆ? ಯಾವ ಬಗೆಯ ಪ್ರಯತ್ನ ಇದಕ್ಕೆ ಸಫಲತೆಯನ್ನು ನೀಡಬಲ್ಲದು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಉತ್ತರ ನೋಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೃತ್ಯುಯೋಗ” ಎಂಬ ಒಂದು ಯೋಗವಿದೆ. ಇದು ನಮ್ಮ ಕುಂಡಲಿಯಲ್ಲಿ ಸಂಭವಿಸುವ ಯೋಗವಲ್ಲ. ಇದು ನಮ್ಮ ದೈನಂದಿನ ಜೀವನದ ಕೆಲವು ವಾರಗಳಲ್ಲಿ ಬರುವ ನಕ್ಷತ್ರಗಳ ಸಂಯೋಗದಿಂದ ಬರುವಂತಹದ್ದು. ಈ ದಿನಗಳಲ್ಲಿ ನಾವು ಯಾವುದೇ ಶುಭಕರ್ಮವನ್ನು ಆಚರಿಸಿದರೆ ಕಾರ್ಯಹಾನಿ ನಿಶ್ಚಿತ. ಮೃತ್ಯು ಎಂದರೆ ಒಂದರ್ಥದಲ್ಲಿ ನಾಶ ಎಂದು ಅರ್ಥ. ನಾವು ಮಾಡುವ ಕಾರ್ಯ ಕೆಟ್ಟರೆ ನಮ್ಮ ಕಾರ್ಯದ ನಾಶವಾಯಿತು ಎಂದು ತಿಳಿಯುತ್ತೇವೆ. ಅಲ್ಲಿ ಕೇವಲ ಕಾರ್ಯದ ನಾಶ ಮಾತ್ರವಲ್ಲದೆ ನಮ್ಮ ಪ್ರಯತ್ನ, ಅದಕ್ಕಾಗಿ ಪಟ್ಟ ಶ್ರಮ ಆಯುಷ್ಯ ಎಲ್ಲವೂ ಕ್ಷೀಣವಾಗುತ್ತದೆ ಅಲ್ಲವೇ? ಹಾಗಾಗಿ ಈಗ ಹೇಳುತ್ತಿರುವ ದೈನಂದಿನ ಜೀವನದಲ್ಲಿ ಬರುವ ಮೃತ್ಯುಯೋಗವೇನಿದೆ ಇದು ಅತ್ಯಂತ ಅಶುಭಫಲದಾಯಕವಾದ ಯೋಗವಾಗಿದೆ.
ಇದನ್ನೂ ಓದಿ:
ಸಾಮಾನ್ಯವಾಗಿ ಹೆಚ್ಚಿನವರು ಈ ದಿನಗಳನ್ನು ಗಮನಿಸದೇ ಮುಹೂರ್ತವನ್ನೋ ಅಥವಾ ದಿನವನ್ನೋ ಶುಭಕಾರ್ಯಕ್ಕೆ ಹೇಳಿಬಿಡುತ್ತಾರೆ. ಇದರಿಂದ ಆಗುವ ಆಪತ್ತು ವಿಪತ್ತುಗಳನ್ನು ಗಮನಿಸುವುದೇ ಇಲ್ಲ. ಹಾಗದರೆ ಈ ಮ್ರತ್ಯುಯೋಗವೆಂದರೇನು? ಇದು ಹೇಗೆ ಸಂಭವಿಸುತ್ತದೆ ಎಂದು ವಿವರಿಸುತ್ತೇನೆ ಗಮನಿಸಿ ಶಾಸ್ತ್ರ ಹೇಳುವಂತೆ,
ತ್ಯಜ ರವಿ ಅನುರಾಧಾ ಉತ್ತರಾಷಾಢ ಚಂದ್ರೇ ಮ್ರಗಶಿರ ಗುರುವಾರೇ ಸಾರ್ಪ ಸಂಯುಕ್ತ ಶುಕ್ರೇ|
ಕ್ಷಿತಿ ಸುತ ಶತತಾರಾ ಇಂದುಜೇ ಚ ಅಶ್ವಿನೀ ಚ ರವಿ ಸುತಂ ಇತಿ ಹಸ್ತೇ ಮ್ರತ್ಯುಯೋಗಾನ್ ವದಂತಿ || – ಅರ್ಥಾತ್ –
1. ರವಿವಾರ ಅನುರಾಧಾ ನಕ್ಷತ್ರ 2.ಸೋಮವಾರ ಉತ್ತರಾಷಾಢಾ ನಕ್ಷತ್ರ 3. ಮಂಗಳವಾರ ಶತಭಿಷಾ ನಕ್ಷತ್ರ 5. ಬುಧವಾರ ಅಶ್ವಿನೀ ೫.ಗುರುವಾರ ಮ್ರಗಶಿರಾ ನಕ್ಷತ್ರ 6. ಶುಕ್ರವಾರ ಆಶ್ಲೇಷಾ ನಕ್ಷತ್ರ 7. ಶನಿವಾರ ಹಸ್ತ ನಕ್ಷತ್ರ ಈ ರೀತಿಯಾಗಿ ವಾರಗಳ ಜೊತೆಗೆ ಈ ಮೇಲಿನ ನಕ್ಷತ್ರಗಳು ಬಂದರೆ ಆ ದಿನ ವರ್ಜ್ಯ ಎಂದು ತಿಳಿಯಬೇಕು, ಕಾರಣ ಇಷ್ಟೇ ಮೇಲೆ ಹೇಳಿದ ವಾರ ನಕ್ಷತ್ರಗಳ ಸಂಯೋಗವು ಕಾರ್ಯನಾಶಕವಾದ ಮೃತ್ಯುಯೋಗವನ್ನು ಉಂಟುಮಾಡುತ್ತದೆ. ಆದ್ದರಿಂದ ಈ ವಾರಗಳಲ್ಲಿ ಮೇಲೆ ಉಕ್ತವಾದ ನಕ್ಷತ್ರಗಳು ಕಂಡುಬಂದರೆ ಅವಶ್ಯವಾಗಿ ಅಂತಹ ದಿನಗಳಲ್ಲಿ ಶುಭಕಾರ್ಯಗಳನ್ನು ಮಾಡಬೇಡಿರಿ. ಮಾಡಿದಲ್ಲಿ ಕಾರ್ಯನಾಶದಂತಹ ಮತ್ತು ಯಾತ್ರೆ ಇತ್ಯಾದಿಗಳ ನಿಮಿತ್ತ ಮಾಡುವ ಪ್ರಯಾಣದ ಆರಂಭದಿಂದ ಮೃತ್ಯು ಕಂಟಕವೇ ಮೊದಲಾದ ಸಂದಿಗ್ಧ ಸ್ಥಿತಿ ಉಂಟಾಗುವ ಎಲ್ಲಾ ಸಂಭವಗಳನ್ನು ಶಾಸ್ತ್ರ ಹೇಳಿರುವುದರಿಂದ ಇಂತಹ ದಿನಗಳನ್ನು ಗಮನಿಸಿ ಬೇರೆಯೇ ಉತ್ತಮ ದಿನಗಳಲ್ಲಿ ಶುಭಕಾರ್ಯಗಳನ್ನು ಮಾಡಿರಿ. ನಂಬಿಕೆಯೇ ಸನಾತನ ಧರ್ಮದ ಜೀವಾಳ. ನಂಬಿ ಕೆಟ್ಟವರಿಲ್ಲ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು