Ram Navami 2024: ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ರಾಮನವಮಿ, ಇದರ ಇತಿಹಾಸ, ಮಹತ್ವ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2024 | 10:50 AM

ಎ. 17 ರಂದು ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ರಾಮ ನವಮಿ ಹಬ್ಬದ ಜೊತೆಗೆ ಚೈತ್ರ ನವರಾತ್ರಿ ಕೊನೆಯ ದಿನ. ವಿಷ್ಣುವು ರಾಮನವಮಿಯಂದು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

Ram Navami 2024: ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ರಾಮನವಮಿ, ಇದರ ಇತಿಹಾಸ, ಮಹತ್ವ ಇಲ್ಲಿದೆ
Follow us on

ಚೈತ್ರ ನವರಾತ್ರಿಯ ಕೊನೆಯ ದಿನ ಅಂದರೆ ಎ. 17 ರಂದು ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ರಾಮ ನವಮಿ ಹಬ್ಬದ ಜೊತೆಗೆ ಚೈತ್ರ ನವರಾತ್ರಿ ಕೊನೆಯ ದಿನ. ವಿಷ್ಣುವು ರಾಮನವಮಿಯಂದು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ರಾಮನವಮಿ ಪೂಜೆಗೆ ಶುಭ ಸಮಯ:

ಪಂಚಾಂಗದ ಪ್ರಕಾರ, ಎ. 17 ರಾಮನವಮಿಯ ದಿನ ಬೆಳಿಗ್ಗೆ 11:40 ರಿಂದ ಮಧ್ಯಾಹ್ನ 1:40 ರ ನಡುವೆ ಅಭಿಜಿತ್ ಮುಹೂರ್ತವಿದೆ. ಈ ಮಧ್ಯೆ, ರಾಮ ಜನ್ಮೋತ್ಸವವನ್ನು ಆಚರಿಸಿ, ಭಗವಾನ್ ರಾಮ ಲಲ್ಲಾನ ಪೂಜೆ ಮಾಡಿ.

ರಾಮ ನವಮಿ ಇತಿಹಾಸ:

ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು ಆದರೆ ಅವನಿಗೆ ಮಕ್ಕಳಿರಲಿಲ್ಲ, ಆದ್ದರಿಂದ ರಾಜ ದಶರಥನು ಮಹಾ ಋಷಿ ವಸಿಷ್ಠರ ಸಲಹೆಯ ಮೇರೆಗೆ ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ಮಾಡಿದನು. ಬಳಿಕ ಅವರು ಆಶೀರ್ವದಿಸಿದ ಪಾಯಸವನ್ನು ಅವನ ಹೆಂಡತಿಯರಿಗೆ ಕೊಡಲು ಹೇಳಿದರು. ಬಳಿಕ ದಶರಥನ ಹೆಂಡತಿಯರು 4 ಗಂಡು ಮಕ್ಕಳ ತಾಯಿಯಾದರು. ಅದರಲ್ಲಿ ಮೊದಲನೇಯವನು ರಾಮ. ಕೌಸಲ್ಯಳು ಚೈತ್ರ ಮಾಸದ ಒಂಬತ್ತನೇ ದಿನದಂದು ಭಗವಾನ್ ರಾಮನಿಗೆ ಜನ್ಮ ನೀಡಿದಳು. ಸುಮಿತ್ರಾ ಶತ್ರುಘ್ನ ಮತ್ತು ಲಕ್ಷ್ಮಣನಿಗೆ ಜನ್ಮ ನೀಡಿದಳು, ಕೈಕೇಯಿ ಭರತನಿಗೆ ಜನ್ಮ ನೀಡಿದಳು. ಅಂದಿನಿಂದ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಹಿಂದೂ ಭಕ್ತರು ಬಹಳ ವೈಭವದಿಂದ ಆಚರಿಸುತ್ತಾರೆ.

ರಾಮ ನವಮಿ ಮಹತ್ವ:

ಈ ಶುಭ ದಿನದಂದು ಶ್ರೀ ರಾಮ ಚಂದ್ರನು ಮನುಷ್ಯ ರೂಪದಲ್ಲಿ ಭೂಮಿಗೆ ಬಂದನು ಜೊತೆಗೆ ರಾಮ ವಿಷ್ಣುವಿನ ಏಳನೇ ಅವತಾರವಾಗಿರುವುದರಿಂದ ರಾಮ ನವಮಿ ಹಿಂದೂಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗ. ಭಗವಾನ್ ರಾಮನನ್ನು ಆದರ್ಶ ಮಾನವ, ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ. ವಿಶ್ವದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮುಖ್ಯವಾಗಿ ರಾಮ ಲಲ್ಲಾ ಜನಿಸಿದ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಶ್ರೀ ರಾಮನ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮನವಮಿ, ಹೇಗಿರಲಿದೆ ಈ ಬಾರಿಯ ವೈಭವ

ಮನೆಯಲ್ಲಿ ಹಬ್ಬವನ್ನು ಆಚರಿಸುವವರಿಗೆ, ಸರಳ ಪೂಜಾ ವಿಧಾನ ಇಲ್ಲಿದೆ:

1. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ನೀವು ಪೂಜೆ ಮಾಡುವ ಜಾಗವನ್ನು ಸ್ವಚ್ಛಗೊಳಿಸಿ.

2. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹವನ್ನು ಪೂಜಾ ಸ್ಥಳದಲ್ಲಿ ಜೋಡಿಸಿ, ಅಲಂಕಾರ ಮಾಡಿ.

3. ಮೂರ್ತಿಯ ಮುಂದೆ ದೀಪ ಮತ್ತು ಧೂಪದ್ರವ್ಯಗಳನ್ನು ಹಚ್ಚಿಡಿ.

4. ಭಕ್ತಿಯನ್ನು ವ್ಯಕ್ತಪಡಿಸಲು ಭಜನೆ ಮತ್ತು ಮಂತ್ರಗಳನ್ನು ಹೇಳಿ.

5. ವಿಗ್ರಹಗಳ ಸುತ್ತಲೂ ದೀಪವನ್ನು ಹಚ್ಚಿ ಬಳಿಕ ಆರತಿ ಮಾಡಿ.

6. ಹಣ್ಣು ಅಥವಾ ಸಿಹಿತಿಂಡಿಗಳನ್ನು ನೈವೇದ್ಯ ರೂಪದಲ್ಲಿ ದೇವರಿಗೆ ಅರ್ಪಿಸಿ.

7. ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 6:06 pm, Mon, 15 April 24