Ram Navami 2024: 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮನವಮಿ, ಹೇಗಿರಲಿದೆ ಈ ಬಾರಿಯ ವೈಭವ
ರಾಮನವಮಿಯನ್ನು ಎ. 17 ರಂದು ಆಚರಿಸಲಾಗುವುದು. ಈ ದಿನವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆಯಾದರೂ ರಾಮ ಲಲ್ಲಾನ ಜನ್ಮಸ್ಥಳ ಅಯೋಧ್ಯೆಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಏಕೆಂದರೆ ಬಾಲರಾಮನ ಪ್ರತಿಷ್ಠಾಪನೆ ಆದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಸರಿಸುಮಾರು 500 ವರ್ಷಗಳ ನಂತರ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿ ಉತ್ಸವ ನಡೆಯುತ್ತಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮನವಮಿಯನ್ನು (Ram Navami )ಎ. 17 ರಂದು ಆಚರಿಸಲಾಗುವುದು. ಈ ದಿನವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆಯಾದರೂ ರಾಮ ಲಲ್ಲಾನ ಜನ್ಮಸ್ಥಳ ಅಯೋಧ್ಯೆಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಏಕೆಂದರೆ ಬಾಲರಾಮನ ಪ್ರತಿಷ್ಠಾಪನೆ ಆದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಸರಿಸುಮಾರು 500 ವರ್ಷಗಳ ನಂತರ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿ ಉತ್ಸವ ನಡೆಯುತ್ತಿದೆ. ಹಾಗಾಗಿ ಇದು ವಿಶೇಷ ದಿನ ಎಂದರೆ ತಪ್ಪಾಗಲಾರದು.
ಬಾಲರಾಮನ ಹಣೆಗೆ ಸೂರ್ಯರಶ್ಮಿ
ಶ್ರೀ ರಾಮ ಜನ್ಮದಿನೋತ್ಸವ ಸಂದರ್ಭದಲ್ಲಿಎ. 17 ರಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳ ತಿಲಕ ರಾಮಲಲ್ಲಾನ ಹಣೆಯಲ್ಲಿ ರಾರಾಜಿಸಲಿದೆ. ಈ ಸೂರ್ಯ ತಿಲಕವು 75 ಮಿ.ಮೀ. ಆಕಾರದಲ್ಲಿ ಇರಲಿದ್ದು, ಈಗಾಗಲೇ ಅಣಕು ಪ್ರಯೋಗ ಯಶಸ್ವಿಯಾಗಿದೆ. ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳಲಿದೆ.
ಅಯೋಧ್ಯೆಯಲ್ಲಿ ರಾಮನವಮಿ
ಅಯೋಧ್ಯೆ ರಾಮಲಲ್ಲಾನ ಮಂದಿರದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು ರಾಮನವಮಿ ಆಚರಣೆಗೆ ಭರಪೂರ ಸಿದ್ದತೆಗಳು ಆರಂಭಗೊಂಡಿದೆ. ದೇವಾಲಯವನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸುವ ಕಾರ್ಯ ಆರಂಭವಾಗಿದ್ದು, ಇದಕ್ಕೆ ಅಗತ್ಯ ಹೂವುಗಳು ನಾನಾ ಭಾಗಗಳಿಂದ ಬಂದು ತಲುಪಲಿದೆ. 45 ಕ್ವಿಂಟಾಲ್ ಗೂ ಅಧಿಕ ಹೂವುಗಳನ್ನು ದೇವಾಲಯದ ಅಲಂಕಾರಕ್ಕೆ ಬಳಸಲಾಗುತ್ತಿದೆ. ಗರ್ಭಗುಡಿಯ ಜೊತೆಗೆ ಐದು ಮಂಟಪಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತಿದೆ. ರಾಮ ಮಂದಿರದ ಜೊತೆಗೆ ಕನಕ ಭವನ ಮತ್ತು ಹನುಮಂತನಗರವನ್ನು ಅದ್ಧೂರಿಯಾಗಿ ಅಲಂಕರಿಸಲಾಗುತ್ತಿದೆ.
ರಾಮನವಮಿ ಆಚರಣೆಯಲ್ಲಿ ಕಲಾವಿದರ ದಂಡು ಅಯೋಧ್ಯೆಗೆ ಭರಲಿದ್ದು ರಾಮನ ನಾಮಗಳ ಸ್ಮರಣೆ, ಭಜನೆ ಮತ್ತು ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ವಿವಿಧ ರೀತಿಯ ಹೋಮ- ಹವನಗಳನ್ನು ಕೂಡ ಆಯೋಜಿಸಲಾಗಿದ್ದು ಶಾಸ್ತ್ರಬದ್ಧವಾಗಿ ರಾಮ ನವಮಿ ಆಚರಣೆ ನಡೆಯಲಿದೆ. ಅಯೋಧ್ಯೆಯಲ್ಲೂ ಬಿಸಿಲು ಹೆಚ್ಚಾಗಿರುವುದರಿಂದ ರಾಮನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು 600 ಮೀಟರ್ ಉದ್ದದ ಟೆಂಟ್ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಮನವಮಿಯ ದಿನ ಕೂಡಿಬರಲಿದೆ ಶುಭಯೋಗ! ಈ 3 ರಾಶಿಯವರಿಗೆ ಅದೃಷ್ಟ
ದೂರದರ್ಶನದಲ್ಲಿ ನೇರಪ್ರಸಾರ
ರಾಮ ಮಂದಿರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳನ್ನು ದೂರದರ್ಶನ ನೇರಪ್ರಸಾರ ಮಾಡಲಿದ್ದು, ಅಯೋಧ್ಯೆಗೆ ಬರಲು ಸಾಧ್ಯವಾಗದಿರುವವರು ಈ ಸುದಿನವನ್ನು ಮನೆಯಲ್ಲಿಯೇ ಕುಳಿತು ಕಣ್ಣತುಂಬಿಕೊಳ್ಳಬಹುದಾಗಿದೆ. ಜೊತೆಗೆ ಜನರಿಗೆ ಅನುಕೂಲವಾಗಲು ಅಯೋಧ್ಯಾ ನಗರದಲ್ಲಿ 100ಕ್ಕೂ ಹೆಚ್ಚು ಎಲ್ ಇಡಿ ಟಿವಿಗಳನ್ನು ಅಳವಡಿಸಲಾಗುತ್ತಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:33 pm, Mon, 15 April 24