Ram Navami 2024: ರಾಮನವಮಿಯ ದಿನ ಕೂಡಿಬರಲಿದೆ ಶುಭಯೋಗ! ಈ 3 ರಾಶಿಯವರಿಗೆ ಅದೃಷ್ಟ

ಈ ಬಾರಿ ರಾಮನವಮಿಯ ದಿನ ಅಂದರೆ ಎ. 17ರಂದು ಬಹಳ ಅಪರೂಪದ ಮತ್ತು ವಿಶೇಷ ಯೋಗವೂ ಕೂಡಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಕಾಕತಾಳೀಯವು ಶ್ರೀ ರಾಮನ ಜನನದ ಸಮಯದಲ್ಲಿ ಬಂದಿತ್ತು ಎನ್ನಲಾಗುತ್ತದೆ. ಹಾಗಾಗಿ ಈ ಯೋಗದಿಂದ ಶ್ರೀರಾಮನ ವಿಶೇಷ ಆಶೀರ್ವಾದ ಕೆಲವು ರಾಶಿಗಳಿಗೆ ಪ್ರಾಪ್ತವಾಗುತ್ತದೆ.

Ram Navami 2024: ರಾಮನವಮಿಯ ದಿನ ಕೂಡಿಬರಲಿದೆ ಶುಭಯೋಗ! ಈ 3 ರಾಶಿಯವರಿಗೆ ಅದೃಷ್ಟ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 16, 2024 | 10:52 AM

ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದಿನ ರಾಮ ನವಮಿ ಹಬ್ಬದ ಜೊತೆಗೆ ಚೈತ್ರ ನವರಾತ್ರಿ ಕೊನೆಯ ದಿನ. ಈ ಬಾರಿ ರಾಮನವಮಿಯ ದಿನ ಅಂದರೆ ಎ. 17ರಂದು ಬಹಳ ಅಪರೂಪದ ಮತ್ತು ವಿಶೇಷ ಯೋಗವೂ ಕೂಡಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಕಾಕತಾಳೀಯವು ಶ್ರೀರಾಮ ಲಲ್ಲಾನ ಜನನದ ಸಮಯದಲ್ಲಿ ಬಂದಿತ್ತು ಎನ್ನಲಾಗುತ್ತದೆ. ಹಾಗಾಗಿ ಈ ಯೋಗದಿಂದ ಶ್ರೀರಾಮನ ವಿಶೇಷ ಆಶೀರ್ವಾದ ಕೆಲವು ರಾಶಿಗಳಿಗೆ ಪ್ರಾಪ್ತವಾಗುತ್ತದೆ. ಹಾಗಾದರೆ ರಾಮ ನವಮಿಯಂದು ಕೂಡಿ ಬರುವ ಶುಭ ಯೋಗ ಯಾವ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ರಾಮ ನವಮಿಯಂದು ಕೂಡಿ ಬರುವ ಶುಭ ಯೋಗ;

ಕರ್ಕಾಟಕ ಲಗ್ನ – ರಾಮನವಮಿಯಂದು ಚಂದ್ರನು ಕರ್ಕ ರಾಶಿಯಲ್ಲಿ ಇರುತ್ತಾನೆ. ರಾಮನು ಕೂಡ ಕರ್ಕಾಟಕ ಲಗ್ನದಲ್ಲಿ ಜನಿಸಿದನು ಎನ್ನುವ ನಂಬಿಕೆ ಇದೆ.

ಸೂರ್ಯನ ಶುಭ ಸ್ಥಾನ – ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಮಲಲ್ಲಾನ ಜನನ ಸಮಯದಲ್ಲಿ, ಸೂರ್ಯನು ಹತ್ತನೇ ಮನೆಯಲ್ಲಿ ತನ್ನ ಉಚ್ಛಸ್ಥಾನದಲ್ಲಿದ್ದನು, ಈ ಬಾರಿ ರಾಮನವಮಿಯಂದು, ಸೂರ್ಯನು ಮೇಷ ರಾಶಿಯಲ್ಲಿ ಬಳಿಕ ಅಂದರೆ ಮಧ್ಯಾಹ್ನ ಹತ್ತನೇ ಮನೆಯಲ್ಲಿರುತ್ತಾನೆ.

ಗಜಕೇಸರಿ ಯೋಗ – ಈ ದಿನ, ಶ್ರೀ ರಾಮನ ಜಾತಕದಲ್ಲಿದ್ದ ಗಜಕೇಸರಿ ಯೋಗದ ಪರಿಣಾಮವಿರುತ್ತದೆ. ಈ ಯೋಗ ಬಂದಾಗ ವ್ಯಕ್ತಿಯು ಗಜನಂತೆ ಶಕ್ತಿ ಮತ್ತು ಸಂಪತ್ತನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಬಾರಿ, ರಾಮನವಮಿಯಂದು ಈ ಮೂರು ಕಾಕತಾಳೀಯಗಳು ಒಟ್ಟಿಗೆ ಬಂದಿರುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಮೇಷ, ಕರ್ಕ ಮತ್ತು ತುಲಾ ರಾಶಿಯ ಜನರಿಗೆ ಇದರಿಂದ ಪ್ರಯೋಜನವಿದೆ.

ಇದನ್ನೂ ಓದಿ: ರಾಮ ನವಮಿಯ ದಿನ ಈ ವಿಧಾನದಿಂದ ರಾಮನನ್ನು ಪೂಜಿಸಿ!

ಈ ರಾಶಿಯವರಿಗೆ ಒಳ್ಳೆಯದು;

ಮೇಷ ರಾಶಿ – ಶ್ರೀರಾಮನ ಅನುಗ್ರಹದಿಂದ, ಮೇಷ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸುತ್ತದೆ. ಪೂರ್ವಜರ ಸಂಪತ್ತು ಕೂಡ ನಿಮ್ಮ ಕೈ ಸೇರಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಕರ್ಕ ರಾಶಿ – ರಾಮನವಮಿಯು ಕರ್ಕಾಟಕ ರಾಶಿಯ ಜನರಿಗೆ ಸಮೃದ್ಧಿಯನ್ನು ತರುತ್ತದೆ. ಜೊತೆಗೆ ಶ್ರೀ ರಾಮನ ವಿಶೇಷ ಆಶೀರ್ವಾದ ಸಿಗುತ್ತದೆ. ಅಲ್ಲದೆ ಈ ರಾಶಿಯವರು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ವ್ಯಾಪಾರದಲ್ಲಿ ಲಾಭಾಂಶ ದ್ವಿಗುಣಗೊಳ್ಳುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಜೊತೆಗೆ ಇದು ನಿಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ.

ತುಲಾ ರಾಶಿ – ರಾಮನವಮಿ ಹಬ್ಬದ ದಿನ ನಿಮ್ಮ ಸಂತೋಷದ ಪೆಟ್ಟಿಗೆ ತೆರೆಯಲಿದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಬರಲಿವೆ. ನೂತನ ಕೆಲಸವನ್ನು ಪ್ರಾರಂಭಿಸುವ ಯೋಜನೆಗಳು ಯಶಸ್ವಿಯಾಗಬಹುದು. ಜೊತೆಗೆ ಕೆಲವು ಸಮಯದಿಂದ ಬಾಕಿ ಉಳಿದಿದ್ದ ಎಲ್ಲಾ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ಕಾರು ಅಥವಾ ಭೂಮಿ ಖರೀದಿಸುವ ಕನಸು ಈಡೇರಲಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ ಹೊಸ ಜವಾಬ್ದಾರಿಗಳು ನಿಮ್ಮನ್ನು ಅರಸಿ ಬರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:21 pm, Mon, 15 April 24

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ