Shravan Month: ಶ್ರಾವಣ ತಿಂಗಳು ಶಿವನಿಗೇಕೆ ಅರ್ಪಿತ? ಶ್ರಾವಣದಲ್ಲಿ ಆಚರಿಸುವ ವ್ರತಗಳಾವುವು?

| Updated By: ಆಯೇಷಾ ಬಾನು

Updated on: Aug 09, 2021 | 6:41 AM

ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದು. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ ಪಠನೆ, ಧ್ಯಾನ ಮಾಡಬೇಕು. ಇನ್ನು ಶ್ರಾವಣ ತಿಂಗಳು ಶಿವನಿಗೆ ಅರ್ಪಿಸಲು ಕಾರಣಗಳೇನು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Shravan Month: ಶ್ರಾವಣ ತಿಂಗಳು ಶಿವನಿಗೇಕೆ ಅರ್ಪಿತ? ಶ್ರಾವಣದಲ್ಲಿ ಆಚರಿಸುವ ವ್ರತಗಳಾವುವು?
ಅಭಿಷೇಕ ಪ್ರಿಯ ಶಿವ
Follow us on

ಹಿಂದೂ ಪಂಚಾಂಗದ 5ನೇ ಮಾಸವಾದ ಶ್ರಾವಣ ಮಾಸವು (ಆಗಸ್ಟ್- ಸೆಪ್ಟೆಂಬರ್) ಶಿವನಿಗೆ ಸಮರ್ಪಿಸಲಾಗಿದೆ. ಈ ಮಾಸ ತಿಂಗಳುಗಳಲ್ಲೇ ಹೆಚ್ಚು ಪವಿತ್ರವೆಂಬ ಮಾನ್ಯತೆ ಪಡೆದಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗೂ ಶಿವ ಒಲಿದು ಬೇಡಿದನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ-ಪಾರ್ವತಿಗೆ ಮೀಸಲು.

ಇನ್ನು ಈ ತಿಂಗಳಲ್ಲೇ ಹೆಚ್ಚಾಗಿ ಸಾಲು ಸಾಲು ಧಾರ್ಮಿಕ ಕಾರ್ಯಗಳು, ಹಬ್ಬಗಳು ಬರುತ್ತವೆ. ಜೊತೆಗೆ ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಪ್ರಶಸ್ತವಾಗಿದೆ. ಆಷಾಡ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನವ ನಕ್ಷತ್ರ ಆಕಾಶವನ್ನು ಆಳುತ್ತದೆ. ಆದ್ದರಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಶ್ರಾವಣ ಎಂದರೇನು?
ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದು. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ ಪಠನೆ, ಧ್ಯಾನ ಮಾಡಬೇಕು. ಇನ್ನು ಶ್ರಾವಣ ತಿಂಗಳು ಶಿವನಿಗೆ ಅರ್ಪಿಸಲು ಕಾರಣಗಳೇನು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಶ್ರಾವಣ ಮಾಸದಲ್ಲಿ ಶಿವನಿಗೇಕೆ ಆಧ್ಯತೆ?
ಸಮುದ್ರ ಮಂಥನದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುವಾಗ 14 ಬೇರೆ ಬೇರೆ ರತ್ನಗಳು ಬರುತ್ತವೆ. ಈ ಪೈಕಿ 13 ರತ್ನಗಳನ್ನು ದೇವತೆಗಳು, ದಾನವರು ಹಂಚಿಕೊಳ್ಳುತ್ತಾರೆ. ಉಳಿದ ಒಂದು ರತ್ನವೇ ಹಾಲಾಹಲ. ಜಗತ್ತನ್ನೇ ನಾಶ ಮಾಡುವ ಶಕ್ತಿ ಇದ್ದ ಹಾಲಾಹಲವನ್ನು ಲೋಕದ ಕಲ್ಯಾಣಕ್ಕಾಗಿ ಭಗವಾನ್ ಶಿವನು ಹಲಾಹಲಾ ವಿಷವನ್ನು ಕುಡಿಯುತ್ತಾನೆ. ಪಾರ್ವತಿ ದೇವಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಹೀಗಾಗಿ ಶಿವ ನೀಲಕಂಠನಾಗುತ್ತಾನೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಇದೇ ಶ್ರಾವಣ ಮಾಸದಲ್ಲಿ. ಹೀಗಾಗಿ ಈ ಮಾಸಕ್ಕೆ ಹೆಚ್ಚಿನ ಶಕ್ತಿ ಇದೆ.

ಶಿವನ ಮುಡಿ ಏರಿದ ಚಂದ್ರ
ಪ್ರಜಾಪತಿ ದಕ್ಷನ ಶಾಪದಂತೆ ಚಂದ್ರ ದೇವನ ದೇಹ ವಿಷವಾಗುತ್ತೆ, ಆರೋಗ್ಯ ಹದಗೆಡುತ್ತೆ. ಈ ವೇಳೆ ವಿಷದ ಬಲವಾದ ಪರಿಣಾಮ ಕಡಿಮೆ ಮಾಡಲು ಶಿವನು ಅರ್ಧ ಚಂದ್ರವನ್ನು ತನ್ನ ತಲೆಯ ಮೇಲೆ ಧರಿಸುತ್ತಾನೆ. ನಂತರ ಎಲ್ಲಾ ದೇವರುಗಳು ಶಿವನಿಗೆ ಗಂಗಾ ನೀರನ್ನು ಅರ್ಪಿಸುತ್ತಾರೆ. ಅಂದಿನಿಂದಲೇ ಶ್ರಾವಣ ಮಾಸ ಸಂಭವಿಸಿತ್ತು. ಹೀಗಾಗಿ ಭಕ್ತರು ಶಿವನಿಗೆ ಈ ತಿಂಗಳಲ್ಲಿ ಗಾಂಗಾ ನೀರನ್ನು ಎರೆದು ಭಕ್ತಿಯನ್ನು ತೋರಿಸುತ್ತಾರೆ.

ರುದ್ರಾಕ್ಷಿ ಧರಿಸಿದ ಶುಭವಾಗುತ್ತೆ
ಇನ್ನು ಶ್ರಾವಣದಲ್ಲಿ ರುದ್ರಾಕ್ಷಿಯ ಹಾರ, ಓಲೆ ಧರಿಸುವುದು ಅತ್ಯಂತ ಶುಭ ಎನ್ನಲಾಗಿದೆ. ಶ್ರಾವಣ ಸೋಮವಾರದ ವ್ರತ ಮಾಡುವುದು. ರುದ್ರಾಕ್ಷಿಯ ಹಾರ ಧರಿಸುವುದು ಅತ್ಯಂತ ಶ್ರೇಷ್ಠ.

ವ್ರತಗಳು
1) ಏಕ ಭುಕ್ತವ್ರತ.
2) ಮಂಗಳ ಗೌರಿ ವ್ರತ.
3) ಬುಧ,ಭ್ರಹಸ್ಪತಿ ವ್ರತ.
4) ಜೀವಂತಿಕಾ ವ್ರತ.
5) ಶನೇಶ್ವರ ವ್ರತ.
6) ರೋಟಿಕಾ ವ್ರತ.
7) ದೂರ್ವಾಗಣಪತಿ ವ್ರತ.
8) ಅನಂತ ವ್ರತ.
9) ನಾಗಚತುರ್ಥಿ
10) ನಾಗ ಪಂಚಮಿ
11) ಗರುಡ ಪಂಚಮಿ.
12) ಸಿರಿಯಾಳ ಷಷ್ಟಿ.
13) ಅವ್ಯಂಗ ವೃತ.
14) ಶೀತಲಾಸಪ್ತಮಿ ವ್ರತ.
15) ಪುತ್ರದಾ ಏಕಾದಶಿ ವ್ರತ.
16) ಪವಿತ್ರಾರೋಪಣವೃತ
17) ದುರ್ಗಾಷ್ಟಮಿ.
18) ಕೃಷ್ಣಾಷ್ಟಮಿ.
19) ವಾಮನ ಜಯಂತಿ.
20) ಅಗಸ್ತ್ಯಾರ್ಘ್ಯ
21) ಮಹಾಲಕ್ಷ್ಮೀವ್ರತ.

ಇದನ್ನೂ ಓದಿ: Maha Shivaratri; ಕಾಯುವನೇ ಶಿವ?: ನಿರ್ವಾಣದೀಕ್ಷೆಯಲಿ ನಿರ್ಯಾಣಘಟ್ಟದಲಿ ನಿರ್ಮಿತ್ರನಿರಲು ಕಲಿ

Published On - 6:37 am, Mon, 9 August 21