Vikrama Foundation: ವಿದ್ಯಾ ಯಜ್ಞ -ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾದ ಮಹೇಶ್ ವಿಕ್ರಮ್ ಹೆಗ್ಡೆಯವರ ವಿಕ್ರಮ ಫೌಂಡೇಶನ್

Mahesh Vikram Hegde: ಈ ವರ್ಷ ವಿಕ್ರಮ ಫೌಂಡೇಶನ್ 50 ಶಾಲೆಗಳ 100 ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬ ಆಶಯದೊಂದಿಗೆ ಹುಟ್ಟಿಕೊಂಡಿದ್ದು ವಿಕ್ರಮ ಫೌಂಡೇಶನ್.

Vikrama Foundation: ವಿದ್ಯಾ ಯಜ್ಞ -ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾದ ಮಹೇಶ್ ವಿಕ್ರಮ್ ಹೆಗ್ಡೆಯವರ ವಿಕ್ರಮ ಫೌಂಡೇಶನ್
ವಿದ್ಯಾ ಯಜ್ಞ: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾದ ಮಹೇಶ್ ವಿಕ್ರಮ್ ಹೆಗ್ಡೆಯವರ ವಿಕ್ರಮ ಫೌಂಡೇಶನ್
Edited By: ಸಾಧು ಶ್ರೀನಾಥ್​

Updated on: Aug 27, 2022 | 2:08 PM

ಈ ವರ್ಷ ವಿಕ್ರಮ ಫೌಂಡೇಶನ್ 50 ಶಾಲೆಗಳ 100 ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬ ಆಶಯದೊಂದಿಗೆ ಹುಟ್ಟಿಕೊಂಡಿದ್ದು ವಿಕ್ರಮ ಫೌಂಡೇಶನ್. ಬಡತನವಿದ್ದಾಗ ವಿದ್ಯಾಭ್ಯಾಸಕ್ಕೆ ಅದೆಷ್ಟು ಒದ್ದಾಡಬೇಕು ಅನ್ನೋದು ಅನುಭವಿಸಿದ್ದವರು ವಿಕ್ರಮ ಫೌಂಡೇಶನ್​ನ ಮಹೇಶ್ ವಿಕ್ರಮ ಹೆಗ್ಡೆ. ಅಮ್ಮನ ಕಿವಿಯೋಲೆ ಅಡವಿಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲವದು. ತಮಗೆ ಎದುರಾದ ಕಷ್ಟ ಮುಂದೆ ಯಾರಿಗೂ ಬರಬಾರದು ಎಂದು ಮನಸಲ್ಲಿಯೇ ಆಲೋಚಿಸಿದ್ದರು.

ಅಕ್ಷರ ಕಲಿಯಲು ಬಡತನ ಅಡ್ಡಿಯಾಗಬಾರದು‌ ಎಂದು ಅಂದುಕೊಂಡಿದ್ದ ವಿಕ್ರಮ ಹೆಗ್ಡೆ ಬಡ ಮಕ್ಕಳಿಗಾಗಿಯೇ ವಿಕ್ರಮ ಫೌಂಡೇಶನ್ ಹುಟ್ಟುಹಾಕಿದರು. ಆರಂಭದಲ್ಲಿ ತಮ್ಮ ಫೌಂಡೇಶನ್ ಮೂಲಕ ಒಂದಷ್ಟು ಬಡವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯದಲ್ಲಿ ನಿರತರಾಗಿದ್ದರು.

ಇದೀಗ ತಮ್ಮ ಕನಸನ್ನು ಸಾಕಾರಗೊಳಿಸಲು ಮುಂದಾಗಿದ್ದು, 100 ಬಡ ಮಕ್ಕಳನ್ನ ದತ್ತು ತೆಗೆದುಕೊಂಡು, ಅವರ ವಿದ್ಯಾಭ್ಯಾಸದ ಖರ್ಚು ಭರಿಸಿದ್ದಾರೆ. ವರ್ಷಕ್ಕೆ ಒಂದು ಸಾವಿರ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವ ಆಶಯ ಹೊಂದಿರುವ ವಿಕ್ರಮ ಫೌಂಡೇಶನ್ ಆರಂಭಿಕವಾಗಿ ಈ ವರ್ಷ ನೂರು ಮಕ್ಕಳನ್ನು ದತ್ತು ಪಡೆದು ತನ್ನ ಕನಸಿನ ಮೊದಲ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ‘ಸಾವಿರದ’ ಕನಸನ್ನು ನನಸು ಮಾಡುವತ್ತ ಸಾಗಲು ವಿಕ್ರಮ ಹೆಗ್ಡೆ ನಿಶ್ಚಯಿಸಿದ್ದಾರೆ.

ವಿಕ್ರಮ ಫೌಂಡೇಶನ್ ಆರಂಭಿಕವಾಗಿ ಈ ವರ್ಷ 100 ಮಕ್ಕಳನ್ನು ದತ್ತು ಪಡೆದು ತನ್ನ ಕನಸಿನ ಮೊದಲ ಹೆಜ್ಜೆ ಇಟ್ಟಿದೆ:

ತಮ್ಮ ಜನ್ಮಭೂಮಿ ದಕ್ಷಿಣ ಕನ್ನಡದಿಂದ ಈ ಸತ್ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಶಾಲಾ ಮಂಡಳಿಯ ಅಭಿಪ್ರಾಯ ಸಂಗ್ರಹಿಸಿ ಅವರು ಹೇಳಿದ ಮಕ್ಕಳ ಮನೆಗೆ ಹೋಗಿ ಅವರ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಕಷ್ಟದಲ್ಲಿರೋ 100 ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

ಈ ಸತ್ಕಾರ್ಯಕ್ಕೆ ತಮ್ಮದೇ ದುಡಿಮೆಯ ಹಣದಲ್ಲಿ ಮಕ್ಕಳನ್ನು ಓದಿಸಬೇಕೆಂಬ ಕಾರಣದಿಂದ ಫೌಂಡೇಶನ್ ಯಾರಿಂದಲೂ ದೇಣಿಗೆ ಕೇಳಿಲ್ಲ. ಈ ‘ವಿದ್ಯಾಯಜ್ಞ’ಕ್ಕೆ ಎಲ್ಲರ ಶುಭ ಹಾರೈಕೆ ಕೋರಿದ್ದಾರೆ. ಆ ಬಡ ಮಕ್ಕಳಿಗೆ ಹರಸಿ ಹಾರೈಸಿ.

Published On - 9:35 pm, Fri, 26 August 22

TV9 Web

TV9 Kannada

Read More
Loading...
Unable to load recommendations.
Follow Us