ಬೆಂಗಳೂರು: ನಗರದ ಪ್ರಮುಖ ಡೆಕೋರೇಟಿವ್ ಪೇಂಟಿಂಗ್ಗಳ ಡೀಲರ್ (Decorative Painting Dealers) ಆಗಿರುವ ತೊಟ್ಟತಿಲ್ ಟ್ರೇಡರ್ಸ್ ಸಂಸ್ಥೆ (Thottathil Traders) ಮಾರ್ಚ್ 3, ಇಂದು ವಾಲ್ಟ್ರಾನ್ ಪ್ಯಾಟ್ರೋಲ್ ವ್ಯಾನ್ಗಳಿಗೆ (Walltron Patrol Vans) ಚಾಲನೆ ಕೊಟ್ಟಿದೆ. ತೊಟ್ಟತಿಲ್ ಟ್ರೇಡರ್ಸ್ನ ಮಾಲೀಕ ಜಾನ್ ಜೋಸ್ ತೋಟ್ಟಮ್, ಡ್ಯಾನ್ ಜೋಸ್ ತೋಟ್ಟಮ್, ಕಂಪನಿಯ ಹಿರಿಯ ಅಧಿಕಾರಿಗಳಾದ ಹರಿಹರ ಸುದನ್, ಪಾದಲಗಿ ವಿನಯ್ ಜಯತೀರ್ಥ ಅವರು ವ್ಯಾನ್ ಆ್ಯಕ್ಟಿವೇಶನ್ ಕಾರ್ಯಕ್ರಮದಲ್ಲಿದ್ದರು. ಈ ವಾಲ್ಟ್ರಾನ್ ಪ್ಯಾಟ್ರೋಲ್ ವಾಹನಗಳು ರಾಜ್ಯವ್ಯಾಪಿ ಸೇವೆ ನೀಡಲಿವೆ.
ಬೆಂಗಳೂರಿನ ಡೆಕೋರೇಟಿವ್ ಪೇಂಟಿಂಗ್ ಕ್ಷೇತ್ರದಲ್ಲಿ ಅಗ್ರ ಡೀಲರ್ ಎನಿಸಿರುವ ತೋಟ್ಟತ್ತಿಲ್ ಟ್ರೇಡರ್ಸ್ ಕಂಪನಿಯು ದೊಮ್ಮಸಂದ್ರದ ವರ್ತೂರು ಮುಖ್ಯರಸ್ತೆಯ ತೊಟ್ಟತಿಲ್ ಟವರ್ಸ್ನಲ್ಲಿದೆ. ವಾಲ್ಟ್ರಾನ್ ಪ್ಯಾಟ್ರೋಲ್ ವಾಹನ ವಿಶೇಷ ವಿನ್ಯಾಸದಿಂದ ಕೂಡಿದ್ದು, ಜಾಹೀರಾತಿಗೆಂದೇ ಸಿದ್ಧಪಡಿಸಿದ ವಾಹನವಾಗಿದೆ. ಡೆಕೋರೇಟಿವ್ ಪೇಂಟಿಂಗ್ನ ಎಲ್ಲಾ ಸೌಲಭ್ಯಗಳನ್ನೂ ಒಳಗೊಂಡಿರುವ ಈ ವಾಹನ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುತ್ತದೆ. ಬೆಂಗಳೂರು ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವಾಹನಗಳು ರಸ್ತೆಗಿಳಿಯಲಿದ್ದು, ಗ್ರಾಹಕರಿಗೆ ವಿನೂತನ ಸೇವೆ ನೀಡಲಿವೆ.
Published On - 11:19 am, Fri, 3 March 23