ಮಾರುಕಟ್ಟೆಯನ್ನು ಪ್ರಭಾವಿಸುವ ಗ್ರಾಹಕ ಅಭ್ಯಾಸಗಳು; ಒಂದು ಅವಲೋಕನ
Sorbh Gupta's Article on how consumer habits influences market moves: ಭಾರತದ ಅನುಭೋಗ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಹೂಡಿಕೆದಾರರು ಗ್ರಾಹಕರಾಗಿಯೂ ಕಾರ್ಯನಿರ್ವಹಿಸುವುದರಿಂದ, ವೈಯಕ್ತಿಕ ಅನುಭವಗಳು ಹೂಡಿಕೆ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಪರಿಚಯದ ಬ್ರ್ಯಾಂಡ್‌ಗಳ ಮೇಲಿನ ನಂಬಿಕೆ ಅಥವಾ ಇತ್ತೀಚಿನ ಅನುಭವಗಳು ಕಂಪನಿಯ ಮೂಲಭೂತ ಅಂಶಗಳನ್ನು ಮರೆಮಾಚಬಹುದು. ವಸ್ತುನಿಷ್ಠ ವಿಶ್ಲೇಷಣೆ ಇಲ್ಲದೆ, ಪೂರ್ವಗ್ರಹದಿಂದ ಕೂಡಿದ ಹೂಡಿಕೆಗಳು ಲಾಭದಾಯಕವಲ್ಲ. ಭಾವನೆಗಳನ್ನು ಬದಿಗಿಟ್ಟು ಶಿಸ್ತಿನಿಂದ ಹೂಡಿಕೆ ಮಾಡುವುದು ಮುಖ್ಯ.

ಭಾರತದ ಬೆಳವಣಿಗೆಯ ಕಥೆಯಲ್ಲಿ ಗ್ರಾಹಕ ಅಥವಾ ಅನುಭೋಗಿಯೇ ಸೂತ್ರಧಾರ. ತುಂಬಿತುಳುಕುತ್ತಿರುವ ಮಾಲ್ಗಳಿಂದ ಹಿಡಿದು, ಗಿಜಿಗಿಜಿಗುಡುತ್ತಿರುವ ಇ-ಕಾಮರ್ಸ್ವರೆಗೆ ಈ ಅನುಭೋಗ ಅಥವಾ ಕನ್ಸಮ್ಷನ್ ಸೆಕ್ಟರ್ ಉತ್ತಮವಾಗಿ ಬೆಳೆಯುತ್ತಿದೆ. ಜನರ ಆದಾಯದಲ್ಲಿ ಹೆಚ್ಚಳ ಆಗುತ್ತಿರುವುದು, ವೇಗವಾಗಿ ನಗರೀಕರಣ ಆಗುತ್ತಿರುವುದು, ಜೀವನಶೈಲಿಯಲ್ಲಿ ಬದಲಾವಣೆ ಆಗುತ್ತಿರುವುದು ರಚನಾತ್ಮಕವಾಗಿ ಪುಷ್ಟಿ ಕೊಡುತ್ತಿದೆ. ಭಾರತೀಯ ಆರ್ಥಿಕತೆಯಲ್ಲಿ ಅನುಭೋಗಕ್ಕೆ ಪ್ರಾಧಾನ್ಯ ಸ್ಥಾನ ಸಿಗುವಂತೆ ಮಾಡಿದೆ. ಅನುಭೋಗ ಶಕ್ತಿಯಿಂದ ನಡೆಯುವ ಬ್ಯುಸಿನೆಸ್ಗಳು ಈ ಒಂದು ಟ್ರೆಂಡ್ನ ಲಾಭ ಪಡೆಯುತ್ತಿವೆ.
ಇಲ್ಲಿ ಒಂದು ಕುತೂಹಲಕಾರಿ ಅಂಶ ಗಮನಿಸಬೇಕು: ಹೂಡಿಕೆದಾರರು ಈ ಸೆಕ್ಟರ್ನಲ್ಲಿ ಹಣ ತೊಡಗಿಸುವುದು ಮಾತ್ರವಲ್ಲ, ಅನುಭೋಗಿಗಳಾಗಿ ಪ್ರತೀ ದಿನ ಅದರಲ್ಲಿ ಭಾಗಿಯಾಗುತ್ತಿರುತ್ತಾರೆ. ಸ್ಮಾರ್ಟ್ಫೋನ್ ಖರೀದಿಸುವುದು, ಕಾಫಿ ಕುಡಿಯುವುದು, ಆರ್ಗ್ಯಾನಿಕ್ ದಿನಸಿ ವಸ್ತುಗಳನ್ನು ಖರೀದಿಸುವುದು ಇವೆಲ್ಲವೂ ಕೂಡ ಅವರು ಹೂಡಿಕೆ ಮಾಡಿರುವ ಅನುಭೋಗ ಸೆಕ್ಟರ್ಗೆ ಬರುತ್ತವೆ. ವ್ಯಕ್ತಿಗಳಿಗೆ ಇದು ಎರಡು ಪಾತ್ರ ಸೃಷ್ಟಿಸುತ್ತದೆ. ಈ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳು. ನಿರ್ಧಾರ ಮತ್ತು ಪೋರ್ಟ್ಫೋಲಿಯೋ ರಿಸಲ್ಟ್ ಎರಡನ್ನೂ ಪ್ರಭಾವಿಸುವಂಥವು.
ಒಂದು ಕಡೆ, ಹೂಡಿಕೆದಾರರು ಅನುಭೋಗವನ್ನು ಅವಕಾಶದ ಕಣ್ಣಿನಿಂದ ನೋಡಬಹುದು. ಉತ್ತಮ ಫಂಡಮೆಂಟಲ್ಸ್ ಇರುವ ಮತ್ತು ಹೆಚ್ಚು ವ್ಯಾಪಿಸಬಲ್ಲ ಬ್ಯುಸಿನೆಸ್ ಮಾಡಲ್ ಹೊಂದಿರುವ ಕಂಪನಿಗಳನ್ನು ಹೂಡಿಕೆದಾರರು ಹೆಕ್ಕುತ್ತಾರೆ. ಮತ್ತೊಂದು ಕಡೆ, ಗ್ರಾಹಕರು ತಮ್ಮ ಭಾವನೆ, ಅಭಿಲಾಷೆ, ಅನುಕೂಲತೆಯ ಆಧಾರದ ಮೇಲೆ ಕನ್ಸಂಪ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಈ ಎರಡು ಅಂಶಗಳು ಮಿಳಿತಗೊಳ್ಳುವುದರಿಂದ ಹೊಸ ಚಲನಶೀಲತೆಯನ್ನು ಸೃಷ್ಟಿಸಬಹುದು. ಆದರೆ, ಅದನ್ನು ಸರಿಯಾಗಿ ಗ್ರಹಿಸದೇ ಹೋದಲ್ಲಿ ತಪ್ಪಾದ ನಿರ್ಧಾರಕ್ಕೆ ಕಾರಣವಾಗಬಹುದು.
ಹೂಡಿಕೆದಾರರು ತಾವು ಪದೇ ಪದೇ ಬಳಸುವ ಬ್ರ್ಯಾಂಡ್ಗಳತ್ತ ಹೆಚ್ಚು ವಾಲುವುದುಂಟು. ಈ ಬ್ರ್ಯಾಂಡ್ಗಳು ಬಹಳ ಪರಿಚಿತ ಹಾಗೂ ಸುರಕ್ಷಿತ ಭಾವನೆ ಮೂಡಿಸುವುದು ಇದಕ್ಕೆ ಕಾರಣ. ದಿನನಿತ್ಯದ ಅನುಭವವು ಆ ಬ್ಯುಸಿನೆಸ್ ಬಗ್ಗೆ ವಿಶ್ವಾಸ ಮೂಡಿಸಬಹುದು. ಆ ಕಂಪನಿಯ ಮೂಲಭೂತ ಅಂಶಗಳು ನಿರಾಸೆ ಮೂಡಿಸುವಂತಿದ್ದರೂ ಈ ವಿಶ್ವಾಸ ಗಟ್ಟಿಯಾಗಿರುತ್ತದೆ. ಇದು ಒಂದು ಸಮಸ್ಯೆ.
ಇದಕ್ಕೆ ಒಂದು ಉದಾಹರಣೆ ನೋಡೋಣ. ಒಬ್ಬ ವ್ಯಕ್ತಿ ಪ್ರತೀ ವಾರ ಒಂದೇ ಬ್ರ್ಯಾಂಡ್ನ ಚಿಪ್ಗಳನ್ನು ಖರೀದಿಸುತ್ತಿರುತ್ತಾನೆ. ಅಥವಾ ಅದೇ ಬ್ರ್ಯಾಂಡ್ನ ಬಟ್ಟೆಯನ್ನು ಖರೀದಿಸುತ್ತಿರುತ್ತಾನೆ. ಅವನಿಗೆ ಆ ಬ್ರ್ಯಾಂಡ್ ಇಷ್ಟವಾಗಿರುತ್ತದೆ. ಆ ಕಂಪನಿಯೂ ಕೂಡ ಉತ್ತಮವಾಗಿರುತ್ತದೆ ಎಂಬುದು ಅವರ ಪೂರ್ವಗ್ರಹ ಪ್ರಭಾವಿತ ಅನಿಸಿಕೆ ಆಗಿರುತ್ತದೆ. ಈ ಭಾವನೆಯು ವೈಯಕ್ತಿಕ ಅನುಭೋಗವನ್ನು ಪ್ರತಿಫಲಿಸುತ್ತದೆ. ಆದ ಮಾತ್ರಕ್ಕೆ ಕಂಪನಿಯ ಗಳಿಕೆ, ಗುರಿ, ಬೆಳವಣಿಗೆ ಇವುಗಳನ್ನು ಪ್ರತಿಫಲಿಸುವುದಿಲ್ಲ ಎಂಬುದು ತಿಳಿದಿರಲಿ.
ಇದು ಇಲ್ಲಿಗೇ ನಿಲ್ಲುವುದಿಲ್ಲ. ದೃಢೀಕರಣ ಪಕ್ಷಪಾತಕ್ಕೆ (ಕನ್ಫರ್ಮೇಶನ್ ಬಯಾಸ್) ಪರಿಚಿತತೆಯು ಮೊದಲ ಹಂತವಾಗಿರುತ್ತದೆ. ಮನಸ್ಸು ಅನುಕೂಲಕರ ದೃಷ್ಟಿಕೋನವನ್ನು ರೂಪಿಸಿದ ನಂತರ, ಅದು ಹೊಸ ಉತ್ಪನ್ನ ಬಿಡುಗಡೆಗಳು, ಬಲವಾದ ಗೋಚರತೆ ಅಥವಾ ಸೆಲೆಬ್ರಿಟಿ ಅನುಮೋದನೆಯಂತಹ ಆಯ್ಕೆ ಮಾಡುವ ಮನೋಭಾವಕ್ಕೆ ನಾಂದಿಯಾಗುತ್ತದೆ, ಆದರೆ ಮಾರ್ಜಿನ್ ಒತ್ತಡ, ಸ್ಪರ್ಧಾತ್ಮಕ ತೀವ್ರತೆ ಅಥವಾ ವಿಭಿನ್ನತೆಯನ್ನು ಹೇಳಬಹುದಾದ ವಿಸ್ತೃತ ಮೌಲ್ಯಮಾಪನಗಳಂತಹ ಅಂಶಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಮಾರಾಟದ ಪ್ರಮಾಣವನ್ನು ಸಂಪೂರ್ಣವಾಗಿ ಬೆಂಬಲಿಸದಿದ್ದರೂ ಸಹ, ವೈಯಕ್ತಿಕ ಆದ್ಯತೆಯು ಹೂಡಿಕೆಯಲ್ಲಿ ಆತ್ಮವಿಶ್ವಾಸ ಮೂಡಿಸಬಹುದು. ವಸ್ತುನಿಷ್ಠ ವಿಶ್ಲೇಷಣೆಯಲ್ಲಿ ಆಧಾರದ ಮೇಲೆ ಹೂಡಿಕೆ ನಡೆಯದೇ ಇರಬಹುದು.
ಪ್ರಯೋಗ ಪಕ್ಷಪಾತದ ಪಾತ್ರವೂ ಇರುತ್ತದೆ. ಅದರಲ್ಲೂ ಪ್ರಯೋಗಶೀಲತೆಯು ಲಭ್ಯ ಇದ್ದಾಗ ಇದು ಆಗುತ್ತದೆ. ಜನಪ್ರಿಯವಾಗಿರುವ ಬ್ರ್ಯಾಂಡ್, ಅಥವಾ ದುಬಾರಿ ಬೆಲೆಯ ಉತ್ಪನ್ನವು ಆ ಕಂಪನಿಗೆ ಉತ್ತಮ ಫಂಡಮೆಂಟಲ್ಸ್ ಇರಬಹುದು ಎಂದು ಹೂಡಿಕೆದಾರರು ಭಾವಿಸಿಬಿಡುವುದುಂಟು. ಹೀಗಾಗಿ, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ಅಥವಾ ಕಣ್ಣಿಗೆ ಬೀಳುವ ಕಂಪನಿಗಳ ಬಗ್ಗೆ ಹೂಡಿಕೆದಾರರಿಗೆ ಒಲವು ಹೆಚ್ಚಿರುತ್ತದೆ. ಎಲೆಮರೆ ಕಾಯಿಯಂತಿರುವ, ಆದರೆ ಫಂಡಮೆಂಟಲ್ಸ್ ಉತ್ತಮವಾಗಿರುವ ಕಂಪನಿಗಳನ್ನು ಅವರು ನಿರ್ಲಕ್ಷಿಸುವುದುಂಟು.
ಇದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು. ಒಂದೇ ಒಂದು ಕಳಪೆ ವಿತರಣೆ ಅಥವಾ ನಿರಾಶಾದಾಯಕ ಉತ್ಪನ್ನದ ಮಾರಾಟವು ಹೂಡಿಕೆದಾರನು ತಾನು ನಂಬಿದ್ದ ಕಂಪನಿಯಿಂದ ದೂರ ಸರಿಯುವುದಕ್ಕೆ ಪ್ರೇರಕವಾಗಬುದು. ಇಲ್ಲಿ, ಇತ್ತೀಚಿನ ಘಟನೆಯು ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಮರೆಮಾಡುತ್ತದೆ, ಸಾಕ್ಷ್ಯದಿಂದ ಭಾವನೆಗಳಲ್ಲಿ ಬದಲಾವಣೆಯಾಗುತ್ತದೆ. ಗ್ರಾಹಕರ ಬಳಕೆಯು ಸಂಪೂರ್ಣ ವೈಯಕ್ತಿಕವಾಗಿರುವುದರಿಂದ ಇಂತಹ ಪೂರ್ವಾಗ್ರಹಗಳು ಸಹಜ. ಇದು ಗುರುತು, ಜೀವನಶೈಲಿ ಮತ್ತು ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಹೂಡಿಕೆಯು ಶಿಸ್ತನ್ನು ಬಯಸುತ್ತದೆ. ಆದರೆ ಮಾರುಕಟ್ಟೆ ಪಾಲು ಪ್ರವೃತ್ತಿಗಳು, ಬೆಲೆ ನಿಗದಿ ಸಾಮರ್ಥ್ಯ, ವಿತರಣಾ ವ್ಯಾಪ್ತಿ ಮತ್ತು ನಾವೀನ್ಯತೆ ಪೈಪ್‌ಲೈನ್‌ಗಳು ಮುಖ್ಯ. ವೃತ್ತಿಪರ ವಿಶ್ಲೇಷಣೆಯಿಂದ ಈ ವೈಯಕ್ತಿಕ ಆದ್ಯತೆಗಳನ್ನು ಪ್ರಜ್ಞಾಪೂರ್ವಕವಾಗಿ ವಿಶ್ಲೇಷಿಸುವ ಮೂಲಕ ಹೂಡಿಕೆದಾರರು ದೀರ್ಘಾವಧಿಯ ಅವಕಾಶಗಳನ್ನು ಸೆರೆಹಿಡಿಯಲು ಉತ್ತಮ ಸ್ಥಿತಿಯಲ್ಲಿರುತ್ತಾರೆ.
ಲೇಖಕರು: Sorbh Gupta, Head- Equity, Bajaj Finserv Asset Management




