ಅನುಭವಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಐಪಿಎಲ್ 2021 ರಲ್ಲಿ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಇದರೊಂದಿಗೆ ಅವರು ಅಜೇಯ 76 ರನ್ ಗಳಿಸಿದರು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಪಂದ್ಯಾವಳಿಯಲ್ಲಿ ಸತತ ಮೂರನೇ ಜಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಆರ್‌ಬಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 38 ರನ್‌ಗಳಿಂದ ಸೋಲಿಸಿತು. ಈ ವಿಜಯದ ನಂತರ, ಮಾತಾನಾಡಿದ ಎಬಿ ಡಿವಿಲಿಯರ್ಸ್ ತನ್ನ ಅಭಿಮಾನಿಗಳಿಗೆ ಖುಷಿಕೊಡುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೆನೆಂದರೆ ತಾನು ಮತ್ತೆ ದಕ್ಷಿಣ ಆಫ್ರಿಕಾ ಪರ ಆಡಲು ಬಯಸುತ್ತೇನೆ ಎಂಬುದಾಗಿದೆ. ಟಿ 20 ವಿಶ್ವಕಪ್‌ಗೆ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಅದ್ಭುತ ಎಂದು ಡಿವಿಲಿಯರ್ಸ್ ಪಂದ್ಯದ ಗೆಲುವಿನ ಬಳಿಕ ಹೇಳಿಕೆ ನೀಡಿದ್ದಾರೆ. ಟಿ 20 ವಿಶ್ವಕಪ್ ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿದೆ.
ಈ ಬಗ್ಗೆ ಸಂಪೂರ್ಣವಾಗಿ ಆಸಕ್ತಿ ಹೊಂದಿದ್ದೇನೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಂದ್ಯ ವಿಜೇತ ಇನ್ನಿಂಗ್ಸ್ ಆಡಿದ ನಂತರ ಮಾತಾನಾಡಿದ ಡಿವಿಲಿಯರ್ಸ್, ನಾನು ತಂಡದಲ್ಲಿ (ದಕ್ಷಿಣ ಆಫ್ರಿಕಾ) ಸ್ಥಾನ ಗಳಿಸಲು ಸಾಧ್ಯವಾದರೆ ಅದು ಅದ್ಭುತವಾಗಿರುತ್ತದೆ. ನಾನು ತಂಡಕ್ಕೆ ಪುನರಾಗಮನ ಮಾಡಲು ವಿಫಲವಾದರೂ ಸಹ ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದರು. 37 ವರ್ಷದ ಆಟಗಾರ ಐಪಿಎಲ್‌ನ ಕೊನೆಯ ಹಂತದಲ್ಲಿ ಈ ಬಗ್ಗೆ ಕೋಚ್ ಮಾರ್ಕ್ ಬೌಚರ್ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು. ಜೊತೆಗೆ ನಾನು ಈ ಬಗ್ಗೆ ಸಂಪೂರ್ಣವಾಗಿ ಆಸಕ್ತಿ ಹೊಂದಿದ್ದೇನೆ, ನನ್ನ ಫಾರ್ಮ್ಗೆ ಸಂಬಂಧಿಸಿದಂತೆ, ನನ್ನ ಫಿಟ್ನೆಸ್ಗೆ ಸಂಬಂಧಿಸಿದಂತೆ, ನಂತರ ನಾವು ಅತ್ಯುತ್ತಮ 15 ಆಟಗಾರರನ್ನು ಆಯ್ಕೆ ಮಾಡವ ಬಗ್ಗೆ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸು ಬಗ್ಗೆ ಐಪಿಎಲ್ ಕೊನೆಯಲ್ಲಿ ಬೌಚರ್ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.
ಐಪಿಎಲ್ನಲ್ಲಿನ ಪ್ರದರ್ಶನದ ಮೇಲೆ ನಿರ್ಧಾರ
ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮಾರ್ಕ್ ಬೌಚರ್ ಮಾತನಾಡುತ್ತಾ, ‘ಐಪಿಎಲ್ ನಂತಹ ದೊಡ್ಡ ಪಂದ್ಯಾವಳಿಯಲ್ಲಿ ಆಡಲು ಹೋಗುವ ಮೊದಲು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿವೃತ್ತಿಯಿಂದ ಹಿಂದಿರುಗುವ ಬಗ್ಗೆ ನಾನು ಅವರೊಂದಿಗೆ ಮಾತನಾಡಿದೆ. ಐಪಿಎಲ್ ಸೀಸನ್ 14 ರ ಮೂಲಕ ತಾನು ಮೊದಲು ತನ್ನನ್ನು ತಾನು ಸಾಬೀತುಪಡಿಸಲು ಬಯಸುತ್ತೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಆ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈಗಲೂ ತಾನೊಬ್ಬ ಕೀ ಆಟಗಾರ ಎಂಬುದು ಎಲ್ಲರಿಗೂ ಅರಿವಾಗಬೇಕು. ಈ ರೀತಿಯ ಪ್ರದರ್ಶನ ತೋರಬೇಕು ಎಂಬುದು ಎಬಿ ಡಿವಿಲಿಯರ್ಸ್ ಮನಸ್ಸಿನಲ್ಲಿದೆ. ಎಬಿಡಿ ಈ ರೀತಿಯ ಮನಸ್ಸು ಇರುವ ವ್ಯಕ್ತಿ ಎಂದು ಬೌಚರ್ ತಿಳಿಸಿದರು.
ಟಿ 20 ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ. ಈ ಪ್ರಮುಖ ಪಂದ್ಯಾವಳಿಗಾಗಿ ತಮ್ಮ ತಯಾರಿಕೆಯ ಆಧಾರವಾಗಿ ಬಹುತೇಕ ಎಲ್ಲಾ ತಂಡಗಳು ಐಪಿಎಲ್ ಅನ್ನು ಪರಿಗಣಿಸುತ್ತಿವೆ. ಎಲ್ಲಾ ತಂಡಗಳ ಆಟಗಾರರು ತಮ್ಮನ್ನು ತಾವು ಸಾಬೀತುಪಡಿಸುವಲ್ಲಿ ನಿರತರಾಗಲು ಇದು ಕಾರಣವಾಗಿದೆ. ಏತನ್ಮಧ್ಯೆ, ಡಿವಿಲಿಯರ್ಸ್ ಐಪಿಎಲ್ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಸ್ವತಃ ಸಾಬೀತುಪಡಿಸಿದರೆ, ಅವರ ಪುನರಾಗಮನವು ದಕ್ಷಿಣ ಆಫ್ರಿಕಾಕ್ಕೆ ಮುಖ್ಯವೆಂದು ಸಾಬೀತುಪಡಿಸಬಹುದು
ಡಿವಿಲಿಯರ್ಸ್ ಅವರು ಮೇ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.