Yuzvendra Chahal: ಮೊದಲ ವಿಕೆಟ್ ಕಿತ್ತ ಚಹಾಲ್ ಸಂಭ್ರಮ ನೋಡಿ ಕಣ್ಣೀರಿಟ್ಟ ಧನಶ್ರೀ; ಫೊಟೊ ವೈರಲ್

ನಿತೀಶ್ ರಾಣಾ ಬಾರಿಸಿದ ಚೆಂಡನ್ನು ದೇವದತ್ ಪಡಿಕ್ಕಲ್ ಕ್ಯಾಚ್ ಹಿಡಿಯುತ್ತಿದ್ದಂತೆ, ಚಹಾಲ್ ತಂಡದ ಆಟಗಾರರೊಂದಿಗೆ ಸಂಭ್ರಮಿಸಿದರು. ಈ ಸಂಭ್ರಮಕ್ಕೆ ಪೆವಿಲಿಯನ್​ನಲ್ಲಿದ್ದ ಚಹಾಲ್ ಪತ್ನಿ ಧನಶ್ರೀ ಕೂಡ ಪಾಲುದಾರರಾದರು.

Yuzvendra Chahal: ಮೊದಲ ವಿಕೆಟ್ ಕಿತ್ತ ಚಹಾಲ್ ಸಂಭ್ರಮ ನೋಡಿ ಕಣ್ಣೀರಿಟ್ಟ ಧನಶ್ರೀ; ಫೊಟೊ ವೈರಲ್
ಯಜ್ವೇಂದ್ರ ಚಹಾಲ್
Follow us
TV9 Web
| Updated By: ganapathi bhat

Updated on:Nov 30, 2021 | 12:18 PM

ಯಜ್ವೇಂದ್ರ ಚಹಾಲ್ ಒಂದೊಮ್ಮೆ ಸ್ಪಿನ್ ಬೌಲಿಂಗ್​ನ ಯಶಸ್ವಿ ಬೌಲರ್ ಎಂದು ಗುರುತಿಸಿಕೊಂಡವರು. ಸ್ಪಿನ್ ವಿಭಾಗವನ್ನೇ ಮುನ್ನಡೆಸಬಲ್ಲ ಸಾಮರ್ಥ್ಯವುಳ್ಳ ಆಟಗಾರ ಎಂದು ಕರೆಸಿಕೊಂಡವರು. ಆದರೆ, 2020-21 ವರ್ಷ ಅವರಿಗೆ ಅಷ್ಟೊಂದು ಫಲಪ್ರದವಾಗಿ ಕಂಡುಬಂದಿಲ್ಲ. ಭಾರತದ ಟಿ20 ಪ್ಲೇಯಿಂಗ್ ಇಲೆವೆನ್​ನಿಂದ ಚಹಾಲ್ ಮೊದಲು ಹೊರಗುಳಿದಿದ್ದರು. ಆದರೆ, ಬಳಿಕ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಐಪಿಎಲ್ ವಿಚಾರಕ್ಕೆ ಬಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಮುಂಚೂಣಿಯ ಸ್ಪಿನ್ನರ್ ಆಗಿ ಚಹಾಲ್ ಗುರುತಿಸಿಕೊಂಡಿದ್ದರು. ವಿಕೆಟ್ ಪಡೆಯುವ ಒತ್ತಡವೂ ಅವರ ಮೇಲಿತ್ತು.

ಐಪಿಎಲ್ 2021 ಸರಣಿಯಲ್ಲಿ ಆರ್​ಸಿಬಿ ಪರ ಮೊದಲ ಎರಡು ಪಂದ್ಯಗಳನ್ನು ಆಡಿದ್ದ ಚಹಾಲ್, ಒಂದೂ ವಿಕೆಟ್ ಕಬಳಿಸದೇ ಉಳಿದಿದ್ದರು. ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಚಹಾಲ್​ಗೆ ವಿಕೆಟ್ ಬಿದ್ದಿರಲಿಲ್ಲ. ಆದರೆ, ಆರ್​ಸಿಬಿ ಪರವಾಗಿ ಚಹಾಲ್ ಉತ್ತಮ ಬೌಲಿಂಗ್ ನಡೆಸುವ ನಿರೀಕ್ಷೆ ಇತ್ತು. 2014ರಲ್ಲಿ ರಾಯಲ್ ಚಾಲೆಂಜರ್ಸ್ ಪಾಲಾದ ಚಹಾಲ್, ಅಲ್ಲಿಂದ ಇಲ್ಲಿತನಕ 100ಕ್ಕೂ ಅಧಿಕ ಪಂದ್ಯ ಆಡಿದ್ದಾರೆ.

ಕೊನೆಗೂ, ನಿನ್ನೆ (ಏಪ್ರಿಲ್ 18) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3ನೇ ಪಂದ್ಯವನ್ನು ಆಡಿದ ರಾಯಲ್ ಚಾಲೆಂಜರ್ಸ್ ಪರವಾಗಿ ಚಹಾಲ್ ವಿಕೆಟ್ ಕಿತ್ತರು. ಕೋಲ್ಕತ್ತಾ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ನಿತೀಶ್ ರಾಣಾ ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾದರು. ಅದು ಈ ಟೂರ್ನಿಯ ಚಹಾಲ್​ರ ಮೊದಲ ವಿಕೆಟ್ ಆಗಿತ್ತು. ಈ ಮೂಲಕ ಚಹಾಲ್ 2021 ಐಪಿಎಲ್​ನ ವಿಕೆಟ್ ಸರಮಾಲೆ ಮುಂದುವರಿಸುವ , ತಂಡದ ಪರ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಹುಟ್ಟಿಕೊಂಡಿದೆ.

ನಿತೀಶ್ ರಾಣಾ ಬಾರಿಸಿದ ಚೆಂಡನ್ನು ದೇವದತ್ ಪಡಿಕ್ಕಲ್ ಕ್ಯಾಚ್ ಹಿಡಿಯುತ್ತಿದ್ದಂತೆ, ಚಹಾಲ್ ತಂಡದ ಆಟಗಾರರೊಂದಿಗೆ ಸಂಭ್ರಮಿಸಿದರು. ಈ ಸಂಭ್ರಮಕ್ಕೆ ಪೆವಿಲಿಯನ್​ನಲ್ಲಿದ್ದ ಚಹಾಲ್ ಪತ್ನಿ ಧನಶ್ರೀ ಕೂಡ ಪಾಲುದಾರರಾದರು. ಧನಶ್ರೀ ಇಮೋಷನಲ್ ಆಗಿ ಚಹಾಲ್ ಸಂಭ್ರಮವನ್ನು ವೀಕ್ಷಿಸಿದರು. ಧನಶ್ರೀ ಭಾವುಕರಾಗಿರುವ ಈ ಚಿತ್ರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.

2 ವಿಕೆಟ್ ಕಬಳಿಸಿದ್ದ ಚಹಾಲ್ ನಿನ್ನೆಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ರನ್ನು ಔಟ್ ಮಾಡಿರುವ ಚಹಾಲ್, ಒಟ್ಟು 4 ಓವರ್ ಬೌಲಿಂಗ್ ಮಾಡಿ 34 ರನ್ ಬಿಟ್ಟುಕೊಟ್ಟು, 2 ವಿಕೆಟ್ ಪಡೆದಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ 38 ರನ್​ಗಳ ಜಯ ಗಳಿಸಿತ್ತು. ರಾಯಲ್ ಚಾಲೆಂಜರ್ಸ್ ಪರ ಜಾಮಿಸನ್ 3, ಚಹಾಲ್ 2, ಹರ್ಷಲ್ ಪಟೇಲ್ ಹಾಗೂ ಸುಂದರ್ 1 ವಿಕೆಟ್ ಪಡೆದಿದ್ದರು. ಸಿರಾಜ್ 9ನೇ ಓವರ್​ನಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಪಂದ್ಯವನ್ನು ಸಂಪೂರ್ಣ ಆರ್​ಸಿಬಿ ಪಾಲಾಗಿಸಿದ್ದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ಗಳನ್ನು ಕಳೆದುಕೊಂಡು ಭರ್ಜರಿ 204 ರನ್ ದಾಖಲಿಸಿತ್ತು. ಬೆಂಗಳೂರು ಪರ ಗ್ಲೆನ್ ಮ್ಯಾಕ್ಸ್​ವೆಲ್ 78 (49) ಹಾಗೂ ಎಬಿ ಡಿವಿಲಿಯರ್ಸ್ 76 (34)* ಆಕರ್ಷಕ ಅರ್ಧಶತಕದ ಕೊಡುಗೆ ನೀಡಿದ್ದರು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಪಾಟೀದಾರ್ ವರುಣ್ ಚಕ್ರವರ್ತಿಗೆ ಬಹುಬೇಗ ವಿಕೆಟ್ ಒಪ್ಪಿಸಿದರೂ ನಂತರ ಆರ್​ಸಿಬಿ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಚಕ್ರವರ್ತಿ 2, ಕಮ್ಮಿನ್ಸ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: Chahal dhanashree meet Yash Radhika ಬೆಂಗಳೂರಲ್ಲಿ ಯಶ್​-ರಾಧಿಕಾ ದಂಪತಿಯ ಭೇಟಿ ಮಾಡಿದ ಚಹಾಲ್​-ಧನಶ್ರೀ

ಇದನ್ನೂ ಓದಿ: RCB Record: ಹ್ಯಾಟ್ರಿಕ್ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಇದುವರೆಗೆ ಮಾಡಿರದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡ ಆರ್ಸಿಬಿ!

Published On - 3:31 pm, Mon, 19 April 21