Glenn Maxwell: ಪಂಜಾಬ್ನಲ್ಲಿ ಜೀರೋ, ಆರ್ಸಿಬಿಯಲ್ಲಿ ಹೀರೋ; ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆದ ಪಂಜಾಬ್ ಕಿಂಗ್ಸ್
ಕಳೆದ ಎರಡು ಪಂದ್ಯಗಳಲ್ಲೂ ಉತ್ತಮ ಆಟವಾಡಿದ್ದ ಮ್ಯಾಕ್ಸ್ವೆಲ್ ನಿನ್ನೆ ಕೂಡ ಸ್ಫೋಟಕ ಬ್ಯಾಟಿಂಗ್ ತೋರಿದ್ದಾರೆ. ಆ ಬಗ್ಗೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕೆಲ ತಮಾಷೆಗಳು ಇಲ್ಲಿವೆ.
ಆಸ್ಟ್ರೇಲಿಯಾ ತಂಡದ ಪವರ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತೆ ತಮ್ಮ ಬಿರುಸಿನ ಆಟದ ಫಾರ್ಮ್ಗೆ ಮರಳಿರುವಂತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಐಪಿಎಲ್ 2021ರಲ್ಲಿ ಉತ್ತಮ ಆಟವಾಡುತ್ತಿರುವ ಮ್ಯಕ್ಸ್ವೆಲ್ರನ್ನು ಆರ್ಸಿಬಿ ತಂಡ 14.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅದಕ್ಕೆ ತಕ್ಕಂತೆ ಆಡುತ್ತಿರುವ ಮ್ಯಾಕ್ಸಿ, ನಿನ್ನೆಯ ಆರ್ಸಿಬಿ ಪಂದ್ಯದಲ್ಲಿ 49 ಬಾಲ್ಗೆ 6 ಫೋರ್ ಹಾಗೂ 3 ಸಿಕ್ಸರ್ ಸಹಿತ 78 ರನ್ ಪೇರಿಸಿದ್ದರು. ಬಳಿಕ ಆರೆಂಜ್ ಕ್ಯಾಪ್ನ್ನೂ ಪಡೆದುಕೊಂಡಿದ್ದರು.
ಎಬಿ ಡಿವಿಲಿಯರ್ಸ್ ಜೊತೆಗೆ ಇನ್ನಿಂಗ್ಸ್ ಕಟ್ಟಿದ ಮ್ಯಾಕ್ಸ್ವೆಲ್ ಆರ್ಸಿಬಿ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲು ಕಾರಣರಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬೃಹತ್ ಮೊತ್ತ ಬೆನ್ನತ್ತಲು ಕಷ್ಟಪಡುವಂತಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳ ಅಂತ್ಯಕ್ಕೆ 4 ವಿಕೆಟ್ಗಳನ್ನು ಕಳೆದುಕೊಂಡು ಭರ್ಜರಿ 204 ರನ್ ದಾಖಲಿಸಿತ್ತು. ಬೆಂಗಳೂರು ಪರ ಗ್ಲೆನ್ ಮ್ಯಾಕ್ಸ್ವೆಲ್ 78 (49) ಹಾಗೂ ಎಬಿ ಡಿವಿಲಿಯರ್ಸ್ 76 (34)* ಆಕರ್ಷಕ ಅರ್ಧಶತಕದ ಕೊಡುಗೆ ನೀಡಿದ್ದರು.
ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿಯ ಆಟ ಕ್ರಿಕೆಟ್ ಅಭಿಮಾನಿಗಳನ್ನು ಅದರಲ್ಲೂ ವಿಶೇಷವಾಗಿ ಪಂಜಾಬ್ ಕಿಂಗ್ಸ್ ಅಭಿಮಾನಿಗಳನ್ನು ಚಕಿತಗೊಳಿಸಿದೆ. ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದಲ್ಲಿ ಆಡಿದ್ದ ಮ್ಯಾಕ್ಸ್ವೆಲ್ 13 ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ, ಮ್ಯಾಕ್ಸಿ ಈ ಬಾರಿ ಆರ್ಸಿಬಿ ಸೇರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಪಂಜಾಬ್ ಕಿಂಗ್ಸ್ ಕೊ-ಓನರ್ ಪ್ರೀತಿ ಜಿಂಟಾ ಬಗ್ಗೆ ಹಲವು ಟ್ರಾಲ್ ಹಾಗೂ ಮಿಮ್ಸ್ಗಳು ಓಡಾಡುವಂತೆ ಮಾಡಿದೆ.
ಕಳೆದ ಎರಡು ಪಂದ್ಯಗಳಲ್ಲೂ ಉತ್ತಮ ಆಟವಾಡಿದ್ದ ಮ್ಯಾಕ್ಸ್ವೆಲ್ ನಿನ್ನೆ ಕೂಡ ಸ್ಫೋಟಕ ಬ್ಯಾಟಿಂಗ್ ತೋರಿದ್ದಾರೆ. ಆ ಬಗ್ಗೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕೆಲ ತಮಾಷೆಗಳು ಇಲ್ಲಿವೆ.
Preity Zinta watching Maxwell’s performce for RCB pic.twitter.com/BxLwa1NQmK
— Sagar (@sagarcasm) April 18, 2021
Preity Zinta after selling Glenn Maxwell. pic.twitter.com/vdBJJvM2jM
— Pakchikpak Raja Babu (@HaramiParindey) April 18, 2021
#RCBvKKR Preity Zinta while watching Maxwell’s batting pic.twitter.com/HhtXbHwRWh
— Prasad Remje (@munna_30_) April 18, 2021
Preity Zinta watching Maxwell coming back in form
— VARMA™ (@OnlyforPrabhass) April 18, 2021
ಇದನ್ನೂ ಓದಿ: Yuzvendra Chahal: ಮೊದಲ ವಿಕೆಟ್ ಕಿತ್ತ ಚಹಾಲ್ ಸಂಭ್ರಮ ನೋಡಿ ಕಣ್ಣೀರಿಟ್ಟ ಧನಶ್ರೀ; ಫೊಟೊ ವೈರಲ್
Published On - 4:28 pm, Mon, 19 April 21