IPL 2021: ಈ ಸೀಸನ್​ನ 10 ಕೋಟಿ ಚಿಯರ್ ಲೀಡರ್! ಸೆಹ್ವಾಗ್ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ಮ್ಯಾಕ್ಸ್​ವೆಲ್

IPL 2021 Glenn Maxwell: ಸೆಹ್ವಾಗ್, ನನ್ನ ಬಗ್ಗೆ ಇಷ್ಟಪಡದಿರುವ ಬಗ್ಗೆ ಮಾತನಾಡ್ತಾರೆ. ಇಷ್ಟಪಡುವುದನ್ನು ಹೇಳಲೂ ಅವರಿಗೆ ಅವಕಾಶವಿದೆ. ಆದ್ರೆ ಇಂತಹ ಹೇಳಿಕೆಗಳನ್ನ ನೀಡೋದ್ರಿಂದಲೇ, ವೀರೂ ಮಾದ್ಯಮದಲ್ಲಿದ್ದಾರೆ.

IPL 2021: ಈ ಸೀಸನ್​ನ 10 ಕೋಟಿ ಚಿಯರ್ ಲೀಡರ್! ಸೆಹ್ವಾಗ್ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ಮ್ಯಾಕ್ಸ್​ವೆಲ್
ಸೆಹ್ವಾಗ್, ಮ್ಯಾಕ್ಸ್​ವೆಲ್
Follow us
ಪೃಥ್ವಿಶಂಕರ
|

Updated on: Apr 19, 2021 | 5:37 PM

ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಎರಡನೇ ಓವರ್ನಲ್ಲೇ ವಿಕೆಟ್ ಒಪ್ಪಿಸುತ್ತಿದ್ದಂತೆ, ಇನ್ನೇನು ಆರ್ಸಿಬಿ ಕತೆ ಮುಗೀತು. ಕೆಕೆಆರ್ ಪಂದ್ಯದ ಮೇಲಿನ ಹಿಡಿತವನ್ನು ಮುಂದುವರಿಸಿಕೊಂಡು ಹೋಗುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದು, ಗ್ಲೇನ್ ಮ್ಯಾಕ್ಸ್ವೆಲ್. ಕ್ರೀಸ್ಗೆ ಬರುತ್ತಿದ್ದಂತೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಶುರುಮಾಡಿದ ಮ್ಯಾಕ್ಸ್ವೆಲ್, ಕೆಕೆಆರ್ ಬೌಲರ್ಗಳಿಗೆ ದಿಕ್ಕೇ ತೋಚದಂತೆ ಮಾಡಿದ್ರು. ಮ್ಯಾಕ್ಸ್ವೆಲ್ ಹೊಡಿ ಬಡಿ ಆಟಕ್ಕೆ ನಾವೇ ಗೆದ್ವಿ ಅನ್ನೋ ನಂಬಿಕೆಯಲ್ಲಿದ್ದ ಮಾರ್ಗನ್ ಪಡೆ ಕಂಗಾಲಾಗಿ ಹೋಯ್ತು.

ಚೆಪಾಕ್ ಮೈದಾನದಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಹರಿಸಿದ ಮ್ಯಾಕ್ಸ್ವೆಲ್, ನೋಡ ನೋಡ್ತಿದ್ದಂತೆ ಸಂಕಷ್ಟದಲ್ಲಿದ್ದ ಆರ್ಸಿಬಿಯನ್ನ ಸುಸ್ಥಿತಿಗೆ ತಂದು ನಿಲ್ಲಿಸಿದ್ರು. ಚೆಪಾಕ್ ಮೈದಾನದಲ್ಲಿ ರಿವರ್ಸ್ ಸ್ವೀಪ್ ಸೇರಿದಂತೆ ಸಾಲಿಡ್ ಶಾಟ್ಗಳನ್ನ ಬಾರಿಸಿದ ಮ್ಯಾಕ್ಸ್ವೆಲ್, ಆಕರ್ಷಕ ಅರ್ಧಶತಕ ಸಿಡಿಸಿದ್ರು.

ಕೊಲ್ಕತ್ತಾ ವಿರುದ್ಧ ಮ್ಯಾಕ್ಸ್ವೆಲ್ ಕೊಲ್ಕತ್ತಾ ವಿರುದ್ಧ 49 ಬಾಲ್ಗಳನ್ನ ಎದುರಿಸಿದ ಗ್ಲೇನ್ ಮ್ಯಾಕ್ಸ್ವೆಲ್ 9 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 78 ರನ್ಗಳಿಸಿದ್ರು. ಆರ್ಸಿಬಿ ಪರ ಆಡಿದ ಮೂರೇ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅಷ್ಟೇ ಅಲ್ಲ.. ಈಗಲೇ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ 2 ಅರ್ಧಶತಕ ಸಹಿತ 176 ರನ್ಗಳಿಸಿದ್ದಾರೆ. ಈ ಮೂಲಕ ಅತೀ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮ್ಯಾಕ್ಸಿ ಆರ್ಭಟದ ಹಿಂದಿತ್ತು ಕಳೆದ ಐಪಿಎಲ್ನಲ್ಲಾದ ಅವಮಾನ! ಕೊಲ್ಕತ್ತಾ ವಿರುದ್ಧ ಮ್ಯಾಕ್ಸ್ವೆಲ್ ಈ ಪಾಟಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವುದರ ಹಿಂದೆ, ಕಳೆದ ಸೀಸನ್ನಲ್ಲಾದ ಅವಮಾನ ಕಾಡುತ್ತಿತ್ತು. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಗ್ಲೇನ್ ಮ್ಯಾಕ್ಸ್ವೆಲ್ ನೀಡಿದ ಕಳಪೆ ಪ್ರದರ್ಶನ ಅಂತಿಂತದ್ದಲ್ಲ. ಆಡಿದ 13 ಪಂದ್ಯಗಳಲ್ಲಿ ಕೇವಲ 108 ರನ್ಗಳಿಸಿದ ಮ್ಯಾಕ್ಸಿಯನ್ನು, ಪಂಜಾಬ್ ಫ್ರಾಂಚೈಸಿ ತಂಡದಿಂದಲೇ ಹೊರಗಟ್ಟಿತ್ತು.

ಅದ್ರಲ್ಲೂ ವಿರೇಂದ್ರ ಸೆಹ್ವಾಗ್ ಆಡಿದ ಮಾತು, ಮ್ಯಾಕ್ಸ್ವೆಲ್ರನ್ನ ಹೆಗಲೇರಿ ಕಾಡುತ್ತಿತ್ತು. ಮ್ಯಾಕ್ಸ್ವೆಲ್ ಈ ಸೀಸನ್ನಲ್ಲಿ 10 ಕೋಟಿ ಚಿಯರ್ ಲೀಡರ್.. ಹೆಚ್ಚು ಸಂಬಳ ಪಡೆಯುವ ರಜೆಯಂತಿದೆ ಮ್ಯಾಕ್ಸ್ವೆಲ್ ಪ್ರದರ್ಶನ ಎಂದು, ಎಂದು ಕಿಂಡಲ್ ಮಾಡಿದ್ರು.

ಗ್ಲೇನ್ ಮ್ಯಾಕ್ಸ್ವೆಲ್ ಪಂಜಾಬ್ಗೆ ₹10 ಕೋಟಿ ಚಿಯರ್ ಲೀಡರ್ ಆಗಿದ್ದಾರೆ. ಕಳೆದ ಕೆಲವು ಐಪಿಎಲ್ ಸೀಸನ್ಗಳಿಂದ ಮ್ಯಾಕ್ಸ್ವೆಲ್ ಸರಿಯಾಗಿ ಆಡುತ್ತಿಲ್ಲ. ಈ ಸೀಸನ್ನಲ್ಲಿ ಮ್ಯಾಕ್ಸ್ವೆಲ್ ತಮ್ಮದೇ ದಾಖಲೆಯನ್ನ ಮುರಿದಿದ್ದಾರೆ. ಇದನ್ನೇ ಹೆಚ್ಚು ಸಂಬಳ ಪಡೆಯುವ ರಜೆ ಎಂದು ಕರೆಯಲಾಗುತ್ತೆ. -ವಿರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ

ಇಷ್ಟೇ ಅಲ್ಲದೇ ಸೆಹ್ವಾಗ್, ಮ್ಯಾಕ್ಸ್ವೆಲ್ ಇನ್ನು ಹಗುರವಾಗಿ ಮತಾನಾಡಿದ್ರು. ಮ್ಯಾಕ್ಸ್ವೆಲ್ ಮೈದಾನದಲ್ಲಿ ಡ್ರಿಂಕ್ಸ್ ಕುಡಿಯೋದಷ್ಟೇ ಅಲ್ಲ.. ರೂಮ್ಗೂ ತಗೆದುಕೊಂಡು ಹೋಗ್ತಾರೆ ಅಂತಾ ಲೇವಡಿ ಮಾಡಿದ್ರು. ಆದ್ರೆ ಮ್ಯಾಕ್ಸ್ವೆಲ್, ಸೆಹ್ವಾಗ್ಗೆ ಅದೇ ದಾಟಿಯಲ್ಲಿ ಉತ್ತರ ನೀಡಲು ಹೋಗಿರಲಿಲ್ಲ. ಸೆಹ್ವಾಗ್, ನನ್ನ ಬಗ್ಗೆ ಇಷ್ಟಪಡದಿರುವ ಬಗ್ಗೆ ಮಾತನಾಡ್ತಾರೆ. ಇಷ್ಟಪಡುವುದನ್ನು ಹೇಳಲೂ ಅವರಿಗೆ ಅವಕಾಶವಿದೆ. ಆದ್ರೆ ಇಂತಹ ಹೇಳಿಕೆಗಳನ್ನ ನೀಡೋದ್ರಿಂದಲೇ, ವೀರೂ ಮಾದ್ಯಮದಲ್ಲಿದ್ದಾರೆ. ಹೀಗಾಗಿ ನಾನಿದರ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ ಎಂದಿದ್ರು.

ಸೆಹ್ವಾಗ್ ಮಾತುಗಳನ್ನ ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಮ್ಯಾಕ್ಸ್ವೆಲ್, ಈ ಸೀಸನ್ನಲ್ಲಿ ಆರ್ಸಿಬಿ ಪರ ತಾವೇನು ಅನ್ನೋದನ್ನ ತೋರಿಸಿದ್ದಾರೆ. ಸ್ವತಃ ಪಂಜಾಬ್ ಫ್ರಾಂಚೈಸಿಯೇ ಯಾಕಪ್ಪಾ ಇವನನ್ನಾ ಹೊರಗಟ್ಟಿದ್ವಿ ಅಂತಾ ಚಡಪಡಿಸುತ್ತಿದ್ದಾರೆ. ಆದ್ರೀಗ ಸೆಹ್ವಾಗ್ ಉಲ್ಟಾ ಹೊಡೆದಿದ್ದಾರೆ. ಕಡೆಗೂ ಮ್ಯಾಕ್ಸ್ವೆಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡುತ್ತಿದ್ದಾರೆ ಎಂದಿದ್ದಾರೆ..

ಇನ್ನು ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸಿಯನ್ನ ಆರ್ಸಿಬಿ ₹14.25 ಕೋಟಿ ನೀಡಿ ಖರೀದಿಸಿದ್ದಾಗ, ಎಲ್ಲರೂ ಯಾಕಪ್ಪಾ ಇವನನ್ನ ಖರೀದಿಸಿದ್ರು ಎಂದಿದ್ರು. ಆದ್ರೆ ಮ್ಯಾಕ್ಸ್ವೆಲ್, ಆರ್ಸಿಬಿ ತನಗೆ ನೀಡಿದ ಮೊತ್ತಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಷ್ಟೇ ಅಲ್ಲ.. ತಮ್ಮನ್ನ ಅಣುಕಿಸಿದ ಸೆಹ್ವಾಗ್ಗೆ, ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ.

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ