ಕಾಬೂಲ್​ನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಕೊಟ್ಟ ಅಧ್ಯಕ್ಷ ಘನಿ

ನಿರಂತರ ಯುದ್ಧಗಳಿಂದ ಜರ್ಝರಿತಗೊಂಡಿರುವ ಅಫಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಶೀಘ್ರದಲ್ಲೇ ಒಂದು ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ತಲೆಯೆತ್ತಲಿದೆ. ಕ್ರೀಡಾಂಗಣಕ್ಕಾಗಿ ರಾಜಧಾನಿ ಕಾಬೂಲಿನ ಕೇಂದ್ರ ಭಾಗವಾಗಿರುವ ಅಲೋಕ್ಹೇಲ್ ಪ್ರದೇಶದಲ್ಲಿ ಅಧ್ಯಕ್ಷ ಮೊಹಮ್ಮದ್ ಆಶ್ರಫ್ ಘನಿ ಎರಡು ಎಕರೆಗಳಿಗಿಂತ ಹೆಚ್ಚು ಜಮೀನನ್ನು ಮಂಜೂರು ಮಾಡಿದ್ದಾರೆ.

ಕಾಬೂಲ್​ನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ಕೊಟ್ಟ ಅಧ್ಯಕ್ಷ ಘನಿ
ಅಫಘಾನಿಸ್ತಾನದ ಆಟಗಾರರು
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 21, 2020 | 10:56 PM

ಕಾಬೂಲ್: ಸ್ವದೇಶದ ಸರಣಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ತನ್ನ ನೆರೆರಾಷ್ಟ್ರವಾಗಿರುವ ಭಾರತದ ಮೊರೆ ಹೋಗುತ್ತಿದ್ದ ಅಫ್ಗಾನಿಸ್ತಾನ ಕ್ರಿಕೆಟ್ (ಎಸಿಬಿ) ಮಂಡಳಿಯು ಇಷ್ಟರಲ್ಲೇ ಒಂದು ಸ್ವಂತದ ಕ್ರಿಕೆಟ್ ಕ್ರೀಡಾಂಗಣ ಹೊಂದುವ ಸಾಧ್ಯತೆ ನಿಚ್ಚಳವಾಗಿದೆ. ಆ ರಾಷ್ಟ್ರವು ಆತಿಥ್ಯ ವಹಿಸುವ ಎಲ್ಲ ಅಂತರರಾಷ್ಟ್ರೀಯ ಪಂದ್ಯಗಳು ಅಲ್ಲೇ ನಡೆಯಲಿವೆ.

ಯುದ್ಧದಿಂದ ಜರ್ಝರಿತವಾಗಿರುವ ಅಫ್ಗಾನಿಸ್ತಾನ ದೇಶಕ್ಕೆ ಇದೊಂದು ಸಿಹಿ ಸುದ್ದಿ. ಕ್ರೀಡಾಂಗಣಕ್ಕಾಗಿ ರಾಜಧಾನಿ ಕಾಬೂಲಿನ ಕೇಂದ್ರ ಭಾಗವಾಗಿರುವ ಅಲೋಕ್ಹೇಲ್ ಪ್ರದೇಶದಲ್ಲಿ ಅಫ್ಗಾನಿಸ್ತಾನದ ಅಧ್ಯಕ್ಷ ಮೊಹಮ್ಮದ್ ಆಶ್ರಫ್ ಘನಿ ಎರಡು ಎಕರೆಗಳಿಗಿಂತ ಹೆಚ್ಚು ಜಮೀನನ್ನು ಭಾನುವಾರ ಮಂಜೂರು ಮಾಡಿದರು. ಈ ವಿಚಾರವನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡ ಎಸಿಬಿ ಮುಖ್ಯಸ್ಥ ಪರ್ಹಾನ್ ಯುಸೂಫ್​ಜಾಯಿ, ಅದಷ್ಟು ಬೇಗ ಸ್ಟೇಡಿಯಂ ನಿರ್ಮಾಣಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

‘ಇನ್ನು ಕೆಲವೇ ತಿಂಗಳುಗಳಲ್ಲಿ ಅಫ್ಗಾನಿಸ್ತಾನದಲ್ಲಿ ಪಂದ್ಯ ಮತ್ತು ಸರಣಿಗಳು ನಡೆಯಲಿವೆ. ಅಂತರರಾಷ್ಟ್ರೀಯ ಆಟಗಾರರು ಸ್ವದೇಶದ ನೆಲದಲ್ಲಿ ಆಡುವುದನ್ನು ಅಫ್ಗಾನಿಸ್ತಾನದ ಜನರು ವೀಕ್ಷಿಸಲಿದ್ದಾರೆ’ ಎಂದು ಯುಸೂಫ್​ಜಾಯಿ ಹೇಳಿದರು.

ಎಸಿಬಿ ಮುಖ್ಯಸ್ಥ ಫರ್ಹಾನ್ ಯುಸೂಫ್​ಜಾಯಿ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸದಸ್ಯತ್ವ ಪಡೆದ ನಂತರ ಆಫ್ಗಾನಿಸ್ತಾನವು ಸ್ವದೇಶದ ಪಂದ್ಯ ಮತ್ತು ಸರಣಿಗಳನ್ನು ಭಾರತದ ಡೆಹ್ರಾಡೂನ್, ಲಖನೌ ಮತ್ತು ನೊಯ್ಡಾದಲ್ಲಿ ಅಯೋಜಿಸುತ್ತಿತ್ತು.

‘ಸ್ಟೇಡಿಯಂ ನಿರ್ಮಾಣಗೊಂಡ ನಂತರ ಕಾಬೂಲ್ ಅಂತರರಾಷ್ಟ್ರೀಯ ಕ್ರಿಕೆಟ್​ನ ತವರು ಎನಿಸಿಕೊಳ್ಳಲಿದೆ. ಕ್ರೀಡಾಂಗಣ ನಿರ್ಮಿಸಲು ಜಮೀನು ಒದಗಿಸಿದ ಗೌರವಾನ್ವಿತ ಅಧ್ಯಕ್ಷರಿಗೆ ಹೃತ್ಪೂರ್ವಕ ಧನ್ಯವಾದಗಳು. ದೇಶದಲ್ಲಿ ಕ್ರಿಕೆಟ್ ಪ್ರಗತಿ ಹೊಂದುವುದನ್ನು ಅವರು ನಿರಂತರವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ನಮ್ಮ ಆಟಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಪ್ರಾಥಮಿಕ ಹಂತದ ಪ್ರಕ್ರಿಯೆಗಳು ಮುಗಿದ ನಂತರ ಒಂದು ಅಭೂತಪೂರ್ವ ಕ್ರಿಕೆಟ್ ಸ್ಟೇಡಿಯಂ ಅನ್ನು ಕಾಬೂಲ್​ನಲ್ಲಿ ನಿರ್ಮಿಸಲಾಗುವುದು. ಆ ದಿನಕ್ಕಾಗಿ ಇಡೀ ದೇಶವೇ ಎದುರುನೋಡುತ್ತಿದೆ’ ಎಂದು ಯುಸೂಫ್​ಜಾಯಿ ಹೇಳಿದರು.

ಯುಸೂಫ್​ಜಾಯಿ ಪ್ರಕಾರ, ಪಂಚತಾರಾ ಸೌಲಭ್ಯಗಳುಳ್ಳ ರೂಮುಗಳು, ಈಜುಕೊಳ, ಅಭ್ಯಾಸಕ್ಕಾಗಿ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳು, ಪ್ರೇಕ್ಷಕರಿಗಾಗಿ ಟೆಂಟ್​ಗಳು, ಆರೋಗ್ಯ ಕೇಂದ್ರ, ಮಸೀದಿ, ಕಾರ್ ಪಾರ್ಕಿಂಗ್​ಗಾಗಿ ವಿಪುಲ ಸ್ಥಳಾವಕಾಶ, ಆಡಳಿತ ಕಚೇರಿ ಮೊದಲಾದುವುಗಳನ್ನು ಹೊಂದಲಿರುವ ಈ ಸ್ಟೇಡಿಯಂನಲ್ಲಿ 35,000 ಪ್ರೇಕ್ಷಕರು ಕುಳಿತು, ಪಂದ್ಯ ನೋಡಬಹುದಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿವಾದಾತ್ಮಕ ಬೌಲರ್ ಮೊಹಮ್ಮದ್ ಆಮಿರ್

Published On - 4:29 pm, Mon, 21 December 20

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?