Rashid Khan: 5 ವರ್ಷದಲ್ಲಿ ಕೇವಲ 25 ದಿನ ಮಾತ್ರ ಮನೆಯಲ್ಲಿದ್ದರಂತೆ ರಶೀದ್ ಖಾನ್; ಕಾರಣವೇನು ಗೊತ್ತಾ?

Rashid Khan: ನಾನು ಎಲ್ಲಿಗೆ ಹೋದರೂ ಅಂತರರಾಷ್ಟ್ರೀಯ ಆಟಗಾರರು ತಮ್ಮ ತಾಯ್ನಾಡಿನಲ್ಲಿ ಪ್ರೇಕ್ಷಕರ ಮುಂದೆ ಆಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮ್ಮ ದೇಶದಲ್ಲಿಯೂ ಇದು ನಮಗೆ ಬೇಕು.

Rashid Khan: 5 ವರ್ಷದಲ್ಲಿ ಕೇವಲ 25 ದಿನ ಮಾತ್ರ ಮನೆಯಲ್ಲಿದ್ದರಂತೆ ರಶೀದ್ ಖಾನ್; ಕಾರಣವೇನು ಗೊತ್ತಾ?
ರಶೀದ್​ ಖಾನ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 19, 2021 | 4:21 PM

ರಶೀದ್ ಖಾನ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು ಎಂದೆನಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಈ ಗೂಗ್ಲಿ ಸ್ಪಿನ್ನರ್ ಅನ್ನು ಟಿ 20 ಯಲ್ಲಿ ಅಪಾಯಕಾರಿ ಬೌಲರ್‌ ಎಂದು ಕರೆಯಲಾಗುತ್ತದೆ. ಇಂದು ವಿಶ್ವ ವೇದಿಕೆಯಲ್ಲಿ ಅಫ್ಘಾನಿಸ್ತಾನ ತಂಡ ಸಾಧಿಸಿರುವ ಸ್ಥಾನಕ್ಕೆ ರಶೀದ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ರನ್ಗಳಿಗೆ ಕಡಿವಾಣ ಹಾಕುವುದಲ್ಲದೆ ವಿಕೆಟ್ ಕೂಡ ತೆಗೆದುಕೊಳ್ಳುತ್ತಾರೆ. ಈ ಸಾಮರ್ಥ್ಯದಿಂದಾಗಿ, ಅವರು ಪ್ರಪಂಚದಾದ್ಯಂತದ ತಂಡಗಳ ಅಚ್ಚುಮೆಚ್ಚಿನವರಾಗಿದ್ದಾರೆ. ಆದ್ದರಿಂದ ಅವರನ್ನು ವಿಶ್ವದ ಎಲ್ಲಾ ಟಿ 20 ಲೀಗ್‌ಗಳಲ್ಲಿ ಖರೀದಿಸಲು ಸಾಕಷ್ಟು ಪೈಪೋಟಿ ಏರ್ಪಡುತ್ತದೆ.

ಅದಕ್ಕಾಗಿಯೇ ರಶೀದ್ ವರ್ಷದುದ್ದಕ್ಕೂ ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುತ್ತಾರೆ. ಕೆಲವೊಮ್ಮೆ ಐಪಿಎಲ್‌ನಲ್ಲಿ, ಕೆಲವೊಮ್ಮೆ ಸಿಪಿಎಲ್‌ನಲ್ಲಿ ಮತ್ತು ಕೆಲವೊಮ್ಮೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ. ರಶೀದ್ ತಮ್ಮ ಕನಸಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ, ಅದರಲ್ಲಿ ಒಂದು ಕುಟುಂಬದಿಂದ ದೂರವಿರುವುದು. ಎಲ್ಲಾ ಬದ್ಧತೆಗಳ ಕಾರಣದಿಂದಾಗಿ, ಅವರು ತನ್ನ ಮನೆಯಲ್ಲಿಯೇ ಇರಲು ಮತ್ತು ತನ್ನ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಕಳೆದ ಐದು ವರ್ಷಗಳಲ್ಲಿ, ರಶೀದ್ ತಮ್ಮ ಮನೆಯಲ್ಲಿ ಬಹಳ ಕಡಿಮೆ ಸಮಯವನ್ನು ಕಳೆದಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ.

5 ವರ್ಷಗಳಲ್ಲಿ ಕೇವಲ 25 ದಿನ ಮಾತ್ರ ಮನೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೇವಲ 25 ದಿನಗಳ ಕಾಲ ನಾನು ಮನೆಯಲ್ಲಿ ಕಾಲಕಳೆದಿದ್ದೇನೆ ಎಂದು ರಶೀದ್ ಹೇಳಿದ್ದಾರೆ. ಗಾರ್ಡಿಯನ್.ಕೊ.ಯುಕ್ ಜೊತೆ ಮಾತನಾಡುತ್ತಾ, ರಶೀದ್, ನಾನು ಕಳೆದ ಐದು ವರ್ಷಗಳಲ್ಲಿ ಕೇವಲ 25 ದಿನಗಳ ಕಾಲ ನನ್ನ ಮನೆಯಲ್ಲಿದ್ದೇನೆ. ನಾನು ತುಂಬಾ ಕಾರ್ಯನಿರತವಾಗಿದ್ದರಿಂದ ನನ್ನ ಸಾಧನೆಗಳನ್ನು ನನ್ನ ಕುಟುಂಬ ಸದಸ್ಯರೊಂದಿಗೆ ಆಚರಿಸಲು ಸಮಯ ಸಿಗಲಿಲ್ಲ. ನನ್ನ ಸಾಧನೆಗಳನ್ನು ನಾನು ಮರೆತಿದ್ದೇನೆ ಮತ್ತು ಕೆಲವೊಮ್ಮೆ ಅದು ನೋವುಂಟು ಮಾಡುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ನನಗೆ ಸಮಯ ಸಿಗುತ್ತಿಲ್ಲ, ಆದರೆ ಇದು ನನ್ನ ವೃತ್ತಿಜೀವನದ ಆರಂಭವಾಗಿತ್ತು ಆದ್ದರಿಂದ ನಾನು ಕಷ್ಟಪಡಬೇಕಾಗುತ್ತದೆ.

ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದಿರುವುದಕ್ಕೆ ವಿಷಾದ ರಶೀದ್ ಅಫ್ಘಾನಿಸ್ತಾನವನ್ನು ಪ್ರತಿನಿಧಿಸುವುದರಲ್ಲಿ ಹೆಮ್ಮೆ ಪಡುತ್ತಾರೆ ಆದರೆ ಒಂದು ವಿಷಾದವೆಂದರೆ ಅವರು ಇನ್ನೂ ತನ್ನ ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಅಫ್ಘಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆದಾಗ, ಅನೇಕ ಜನರು ವೀಕ್ಷಿಸಲು ಬರುತ್ತಾರೆ ಎಂದು ಅವರು ಆಶಿಸಿದ್ದಾರೆ. ನಾನು ಎಲ್ಲಿಗೆ ಹೋದರೂ ಅಂತರರಾಷ್ಟ್ರೀಯ ಆಟಗಾರರು ತಮ್ಮ ತಾಯ್ನಾಡಿನಲ್ಲಿ ಪ್ರೇಕ್ಷಕರ ಮುಂದೆ ಆಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮ್ಮ ದೇಶದಲ್ಲಿಯೂ ಇದು ನಮಗೆ ಬೇಕು. ನಮ್ಮ ದೇಶದ ಜನರು ಕ್ರಿಕೆಟ್ ಪ್ರೀತಿಸುತ್ತಾರೆ. ನಾವು ತವರಿನಲ್ಲಿ ಸರಣಿಯನ್ನು ಆಡಬೇಕು ಎಂಬುದು ನನ್ನ ದೊಡ್ಡ ಕನಸಾಗಿದೆ ಎಂದಿದ್ದಾರೆ.

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ