India Vs Australia Test Cricket 2020 | ಮೆಲ್ಬರ್ನ್ ಟೆಸ್ಟ್​ಗೆ ಹನುಮ ವಿಹಾರಿ ಸ್ಥಾನದಲ್ಲಿ ರವೀಂದ್ರ ಜಡೇಜಾ?

ಮೊದಲ ಟೆಸ್ಟ್​ನ ಶೋಚನೀಯ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯ ಮೆಲ್ಬರ್ನ್ ಟೆಸ್ಟ್​ಗೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಧರಿಸಿದೆ. ಅವುಗಳಲ್ಲಿ ಮುಖ್ಯವಾದದ್ದು ಹನುಮ ವಿಹಾರಿ ಸ್ಥಾನದಲ್ಲಿ ರವೀಂದ್ರ ಜಡೇಜಾ ಅವರನ್ನು ಆಡಿಸುವುದು.

India Vs Australia Test Cricket 2020 | ಮೆಲ್ಬರ್ನ್ ಟೆಸ್ಟ್​ಗೆ ಹನುಮ ವಿಹಾರಿ ಸ್ಥಾನದಲ್ಲಿ ರವೀಂದ್ರ ಜಡೇಜಾ?
ರವೀಂದ್ರ ಜಡೇಜಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 21, 2020 | 9:30 PM

ಅಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ತಲೆಗೆ ಪೆಟ್ಟು ತಿಂದು ಕನ್ಕಶನ್​ಗೊಳಗಾಗಿದ್ದ ಭಾರತದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಮೆಲ್ಬರ್ನ್​ನಲ್ಲಿ ನಡೆಯುವ ಎರಡನೆ ಟೆಸ್ಟ್​ನಲ್ಲಿ ಆಡಿಸುವ ಬಗ್ಗೆ ಟೀಮ್ ಇಂಡಿಯಾದ ಥಿಂಕ್ ಟ್ಯಾಂಕ್ ಗಂಭೀರ ಚಿಂತನೆ ನಡೆಸಿದೆ. ತೊಡೆನೋವಿನ ಸಮಸ್ಯೆಯನ್ನೂ ಅನುಭವಿಸುತ್ತಿದ್ದ ಜಡೇಜಾ ನೆಟ್ಸ್​​ನಲ್ಲಿ ಭಾಗಿಯಾಗುತ್ತಿರುವರಾದರೂ ಶೇಕಡಾ ನೂರರಷ್ಟು ಫಿಟ್ ಆದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕ್ರಿಸ್​ಮಸ್​ಗೆ ಮೊದಲು ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡರೆ ಅವರನ್ನು ಹನುಮ ವಿಹಾರಿ ಸ್ಥಾನದಲ್ಲಿ ಆಡಿಸಲಾಗುವುದು. ಒಬ್ಬ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ನನ್ನು ಆಲ್​ರೌಂಡರ್ ರಿಪ್ಲೇಸ್ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಟೀಮಿನ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಕೈ ಮೂಳೆ ಮುರಿದುಕೊಂಡು ಸರಣಿಯಿಂದ ಹೊರಬಿದ್ದಿರುವುದರಿಂದ ಭಾರತ ತನ್ನ ನಾಲ್ಕು ಬೌಲರ್​ಗಳ ಪಾಲಿಸಿಯನ್ನು ಬದಲಾಯಿಸಿ ಐದು ಬೌಲರ್​ಗಳನ್ನು ಆಡಿಸುವ ನಿರ್ಧಾರಕ್ಕೆ ಬಂದಿದೆ.

ಹಾಗೆ ನೋಡಿದರೆ, ಟೆಸ್ಟ್​ಗಳಲ್ಲಿ ಜಡೇಜಾ ಅವರ ಬ್ಯಾಟಿಂಗ್ ಪ್ರದರ್ಶನ ವಿಹಾರಿಗಿಂತ ಸ್ವಲ್ಪ ಚೆನ್ನಾಗಿದೆ. ಇದುವರೆಗೆ 49 ಟೆಸ್ಟ್​ಗಳನ್ನಾಡಿರುವ ಜದ್ದು, 35ರ ಸರಾಸರಿಯಲ್ಲಿ 1,869 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 14 ಅರ್ಧ ಶತಕಗಳು ಸೇರಿವೆ. ಗಮನಿಸಬೇಕಿರುವ ಅಂಶವೇನೆಂದರೆ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್​ ನೆಲೆಗಳ ಮೇಲೆ ಅವರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಹನುಮ ವಿಹಾರಿ

10 ಟೆಸ್ಟ್​ಗಳನ್ನಾಡಿರುವ ವಿಹಾರಿ ಒಂದು ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 33ರ ಸರಾಸರಿಯಲ್ಲಿ 576 ರನ್ ಶೇಖರಿಸಿದ್ದಾರೆ.

‘ಜಡೇಜಾ ಸುದೀರ್ಘ ಸ್ಪೆಲ್​ಗಳನ್ನು ಬೌಲ್ ಮಾಡುವಷ್ಟು ಫಿಟ್ ಆದರೆ, ಚರ್ಚೆಯೇ ಉದ್ಭವಿಸುವುದಿಲ್ಲ. ನಿಶ್ಚಿತವಾಗಿಯೂ ವಿಹಾರಿ ಸ್ಥಾನದಲ್ಲಿ ಜಡೇಜಾ ಆಡುತ್ತಾರೆ. ಮೆಲ್ಬರ್ನ್ ಮೈದಾನದಲ್ಲಿ ಐವರು ಬೌಲರ್​ಗಳನ್ನು ಆಡಿಸುವ ಅವಕಾಶ ನಮಗೆ ಲಭ್ಯವಾಗುತ್ತದೆ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಡಿಲೇಡ್ ಮೈದಾನದಲ್ಲಿ ಟೀಮ್ ಇಂಡಿಯಾ

ಏತನ್ಮಧ್ಯೆ, ಮಂಗಳವಾರದಂದು ಭಾರತಕ್ಕೆ ವಾಪಸ್ಸಾಗಲಿರುವ ವಿರಾಟ್ ಕೊಹ್ಲಿ ಇಂದು ಭಾರತೀಯ ಆಟಗಾರರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದರೆಂದು ಗೊತ್ತಾಗಿದೆ. ಮಳೆಯ ಕಾರಣ ಭಾರತದ ಆಟಗಾರರು ಅಭ್ಯಾಸಕ್ಕಾಗಿ ತೆರಳದೆ ತಮ್ಮ ರೂಮುಗಳಲ್ಲಿ ಉಳಿದುಬಿಟ್ಟಿದ್ದರು.

Published On - 9:06 pm, Mon, 21 December 20

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ