AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Vs Australia Test Cricket 2020 | ಪೃಥ್ವಿ ಸ್ಥಾನದಲ್ಲಿ ರಾಹುಲ್​ರನ್ನು ಆಡಿಸಬೇಕು: ಗಾವಸ್ಕರ್

ಸೋಲಿನಿಂದ ರೋಸಿ ಹೋಗಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸ್ಸು ತಿಳಿಯಾಗಬೇಕಾದರೆ ಡಿ.26ರಿಂದ ಶುರುವಾಗಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯಾ ರಹಾನೆ ನೇತೃತ್ವದ ಟೀಮ್​ ಗೆಲ್ಲಬೇಕಿದೆ. ಆದರೆ ಅದು ಅಷ್ಟು ಸುಲಭವಲ್ಲ.

India Vs Australia Test Cricket 2020 | ಪೃಥ್ವಿ ಸ್ಥಾನದಲ್ಲಿ ರಾಹುಲ್​ರನ್ನು ಆಡಿಸಬೇಕು: ಗಾವಸ್ಕರ್
ಕೆ.ಎಲ್.ರಾಹುಲ್
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 21, 2020 | 6:48 PM

Share

ಮೊದಲ ಟೆಸ್ಟ್ ಸೋತ ನಂತರ ಕ್ರಿಕೆಟ್ ಗೊತ್ತಿಲ್ಲದವರೂ ಭಾರತದ ಕಳಾಹೀನ ಪ್ರದರ್ಶನವನ್ನು ತೆಗಳುತ್ತಿದ್ದಾರೆ. ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತ ಗಳಿಸಿದ ಅಪಖ್ಯಾತಿಗೆ ಗುರಿಯಾಗಿರುವ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳನ್ನು ಅವರು ಜರಿಯುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಸೋಲಿನಿಂದ ರೋಸಿ ಹೋಗಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸ್ಸು ತಿಳಿಯಾಗಬೇಕಾದರೆ ಡಿ.26ರಿಂದ ಶುರುವಾಗಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯಾ ರಹಾನೆ ನೇತೃತ್ವದ ಟೀಮ್​ ಗೆಲ್ಲಬೇಕಿದೆ. ಆದರೆ ಅದು ಅಷ್ಟು ಸುಲಭವಲ್ಲ.

ಭಾರತದ ಮಾಜಿ ಕ್ಯಾಪ್ಟನ್ ಮತ್ತು ಕಾಮೆಂಟೇಟರ್ ಸುನಿಲ್ ಗಾವಸ್ಕರ್, ಟೀಮ್ ಇಂಡಿಯಾದ ಆಟಗಾರರು, ಅಡಿಲೇಡ್​ನಲ್ಲಿ ಅನುಭವಿಸಿದ ಶೋಚನೀಯ ಸೋಲನ್ನು ಮರೆತು ಸರಣಿಯಲ್ಲಿ ಹೊಸ ಪ್ರಾರಂಭ ಮಾಡಬೇಕು ಎಂದಿದ್ದಾರೆ. ಸ್ಪೋರ್ಟ್ಸ್ ಟಾಕ್ ಕಾರ್ಯಕ್ರಮದಲ್ಲಿ ಮಾತಾಡಿದ ಸನ್ನಿ, ‘ಅಡಿಲೇಡ್​ನಲ್ಲಿನ ಸೋಲು ಅವರನ್ನು ಧೃತಿಗೆಡಿಸಿರುವುದು ನಿಜ. ಆದರೆ, ಅವರು ಪಾಸಿಟಿವ್ ಧೋರಣೆಯನ್ನು ತಳೆಯಬೇಕು ಮತ್ತು ಸರಣಿಯನ್ನು ಹೊಸದಾಗಿ ಆರಂಭಿಸಬೇಕು. ಪಾಸಿಟಿವ್ ಧೋರಣೆ ಪ್ರದರ್ಶಿಸದಿದ್ದರೆ ಅವರಿಗೆ ಉಳಿಗಾಲವಿಲ್ಲ, ಸರಣಿಯಲ್ಲಿ 0-4 ಅಂತರದ ಸೋಲು ಕಟ್ಟಿಟ್ಟ ಬುತ್ತಿ. ಅಸ್ಟ್ರೇಲಿಯಾದ ದೌರ್ಬಲ್ಯ ಬ್ಯಾಟಿಂಗ್ ಎನ್ನುವುದು ಅಡಿಲೇಡ್​ನಲ್ಲಿ ಸಾಬೀತಾಗಿದೆ. ಅದನ್ನೇ ಭಾರತೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಲಬೇಕು’ ಎಂದರು.

ಸುನಿಲ್ ಗಾವಸ್ಕರ್

‘ಟೀಮ್ ಇಂಡಿಯಾದ ಸದಸ್ಯರು ಯಾವ ಹಂತದಲ್ಲೂ ನೈತಿಕ ಸ್ಥೈರ್ಯವನ್ನು ಕಳೆದುಕೊಳ್ಳಬಾರದು, ನಾವು ಕಮ್​ಬ್ಯಾಕ್ ಮಾಡಬಲ್ಲೆವು ಎಂಬ ವಿಶ್ವಾಸ ಅವರಲ್ಲಿರಬೇಕು. ಸರಣಿಯಲ್ಲಿ ಮೇಲೆದ್ದು ಬರಲು ಅವಕಾಶವಿದೆ ಮತ್ತು ಆ ಸಾಮರ್ಥ್ಯವೂ ಅವರಲ್ಲಿದೆ. ಮೊದಲ ಟೆಸ್ಟ್​ನ ಹೀನಾಯ ಸೋಲು ಕ್ರಿಕೆಟ್ ಪ್ರೇಮಿಗಳಲ್ಲಿ ಕೋಪ ತರಿಸಿದೆ. ಬ್ಯಾಟಿಂಗ್ ವೈಫಲ್ಯದ ಜತೆ ಕಳಪೆಮಟ್ಟದ ಫೀಲ್ಡಿಂಗ್ ಸಹ ಭಾರತದ ಸೋಲಿಗೆ ಕಾರಣವಾಯಿತು. 100 ರನ್​ಗಳ ಲೀಡ್ ದೊರಕಿದ್ದರೆ, ಪಂದ್ಯದ ಫಲಿತಾಂಶ ಬೇರೆಯಾಗುವ ಸಾಧ್ಯತೆಯಿತ್ತು. ಮಾರ್ನಸ್ ಲಬುಶೆನ್ ಮತ್ತು ಟಿಮ್ ಪೈನ್ ತಮಗೆ ದೊರೆತ ಜೀವದಾನಗಳ ಲಾಭ ಪಡೆದು ಲೀಡನ್ನು 50 ರನ್​ಗಳಿಗೆ ಇಳಿಸುವಲ್ಲಿ ಸಫಲರಾದರು’ ಎಂದು ಗಾವಸ್ಕರ್ ಹೇಳಿದರು.

ಶುಭ್​ಮನ್ ಗಿಲ್

ಮೊದಲ ಟೆಸ್ಟ್​ನಲ್ಲಿ ಕಳಪೆ ಬ್ಯಾಟಿಂಗ್ ಟೆಕ್ನಿಕ್ ಪ್ರದರ್ಶಿಸಿದ ಓಪನರ್ ಪೃಥ್ವಿ ಶಾ ಅವರನ್ನು ತಂಡದಿಂದ ಕೈಬಿಟ್ಟು ಕೆ.ಎಲ್.ರಾಹುಲ್​ರನ್ನು ಆ ಸ್ಥಾನದಲ್ಲಿ ಆಡಿಸಬೇಕೆಂದು ಗಾವಸ್ಕರ್ ಸಲಹೆ ಮಾಡಿದರು.

‘ಮೆಲ್ಬರ್ನ್ ಟೆಸ್ಟ್​ಗೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ. ಪೃಥ್ವಿ ಶಾರನ್ನು ಡ್ರಾಪ್ ಮಾಡಿ ರಾಹುಲ್ ಅವರನ್ನು ಓಪನರ್ ಆಗಿ ಆಡಿಸಬೇಕು ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಬ್ಯಾಟ್ ಮಾಡುವ ಶುಭ್​ಮನ್ ಗಿಲ್​ಗೆ 5 ಇಲ್ಲವೇ 6ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಕಲ್ಪಿಸಬೇಕು. ಇವರಿಬ್ಬರನ್ನು ಆಡುವ ಇಲೆನೆನ್​ನಲ್ಲಿ ಸೇರಿಸಿದರೆ, ಭಾರತದ ಬ್ಯಾಟಿಂಗ್ ಸದೃಢವಾಗಲಿದೆ’ ಎಂದು ಸನ್ನಿ ಹೇಳಿದರು.

Published On - 6:05 pm, Mon, 21 December 20

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ