India Vs Australia Test Cricket 2020 | ದ್ರಾವಿಡ್​ರನ್ನು ಆಸ್ಟ್ರೇಲಿಯಾಗೆ ಕಳಿಸುವ ಉದ್ದೇಶ ಮಂಡಳಿಗಿಲ್ಲ: ರಾಜೀವ್ ಶುಕ್ಲಾ

ಹಲವು ಮಾಜಿ ಆಟಗಾರರ ಆಗ್ರಹದಂತೆ ರಾಷ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಅಸ್ಟ್ರೇಲಿಯಾಗೆ ಕಳಿಸುವ ಉದ್ದೇಶ ಬಿಸಿಸಿಐಗೆ ಇಲ್ಲ. ಮಂಡಳಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಟೀಮ್ ಮ್ಯಾನೇಜ್ಮೆಂಟ್​ನೊಂದಿಗೆ ಸಂಪರ್ಕದಲ್ಲಿದ್ದಾರಂತೆ.

India Vs Australia Test Cricket 2020 | ದ್ರಾವಿಡ್​ರನ್ನು ಆಸ್ಟ್ರೇಲಿಯಾಗೆ ಕಳಿಸುವ ಉದ್ದೇಶ ಮಂಡಳಿಗಿಲ್ಲ: ರಾಜೀವ್ ಶುಕ್ಲಾ
ರಾಹುಲ್ ದ್ರಾವಿಡ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 21, 2020 | 10:54 PM

ರಾಷ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಕೂಡಲೇ ಅಥವಾ ನಂತರ ಅಸ್ಟ್ರೇಲಿಯಾಗೆ ಕಳಿಸುವ ಯಾವುದೇ ಉದ್ದೇಶ ಭಾರತೀಯ ಕ್ರಿಕೆಟ್ ಮಂಡಳಿಗಿಲ್ಲ ಎಂದು ಇಷ್ಟರಲ್ಲೇ ಮಂಡಳಿಯ ಉಪಾಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಲಿರುವ ರಾಜೀವ್ ಶುಕ್ಲಾ ಇಂದು ಸ್ಪಷ್ಟಪಡಿಸಿದರು.

ಭಾರತದ ಮಾಜಿ ಕ್ಯಾಪ್ಟನ್ ದಿಲಿಪ್ ವೆಂಗ್​ಸರ್ಕಾರ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಡಿಲೇಡ್​ನಲ್ಲಿ ಭಾರತೀಯರು ನೀಡಿದ ಲಜ್ಜಾಸ್ಪದ ಬ್ಯಾಟಿಂಗ್ ಪ್ರದರ್ಶನದಲ್ಲಿ ಸುಧಾರಣೆ ಕಾಣಬೇಕಾದರೆ ಕೂಡಲೇ ರಾಹುಲ್ ದ್ರಾವಿಡ್​ಅವರನ್ನು ಅಸ್ಟ್ರೇಲಿಯಾಗೆ ಕಳಿಸಬೇಕು ಎಂದು ಬಿಸಿಸಿಐಯನ್ನು ಆಗ್ರಹಿಸಿದ್ದರು.

‘‘ಭಾರತ ಅಡಿಲೇಡ್​ನಲ್ಲಿ ನೀಡಿದ ಬ್ಯಾಟಿಂಗ್ ಪ್ರದರ್ಶನ ನಮ್ಮನ್ನು ಕಳವಳಕ್ಕೀಡು ಮಾಡಿದೆ. 36 ರನ್ ಗಳಿಸಿದ್ದು ನಿಜಕ್ಕೂ ಹೀನಾಯ ಪ್ರದರ್ಶನ. ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಬಹಳಷ್ಟು ಚಿಂತೆಗೊಳಗಾಗಿದ್ದಾರೆ ಮತ್ತು ಮುಂದಿನ ಪ್ರದರ್ಶನಗಳು ಸುಧಾರಣೆಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಟೀಮಿನ ಮ್ಯಾನೇಜ್ಮೆಂಟ್​ನೊಂದಿಗೆ ಇಬ್ಬರೂ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಉಳಿದ ಟೆಸ್ಟ್​ಗಳಲ್ಲಿ ಭಾರತೀಯರಿಂದ ಉತ್ತಮ ಮತ್ತು ಸುಧಾರಿತ ಪ್ರದರ್ಶನ ಬರುವ ಬಗ್ಗೆ ನಾವೆಲ್ಲ ಆಶಾವಾದಿಗಳಾಗಿದ್ದೇವೆ,’’ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘‘ಯಾರನ್ನೂ ಆಸ್ಟ್ರೇಲಿಯಾಗೆ ಕಳಿಸುವ ಯೋಚನೆ ಮಂಡಳಿಗಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಬಾರತದ ಬ್ಯಾಟ್ಸ್​ಮನ್​ಗಳು ಚೆನ್ನಾಗಿ ಆಡಿದರು, ಆದರೆ ಎರಡನೆ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಕುಸಿಯಿತು. ಕೆಲವು ಸಲ ಹಾಗಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಮುಂದಿನ ಪಂದ್ಯಗಳಲ್ಲಿ ಸುಧಾರಿತ ಪ್ರದರ್ಶನನೀಡುವ ಸಾಮರ್ಥ್ಯ ನಮ್ಮ ಆಟಗಾರರಲ್ಲಿದೆ. ಮೆಲ್ಬರ್ನ್​ನಲ್ಲಿ ಪಿಚ್ ಹೇಗೆ ವರ್ತಿಸಲಿದೆಯೆನ್ನುವುದನ್ನು ಅರಿತುಕೊಂಡು ಅದಕ್ಕನುಗುಣವಾಗಿ ಆಡುವ ಇಲೆವೆನ್ ಅಂತಿಮಗೊಳಿಸಲಾಗುತ್ತದೆ,’’ ಎಂದು ಶುಕ್ಲಾ ಹೇಳಿದ್ದಾರೆ.

ರಾಜೀವ್ ಶುಕ್ಲಾ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು