ಕೊರೊನಾ ಭೀತಿ ಹೊರತಾಗಿಯೂ ಯುಕೆನಲ್ಲಿರುವ ಸಿಂಧೂಗೆ ಥೈಲ್ಯಾಂಡ್ ಸೂಪರ್ 1000 ಟೂರ್ನಿ ಆಡುವ ಬಗ್ಗೆ ಆಶಾವಾದ

ಕಳೆದೆರಡು ತಿಂಗಳುಗಳಿಂದ ಲಂಡನ್​ನಲ್ಲಿ ತರಬೇತಿ ಪಡೆಯುತ್ತಿರುವ ಭಾರತದ ಚಾಂಪಿಯನ್ ಶಟ್ಲರ್ ಪಿ ವಿ ಸಿಂಧೂ ಜನೆವರಿಯಲ್ಲಿ ಥೈಲ್ಯಾಂಡ್​ನಲ್ಲಿ ನಡೆಯಲಿರುವ ಎರಡು ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಆಶಾಭಾವನೆ ತಳೆದಿದ್ದಾರೆ.

ಕೊರೊನಾ ಭೀತಿ ಹೊರತಾಗಿಯೂ ಯುಕೆನಲ್ಲಿರುವ ಸಿಂಧೂಗೆ ಥೈಲ್ಯಾಂಡ್ ಸೂಪರ್ 1000 ಟೂರ್ನಿ ಆಡುವ ಬಗ್ಗೆ ಆಶಾವಾದ
ಪಿ ವಿ ಸಿಂಧೂ
Arun Belly

|

Dec 22, 2020 | 10:58 PM

ಇಂಗ್ಲೆಂಡ್​ನಲ್ಲಿ ಕೊರೊನಾ ತನ್ನ ರೂಪ ಬದಲಿಸಿದೆ. ಅಲ್ಲಿನ ಪರಿಸ್ಥಿತಿ ಕೆಲ ದಿನಗಳಿಂದ ಉಲ್ಬಣಿಸುತ್ತಿದ್ದರೂ ಕಳೆದೆರಡು ತಿಂಗಳುಗಳಿಂದ ಅಲ್ಲಿ ತರಬೇತಿಯಲ್ಲಿ ಮಗ್ನರಾಗಿರುವ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಅಟಗಾರ್ತಿ ಪಿ ವಿ ಸಿಂಧೂ ಮುಂದಿನ ತಿಂಗಳು ಥೈಲ್ಯಾಂಡ್​ನಲ್ಲಿ ನಡೆಯಲಿರುವ ಎರಡು ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಆಶಾವಾದಿಯಾಗಿದ್ದಾರೆ. ಇಂಗ್ಲೆಂಡ್​ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಸೃಷ್ಟಿಸಿರುವ ಭೀತಿಯ ಹಿನ್ನೆಲೆಯಲ್ಲಿ ಅನೇಕ ದೇಶಗಳು ಅಲ್ಲಿಂದ ಬರುವ ವಿಮಾನಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಿಂಧೂ ಥೈಲ್ಯಾಂಡ್ ತಲುಪುವುದು ಕಷ್ಟವಾಗಬಹುದು.

ಕೊವಿಡ್-19 ಪ್ಯಾಂಡೆಮಿಕ್ ಸೃಷ್ಟಿಸಿದ ಅವಾಂತರದ ನಂತರ ಮೊದಲ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಯೊಂದು ಥೈಲ್ಯಾಂಡ್​ನಲ್ಲಿ ಮುಂದಿನ ತಿಂಗಳು ನಡೆಯಲಿದೆ. ಈಗಾಗಲೇ ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿರುವ ಸಿಂಧೂ ಜನೆವರಿ 3ನೇ ತಾರಿಕಿನೊಳಗೆ ಬ್ಯಾಂಕಾಕ್ ತಲುಪಬೇಕಿದೆ. ಸೂಪರ್ 1000 ಸರಣಿಯ ಮೊದಲ ಚಾಂಪಿಯನ್​ಶಿಪ್ ಜನೆವರಿ 12ರಿಂದ 17 ಮತ್ತು ಎರಡನೆಯದ್ದು ಜನೆವರಿ 19ರಿಂದ 24ರವರೆಗೆ ಬ್ಯಾಂಕಾಕ್​ನಲ್ಲಿ ನಡೆಯಲಿವೆ.

‘‘ಜನವರಿ ಮೊದಲ ವಾರದಲ್ಲಿ ನಾನು ಇಲ್ಲಿಂದ ಹೊರಡುತ್ತೇನೆ. ಥೈಲ್ಯಾಂಡ್​ನಲ್ಲಿ ಇಂಗ್ಲೆಂಡ್​ನಿಂದ ಹೋಗುವ ವಿಮಾನಗಳ ಮೇಲೆ ನಿಷೇಧ ಹೇರಿಲ್ಲ. ನಾನು ದೋಹಾ ಮೂಲಕ ಪ್ರಯಾಣಿಸುವ ಪ್ಲ್ಯಾನ್ ಮಾಡುತ್ತಿದ್ದೇನೆ, ಕೊಲ್ಲಿ ರಾಷ್ಟ್ರಗಳ ಮೂಲಕ ಥೈಲ್ಯಾಂಡ್ ತಲುಪುವುದು ನನ್ನ ಉದ್ದೇಶವಾಗಿದೆ’’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತಾಡಿರುವ ಸಿಂಧೂ ಹೇಳಿದ್ದಾರೆ.

ರೂಪಾಂತರಗೊಂಡಿರುವ ಕೊರೊನಾ ವೈರಸ್ ಶೀಘ್ರಗತಿಯಲ್ಲಿ ಹಬ್ಬುವುದರ ಜತೆಗೆ ಮೊದಲಿನ ವೈರಸ್​ಗಿಂತ ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದು, ಅದು ಯುನೈಟೆಡ್ ಕಿಂಗ್​ಡಮ್​ನಲ್ಲಿ ಈಗಾಗಲೇ ತಲ್ಲಣ ಸೃಷ್ಟಿಸಿದೆ. ಹಾಗಾಗೇ, ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳು ಅಲ್ಲಿಂದ ಬರುವ ವಿಮಾನಗಳನ್ನು ನಿಷೇಧಿಸಿವೆ.

ಲಂಡನ್ನಲ್ಲಿರುವ ಗೆಟೊರೇಡ್ ಸ್ಪೋರ್ಟ್ಸ್ ಸೈನ್ಸ್ ಇನ್​ಸ್ಟಿಟ್ಯೂಟ್​ನಲ್ಲಿ ಅಕ್ಟೋಬರ್​ನಿಂದ ಫಿಟ್ನೆಸ್ ಮತ್ತು ನ್ಯೂಟ್ರಿಶನ್ ಆಯಾಮಗಳಲ್ಲಿ ತರಬೇತಿ ಪಡೆಯುತ್ತಿರುವ ಸಿಂಧೂ, ನಗರದಲ್ಲಿರುವ ನ್ಯಾಶನಲ್ ಟ್ರೇನಿಂಗ್ ಸೆಂಟರ್​ನಲ್ಲಿ ಯುಕೆಯ ಆಟಗಾರರಾಗಿರುವ ಟೋಬಿ ಪೆಂಟಿ ಮತ್ತಿ ರಾಜೀವ ಔಸೆಫ್​ರೊಂದಿಗೆ ಅಭ್ಯಾಸ ಕೂಡ ಮಾಡುತ್ತಿದ್ದಾರೆ.

ಗೆಟೊರೇಡ್ ಸ್ಪೋರ್ಟ್ಸ್ ಸೈನ್ಸ್ ಇನ್​ಸ್ಟಿಟ್ಯೂಟ್​

‘‘ಅದೃಷ್ಟವಾತ್, ನ್ಯಾಶನಲ್ ಟ್ರೇನಿಂಗ್ ಸೆಂಟರ್​ನಲ್ಲಿ ಮುಚ್ಚಿಲ್ಲವಾದ್ದರಿಂದ ನನ್ನ ತರಬೇತಿಗೆ ನಿರಾತಂಕವಾಗಿ ಸಾಗುತ್ತಿದೆ. ಇದನ್ನು ಬಬಲ್ ಕೇಂದ್ರವಾಗಿ ಪರಿವರ್ತಿಸಿರರುವುದರಿಂದ ಥೈಲ್ಯಾಂಡ್ ಟೂರ್ನಮೆಂಟ್ ಶುರುವಾಗುವ ಮೊದಲು ಅಭ್ಯಾಸ ಮಾಡಲು ಅವಕಾಶ ಸಿಗುತ್ತಿದೆ,’’ ಎಂದು ಸಿಂಧೂ ಹೇಳಿದ್ದಾರೆ.

ಹಾಗೆ ನೋಡಿದರೆ, ಬ್ಯಾಂಕಾಕ್​ನಲ್ಲಿ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್ ನಡೆಯುವುದು ಅನುಮಾನಾಸ್ಪದವಾಗಿ ಕಾಣುತ್ತಿದೆ. ಥೈಲ್ಯಾಂಡ್​ನಲ್ಲಿ ಜಾರಿಯಲ್ಲಿರುವ ಪ್ರಜಾಪ್ರಭುತ್ವ ಪರ ಹೋರಾಟಗಳು ಅಲ್ಲಿನ ಸರ್ಕಾರದ ನಿದ್ದೆಗೆಡಿಸಿರುವುದರ ಜತೆಗೆ ಕೊವಿಡ್-19 ಪಾಸಿಟಿವ್ ಪ್ರಕರಣಗಳಲ್ಲೂ ಹೆಚ್ಚಳ ಕಂಡುಬಂದಿದೆ. ಕಳೆದ ವಾರ ಈ ಪುಟ್ಟ ರಾಷ್ಟ್ರದಲ್ಲಿ 548 ಹೊಸ ಪ್ರಕರಣಗಳು ಪತ್ತೆಯಾಗಿವೆಯೆಂದು ವರದಿಯಾಗಿದೆ.

ಪಂದ್ಯವೊಂದರಲ್ಲಿ ಡ್ರಾಪ್ ಶಾಟ್​ ಆಡುತ್ತಿರುವ ಸಿಂಧೂ

ಕೊವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲೇ ಸಿಂಧೂ ಅಕ್ಟೋಬರ್​ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿಲ್ಲ ಎನ್ನುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ. ಈ ವರ್ಷ ನಡೆದ ಮಾರ್ಚ್ ನಂತರ ನಡೆದ ಕೇವಲ ಎರಡು ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಇದೊಂದಾಗಿತ್ತು. ಮತ್ತೊಂದು ಜರ್ಮನಿಯಲ್ಲಿಆಯೋಜನೆಗೊಂಡ ಸಾರ್ಲೋ ಓಪನ್ ಸೂಪರ್ 100 ಚಾಂಪಿಯನ್​ಶಿಪ್ ಆಗಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada