ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್​ಗೆ XUV 700 ಕಾರ್ ಗಿಫ್ಟ್​! ಆನಂದ್ ಮಹೀಂದ್ರಾ ಘೋಷಣೆ

TV9 Digital Desk

| Edited By: ಪೃಥ್ವಿಶಂಕರ

Updated on: Sep 02, 2021 | 9:09 PM

ಮಹೀಂದ್ರಾ ಇತ್ತೀಚೆಗೆ ಜಾವೆಲಿನ್ ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಇಂದು ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಮುಂಬರುವ XUV700 SUV ಯ ವಿಶೇಷ ಆವೃತ್ತಿಯಲ್ಲಿ ಈ ಹೆಸರನ್ನು ಬಳಸಲಾಗುವುದು ಎಂದು ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ.

ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್​ಗೆ XUV 700 ಕಾರ್ ಗಿಫ್ಟ್​! ಆನಂದ್ ಮಹೀಂದ್ರಾ ಘೋಷಣೆ
ಸುಮಿತ್ ಆಂಟಿಲ್​ಗೆ XUV 700 ಕಾರ್ ಗಿಫ್ಟ್

ಟೋಕಿಯೊ ಒಲಿಂಪಿಕ್ಸ್ 2020 ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೂರು ಚಿನ್ನದ ಪದಕ ವಿಜೇತರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ XUV700 SUV ಕಾರುಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಆನಂದ್ ಮಹೀಂದ್ರ ಘೋಷಿಸಿದ್ದಾರೆ. ಇದನ್ನು ಮಹೀಂದ್ರ XUV700 ಜಾವೆಲಿನ್ ಆವೃತ್ತಿ ಎಂದು ಹೆಸರಿಸಲಾಗಿದೆ. ಮುಂಬರುವ ವಾರಗಳಲ್ಲಿ ಎಸ್‌ಯುವಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚಿನ್ನದ ಪದಕ ವಿಜೇತರಾದ ನೀರಜ್ ಚೋಪ್ರಾ, ಅವನಿ ಲೇಖರ ಮತ್ತು ಸುಮಿತ್ ಆಂಟಿಲ್‌ಗಾಗಿ ಎಕ್ಸ್‌ಯುವಿ 700 ವಿಶೇಷ ಆವೃತ್ತಿಯ ಮೂರು ಕಾರಗಳನ್ನು ಮಾತ್ರ ತಯಾರಿಸಲಾಗುತ್ತದೆ.

ಮಹೀಂದ್ರಾ ಇತ್ತೀಚೆಗೆ ಜಾವೆಲಿನ್ ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಇಂದು ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಮುಂಬರುವ XUV700 SUV ಯ ವಿಶೇಷ ಆವೃತ್ತಿಯಲ್ಲಿ ಈ ಹೆಸರನ್ನು ಬಳಸಲಾಗುವುದು ಎಂದು ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ. ಆನಂದ್ ಮಹೀಂದ್ರಾ ಅವರು ಜಾವೆಲಿನ್ ಎಡಿಷನ್ ಎಸ್‌ಯುವಿಯನ್ನು ನಿರ್ಮಿಸುವಂತೆ ಮಹೀಂದ್ರಾ ಮತ್ತು ಮಹೀಂದ್ರಾದ ಮುಖ್ಯ ವಿನ್ಯಾಸ ಅಧಿಕಾರಿ (ಆಟೋ ಮತ್ತು ಫಾರ್ಮ್ ಸೆಕ್ಟರ್) ಪ್ರತಾಪ್ ಬೋಸ್ ಅವರನ್ನು ವಿನಂತಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಭಾರತದ ಪ್ಯಾರಾ ಅಥ್ಲೀಟ್ ಸುಮಿತ್ ಆಂಟಿಲ್ ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಪುರುಷರ ಜಾವೆಲಿನ್ ಎಫ್ 64 ಈವೆಂಟ್‌ನಲ್ಲಿ ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದು ಈ ವರ್ಷದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಎರಡನೇ ಚಿನ್ನದ ಪದಕವಾಗಿದೆ ಮತ್ತು ಸುಮಿತ್ ಅವರನ್ನು ದೇಶಾದ್ಯಂತ ಪ್ರಶಂಸಿಸಲಾಗುತ್ತಿದೆ. ಸುಮಿತ್ ಥ್ರಿಲ್ಲಿಂಗ್ ಥ್ರೋ ಚಿನ್ನದ ಪದಕ ಗೆದ್ದಿದ್ದಲ್ಲದೆ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದರು. ಆರು ಪ್ರಯತ್ನಗಳ ಐದನೇ ಪಂದ್ಯದಲ್ಲಿ ಸುಮಿತ್ 68.55 ಮೀಟರ್ ಎಸೆದಿದ್ದು ವಿಶ್ವದಾಖಲೆಯಾಗಿದೆ.

ಸುಮಿತ್ ದಾಖಲೆ ಸುಮಿತ್ ತನ್ನದೇ ವಿಶ್ವದಾಖಲೆಯನ್ನು ಒಂದಲ್ಲ, ಎರಡಲ್ಲ ಮೂರು ಬಾರಿ ಮುರಿದರು. ಸುಮಿತ್ 66.95 ಮೀಟರ್‌ಗಳಲ್ಲಿ ಆರು ಪ್ರಯತ್ನಗಳ ಮೊದಲ ಎಸೆತವನ್ನು ಎಸೆದರು. ಈ ಥ್ರೋ ಮೂಲಕ, ಅವರು 2019 ರಲ್ಲಿ ದುಬೈನಲ್ಲಿ ಸ್ಥಾಪಿಸಿದ ತಮ್ಮದೇ ದಾಖಲೆಯನ್ನು ಮುರಿದರು. ಅವರು 68.08 ಮೀಟರ್ ಉದ್ದದ ಎರಡನೇ ಥ್ರೋವನ್ನು ಎಸೆದರು, ನಂತರ ಮೂರನೇ ಮತ್ತು ನಾಲ್ಕನೇ ಪ್ರಯತ್ನಗಳು ವಿಶೇಷವಾಗಿರಲಿಲ್ಲ. ಆದರೆ ಐದನೇ ಪ್ರಯತ್ನದಲ್ಲಿ ಅವರು 68.55 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ಅವರು ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದರು.

ಮೋದಿ ಸೇರಿದಂತೆ ಹಲವರಿಂದ ಶುಭ ಹಾರೈಕೆಗಳ ಮಳೆ ಸುಮಿತ್ ಅವರ ಈ ಸುವರ್ಣ ಸಾಧನೆಯ ನಂತರ, ಅವರಿಗೆ ದೇಶದಾದ್ಯಂತ ಶುಭ ಹಾರೈಕೆಗಳ ಸುರಿಮಳೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಅನೇಕರು ಸುಮಿತ್ ಗೆ ಅಭಿನಂದನೆ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada