ಬೆಂಗಳೂರು:ಪ್ಯಾರಿಸ್ ವರ್ಲ್ಡ್ ಚಾಂಪಿಯನ್ ಶಿಪ್-2003 Paris World Championship ನೆನಪಿಸಿಕೊಳ್ಳಿ. ನಮ್ಮ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಆದ್ರೆ ಅವರು ಅಂದು ಒಂದೇ ಒಂದು ಮೂತ್ರಪಿಂಡದಿಂದ ಆ ಅತ್ಯುತ್ತಮ ಸಾಧನೆ ಮಾಡಿದ್ದರು.
26 ವರ್ಷದ ಅಂಜು ಬಾಬಿ ಚಾರ್ಜ್, 2003ರ ಲಾಂಗ್ ಜಂಪ್ನ ಮೊದಲ ಸ್ಪರ್ಧೆಯಲ್ಲಿ 6.61 ಮೀಟರ್ ಜಿಗಿದಿದ್ದರು. ನಂತರ, 6.70 ಮೀಟರ್ ಲಾಂಗ್ ಜಂಪ್ನಲ್ಲಿ ಕಂಚು ಪದಕ ಪಡೆದುಕೊಂಡಿದ್ದರು. ಇವರ ಈ ಸಾಧನೆಯ ಹಿಂದೆ ಅಳಿಸಲಾಗದ ನೋವನ್ನೇ ಅನುಭವಿಸಿದ್ದಾರೆ. ಈಗ ಟ್ವೀಟ್ ಮಾಡುವ ಮೂಲಕ ಅವರು ತಮ್ಮ ಆ ಹಳೆಯ ನೋವನ್ನು ಹಂಚಿಕೊಂಡಿದ್ದಾರೆ.
17 ವರ್ಷದ ನಂತರ, ಸೋಮವಾರ ಅಂಜು ತಮ್ಮ ರಹಸ್ಯವೊಂದನ್ನ ಟ್ವೀಟ್ ಮಾಡುವ ಮೂಲಕ ಬಿಚ್ಚಿಟ್ಟಿದ್ದಾರೆ. ಅಂಜು ಒಂದೇ ಒಂದು ಮೂತ್ರಪಿಂಡವನ್ನು ಹೊಂದಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಒಂದು ಮೂತ್ರ ಪಿಂಡದೊಂದಿಗೆ ಕಳೆದಿದ್ದಾರೆ ಅಂಜು ಬಾಬಿ ಜಾರ್ಜ್.
‘ನಂಬಿ ಅಥವಾ ಬಿಡಿ. ನಾನು ಅದೃಷ್ಟಶಾಲಿಗಳಲ್ಲಿ ಒಬ್ಬಳಾಗಿದ್ದೇನೆ. ಒಂದೇ ಮೂತ್ರ ಪಿಂಡದೊಂದಿಗೆ ವಿಶ್ವದ ಅಗ್ರಸ್ಥಾನವನ್ನು ತಲುಪಿದ ಕೆಲವೇ ಜನರಲ್ಲಿ ಒಬ್ಬಳು. ನೋವು ನಿವಾರಕ ಮಾತ್ರೆ ತಿಂದರೂ ಅಲರ್ಜಿ ಉಂಟಾಗುತ್ತದೆ. ಕಷ್ಟಪಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಸಾಧನೆಗೆ ಮ್ಯಾಜಿಕ್ ಎನ್ನಬಹುದೋ ಅಥವಾ ತರಬೇತಿದಾರನ ಪ್ರತಿಭೆ ಎನ್ನಬಹುದೋ’ ಎಂದು ಅಂಜು ಬಾಬಿ ಜಾರ್ಜ್ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜನ ಅಂಜು ಸಾಧನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇನ್ನು ಈ ವಿಷಯ ಹೊರಬರುತ್ತಿದ್ದಂತೆ ಕ್ರೀಡಾ ಸಚಿವ ಕಿರೆನ್ ರಿಜಿಜು ಸಹ ಅಂಜು ಧೈರ್ಯ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
Believe it or not, I'm one of the fortunate, among very few who reached the world top with a single KIDNEY, allergic with even a painkiller, with a dead takeoff leg.. Many limitations. still made it. Can we call, magic of a coach or his talent @KirenRijiju @afiindia @Media_SAI pic.twitter.com/2kbXoH61BX
— Anju Bobby George (@anjubobbygeorg1) December 7, 2020
ಮೂರು ವರ್ಷದ ನಂತರ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪ್ರದಾನ.. ಪುರಸ್ಕೃತರ ವಿವರ ಇಲ್ಲಿದೆ
Published On - 11:14 am, Tue, 8 December 20