ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಹಂತ 3 ರಲ್ಲಿ ಭಾರತ ತಂಡ ಅದ್ಭುತ ಸಾಧನೆ ಮಾಡಿದೆ. ಸಂಯುಕ್ತ ಮಿಶ್ರ ತಂಡ (compound mixed team)ದಲ್ಲಿ ಭಾರತದ ಜ್ಯೋತಿ ಸುರೇಖಾ ಮತ್ತು ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಜ್ಯೋತಿಯವರಿಗೆ ಈ ಸೀಸನ್ನ ಮೊದಲ ವಿಶ್ವಕಪ್ ಇದಾಗಿದ್ದು, ಇದರಲ್ಲಿ ಅವರು ಅದ್ಭುತ ದಾಖಲೆ ಬರೆದಿದ್ದಾರೆ. ಸಂಯುಕ್ತ ಮಿಶ್ರ ತಂಡದ ಫೈನಲ್‌ನಲ್ಲಿ ಭಾರತದ ಜೋಡಿ ಫ್ರಾನ್ಸ್ ತಂಡವನ್ನು ಸೋಲಿಸಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ ಫ್ರಾನ್ಸ್ ವಿರುದ್ಧ 152-149 ಅಂಕಗಳ ಅಂತರದಿಂದ ಜಯ ಸಾಧಿಸಿತು. ಇದಕ್ಕೂ ಮುನ್ನ ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಸಿಮ್ರಂಜಿತ್ ಕೌರ್ ಮೂವರು ರಿಕರ್ವ್ ಮಹಿಳಾ ತಂಡ ಈವೆಂಟ್‌ನಲ್ಲಿ ಫೈನಲ್‌ಗೆ ತಲುಪುವ ಮೂಲಕ ಮೊದಲ ಪದಕವನ್ನು ಖಚಿತಪಡಿಸಿದ್ದರು. ಭಾನುವಾರ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಭಾರತ ತಂಡದ ಮುಂದೆ ಚೈನೀಸ್ ತೈಪೆಯ ಸವಾಲು ಎದುರಾಗಲಿದೆ.
ರೋಚಕ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ
ಸಂಯುಕ್ತ ಮಿಶ್ರ ಜೋಡಿ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಅವರು ಎಸ್ಟೋನಿಯಾದ ರಾಬಿನ್ ಜತ್ಮಾ ಮತ್ತು ಲಿಸೆಲ್ ಜತ್ಮಾ ಅವರನ್ನು ರೋಚಕ ಸ್ಪರ್ಧೆಯಲ್ಲಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಭಾರತದ ಜೋಡಿ 156-151 ಅಂತರದಲ್ಲಿ ಜಯಭೇರಿ ಬಾರಿಸಿತು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿ 158-150 ಅಂಕಗಳಿಂದ ಪೋರ್ಟೊ ರಿಕೊ ತಂಡವನ್ನು ಸೋಲಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿಗೆ ಎಲ್ ಸಾಲ್ವಡಾರ್ ನ ರಾಬರ್ಟೊ ಹೆರ್ನಾಂಡೆಜ್ ಮತ್ತು ಸೋಫಿಯಾ ಪೇಜ್ ಕಠಿಣ ಸವಾಲು ಎದುರಾಗಿತ್ತು. ಶೂಟ್‌ಆಫ್‌ನಲ್ಲಿ ಭಾರತ ಗೆಲುವು ಸಾಧಿಸಿತು.
7 ತಿಂಗಳ ನಂತರ ಜ್ಯೋತಿ ವಾಪಸ್ಸ್
ಏಷ್ಯನ್ ಗೇಮ್ಸ್‌ನ ಟ್ರಯಲ್ಸ್‌ನಲ್ಲಿ ಜ್ಯೋತಿಯನ್ನು ಕಡೆಗಣಿಸಲಾಗಿತ್ತು. 7 ತಿಂಗಳ ನಂತರ ತಂಡಕ್ಕೆ ಮರಳಿದ ಅವರು ಈ ಪದಕದೊಂದಿಗೆ ಸಂಭ್ರಮಿಸಿದರು. ವಿಶ್ವ ರ ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಚರ್ ಮತ್ತೊಂದು ಪದಕದ ರೇಸ್ನಲ್ಲಿದ್ದಾರೆ. ಅವರು ವೈಯಕ್ತಿಕ ಸೆಮಿಫೈನಲ್‌ನಲ್ಲಿ ಫ್ರೆಂಚ್ ದಂತಕಥೆ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೋಫಿ ಅವರನ್ನು ಎದುರಿಸಲಿದ್ದಾರೆ.
Massive win of India ?? on French soil ?#ArcheryWorldCup pic.twitter.com/47LmR6bFE3
— World Archery (@worldarchery) June 25, 2022
Published On - 4:05 pm, Sat, 25 June 22